ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿ.ಎಂ ಇಸ್ಮಾಯಿಲ್ ಪ್ರಾಯ 35 ವರ್ಷ ತಂದೆ ವಿ.ಎಸ್ ಇಬ್ರಾಹಿಂ ವಾಸ ಒಕ್ಕೆತ್ತೂರು ಮನೆ, ವಿಟ್ಲ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 04.01.2023 ರಂದು ಬೆಳಗ್ಗೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಸುಣ್ಣದ ಪ್ಯಾಕ್ಟರಿ ಬಳಿ ಮನೆಯ ಮುಂದೆ ಹಾದು ಹೋಗಿರುವ ವಿಟ್ಲ –ಕಲ್ಲಡ್ಕ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ಪಿರ್ಯಾದಿದಾರರ ಮಗನನ್ನು ಶಾಲೆಗೆ ಕಳುಹಿಸಲು ಶಾಲಾ ಬಸ್ಸಿಗೆ ಕಾಯುತ್ತಾ ರಸ್ತೆಯ ಕಡೆಗೆ ನೋಡುವ ಸಮಯ ಸುಮಾರು ಬೆಳಗ್ಗೆ  09.00 ಗಂಟೆಗೆ  ವಿಟ್ಲ ಕಡೆಯಿಂದ ಕಲ್ಲಡ್ಕ ಕಡೆಗೆ  ಮೋಟಾರ್ ಸೈಕಲ್ ಒಂದನ್ನು ಅದರ ಸವಾರ ಅಜಾಗರೂಕತೆ ಹಾಗೂ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಒಕ್ಕೆತ್ತೂರು ನ್ಯಾಷನಲ್ ಹಾರ್ಡ್ ವೇರ್ ಅಂಗಡಿ ಎದುರು ಕಚ್ಚಾ ರಸ್ತೆಯಲ್ಲಿ ಶಾಲೆಗೆ ಹೋಗಲು ವಾಹನಕ್ಕೆ ಕಾಯುತ್ತ ನಿಂತಿದ್ದ ಹೆಣ್ಣು ಮಗುವಿಗೆ ಎದುರಿನಿಂದ ಡಿಕ್ಕಿಯನುಂಟು ಮಾಡಿದ ಪರಿಣಾಮ ಹೆಣ್ಣು ಮಗು ಡಾಮಾರು ರಸ್ತೆಗೆ ಎಸೆಯಲ್ಪಟ್ಟಿತು, ಕೂಡಲೇ ಹೋಗಿ ಮಗುವನ್ನು ಉಪಚರಿಸಿ ನೋಡಲಾಗಿ ಮಗುವಿನ ತಲೆಗೆ ಮತ್ತು ಕಾಲಿಗೆ ರಕ್ತ ಗಾಯ  ರಕ್ತಗಾಯವಾಗಿದ್ದು, ಅಪಘಾತಗೊಂಡ ಹೆಣ್ಣು ಮಗುವು ಪರಿಚಯದ  ಫಾತಿಮತ್ ನಿದಾ ಆಗಿದ್ದು. ಮಗು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ.ಅಪಘಾತ ಪಡಿಸಿದ ಮೋಟಾರ್ ಸೈಕಲ್ ನಂಬ್ರ ನೋಡಲಾಗಿ ಕೆಎ 21 ಇಸಿ 6940 ನಂಬ್ರ ಆಗಿದ್ದು ಸವಾರ ಹೆಸರು ಕೇಳಿ ತಿಳಿಯಲಾಗಿ ಹೇಮಂತ್ ಕುಮಾರ್ ಎಂದು ತಿಳಿಯಿತು.  ಬಳಿಕ  ಗಾಯಗೊಂಡ ಮಗುವನ್ನು ಚಿಕಿತ್ಸೆಯ ಬಗ್ಗೆ ವಿಟ್ಲ ಸುರಕ್ಷಾ ಆಸ್ಪತ್ರೆಗೆ ನಾನು ಕರೆದುಕೊಂಡು ಬಂದಿದ್ದು ವೈದ್ಯರ ಸಲಹೆಯಂತೆ  ಮಂಗಳೂರು ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿರುತ್ತಾರೆ.