ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್‌ ಅಝೀಝ್‌ ಕೆ, ಪ್ರಾಯ 48 ವರ್ಷ, ತಂದೆ: ಹಸೈನಾರ್‌, ವಾಸ: ಸಸಿಹಿತ್ಲು ಮನೆ, ಈಶ್ವರಮಂಗಲ ಅಂಚೆ, ಪಡುವನ್ನೂರು ಗ್ರಾಮ, ಪುತ್ತೂರು  ಎಂಬವರ ದೂರಿನಂತೆ ದಿನಾಂಕ 03-09-2022 ರಂದು 23-15 ಗಂಟೆಗೆ ಆರೋಪಿ ಸ್ಕೂಟರ್‌ ಸವಾರ ದೀಕ್ಷಿತ್‌ ಎಂಬವರು  KA-21-X-9746 ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ವಿನೋದ್‌ ಎಂಬವರನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಮುಂಡೂರು ಕಡೆಯಿಂದ ಮುಕ್ರಂಪಾಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಜಂಕ್ಷನ್‌ ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೆಲೇ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಅಬ್ದುಲ್‌ ಅಝೀಝ್‌ ರವರು ದಾವುದುಲ್‌ ಹಕೀಂ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ಪಡುವನ್ನೂರು ಕಡೆಗೆ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ kA-19-MA-5789 ನೇ ನೋಂದಣಿ ನಂಬ್ರದ ಕಾರಿಗೆ ಸ್ಕೂಟರ್‌ ಅಪಘಾತವಾಗಿ, ಸವಾರ ಮತ್ತು ಸಹಸವಾರ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು ಗಾಯಗಳಾಗಿ, ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 141/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನಾಗೇಶ ಪ್ರಾಯ 40 ವರ್ಷ ತಂದೆ ರುಕ್ಮಯ್ಯ ಪೂಜಾರಿ ಬಾಬು ಕೋಡಿ ಮನೆ ಮಂಚಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು  ಕರ್ನಾಟಕ ಬ್ಯಾಂಕ್ ಮಾಲಾಡಿ ಶಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿಕೊಂಡಿದ್ದು .ಪಿರ್ಯಾದುದಾರರ ಅಣ್ಣ ಶಶಿಧರ್  ರವರು ವಿದೇಶದಲ್ಲಿ ಉದ್ಯೋಗದಲ್ಲಿದ್ದವರು 3 ವರ್ಷದಿಂದ ಮನೆಯಲ್ಲಿಯೇ,ಇದ್ದು ಅವಿವಾಹಿತರಾಗಿರುತ್ತಾರೆ.ಪಿರ್ಯದುದಾರರು ಮತ್ತು ಮನೆಯವರು ದಿನಾಂಕ 03.09.2022 ರಂದು ರಾತ್ರಿ 11.00 ಗಂಟೆಗೆ  ಮನೆಯಲ್ಲಿ ಮಲಗಿರುವ ಸಮಯ ಮೃತ ಶಶಿಧರ್ ಮತ್ತು ಪಿರ್ಯಾದುದಾರರ ತಮ್ಮ ಸನತ್ ರವರು ಮನೆಯ ಹಾಲ್ ನಲ್ಲಿ ಮಲಗಿದ್ದು ದಿನಾಂಕ 04.09.2022 ರಂದು ಬೆಳಿಗ್ಗೆ 4.20 ಗಂಟೆಗೆ ಪಿರ್ಯಾದುದಾರರ ಅಣ್ಣ ಶಶಿಧರ್ ರವರಿಗೆ ಕೆಮ್ಮು ಕಾಣಿಸಿಕೊಂಡಿದ್ದು