ಅಪಘಾತ ಪ್ರಕರಣ: ೦4
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಪ್ರಸಾದ್, ಪ್ರಾಯ 36 ವರ್ಷ,ತಂದೆ: ದಿ|| ಲಿಂಗಪ್ಪ ಬೆಲ್ಚಡ, ವಾಸ: ವಳವೂರು ಉಮನಗುಡ್ಡೆ ಮನೆ ತುಂಬೆ ಗ್ರಾಮ ಮತ್ತುಅಂಚೆ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 04-02-2022 ರಂದು ಪಿರ್ಯಾದಿದಾರರು ವಿಟ್ಲ ಕಡೆಯಿಂದ ತನ್ನ ಮನೆ ಕಡೆಗೆ ವಿಟ್ಲ –ಕಲ್ಲಡ್ಕ ರಾಜ್ಯ ಹೆದ್ದಾರಿಯಲ್ಲಿ ಮೋಟಾರ್ ಸೈಕಲಿನಲ್ಲಿ ಬರುತ್ತಾ ಸಮಯ ಸುಮಾರು 17-45 ಗಂಟೆಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಗೋಳ್ತಮಜಲು ಎಂಬಲ್ಲಿಗೆ ತಲುಪಿದಾಗ ಕಲ್ಲಡ್ಕ ಕಡೆಯಿಂದ KA-19ES-6305 ನೇ ಸ್ಕೂಟರನ್ನು ಅದರ ಸವಾರ ಗೃಹ ರಕ್ಷಕ ಸಿಬ್ಬಂದಿ ಪ್ರಕಾಶ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮೈಲುಕಲ್ಲಿಗೆ ಡಿಕ್ಕಿ ಹೊಡೆದು ಮುಂದಕ್ಕೆ ಚಲಿಸಿ ಚರಂಡಿಗೆ ಬಿದ್ದ ಪರಿಣಾಮ ಬಲ ಕಣ್ಣಿನ ಕೆಳಗೆ, ಮೂಗಿಗೆ,ಬಾಯಿಗೆ ಗುದ್ದಿದ ಗಾಯಗೊಂಡವರನ್ನು ಅಂಬುಲೆನ್ಸ್ ವೊಂದರಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 16/2022 ಕಲಂ 279,,304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ನಾರಾಯಣಗೌಡ ಪ್ರಾಯ 52 ವರ್ಷ ತಂದೆ:ಫಕ್ರುಗೌಡ ವಾಸ:ಪಾಂಡೆಲು ಮನೆ, ಕುಳ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:03-02-2022 ರಂದು ತನ್ನ ಪರಿಚಯದ ಕೇಶವ ಎಂಬವರ ಬಾಬ್ತು ಕೆಎ-19-ಇಕ್ಯೂ-4920ನೇ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಕೇಶವ ಸವಾರರಾಗಿ ಪಿರ್ಯಾಧಿ ಸಹ ಸವಾರರಾಗಿ ಕುಳಿತುಕೊಂಡು ಓಜಾಳ ಎಂಬಲ್ಲಿಂದ ಕಬಕ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮದ್ಯಾಹ್ನ 01.30 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಕುಳ ಗ್ರಾಮದ ಅಡ್ಯಾಲು ಎಂಬಲ್ಲಿಗೆ ತಲುಪಿದಾಗ ಎದುರಿನಿಂದ ಕೆಎಲ್-08-ಬಿಡಬ್ಲು-5662ನೇ ಮೋಟಾರು ಸೈಕಲ್‌ನ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಸವಾರಿ ಮಡಿಕೊಂಡು ಹೋಗುತ್ತಿದ್ದ ಸ್ಕೂಟರಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾಧಿದಾರರ ಬಲಕೋಲು ಕಾಲಿಗೆ ರಕ್ತಗಾಯವಾಗಿರುತ್ತದೆ. ನಂತರ ಕೇಶರವರು ಪಿರ್ಯಾಧಿದಾರರನ್ನು ಒಂದು ಅಟೋ ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಗಾಯಾಳುವನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 22/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಮಹಾಬಲೆಶ್ವರ್ ಪ್ರಕಾಶ್ ಡಿ ಪ್ರಾಯ 44 ವರ್ಷ, ತಂದೆ: ಸುಬ್ರಮಣ್ಯ ಭಟ್ ವಾಸ: ಶ್ರೀರಾಮ ನಿಲಯ, ಮಂಜಲ್ಪಡ್ಪು, ಕಬಕ ಗ್ರಾಮ, ನೆಹರೂನಗರ ಅಂಚೆ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 03-02-2022 ರಂದು 17-50 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ಗಿರಿಧರ್ ನಾಯ್ಕ ಎಂಬವರು KA-21-S-6067ನೇ ನೋಂದಣಿ ನಂಬ್ರದ ಬುಲ್ಲೆಟ್ ಮೋಟಾರ್ ಸೈಕಲನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಡೆಯಿಂದ ನೆಹರೂನಗರ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮಂಜಲ್ಪಡ್ಪು ಬಿ.ಎಂ.ಎಸ್ ಶಾಲೆಯ ಬಳಿ, ಶಾಲಾ ವಿದ್ಯಾರ್ಥಿ ಹೆದ್ದಾರಿಯನ್ನು ದಾಟುವ ಸಮಯ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹಠಾತ್ ಬ್ರೇಕ್ ಹಾಕಿದ ಪರಿಣಾಮ, ಹತೋಟಿ ತಪ್ಪಿ ಆರೋಪಿ ಬುಲ್ಲೆಟ್ ಮೋಟಾರ್ ಸೈಕಲ್ ಸವಾರ ಬುಲ್ಲೆಟ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ತಲೆಗೆ ಗಾಯಗಳಾಗಿ, ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 22/2022 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಫಿರ್ಯಾದಿದಾರರಾದ ಪ್ರಮೋದ್.ಎ.ಎನ್, ಪ್ರಾಯ: 22 ರ್ಷ, ತಂದೆ: ನಾರಾಯಣ ಭಟ್, ವಾಸ: ಈಶ ಕೃಪಾ ಮನೆ, ಬೆಟ್ಟಂಪಾಡಿ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದು, ಸದ್ರಿಯವರು ಮೂಲತ: ಸೀತಾಂಗೋಳಿಯ ನಿಚಾಸಿಯಾಗಿದ್ದು ಪ್ರಸ್ತುತ ಮೇಲಿನ ವಿಳಾಸದಲ್ಲಿದ್ದು, ದಿನಾಂಕ 03.02.2022 ರಂದು ಅಗತ್ಯ ಕೆಲಸದ ನಿಮಿತ್ತ ಅವರ ಬಾಬ್ತು ಕೆಎ-21-ಇಬಿ-3490 ನೇ ಸ್ಕೂಟರಿನಲ್ಲಿ ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕ ಹರಿನಾರಾಯಣ ಭಟ್ ರವರ ಮಗಳು ಭಾಗ್ಯಲಕ್ಷ್ಮಿ ರವರನ್ನು ಸಹ ಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರಿಗೆ ಹೋಗಿ ಕೆಲಸ ಮುಗಿಸಿ ಅಲ್ಲಿ ಭಾಗ್ಯಲಕ್ಷ್ಮಿರವರ ಅಣ್ಣಂದಿರಾದ ಕೃಷ್ಣ ಕುಮಾರ್ ಮತ್ತು ವೆಂಕಟೇಶ್ ರವರನ್ನು ಭೇಟಿಯಾಗಿ ಬಳಿಕ ಅವರನ್ನು ಮೋಟಾರು ಸೈಕಲಿನಲ್ಲಿ ಮುಂದೆ ಹೋಗಲು ತಿಳಿಸಿ ಫಿರ್ಯಾದಿದಾರರು ಮತ್ತು ಭಾಗ್ಯಲಕ್ಷ್ಮಿರವರು ಫಿರ್ಯಾದಿದಾರರ ಸ್ಕೂಟರಿನಲ್ಲಿ ಹೆದ್ದಾರಿಯಲ್ಲಿ ಬೆಟ್ಟಂಪಾಡಿ ಕಡೆಗೆ ಹೋಗುತ್ತಾ ರಾತ್ರಿ ಸುಮಾರು 7.45 ಗಂಟೆಗೆ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿಗೆ ತಲುಪಿದಾಗ ಸಂಟ್ಯಾರು ಕಡೆಯಿಂದ ಪುತ್ತೂರು ಕಡೆಗೆ ಕೆಎಲ್-50-2277 ನೇ ಲಾರಿಯನ್ನು ಅದರ ಚಾಲಕ ಗೋಪಾಲ ನಾಯ್ಕ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ಬಲ ಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಸವಾರಿ ಮಾಡುತ್ತಿದ್ದ ಸ್ಕೂಟರಿನ ಬಲಭಾಗಕ್ಕೆ ಢಿಕ್ಕಿಯನ್ನುಂಟು ಮಾಡಿದ ಪರಿಣಾಮ ಫಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಾಗ ಭಾಗ್ಯಲಕ್ಷ್ಮಿರವರು ರಸ್ತೆಗೆ ಎಸೆಯಲ್ಪಟ್ಟಾಗ ಸದ್ರಿ ಲಾರಿಯು ಭಾಗ್ಯಲಕ್ಷ್ಮಿರವರ ತೊಡೆಯ ಮೇಲಿಂದ ಹರಿದು ಹೋಗಿದ್ದು, ಆ ಸಮಯ ಫಿರ್ಯಾದಿದಾರರ ಹಿಂದಿನಿಂದ ಮೋಟಾರು ಸೈಕಲಿನಲ್ಲಿ ಬರುತ್ತಿದ್ದ ಕೃಷ್ಣ ಕುಮಾರು ಮತ್ತು ವೆಂಕಟೇಶ್ ರವರು ಇತರರೊಂದಿಗೆ ಉಪಚರಿಸಿ ನೋಡಿದಾಗ ಫಿರ್ಯಾದಿದಾರರ ಎಡ ಕೈಯ ಮಣಿ ಗಂಟಿನ ಕೆಳಗೆ ರಕ್ತ ಗಾಯ, ಬಲ ಕಾಲಿ ಮಣಿ ಗಂಟಿಗೆ ಗುದ್ದಿದ ಗಾಯ, ಸೊಂಟದ ಎಡ ಭಾಗಕ್ಕೆ ಗುದ್ದಿದ ಗಾಯ, ಹಾಗೂ ಭಾಗ್ಯಲಕ್ಷ್ಮಿಯ ಕಾಲಿನ ತೊಡೆಗಳಿಗೆ ಮೂಳೆ ಮುರಿತದ ಗಾಯ ಮತ್ತು ಎಡ ಕೈ ಯ ಮಣಿಗಂಟಿಗೆ ರಕ್ತ ಗಾಯವಾಗಿದ್ದು, ಗಾಯಾಳು ಫಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಆಟೋ ರಿಕ್ಷಾವೊಂದರಲ್ಲಿ ಪುತ್ತೂರಿನ ಹಿತಾ ಆಸ್ಪತ್ರೆಗ ದಾಖಲಸಿದಲ್ಲಿ ವೈದ್ಯರು ಚಿಕಿತ್ಸೆ ನೀಡಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು,ಭಾಗ್ಯಲಕ್ಷ್ಮಿಯನ್ನು ಅವರ ಅಣ್ಣಂದಿರು ಮತ್ತು ಇತರರು ಕಾರಿನಲ್ಲಿ ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಿದಲ್ಲಿ ವೈದ್ಯರು ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಹೋಗಲು ತಿಳಿಸಿದಂತೆ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅಕ್ರ: 19/2022 ಕಲo:279,337,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಬ್ದುಲ್ ರಹಿಮಾನ್ ಪ್ರಾಯ 34 ವರ್ಷ ತಂದೆ ಉಮ್ಮರ್ ಮುಸ್ಲಿಯಾರ್ ಪೊರ್ಕಳ ಮನೆ ಅರಳ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡು ಬಂದಿದ್ದು ಪಿರ್ಯಾದುದಾರರ ತಂದೆಯವರು ಸಿದ್ದಕಟ್ಟೆ ಮಸೀದಿಯಲ್ಲಿ ಗೌರವಾಧ್ಯಕ್ಷರಾಗಿ ಕೆಲಸ ಮಾಡಿಕೊಂಡಿರುತ್ತಾರೆ .ದಿನಾಂಕ 31.01.2022 ರಂದು ಬೆಳಿಗ್ಗೆ ಸುಮಾರು 06.30 ಗಂಟೆಗೆ ಪಿರ್ಯಾದುದಾರರ ತಂದೆಯವರು ಸಿದ್ದಕಟ್ಟೆ ಮಸೀದಿಗೆ ಹೋಗಿದ್ದು ಪಿರ್ಯಾದುದಾರರು ಮತ್ತು ತಾಯಿ ಹೆಂಡತಿ ಮಕ್ಕಳು ಬೆಳಿಗ್ಗೆ 10.30 ಗಂಟೆಗೆ ಕಾವಳಕಟ್ಟೆಯಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದು ಪಿರ್ಯಾದುದಾರರ ತಾಯಿಯು ಮದುವೆಗೆ ಹೋಗುವಾಗ ಮನೆಯ ಎದುರಿನ ಬಾಗಿಲಿಗೆ ಬೀಗ ಹಾಕಿ ಅದರ ಕೀಯನ್ನು ಅಲ್ಲೆ ಹೊರಗಡೆ ಕಿಟಕಿಯ ಎಡಬದಿಯಲ್ಲಿ ಇಟ್ಟಿರುತ್ತಾರೆ. ಮದುವೆಗೆ ಹೋಗಿ ಸಂಜೆ 3.15 ಗಂಟೆಗೆ ವಾಪಸ್ಸು ಮನೆಗೆ ಬಂದಿದ್ದು ಆ ಸಮಯ.ಪಿರ್ಯಾದುದಾರರ.ತಂದೆಯವರು,ಪಿರ್ಯಾದುದಾರರಿಗಿಂತ ಮೊದಲೇ ಮನೆಗೆ ಬಂದು ಅವರ ಕೋಣೆಯಲ್ಲಿ ಮಲಗಿದ್ದು ,ಪಿರ್ಯಾದುದಾರರ ಹೆಂಡತಿ ಬಟ್ಟೆಯನ್ನು ಬದಲಾಯಿಸಲು ಮಲಗುವ ಕೋಣೆಗೆ ಹೋದಾಗ ಕೋಣೆಯಲ್ಲಿದ್ದ ಕಬ್ಬಿಣದ ಕಪಾಟಿನ ಹ್ಯಾಂಡಲ್ ಕೆಳಗೆ ಬಾಗಿದ್ದನ್ನು ನೋಡಿ ಸಂಶಯದಿಂದ ಬಾಗಿಲು ತೆರೆದು ನೋಡಿದಾಗ ಕಪಾಟಿನ ಒಳಗೆ ಇರುವ ಸೇಪ್ ಲಾಕರನ್ನು ಯಾವುದೋ ಆಯುಧದಿಂದ ಮೀಟಿ ತೆಗೆದಿರುವುದನ್ನು ಕಂಡು ಪಿರ್ಯಾದುದಾರರನ್ನು ಕರೆದು ತೋರಿಸಿದಾಗ ಸೇಪ್ ಲಾಕರ್ ತೆರದುಕೊಂಡಿದ್ದು ಅದರಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ನೋಡಿದಾಗ ಅದರಲ್ಲಿದ್ದ ಸುಮಾರು 5.5 ಪವನ್ ತೂಕದ ನೆಕ್ಲೇಸ್ ಇಲ್ಲದೇ ಇದ್ದು ಉಳಿದ ಚಿನ್ನಾಭರಣಗಳು ಮತ್ತು ಬಟ್ಟೆ ಎಡೆಯಲ್ಲಿಟ್ಟಿದ್ದ ನಗದು ಹಾಗೆ ಇರುವುದಾಗಿದ್ದು ,ನಂತರ ಪಿರ್ಯಾದುದಾರರು ಹಾಗೂ ಮನೆಯವರು ಎಲ್ಲ ಕಡೆಗಳಲ್ಲಿಯು ಹುಡುಕಾಡಿದರು ಎಲ್ಲಿಯು ಸಿಕ್ಕಿರುವುದಿಲ್ಲ. ಕಳವಾದ ನೆಕ್ಲೇಸ್ ನ ಅಂದಾಜು ಮೌಲ್ಯ 1 ಲಕ್ಷದ 80 ಸಾವಿರ ಆಗಬಹುದು .ಪಿರ್ಯಾದುದಾರರ ತಂದೆಯವರು 3.15 ಗಂಟೆಗೆ ಬಂದಾಗ ಎದುರಿನ ಬಾಗಿಲು ಬೀಗ ಹಾಕಿಕೊಂಡಿದ್ದು ಕೀಯಿಂದ ಬಾಗಿಲನ್ನು ತೆರದಿರುವುದಾಗಿದ್ದು ಯಾರೋ ಕಳ್ಳರು ಮನೆಯ ಎದುರಿನ ಬಾಗಿಲನ್ನು ತೆರೆದು ಕೋಣೆಯಲ್ಲಿದ್ದ ಕಪಾಟಿನ ಬೀಗವನ್ನು ತೆರೆದು ಅದರ ಒಳಗಿನ ಸೇಫ್ ಲಾಕರನ್ನು ಯಾವುದೋ ಆಯುಧದಿಂದ ಮೀಟಿ ಅದರಲ್ಲಿದ್ದ ಚಿನ್ನವನ್ನು ಕಳವು ಮಾಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 09-2022 ಕಲಂ 454 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗೌರಿ ಪ್ರಾಯ:51 ವರ್ಷ ಗಂಡ; ಸುಂದರ ಗೌಡ ವಾಸ; ನೇರೋಳ್ದಪಳಿಕೆ ಮನೆ ಬಂದಾರು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:03-02-2022 ರಂದು ಪಿರ್ಯಾದುದಾರರ ಗಂಡ ಬೆಳಿಗ್ಗೆ 11.00 ಗಂಟೆ ಸಮಯಕ್ಕೆ ನೆರೆಯ ಕೊರಗಪ್ಪ ಗೌಡ ರವರ ಜೊತೆಯಲ್ಲಿ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿ ನದಿ ನೀರಿನಲ್ಲಿ ಸ್ನಾನಕ್ಕೆಂದು ಹೋಗಿದ್ದು ಸ್ನಾನ ಮಾಡುತ್ತಿರುವ ಸಮಯ ಆಕಸ್ಮಿಕವಾಗಿ ನದಿ ನೀರಿಗೆ ಸಿಲುಕಿ ಸುಮಾರು ಆಳವಿರುವ ಗಯದಲ್ಲಿ ಈಜಲು ಬಾರದೆ ಮುಳುಗಿ ಮೃತಪಟ್ಟಿರುವುದಾಗಿ ನೆರೆಯ ಕೊರಗಪ್ಪ ಗೌಡ ರವರು ಪಿರ್ಯಾದುದಾರರಿಗೆ ದೂರವಾಣಿ ಮೂಲಕ ತಿಳಿಸಿದ್ದು ಅದರಂತೆ ಪಿರ್ಯಾದುದಾರರು ಸಂಬಂಧಿಕರಿಗೆ ಹಾಗೂ ನೆರೆಯಯವರಿಗೆ ಈ ವಿಚಾರವನ್ನು ತಿಳಿಸಿದಂತೆ ಅವರೆಲ್ಲರೂ ಸೇರಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ದಿನಾಂಕ;04-02-2022 ರಂದು ಬೆಳಿಗ್ಗೆ 08.00 ಗಂಟೆ ಸಮಯಕ್ಕೆ ಮೃತ ದೇಹವು ನದಿಯ ಮೇಲ್ಭಾಗಕ್ಕೆ ತೇಲಿಕೊಂಡು ಬಂದು ಮೃತದೇಹವು ಪತ್ತೆಯಾಗಿರುತ್ತದೆ. ಸ್ನಾನಕ್ಕೆಂದು ಹೋಗಿದ್ದು ಸ್ನಾನ ಮಾಡುತ್ತಿರುವ ಸಮಯ ಆಕಸ್ಮಿಕವಾಗಿ ನದಿ ನೀರಿಗೆ ಸಿಲುಕಿ ಸುಮಾರು ಆಳವಿರುವ ಗಯದಲ್ಲಿ ಈಜಲು ಬಾರದೆ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಯು ಡಿ ಆರ್ 08/2022 ಕಲಂ: 174 ಸಿಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.