ಅಪಘಾತ ಪ್ರಕರಣ: ೦2
ಕಡಬ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಮೊಹಮ್ಮದ್ ಹ್ಯಾರೀಸ್ ಪ್ರಾಯ:22 ವರ್ಷ ತಂದೆ: ಮೊಹಮ್ಮದ್ ಹನಿಫ್ ವಾಸ: ಚಾಮೆತ್ತಡ್ಕ ಮನೆ,ಆಲಂಕಾರು ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ:02.02.2023 ರಂದು ಪೆರಾಬೆ ಗ್ರಾಮದ ಪೂಂಜಾ ಎಂಬಲ್ಲಿಗೆ ಹೋಗಿ ನಂತರ ಚಿಕ್ಕಪ್ಪನ ಮಗನಾದ ನಾಸೀರ್ ಎಂಬಾತನೊಂದಿಗೆ ಫ್ಯಾನ್ಸಿ ಅಂಗಡಿಗೆ ಹೋಗುವರೇ ಉಪ್ಪಿನಂಗಡಿ-ಸುಬ್ರಹ್ಮಣ್ಯರಾಜ್ಯ ಹೆದ್ದಾರಿಯಲ್ಲಿ ನಡೆದುಕೊಂಡು ಬರುತ್ತಾ ಸಮಯ ರಾತ್ರಿ 08.30 ಗಂಟೆಗೆ ಕಡಬ ತಾಲೂಕು ಪೆರಾಬೆ ಗ್ರಾಮದ ಕಜೆ ಎಂಬಲ್ಲಿಗೆ ತಲುಪಿದಾಗ ಅದೇ ರಸ್ತೆಯಲ್ಲಿ ಹಿಂದಿನಿಂದ ಅಂದರೆ ಆಲಂಕಾರು ಕಡೆಯಿಂದ ಬರುತಿದ್ದ KA-21 C-1960ನೇ ಮಿನಿ ಆಟೋರಿಕ್ಷಾ Ape ಗೂಡ್ಸ್ ವಾಹನವನ್ನು ಅದರ ಚಾಲಕನಾದ ಆರೋಪಿತ ಗುರುಪ್ರಸಾದ್ ಎಂಬಾತನು ವಾಹನವನ್ನು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯಬದಿಯಲ್ಲಿ ನಡೆದುಕೊಂಡು ಬರುತಿದ್ದ ಪಿರ್ಯಾದುದಾರರಿಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಯ ಎಡಬದಿಗೆ ಬಿದ್ದು ತಲೆಗೆ, ಎಡಬುಜಕ್ಕೆ ಹಾಗೂ ಎಡಕಾಲಿಗೆ ರಕ್ತ ಗಾಯವಾಗಿರುತ್ತದೆ.ನಂತರ ಗಾಯಾಳುವನ್ನು ನಾಸೀರ್ ಎಂಬಾತನು ಕಾರು ವಾಹನದಲ್ಲಿ ಪುತ್ತೂರು ಮಹಾವೀರಾ ಆಸ್ಪತ್ರಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 10/2023 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಕೇಶವ ಪಿ ಪ್ರಾಯ 45 ವರ್ಷ ತಂದೆ: ದಿ| ಗೋಪಾಲ ವಾಸ: ಮೇಲ್‌ಮಜಲು ಮನೆ, ಬನ್ನೂರು ಗ್ರಾಮ ಮತ್ತು ಅಂಚೆ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 04-02-2023 ರಂದು 22-00 ಗಂಟೆಗೆ ಆರೋಪಿ ಓಮ್ನಿ ಕಾರು ಚಾಲಕ ರೋಹಿತ್ ಕುಮಾರ್ ಎಂಬವರು KA-19-N-0413 ನೇ ನೋಂದಣಿ ನಂಬ್ರದ ಓಮ್ನಿ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಮಾಣಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ನೆಹರೂನಗರ ಜಂಕ್ಷನ್ ಬಳಿ, ನೆಹರೂನಗರ ಬಸ್ ನಿಲ್ದಾನದ ಎದುರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ತೀರಾ ಬಲ ಬದಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಕೇಶವ. ಪಿ ಎಂಬವರು ಚಾಲಕರಾಗಿ ನೆಹರೂನಗರ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-C-3437 ನೇ ನೋಂದಣಿ ನಂಬ್ರದ ಅಟೋರಿಕ್ಷಾಗೆ ಓಮ್ನಿ ಕಾರು ಅಪಘಾತವಾಗಿ, ನಂತರ ಓಮ್ನಿ ಕಾರು ತೀರಾ ಎಡ ಬದಿಗೆ ಚಲಾಯಿಸಿ ರಸ್ತೆಯ ಬದಿಯಲ್ಲಿ, ತೃಷಾ (6½) ವರ್ಷದ ಮಗುವನ್ನು ಎತ್ತುಕೊಂಡು ನಿಂತಿದ್ದ ಪಾದಾಚಾರಿ ನಾರಾಯಣ ನಾಯ್ಕ (66ವ) ರವರಿಗೆ ಓಮ್ನಿ ಕಾರು ಅಪಘಾತವಾಗಿ, ರಸ್ತೆಗೆ ಬಿದ್ದ ನಾರಾಯಣ ನಾಯ್ಕ ರವರಿಗೆ ಎಡಕಾಲಿನ ತೊಡೆಗೆ ಗುದ್ದಿದ ಗಾಯ, ಮಗು ತೃಷಾ ರವರಿಗೆ ತಲೆಗೆ, ಗಲ್ಲಕ್ಕೆ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಹೋಗಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 24/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ವಿಟ್ಲ ಪೊಲೀಸ್ ಠಾಣೆ : ದಿನಾಂಕ:04-02-2023 ರಂದು ವಿಟ್ಲ ಪೊಲೀಸ್ ಠಾಣಾ ಪಿಎಸ್‌ಐ ಸಂದೀಪ್ ಕುಮಾರ್ ಶೆಟ್ಟಿ ರವರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಉಕ್ಕುಡ, ಕೇಪು, ಸಾರಡ್ಕ ಕಡೆ ರೌಂಡ್ಸ್ ಕರ್ತವ್ಯ ಮಾಡುತ್ತಿರುವಾಗ ಬಂಟ್ವಾಳ ಅಳಿಕೆ ಗ್ರಾಮದ ಕುದ್ದುಪದವು ನಿವಾಸಿ ಆನಂದ ಪೂಜಾರಿರವರು ತನ್ನ ಮನೆಯ ಪಕ್ಕದಲ್ಲಿರುವ ಅಡಿಕೆ ಕೊಠಡಿಯಲ್ಲಿ ಮದ್ಯದ ಬಾಟ್ಲಿಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಮಾಹಿತಿಯನ್ನು ದೂರವಾಣಿ ಕರೆ ಮೂಲಕ ಮೇಲಾಧಿಕಾರಿಯವರಿಗೆ ತಿಳಿಸಿ ಪಿರ್ಯಾಧಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ಸಮಯ 18.45 ಗಂಟೆಗೆ ತಕ್ಷೀರು ಸ್ಥಳಕ್ಕೆ ಹೋಗಿ ಆಪಾದಿತನ ಮನೆಯ ಬಳಿ ತಲುಪಿದಾಗ ಒಬ್ಬ ವ್ಯಕ್ತಿ ಓಡಲು ಪ್ರಯತ್ನಿಸಿದ್ದು ಆತನನ್ನು ಹಿಡಿದು ವಿಚಾರಿಸಲಾಗಿ ಯಾವುದೇ ಪರವಾಣಿಗೆ ಯಾ ದಾಖಲಾತಿಗಳನ್ನು ಹೊಂದದೆ ಕೊಠಡಿಯೊಳಗೆ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದಂತೆ ಆತನ ಮನೆಯ ಪಕ್ಕದ ಕೊಠಡಿಯೊಳಗೆ ಪರಿಶೀಲಿಸಲಾಗಿ 1.ಮೈಸೂರು ಲ್ಯಾನ್ಸರ್ ಕಂಪನಿಯ 90MLನ ಟೆಟ್ರಾ ಪ್ಯಾಕೇಟ್‌ಗಳು-61, 2) ಓರಿಜಿನಲ್ ಚಾಯ್ಸ್ ಕಂಪನಿಯ 90MLನ ಟೆಟ್ರಾ ಪ್ಯಾಕೇಟ್‌ಗಳು-19 ಇರುವುದು ಕಂಡು ಬಂದು ಇವುಗಳ ಅಂದಾಜು ಮೌಲ್ಯ-2800/-ರೂಪಾಯಿ ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 16/2023 ಕಲಂ: 32,34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦5
ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಸಂತ ಪ್ರಾಯ 46 ವರ್ಷ ತಂದೆ ಸುಂದರ ಪೂಜಾರಿ ವಾಸ ಬಾರೆಬೆಟ್ಟು ಮನೆಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ತನ್ನ ತಂದೆ ಸುಂದರ ಪೂಜಾರಿ (66) ರವರು ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಬಾರೆಬೆಟ್ಟು ಎಂಬಲ್ಲಿದ್ದು ದಿನಾಂಕ:25.01.2023 ರಂದು ಬೆಳಗ್ಗೆ ಸುಮಾರು 11.00 ಗಂಟೆಗೆ ಪಿರ್ಯಾದಿದಾರರ ದೂರದ ಸಂಬಂದಿ ಕಲ್ಯಾಣಿಯವರು ಕರೆ ಮಾಡಿ ನಿಮ್ಮ ತಂದೆಯವರು ವಿಪರೀತ ಅಮಲು ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿರುವ ಬಗ್ಗೆ ಮಾಹಿತಿ ತಿಳಿಸಿದ ಕೂಡಲೇ ಪಿರ್ಯಾದಿದಾರರು ಹೊರಟು ತಂದೆಯವರನ್ನು ಆಟೋರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ಕರೆದುಕೊಂಡು ಬಂದಿದ್ದು ವೈದ್ಯರು ಪರೀಕ್ಷಿಸಿ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದಂತೆ ಅಂಬುಲೆನ್ಸ್ ವಾಹನದಲ್ಲಿ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈದ್ಯರು ಪರೀಕ್ಷಿಸಿ ಯಾವುದೋ ವಿಷ ಪದರ್ಥ ಸೇವಿಸಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿರುತ್ತಾರೆ, ಚಿಕಿತ್ಸೆ ಪಡೆಯುತ್ತಿದ್ದ ಪಿರ್ಯಾದಿದಾರರ ತಂದೆಯವರು ದಿನಾಂಕ 03.02.2023 ರಂದು ಸಮಯ ಸಂಜೆ 6.55 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿ ವೈದ್ಯಾಧಿಕಾರಿಯವರು ತಿಳಿಸಿದ್ದು. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 05/2023 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಿಘ್ನೇಶ್ ಪ್ರಾಯ 48 ವರ್ಷ ತಂದೆ ,ಜನಾರ್ದನ್ ವಾಸ , ಕನ್ಯಾಡಿ ಮನೆ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 04-02-2023 ರಂದು 8:30 ಗಂಟೆಗೆ ಮಾಹಿತಿ ಕಛೇರಿಯಲ್ಲಿ ಕರ್ತವ್ಯದಲ್ಲಿರುವ ಸಮಯ ಸಾರ್ವಜನಿಕ ರೊಬ್ಬರು ಬಂದು ಧರ್ಮಸ್ಥಳದ ದ್ವಾರದ ಬಳಿ ಸುಮಾರು 70-75 ವರ್ಷ ಪ್ರಾಯದ ಗಂಡಸು ಮಲಗಿದ ಸ್ಥಿತಿಯಲ್ಲಿ ಮೃತ ಪಟ್ಟಂತೆ ಕಂಡು ಬರುತ್ತಿದೆ ಎಂದು ತಿಳಿಸಿದ ಮೇರೆಗೆ ಪಿರ್ಯಾದಿದಾರರು ಹಾಗೂ ರಾಮ ಎಂಬವರು 08-40 ಗಂಟೆಗೆ ಧರ್ಮಸ್ಥಳದ ದ್ವಾರದ ಗೌರಿಮಾರು ಕಟ್ಟೆಯ ಬಳಿ ಬಂದು ನೋಡಲಾಗಿ ಹೊರಗೆ ಜಗಳಿಯಲ್ಲಿ ಸುಮರು 70-75 ವರ್ಷ ಪ್ರಾಯದ ಗಂಡಸು ಮಲಗಿಕೊಂಡಿದ್ದ ರೀತಿಯಲ್ಲಿದ್ದು, ಯಾವುದೇ ರೀತಿಯಲ್ಲಿ ಉಸಿರಾಟ ನಡೆಸುವುದು ಕಂಡು ಬಾರದೇ ಇದ್ದು ಸದ್ರಿ ವ್ಯಕ್ತಿಯನ್ನು ಎಬ್ಬಿಸಲು ಪ್ರಯತ್ನಿಸಿದಾಗ ಮೇಲೆ ಎಳದೇ ಇದ್ದು ಆತನು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಯುಡಿಆರ್ ಕ್ರಮಾಂಕ: 11/2023 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಮೆಶ್ ನಾಯ್ಜ (48)ತಂದೆಲಿಂಗಪ್ಪ ನಾಯ್ಕ ವಾಸ: ಜ್ಯೋತಿ ನಗರ ಮಾಚರು ಮನೆ ಮನೆ, ಉಜಿರೆ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಉಜಿರೆ ಗ್ರಾಮ ಪಂಚಾಯತು ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 03-02-2023 ರಂದು ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ದುರ್ಗಾ ಟೆಕ್ಸ್ ಟೈಲ್ಸ್ ಎದುರುಗಡೆ ವಾಹನ ಪಾರ್ಕಿಂಗ್ ಬಳಿ ಅಪರಿಚಿತ ವ್ಯಕ್ತಿಯೋರ್ವರು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು ಸದ್ರಿ ವ್ಯಕ್ತಿಯನ್ನು ಚಿಕಿತ್ಸೆಯ ಬಗ್ಗೆ 108 ಅಂಬುಲಾನ್ಸ್ ವಾಹನದಲ್ಲಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ದಿನಾಂಕ:04-02-2023 ರಂದು ಬೆಳಿಗ್ಗೆ 10.00 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್ ನಂಬ್ರ: 09/2023 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀ ನಯನ್ ಪ್ರಾಯ:31 ವರ್ಷ ತಂದೆ; ಗೋಪಾಲಕೃಷ್ಣ ವಾಸ: ಜೆತ್ತೋಡಿ ಮನೆ, ಚಾರ್ವಾಕ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ದೊಡ್ಡಪ್ಪನಾದ ಮುತ್ತಪ್ಪಗೌಡ ಪ್ರಾಯ 64 ವರ್ಷ ಎಂಬುವರು ತನ್ನ ಮಗನಾದ ತಿಲಕ ಎಂಬುವರೊಂದಿಗೆ ವಾಸವಾಗಿದ್ದು, ಮುತ್ತಪ್ಪಗೌಡರ ಪತ್ನಿ 02 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ. ದಿನಾಂಕ:26-01-2023 ರಂದು ಮುತ್ತಪ್ಪಗೌಡರವರ ಮಗನಾದ ತಿಲಕರವರು ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದು ಸಂಜೆ ಮುತ್ತಪ್ಪಗೌಡರು ಮನೆಯಲ್ಲಿ ಒಬ್ಬರೇ ಇದ್ದು ರಾತ್ರಿ 09:30 ಗಂಟೆಗೆ ಮುತ್ತಪ್ಪಗೌಡರು ವಾಂತಿಮಾಡುತ್ತಿದ್ದ ಬಗ್ಗೆ ತಿಲಕ್‌ರವರ ಚಿಕ್ಕಮ್ಮನಾದ ಉಮಾವತಿಯವರು ತಿಳಿಸಿದ ಮೇರೆಗೆ ತಿಲಕರವರು ಮತ್ತು ಪಿರ್ಯಾದುದಾರರು ಮನೆಗೆ ಹೋಗಿ ನೋಡಲಾಗಿ ಮುತ್ತಪ್ಪಗೌಡರವರು ವಾಂತಿ ಮಾಡುತ್ತಿದ್ದು ನಂತರ ವಿಚಾರಿಸಿದಾಗ ಯಾವುದೋ ವಿಷಪದಾರ್ಥ ಸೇವಿಸಿರುವುದಾಗಿ ತಿಳಿಸಿದ್ದು ಕೂಡಲೇ ತಿಲಕರವರು ತನ್ನ ತಂದೆಯನ್ನು ಕಾರಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ವೈದ್ಯರ ಸಲಹೆಯಂತೆ 108 ಆಂಬುಲೆನ್ಸ್ ನಲ್ಲಿ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಚಿಕಿತ್ಸೆಯಲ್ಲಿದ್ದ ಮುತ್ತಪ್ಪಗೌಡರವರು ದಿನಾಂಕ:03-02-2023 ರಂದು ರಾತ್ರಿ 08:24 ಗಂಟೆಗೆ ಚಿಕೆತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದೈರು ದೃಡಪಡಿಸಿರುತ್ತಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಯು ಡಿ ಆರ್ 05/2023 ಕಲಂ:174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಶಿಕಲಾ ಎಲ್.ಎನ್ ಪ್ರಾಯ: 29 ವರ್ಷ ಗಂಡ: ಗೋವಿಂದ ಗೌಡ ವಾಸ: ಕೋಟೆ ಬೀದಿ ,ಕೊಣನೂರು ಅರಕಲಗೂಡು ತಾಲೂಕು ಹಾಸನ ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ಗೋವಿಂದ ಗೌಡ (38) ಮತ್ತು ಪಿರ್ಯಾದಿದಾರರು ಗುಜರಿ ಹೆಕ್ಕುವ ಕೆಲಸ ಮಾಡಿಕೊಂಡಿದ್ದು, ದಿನಾಂಕ:03.02.2023 ರಂದು ಗುಜರಿ ಹೆಕ್ಕುವರೇ ಅವರು ಊರು ಮನೆಯಾದ ಕೋಟೆ ಬೀದಿ ಕೊಣನೂರು ಅರಕಲಗೂಡು ತಾಲೂಕು ಎಂಬಲ್ಲಿಂದ ಆಪೆ ಆಟೋ ರಿಕ್ಷಾ ನಂಬ್ರ ಕೆಎ.12.6772ನೇದರಲ್ಲಿ ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿಗೆ ಬಂದು ಅಲ್ಲಿಯೇ ಉಳಕೊಂಡಿದ್ದು, ದಿನಾಂಕ:03.02.2023 ರಂದು ಬೆಳಿಗ್ಗೆ 08.00 ಗಂಟೆಗೆ ಮೃತ ಗೋವಿಂದ ಗೌಡ ಎಂಬವರಿಗೆ ಜ್ವರ ಕಾಣಿಸಿಕೊಂಡಿದ್ದು ಔಷಧಿಯ ಬಗ್ಗೆ ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಅದೇ ದಿನ ಅಡ್ಡಹೊಳೆಗೆ ಬಂದು ಅಲ್ಲಿ ರಾತ್ರಿ 9.00 ಗಂಟೆಗೆ ಮಲಗಿದ್ದವರು, ದಿನಾಂಕ:04.02.2023 ರ ಬೆಳಿಗ್ಗೆ 05.00 ಗಂಟೆಯ ಮದ್ಯೆ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯುಡಿಆರ್ ನಂಬ್ರ 11/2023 ಕಲಂ:174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.