ನಂತರ ಶೌಚಾಲಯಕ್ಕೆ ಹೋಗಿದ್ದು ಹುಷಾರಿಲ್ಲವಾಗಿ ತಿಳಿಸಿದವರನ್ನ ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆಗೆ  ಕರೆದುಕೊಂಡು ಬಂದಿದ್ದು ವೈದ್ಯರು ಪರೀಕ್ಷಿಸಿ  ಪಿರ್ಯಾದುದಾರರ ಅಣ್ಣ ಶಶಿಧರ್ ರವರು  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 44-2022  ಕಲಂ 174  ಸಿ ಆರ್ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಲರ ಶಾಂತಿ ಪ್ರಾಯ 27 ವರ್ಷ ಗಂಡ: ಸತೀಶ ವಾಸ: ಕುಕ್ಕುಂದುರು ಮನೆ ಜಾಲ್ಸೂರು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರು ಗಂಡ ಸಮೇತ ದಿನಾಂಕ 03-09-2022 ರಂದು ಸಂಜೆ 4.30 ಗಂಟೆಗೆ ಫಿರ್ಯಾದಿದಾರರ ಭಾವನ ಮನೆಯಾದ ಬೆಳ್ತಂಗಡಿ ತಾಲೂಕು ಮೂರ್ಚೆಯಲ್ಲಿರುವ ಮನೆಗೆ ಹೋಗಿದ್ದು.  ರಾತ್ರಿ ಊಟವಾದ ಬಳಿಕ 8.30 ಗಂಟೆಗೆ ಫಿರ್ಯಾದಿದಾರರ ಗಂಡ ಮೂರ್ಚೆಯಿಂದ ಬಂಟ್ವಾಳ ತಾಲೂಕು ಸಜಿಪ ಮೂಡ ಗ್ರಾಮದ ಆರ್ಯಾಪುನಲ್ಲಿರುವ ಮನೆಗೆ ಬಂದಿರುತ್ತಾರೆ. ರಾತ್ರಿ 10.00 ಗಂಟೆಯವರೆಗೆ ಫಿರ್ಯಾದಿದಾರರಿಗೆ ಗಂಡನಾದ ಸತೀಸನು ವಿಡಿಯೋ ಕಾಲ್ ವಾಯ್ಸ್, ಮೇಸೆಜ್ ಮಾಡಿದ್ದು, ಇದಕ್ಕೆ ಯಾವುದೇ ಪ್ರತಿಕ್ರಿಯೆ ಫಿರ್ಯಾದಿದಾರರು  ನೀಡಿರುವುದಿಲ್ಲ. ದಿನಾಂಕ: 04-09-2022 ರಂದು ಮಧ್ಯಾಹ್ನ 2.45 ಗಂಟೆಗೆ ಫಿರ್ಯಾದಿದಾರರ ಗಂಡ ಕೆಲಸ ಮಾಡುತ್ತಿದ್ದಲಿಂದ ಕರೆ ಮಾಡಿ ಫಿರ್ಯಾದಿದಾರರ ಗಂಟ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿಸಿದರು.  ಅದರಂತೆ ಫಿರ್ಯಾದಿದಾರರು ಸಂಬಂದಿಕರೊಂದಿಗೆ ಬಂದು ನೋಡದಲಿ ಫಿರ್ಯಾದಿದಾರರ ಗಂಡ ಮನೆಯ ರೂಮಿನಲ್ಲಿ ತೆಂಗಿನ ಮರದ ಅಡ್ಡಕ್ಕೆ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ. ಫಿರ್ಯಾದಿದಾರರು ಗಂಡನ ಕರೆ, ಮತ್ತು ಮಸೇಜಿಗೆ ಪ್ರತಿಕ್ರಿಯೆ ನೀಡದೇ ಇದ್ದುದರಿಂದ ಅದೇ ಬೇಸರದಲ್ಲಿ ದಿನಾಂಕ: 03.09.2022 ರಂದು ರಾತ್ರಿ  10.00  ಗಂಟೆಯಿಂದ  ದಿನಾಂಕ: 04-09-2022 ರಂದು ಮಧ್ಯಾಹ್ನ  2.45 ಗಂಟೆಯ ಮಧ್ಯೆ ದಲ್ಲಿ ಸಾಯುವ ಉದ್ದೇಶದಿಂದ ಕುತ್ತಿಗೆಗೆ ನೇಣುಬಿಗಿದು ಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 34/2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-09-2022 10:16 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080