ಈ ಬಗ್ಗೆ ವಿಟ್ಲ ಠಾಣಾ ಅಕ್ರ  ನಂಬ್ರ 04/2022  ಕಲಂ 279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪಿ ಕೆ ರಾಜು (65) ತಂದೆ:ಕರಜೋಳಿ ವಾಸ: ಪೊಯ್ಯಿಗುಡ್ಡೆ ಮನೆ, ಪಡಂಗಡಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:03-01-2023 ರಂದು ಗುರುವಾಯನಕೆರೆ –ವೇಣೂರು ಮಾರ್ಗವಾಗಿ ಪಡಂಗಡಿಯಿಂದ ಪೊಯ್ಯಿಗುಡ್ಡೆಗೆ ಹೋಗುವ ರಸ್ತೆಯ ಎಡಬದಿಯ ಕಚ್ಚಾ ಮಣ್ಣು ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿರುವ ಸಮಯ ಸುಮಾರು ರಾತ್ರಿ 9.30 ಗಂಟೆಗೆ ಬೆಳ್ತಂಗಡಿ ತಾಲೂಕು, ಪಡಂಗಡಿ ಗ್ರಾಮದ ಪೊಯ್ಯಿಗುಡ್ಡೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ಕೆಎ 19 EM 2122 ನೇ ಮೋಟಾರು ಸೈಕಲ್‌ ಸವಾರ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರಿಗೆ ಹಣೆಗೆ,ಬೆನ್ನಿಗೆ ಗುದ್ದಿದ ಗಾಯ,ಎರಡು ಕಾಲಿನ ಪಾದಕ್ಕೆ ಹಾಗೂ ಎರಡು ಕೈಗಳ ಬೆರಳುಗಳಿಗೆ ತರಚಿದ ಗಾಯ ಹಾಗೂ ತಲೆಯ ಹಿಂಬದಿಗೆ ಗುದ್ದಿದ ಗಾಯವಾಗಿರುತ್ತದೆ ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 02/2023 ಕಲಂ: 279,337 ಭಾ ದಂ ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸೋನಿ ಮುಂಡು  ಪ್ರಾಯ 21 ವರ್ಷ,ತಂದೆ: ಮಾಂಗು ಮುಂಡು,C/O  ಪದ್ಮಯ್ಯ ಗೌಡ, ಪರಣೆ ಮನೆ ಸವಣೂರು ಗ್ರಾಮ, ಕಡಬ  ಎಂಬವರ ದೂರಿನಂತೆ ಪಿರ್ಯಾದಿದಾರರು  ದಿನಾಂಕ 01.01.2023 ರಂದು ರಾತ್ರಿ ಸವಣೂರು ಪೇಟೆಗೆ ತನ್ನ ಬಾಬ್ತು ಮೋಟಾರ್ ಸೈಕಲಿನಲ್ಲಿ ಬಂದಿದ್ದು, ಸವಣೂರು ಪೇಟೆಯಲ್ಲಿರುವ ಸಮಯ ರಾತ್ರಿ ಸುಮಾರು 11:30 ಗಂಟೆಗೆ ಸವಣೂರು ಗ್ರಾಮದ ಚಾಪಳ್ಳ ಬಸ್ ನಿಲ್ದಾಣದ ಬಳಿ ಅಪಘಾತವಾಗಿದೆ ಎಂದು ಮಾಹಿತಿ ಬಂದಂತೆ  ಚಾಪಳ್ಳ ಎಂಬಲ್ಲಿಗೆ ಹೋಗಿ ನೋಡಲಾಗಿ ಪಿರ್ಯಾದಿದಾರರ  ಪರಿಚಯದ ಪ್ರೇಮ ಪ್ರಕಾಶ್ ಎಂಬವರಿಗೆ ಮೋಟಾರು ಸೈಕಲ್ ಡಿಕ್ಕಿಯಾಗಿ ರಸ್ತೆಯಲ್ಲಿ ಬಿದ್ದು, ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ರಕ್ತಗಾಯ ಮತ್ತು ತರಚಿದ ಗಾಯಗಳಾಗಿರುವುದು ಕಂಡು ಬಂದಿದ್ದು, . ಪ್ರೇಮಪ್ರಕಾಶನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದುಗಡೆಯಿಂದ ಮೋಟಾರ್ ಸೈಕಲೊಂದನ್ನು ಅದರ ಸವಾರ ಧನುಷ್ ಎಂಬಾತನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುವುದಾಗಿದೆ. ಅಪಘಾತಪಡಿಸಿದ  ಮೋಟಾರ್ ಸೈಕಲ್ ನಂಬ್ರ ಕೆಎ-21- ಜೆ 1859 ನೇಯದು ಆಗಿರುತ್ತದೆ. ಕೂಡಲೇ ಅಪಘಾತ ಸ್ಥಳಕ್ಕೆ ಅಂಬುಲೆನ್ಸ್ ವಾಹನ ಬಂದಿದ್ದು, ಸದ್ರಿ ವಾಹನದಲ್ಲಿ ಗಾಯಾಳು ಪ್ರೇಮಪ್ರಕಾಶನನ್ನು ಆರೋಪಿ ಮೋಟಾರು ಸೈಕಲ್ ಸವಾರರು