ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗೋಪಾಲಕೃಷ್ಣ ಪ್ರಾಯ 26 ವರ್ಷ ತಂದೆ:ಜನಾರ್ಧನ ಪೂಜಾರಿ ವಾಸ:ಗಣೇಶಕೋಡಿ ,ಕರುಣಾ ನಿಲಯ ಮನೆ, ವೀರಕಂಭ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ:03-12-2022 ರಂದು ತನ್ನ ಬಾಬ್ತು ಮೋಟಾರ್‌ ಸೈಕಲ್‌ನಲ್ಲಿ ಕಲ್ಲಡ್ಲ-ವಿಟ್ಲ ಸಾರ್ವಜನಿಕ ರಸ್ತೆಯಲ್ಲಿ ವಿಟ್ಲ ಕಡೆಗೆ ಬರುತ್ತಿರುವಾಗ ಸಂಜೆ ಸಮಯ ಸುಮಾರು 6.15 ಗಂಟೆಗೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಜಿ ಶಾಲಾ ಬಳಿ ತಲುಪಿದಾಗ ಪಿರ್ಯಾಧಿದಾರರ ಮುಂದಿನಿಂದ ವಿಟ್ಲ ಕಡೆಗೆ KA-19-HK-4808ನೇ ಮೋಟಾರ್‌ ಸೈಕಲ್‌ ಸವಾರ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ವಿಟ್ಲ ಕಡೆಯಿಂದ KA-70-3587ನೇ ಟಿಪ್ಪರ ಲಾರಿಯನ್ನು ಅದರ ಚಾಲಕ ಅಜಾಗರೂಕತೆ ಹಾಗೂ ದುಡುಕುತನದಿಂದ ಚಲಾಯಿಸಿ ಯಾವುದೋ ವಾಹನವೊಂದನ್ನು ಓವರಟೇಕ್‌ ಮಾಡಿದಾಗ ಟಿಪ್ಪರ ಲಾರಿಯ ಹಿಂಬದಿಯ ಚಕ್ರದ ಬಳಿಯ ಬಾಡಿ ಮೋಟರ್‌ ಸೈಕಲ್‌ಗೆ ತಾಗಿ ಅಪಘಾತವಾಗಿ ಮೋಟಾರ್‌ ಸೈಕಲ್‌ ಸಮೇತ ಸವಾರ ಮನೋಜ್‌ ಎಂಬವರು ರಸ್ತೆಗೆ ಬಿದ್ದ ಪರಿಣಾಮ ,ಮುಖಕ್ಕೆ ,ಬಲಭುಜಕ್ಕೆ, ರಕ್ತಗಾಯ ಹಾಗೂ ಬಲತೊಡೆಗೆ ,ಸೊಂಟ ಮತ್ತು ಹೊಟ್ಟೆಯ ಭಾಗಕ್ಕೆ ಗುದ್ದಿದ ನೋವಾಗಿರುತ್ತದೆ. ಸದ್ರಿ ಅಪಘಾತವಾಗುವಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರೇಮನಾಥ ಎಂಬವರಿಗೆ ಮೋಟಾರ್‌ ಬೈಕ್‌ ತಾಗಿ ಅವರ ಕೈಗೆ ಗಾಯವಾಗಿರುತ್ತದೆ. ಗಾಯಾಳುಗಳನ್ನು ಒಂದು ಅಂಬುಲೆನ್ಸನಲ್ಲಿ ತುಂಬೆ ಫಾದರ ಮುಲ್ಲರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರೇಮನಾಥರವರಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಿ ಮನೋಜರವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಮನೋಜರವರನ್ನು ಮಂಗಳೂರು ಕೆ ಎಸ್‌ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 190/2022  ಕಲಂ:279,337 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಭಾಸ್ಕರ ಪ್ರಾಯ 44 ವರ್ಷ ತಂದೆ: ದಿ|| ಪೆರಿಯನ್ ವಾಸ: ನಾಗಪಟ್ಟಣ ಮನೆ, ಆಲೆಟ್ಟಿ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಭಾಸ್ಕರ ರವರು ದಿನಾಂಕ 01.12.2022 ರಂದು ಸಂಜೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಚೆನ್ನಕೇಶವ ದೇವಸ್ಥಾನದ ಬಳಿ ಇರುವ ಶ್ರೀದೇವಿ ಸ್ಟುಡಿಯೋದ ಎದುರು ನಿಂತುಕೊಂಡಿರುವ ಸಮಯ ಸುಮಾರು 19.30 ಗಂಟೆ ಸಮಯಕ್ಕೆ ಪಿರ್ಯಾದಿದಾರರ ತಂಗಿ ಶಶಿಕಲಾ ಎಂಬವರು ತನ್ನ ಬಾಬ್ತು ಸ್ಕೂಟರ್ ನಂಬ್ರ ಕೆಎ-19-ಹೆಚ್ ಡಿ-2312 ನೇದರರಲ್ಲಿ  ಚೆನ್ನಕೇಶವ ದೇವಸ್ಥಾನದ ಬಳಿ ಇರುವ ತನ್ನ ಬಾಡಿಗೆ ಮನೆಗೆ ಹೋಗಲು ಕಟ್ಟೆ ಜಂಕ್ಷನ್ ಕಡೆಯಿಂದ ಚೆನ್ನಕೇಶವ ದೇವಸ್ಥಾನದ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸಮಯ ಎದುರುಗಡೆಯಿಂದ ಕೆವಿಜಿ  ಕಡೆಯಿಂದ ಕಟ್ಟೆ ಜಂಕ್ಷನ್ ಕಡೆಗೆ ಒಂದು ಮೋಟಾರ್ ಸೈಕಲನ್ನು ಅದರ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿ ತನ ಮುಂದಿನಿಂದ ಹೋಗುತ್ತಿದ್ದ ಅಟೋರಿಕ್ಷಾವನ್ನು ಓವರ್ ಟೇಕ್ ಮಾಡಿಕೊಂಡು ಬಂದು ಶಶಿಕಲಾರವರು ಸವಾರಿ ಮಾಡುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದುದರಿಂದ ಎರಡೂ ವಾಹನಗಳ ಸವಾರರು ವಾಹನಗಳ ಸಮೇತ ರಸ್ತೆಗೆ ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರು ಮತ್ತು ಇತರರು ಸ್ಥಳಕ್ಕೆ ಹೋಗಿ ರಸ್ತೆಗೆ ಬಿದ್ದವರನ್ನು ಉಪಚರಿಸಿ ನೋಡಲಾಗಿ, ಶಶಿಕಲಾರವರ ಎಡಕಾಲಿನ ಹೆಬ್ಬೆರಳಿನ ಬಳಿ ರಕ್ತಗಾಯವಾಗಿದ್ದು, ಮೋಟಾರ್ ಸೈಕಲ್ ಸವಾರರಿಗೂ ರಕ್ತಗಾಯವಾಗಿದ್ದು, ಪಿರ್ಯಾದಿದಾರರು ಮತ್ತು ಇತರರು ಸೇರಿ ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಚಿಕಿತ್ಸೆ ನೀಡಿ ಶಶಿಕಲಾರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ.ಕ್ರ 143/22 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕುಲದೀಪ್‌. ಎಸ್‌, ಪ್ರಾಯ 44 ವರ್ಷ, ತಂದೆ: ಶಿವಪ್ಪ್‌ ಗೌಡ. ಎಸ್‌, ವಾಸ: ಕಾಂತುಕುಮೇರಿ ಮನೆ, ಪಂಬೆತ್ತಾಡಿ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ಇಂಜಿನಿಯರ್‌ ಆಗಿ ಕೆಲಸ ಮಾಡಿಕೊಂಡಿದ್ದು, ತನ್ನ ವೃತ್ತಿಯ ಪರವಾಗಿ ದಿನಾಂಕ 