ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೊಹಮ್ಮದ್ ಸಲಾವುದ್ದೀನ್ ಪ್ರಾಯ: ( 25) ವರ್ಷ ತಂದೆ: ಅಬ್ದುಲ್ ರಹಿಮಾನ್ ವಾಸ: ಪೇರಿಮಾರು ಮನೆ, ಪುದು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 03.10.2022 ರಂದು ಪಿರ್ಯಾದಿದಾರರ ಸಂಬಂಧಿ ಬಿಫಾತುಮ್ಮರವರ ಬಾಬ್ತು KA-70-H- 0226 ನೇ ರವರ ಸ್ಕೂಟರಿನಲ್ಲಿ ತನ್ನ ಸ್ನೇಹಿತ ಮಹಮ್ಮದ್ ಜವಾಝ್ ರವರು ಸವಾರನಾಗಿ ಪಿರ್ಯಾದಿದಾರರು ಸಹಸವಾರನಾಗಿ ಕುಳಿತುಕೊಂಡು ಬಿ.ಸಿ.ರೋಡ್ ಕಡೆಗೆ ಹೋಗುತ್ತಾ ಸಮಯ ಸುಮಾರು 22:30 ಗಂಟೆಗೆ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಶಾಂತಿಯಂಗಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಸ್ಕೂಟರ್ ಸವಾರ ಮೊಹಮ್ಮದ್ ಜವಾಝ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸ್ಕೂಟರನ್ನು ಚಲಾಯಿಸಿದ ಪರಿಣಾಮ ಸ್ಕೂಟರ್ ಹತೋಟಿ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಭುಜಕ್ಕೆ ಗುದ್ದಿದ ಗಾಯ, ಬಲ ಹಾಗೂ ಎಡ ಕಾಲಿನ ಪಾದಗಳಿಗೆ ಹಾಗೂ ಸೊಂಟಕ್ಕೆ ತರಚಿದ ಗಾಯಗಳಾಗಿದ್ದು, ಸವಾರ ಮಹಮ್ಮದ್ ಜವಾಝ್ ರವರ ಎಡಮುಂಗೈಗೆ ಹಾಗೂ ಎಡಕಾಲಿಗೆ ತರಚಿದ ಗಾಯಗಳಾಗಿದ್ದು ಗಾಯಗೊಂಡವರನ್ನು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿದಲ್ಲಿ ಸವಾರ ಮಹಮ್ಮದ್ ಜವಾಝ್ ರವರಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಿದರು .ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 115/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚಂದ್ರಶೇಖರ ನಾಯಕ್‌ ಪ್ರಾಯ 45 ವರ್ಷ ತಂದೆ:ಸಂಜೀವ ನಾಯಕ್ ವಾಸ:ಮಂಚಿ ಮನೆ ಮತ್ತು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ  ದಿನಾಂಕ:03-10-2022 ರಂದು ಸಂಜೆ ಸುಮಾರು 4.20 ಗಂಟೆಗೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಪುದ್ದೋಟ್ಟು ಎಂಬಲ್ಲಿರುವ ಸಮಯ ಸಾಲೆತ್ತೂರು ಕಡೆಯಿಂದ ಮಾರ್ನಬೈಲು ಕಡೆಗೆ ಕೆಎ-46-ಎಂ-1881ನೇ ಬೊಲೆರೋ ವಾಹನವನ್ನು ಅದರ ಚಾಲಕ ಮೋಯಿದೀನ್‌ ಕುಂಞ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಅಂದರೆ ಮಾರ್ನಬೈಲು ಕಡೆಯಿಂದ ಸಾಲೆತ್ತೂರು ಕಡೆಗೆ ತೀರಾ ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿದ್ದ ಕೆಎ-05-ಎಂಎಚ್‌-9188ನೇ ಓಮ್ನಿ ಕಾರಿಗೆ ಅಪಘಾತಪಡಿಸಿದ ಪರಿಣಾಮ ಎರಡು ಕಾರುಗಳು ಜಖಂಗೊಂಡಿದ್ದು. ಅಪಘಾತದ ಪರಿಣಾಮ ಓಮ್ನಿ ಕಾರಿನ ಚಾಲಕ ಗಣೇಶಪ್ರಭುರವರಿಗೆ ರಕ್ತಗಾಯವಾಗಿರುತ್ತದೆ. ಕೂಡಲೆ ಪಿರ್ಯಾಧಿ ಹಾಗೂ ಅಲ್ಲಿ ಸೇರಿದವರು ಗಾಯಾಳು  ಗಣೇಶ್‌ ಪ್ರಭುರವರನ್ನು  ಚಿಕಿತ್ಸೆಯ ಬಗ್ಗೆ ದೇರಳಕಟ್ಟೆಯ ಕೆ ಎಸ್‌ ಹೆಗ್ಡೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಗಣೇಶಪ್ರಭುರವರು ಸದ್ರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 155/2022  ಕಲಂ: 279,337  ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಿವಕುಮಾರ್ ತಂದೆ: ಲೇಟ್ ಕಣ್ಣನ್ ವಾಸ: ತಳೂರು ಮನೆ, ದೇವಚಳ್ಳ ಗ್ರಾಮ, ನೆಲ್ಲೂರು ಕೆಮ್ರಾಜೆ ಅಂಚೆ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ಮತ್ತು ಅವರ ತಮ್ಮ ಪ್ರಸಾದ್ ಕುಮಾರ್ ರವರು ದಿನಾಂಕ 04.10.2022 ರಂದು ಪಿರ್ಯಾದುದಾರರ ತಮ್ಮನ ಪರಿಚಯದ ರಾಜೇಶ್ ಎಂಬವರ ಬಾಬ್ತು ಕೆಎ 05 ಎಂಎ 1712 ನೇ ನಂಬರ್  ಕಾರಿನಲ್ಲಿ  ಕೆಲಸದ ನಿಮಿತ್ತ ಸುಳ್ಯ ಕ್ಕೆ ಬಂದಿದ್ದು, ನಂತರ ವಾಪಾಸ್ ಮನೆಗೆ ಹೋಗುತ್ತಿರುವರೇ ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಜಬಳೆ ಎಂಬಲ್ಲಿ ಸಮಯ ಸುಮಾರು 12:45 ಗಂಟೆಗೆ ತಲುಪುತ್ತಿದ್ದಂತೆ (ಸುಳ್ಯ –ಸುಬ್ರಹ್ಮಣ್ಯ ಮಾರ್ಗ) ಎದುರಿನಿಂದ ಬಂದ ಅಂದರೆ ಎಲಿಮಲೆ ಕಡೆಯಿಂದ ಸುಳ್ಯ ಕಡೆಗೆ ಒಂದು ಸ್ಕೂಟರ್‌‌ನ್ನು ಅದರ ಸವಾರ ತನ್ನ ತೀರ ಬಲ ಬದಿಗೆ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಬಂದು ಪಿರ್ಯಾದುದಾರರ ಕಾರಿನ ಎದುರಿಗೆ ಡಿಕ್ಕಿಪಡಿಸಿದ ಪರಿಣಾಮ  ಸ್ಕೂಟರ್‌ನಲ್ಲಿದ್ದ ಸವಾರ ಹಾಗೂ ಸಹ ಸವಾರೆ ರಸ್ತೆಯ ಮೇಲೆ ಎಸೆಯಲ್ಪಟ್ಟು .ಕೂಡಲೇ ಪಿರ್ಯಾದುದಾರರು ತನ್ನ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅಲ್ಲೇ ಇದ್ದ ಸ್ಥಳಿಯರೊಂದಿಗೆ  ಗಾಯಾಳುಗಳ ಬಳಿಗೆ ಹೋಗಿ ಉಪಚರಿಸಿದಾಗ ಗಾಯಳುಗಳು ತೀವ್ರ ಸ್ವರೂಪದ ಗಾಯಗೊಂಡಿದ್ದು, ಸ್ಕೂಟರ್‌ನ ಸವಾರ ಹಾಗೂ ಸಹ ಸವಾರೆ ಪಿರ್ಯಾದುದಾರರ ಪರಿಚಯದ ಅಮರ ಮುಡ್ನೂರು ಗ್ರಾಮದ ದೇವಿದಾಸ್‌ ರವರ ಮಗ ನಿಶಾಂತ್‌, ಮತ್ತು  ಸಹ ಸವಾರೆ ಮಗಳು ಕುಮಾರಿ ಮೋಕ್ಷ ಎಂದು ತಿಳಿಯಿತು. ನಂತರ ಗಾಯಾಳುಗಳನ್ನು ಸ್ಥಳದಲ್ಲಿದ್ದ ಗಾಯಾಳುಗಳ ಸಂಬಂದಿಕರು ವಾಹನವೊಂದರಲ್ಲಿ ಚಿಕಿತ್ಸೆ ಬಗ್ಗೆ ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.ವಿಚಾರ ತಿಳಿಯಲಾಗಿ ತೀವ್ರ ಸ್ವರೂಪದ ಗಾಯಗೊಂಡಿದ್ದ ನಿಶಾಂತ್‌ನನ್ನು ಪರೀಕ್ಷಿಸಿದ ಸುಳ್ಯ ಸರಕಾರಿ ಆಸ್ವತ್ರೆಯ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ ಬಗ್ಗೆ ಹಾಗೂ ವೈದ್ಯರ ಸೂಚನೆಯಂತೆ ಕುಮಾರಿ ಮೋಕ್ಷಳನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಸರಕಾರಿ ಆ್ಯಂಬುಲೆನ್ಸ್‌‌ನಲ್ಲಿ ಮಂಗಳೂರು ಆಸ್ವತ್ರೆಗೆ ಬಂಟ್ವಾಳದ ಬಳಿ  ಕರೆದುಕೊಂಡು ಹೋಗುವಾಗ ಕುಮಾರಿ ಮೋಕ್ಷ ಮೃತಪಟ್ಟಿರುವ ಬಗ್ಗೆ ತಿಳಿದಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ 114/2022 ಕಲಂ 279, 304(A)  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪೃಥ್ವಿರಾಜ್, 23 ವರ್ಷ, ತಂದೆ: ಬಾಲಕೃಷ್ಣ ಮಡಿವಾಳ, ವಾಸ: ಮಣಿಮಜಲು ಮನೆ, ಕಳಂಜ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 03-10-2022 ರಂದು ರಾತ್ರಿ  ಈ ಪ್ರಕರಣದ ಪಿರ್ಯಾದಿದಾರರು ಅವರ ಬಾಬ್ತು ಸ್ಕೂಟರ್ ನಲ್ಲಿ ಬೆಳ್ಳಾರೆ ಪೇಟೆಗೆ ಬಂದು ವಾಪಾಸ್ಸು ಮನೆ ಕಡೆಗೆ ಬೆಳ್ಳಾರೆ-ನಿಂತಿಕಲ್ಲು ರಸ್ತೆಯಲ್ಲಿ ಹೋಗುತ್ತಾ, ದಿನಾಂಕ 04-10-2022 ರಂದು 00-00 ಗಂಟೆಗೆ ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ತಂಬಿನಮಕ್ಕಿ ಎಂಬಲ್ಲಿಗೆ ತಲಪಿದಾಗ ನಿಂತಿಕಲ್ಲು ಕಡೆಯಿಂದ ಕೆಎ21ಕ್ಯೂ 6225 ನೇ ಮೋಟಾರು ಸೈಕಲ್ ನ್ನು ಸವಾರ ಸುಜಿತ್ ಎಂಬಾತನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದ ಪರಿಣಾಮ ವಿರುದ್ದ ದಿಕ್ಕಿನಿಂದ ಕೆ. ನಾರಾಯಣ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನಂ ಕೆಎ05-ಜೆಎಫ್ 6107 ನೇ ಯದ್ದಕ್ಕೆ ಡಿಕ್ಕಿಹೊಡೆದು ಇಬ್ಬರೂ ಸವಾರರು ತೀವ್ರಗಾಯಗೊಂಡಿದ್ದು, ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಅಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಆರೋಪಿ ಸುಜಿತ್ ನನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದು, ಕೆ. ನಾರಾಯಣರವರು ಮೃತಪಟ್ಟಿರುವುದಾಗಿ ಧೃಡಪಡಿಸಿರುವುದು.ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 79/2022 ಕಲಂ 279, 338, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿನಯಕುಮಾರ ಎ ಪ್ರಾಯ 33 ವರ್ಷ ತಂದೆ: ಆನಂದ ನಾಯಕ ಕಚೇರಿ ಸಿಬ್ಬಂಧಿ ಮಹತೋಭಾರ ಕಾರಿಂಜೇಶ್ವರ ದೇವಸ್ಥಾನ ಕಾರಿಂಜ ಕಾವಳಮೂಡುರು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು  ಶ್ರೀ ಮಹತೋಭಾರ ಕಾರಿಂಜೇಶ್ವರ ದೇವಸ್ಥಾನದ ಕಛೇರಿಯಲ್ಲಿ ಮ್ಯಾನೇಜರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ: 04.10.2022 ರಂದು 10.15 ಗಂಟೆಗೆ ಪಿರ್ಯಾದಿದಾರರು ದೇವಸ್ಥಾನದ ಕಛೇರಿಯಲ್ಲಿ ಕರ್ತವ್ಯದಲ್ಲಿ ಇರುವ ಸಮಯ ಈಶ್ವರ ಸನ್ನಿಧಿಯಲ್ಲಿ ನಂಬಿಕರಾಗಿ ಕೆಲಸ ಮಾಡುವ ಶಿವ ಪ್ರಸಾದ್‌ ರವರು ಪಿರ್ಯಾದಿದಾರರಿಗೆ ಕರೆ ಮಾಡಿ ದೇವಸ್ಥಾನದ ಆವರಣದಲ್ಲಿ ಇಟ್ಟಿದ್ದ ದೇವರ ಸ್ಟೀಲ್‌ ಕಾಣಿಕೆ ಡಬ್ಬಿಯನ್ನು ಕಳವು ಮಾಡಿರುವುದಾಗಿ ತಿಳಿಸಿದ್ದು,  ಪಿರ್ಯಾದಿದಾರರು ಕೂಡಲೇ ಈಶ್ವರ ಸನನ್ನಿಧಿಗೆ ಹೋಗಿ ಪರಿಶೀಲಿಸಿದಾಗ  ಯಾರೋ ಕಳ್ಳರು ಕಾಣಿಕೆ ಡಬ್ಬಿಯ ಬೀಗವನ್ನು ಮುರಿದುವುದು ಕಂಡು ಬಂದಿರುತ್ತದೆ.  ದಿನಾಂಕ: 03.10.2022 ರಂದು 19.00 ಗಂಟೆಯಿಂದ  04.10.2022 ರಂದು 11.00 ಗಂಟೆಯ ಮದ್ಯಾವಧಿಯಲ್ಲಿ  ಕಾಣಿಕೆ ಡಬ್ಬಿಯ ಬೀಗವನ್ನು ಯಾರೋ ಕಳ್ಳರು ಒಡೆದು ತೆರೆದು ಕಾಣಿಕೆ ಡಬ್ಬಿಯೊಳಗಿದ್ದ ಅಂದಾಜು ರೂ 20,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 75/2022 ಕಲಂ 379 ಭಾದಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲಕ್ಷೀನಾರಾಯಣ ಹೆಗ್ಡೆ, ಪ್ರಾಯ 52 ವರ್ಷ ತಂದೆ: ಚಿನ್ನಯ್ಯ ಹೆಗ್ಡೆ, ನಿನ್ಯಾಲು ಮನೆ, ನೈನಾಡು ಗ್ರಾಮ ಪಿಲಾತತ್ಬೆಟ್ಟು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ: 03.10.2022 ರಂದು ರಾತ್ರಿ 00.00 ಗಂಟೆಯಿಂದ  04.10.2022 ರಂದು 11.00 ಗಂಟೆಯ ಮದ್ಯಾವಧಿಯಲ್ಲಿ  ಬಂಟ್ವಾಳ ತಾಲೂಕು ಪಿಲಾತಬೆಟ್ಟು  ಗ್ರಾಮದ ಸ್ನೇಹಗಿರಿ  ಎಂಬಲಿ ನೈನಾಡು- ಗೋಳಿಯಂಗಡಿ ಕಡೆಗೆ ಹಾದು ಹೋಗುವ ಸಾರ್ವಜನಿಕ ಡಾಮಾರು  ರಸ್ತೆಯಲ್ಲಿ  ಯಾರೋ ಕಿಡಿಗೇಡಿಗಳು ಸಮಾಜದ ಸಾಮಾಜಿಕ ಅಶಾಂತಿಗೆ  ಕೋಮುದ್ವೇಷಕ್ಕೆ ಕಾರಣವಾಗಬಹುದಾದ ಬೆದರಿಕೆ ಬರಹಗಳನ್ನು ಡಾಮಾರು ರಸ್ತೆಯ ಮೇಲೆ  ಬರೆದಿದ್ದು ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 74/2022 ಕಲಂ153, 427, 506 ಭಾದಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ : ದಿನಾಂಕ:04.10.2022 ರಂದು ಕಡಬ ಪೊಲೀಸ್‌‌ ಠಾಣೆಯಲ್ಲಿ ಕಲಂ:341.376(2)(N),506,IPC-1860  ಕಲಂ:5(L),6 POCSO-2012. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-10-2022 11:38 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080