ಚಿಕಿತ್ಸೆಯ ಬಗ್ಗೆ ಪುತ್ತೂರು ಕಡೆಗೆ ಕರೆದುಕೊಂಡು ಹೋಗಿದ್ದು,  ಈ ದಿನ ತಿಳಿಯಲಾಗಿ ಗಾಯಾಳು ಪ್ರೇಮ ಪ್ರಕಾಶನ್ನು ಆರೋಪಿ ಮೋಟಾರು ಸೈಕಲ್ ಸವಾರ ಹಾಗೂ ಪ್ರೇಮಪ್ರಕಾಶನ ಸ್ನೇಹಿತರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದು, ಪ್ರಸ್ತುತ ಪ್ರೇಮಪ್ರಕಾಶ್ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುವುದಾಗಿ ತಿಳಿದು ಬಂದಿದ್ದು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 01/2023  ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ವೇಣೂರು ಪೊಲೀಸ್ ಠಾಣೆ : ಶ್ರೀಮತಿ ಸೌಮ್ಯ ಜೆ ಪೊಲೀಸ್ ಉಪನಿರೀಕ್ಷಕರು ವೇಣೂರು ಪೊಲೀಸ್ ಠಾಣೆರವರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ನಡಾಯಿ ನಮನ ಡಾಬಾ ಬಳಿ ನಾರಾವಿ-ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ ದಿನಾಂಕ 04.01.2023 ರಂದು ಬೆಳಗ್ಗಿನ ಜಾವ 01.35 ಗಂಟೆಗೆ ಅಕ್ರಮವಾಗಿ ಗೋ-ಸಾಗಾಟ ಮಾಡುತ್ತಿದ್ದ ಮಾರುತಿ ಒಮ್ನಿ ಕಾರು ನಂಬ್ರ ಕೆಎ.20.ಎಂ.6451 ಹಾಗೂ ಅದಕ್ಕೆ ಬೆಂಗಾವಲಾಗಿದ್ದ ದ್ವಿಚಕ್ರ ಕೆಎ.21.ಇಬಿ.2235 ನ್ನು ತಡೆದು ಪರಿಶೀಲಿಸಲಾಗಿ ಕಾರಿನಲ್ಲಿ ಚಾಲಕ ಹಾಗೂ ಇತರ ಇಬ್ಬರು ಇದ್ದು, ಕಾರಿನಲ್ಲಿ 5 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕೈಕಾಲು ಕಟ್ಟಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, 5 ಜನ ಆರೋಪಿತರುಗಳನ್ನು ವಶಕ್ಕೆ ಪಡೆದು ಅಕ್ರಮ ಸಾಗಾಟ ಮಾಡುತ್ತಿದ್ದ 5 ಜಾನುವಾರುಗಳನ್ನು ಹಾಗೂ ಅಕ್ರಮ ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ಒಮ್ನಿ ಕಾರು ಮತ್ತು ದ್ವಿಚಕ್ರ ವಾಹನವನ್ನು ಸ್ವಾಧೀನ ಪಡಿಸಿದ್ದು, ಸ್ವಾಧೀನ ಪಡಿಸಿದ ಜಾನುವಾರುಗಳ ಅಂದಾಜು ಮೌಲ್ಯ 15,000 ರೂ. ಹಾಗೂ ವಾಹನಗಳ ಅಂದಾಜು ಮೌಲ್ಯ 1,75,000/- ರೂ. ಅಗಬಹುದು. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 01-2023 ಕಲಂ: 5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020  ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಾಜೇಶ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ  ಕಾರ್ಯಾಲಯ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರಿಗೆ ದಿನಾಂಕ;17-12-2022 ರಂದು ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಬಸ್ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿ ಅಮಲು ಪದಾರ್ಥ ಸೇವಿಸಿಕೊಂಡು ಪ್ರಜ್ಞಾ ಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದ್ದು ಸದ್ರಿ ಅಪರಿಚಿತ ವ್ಯಕ್ತಿಯನ್ನು  ಚಿಕಿತ್ಸೆಯ ಬಗ್ಗೆ  ಬೆಳ್ತಂಗಡಿ ಸಮುದಾಯ ಆಸ್ಪತ್ರೆಗೆ ಖಾಸಗಿ ಅಂಬ್ಯಲೆನ್ಸ್ ನಲ್ಲಿ  ಕಳುಹಿಸಿಕೊಟ್ಟಿದ್ದು  ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಚಿಕಿತ್ಸೆಯಲ್ಲಿರುತ್ತಾ  ದಿನಾಂಕ:03-01-2023 ರಂದು ಬೆಳಿಗ್ಗೆ 11.40 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ  ಯು ಡಿ ಆರ್  02-2023 ಕಲಂ;174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಾಯಿಲಪ್ಪ ಪೂಜಾರಿ (45) ತಂದೆ: ಅಣ್ಣು ಪೂಜಾರಿ ವಾಸ: ಮರಕ್ಕೂರು ಕೊಪ್ಪಳ ಮನೆ ಶಾಂತಿಗೋಡು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಮಾಯಿಲಪ್ಪ ಪೂಜಾರಿ (45) ತಂದೆ: ಅಣ್ಣು ಪೂಜಾರಿ ವಾಸ: ಮರಕ್ಕೂರು ಕೊಪ್ಪಳ ಮನೆ ಶಾಂತಿಗೋಡು ಗ್ರಾಮ ಪುತ್ತೂರು ತಾಲೂಕು ಎಂಬವರ ಅಣ್ಣ ಹರೀಶ್ ಪೂಜಾರಿ (48) ಎಂಬವರು ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಮರಕ್ಕೂರು ಎಂಬಲ್ಲಿ ತನ್ನ ಅಡಿಕೆ ತೋಟದಲ್ಲಿ ದಿನಾಂಕ: 04.01.2023 ರಂದು ಮಧ್ಯಾಹ್ನ ಸುಮಾರು 12.00 ಗಂಟೆ ಸಮಯಕ್ಕೆ ತನ್ನ ತೋಟದಲ್ಲಿ ಅಡಿಕೆ ಮರಕ್ಕೆ ಹತ್ತಿ ಅಡಿಕೆ ತೆಗೆಯುತ್ತಿದ್ದ ಸಮಯ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದವರನ್ನು ಫಿರ್ಯದಿದಾರರು ಹಾಗೂ ಇತರರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಮಧ್ಯಾಹ್ನ 13.35 ಗಂಟೆಗೆ ಕರೆ ತಂದಾಗ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಹರೀಶ ರವರು ಮೃತಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಯುಡಿಆರ್‌ ನಂ: 01/2023 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-01-2023 12:49 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080