04.12.2022 ರಂದು ತನ್ನ ಬಾಬ್ತು KA 21 P 5614 ರೆನಾಲ್ಟ್‌ ಡಸ್ಟರ್‌ ಕಾರನ್ನು ಚಲಾಯಿಸಿಕೊಂಡು ತನ್ನ ಮನೆಯಿಂದ ಹೊರಟು ಬೆಳ್ಳಾರೆ ಕಡೆಗೆ ನಿಂತಿಕಲ್ಲು - ಬೆಳ್ಳಾರೆ ರಸ್ತೆಯಲ್ಲಿ ಬರುತ್ತಾ ಸಮಯ ಸುಮಾರು 11.40 ಗಂಟೆಗೆ ಸುಳ್ಯ ತಾಲೂಕು ಮುಪ್ಪೇರಿಯ ಗ್ರಾಮದ ಪಾದೆಕಲ್ಲು ಎಂಬಲ್ಲಿಗೆ ತಲುಪಿದಾಗ ಬೆಳ್ಳಾರೆ ಕಡೆಯಿಂದ ಬರುತ್ತಿದ್ದ ಮಹೀಂದ್ರ ಜೀಪು ನಂಬರ್‌ KL 14 D 3399 ನೇದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲ ಬದಿಗೆ ಬಂದು ಪಿರ್ಯಾದಿದಾರರ ಬಾಬ್ತು KA 21 P 5614 ರೆನಾಲ್ಟ್‌ ಡಸ್ಟರ್‌ ಕಾರಿನ ಬಲ ಬದಿಯ ಎದುರಿನ ಡೋರ್‌ ಗೆ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರ ಕಾರಿನ ಬಲಬದಿಯ ಎದುರಿನ ಬಾಗಿಲು ಜಖಂಗೊಂಡಿರುತ್ತದೆ. ಈ ಅಪಘಾತದಲ್ಲಿ ಪಿರ್ಯಾದಿದಾರರಿಗೆ ಸುಮಾರು ರೂ 50,000 ನಷ್ಟವಾಗಿದ್ದು, ಯಾರಿಗೂ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ CR NO: 98/2022 ಕಲಂ 279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎ ಭಾಸ್ಕರ ನಾಯ್ಕ (48)   ತಂದೆ: ದಿ ಪರಮೇಶ್ವರ ನಾಯ್ಕ , ವಾಸ: ರಾಮನಗರ ಮನೆ , ಪಡ್ನೂರು ಗ್ರಾಮ ಮತ್ತು ಅಂಚೆ , ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿರವರು ಅಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 04.12.2022 ರಂದು ಪಡ್ಡಾಯೂರು ವಾಸಿ, ಗಿರೀಶ್ ಎಂಬವರ ನಗರದ ಅಂಗಡಿಯಿಂದ ಸಾಮಾನುಗಳನ್ನು ಪಿರ್ಯಾದಿದಾರ ಬಾಬ್ತು ರಿಕ್ಷಾದಲ್ಲಿ ತೆಗೆದುಕೊಂಡು ಅವರ ಮನೆಯಾದ ಪಡ್ಡಾಯೂರಿನಲ್ಲಿ ಇಳಿಸಿ ಪುನಃ ರಿಕ್ಷಾವನ್ನು ತಿರುಗಿಸಿ ನಗರ ಕಡೆಗೆ ಬರುವಾಗ ಸಮಯ ಸುಮಾರು ಸಂಜೆ 5.00 ಗಂಟೆಗೆ ಪಡ್ಡಾಯೂರು  ಜನತಾ ಕಾಲೋನಿ ಎಂಬಲ್ಲಿ ಸಂತೋಷ್ ಕುಮಾರ್‌ ಎಂಬಾತನು ದ್ವಿಚಕ್ರವಾಹನದಲ್ಲಿ ಬಂದು ಪಿರ್ಯಾದಿದಾರರ ರಿಕ್ಷಾವನ್ನು ಮುಂದಕ್ಕೆ ಹೋಗದಂತೆ ಅಡ್ಡನಿಲ್ಲಿಸಿ ತಡೆದು ದ್ವಿಚಕ್ರ ವಾಹನದಿಂದ ಇಳಿದು ಕೈಯಲ್ಲಿ ಹೆಲ್ಮೆಟ್ ಹಿಡಿದುಕೊಂಡು ಬಂದು ಅವ್ಯಾಚವಾಗಿ ಬೈದು ಮೊನ್ನೆ ನೀನು ಕಂಪ್ಲೇಂಟ್ ಕೊಟ್ಟಿದ್ದು ಏನಾಗಿದೆ ಎಂದು ಹೇಳಿ ಪಿರ್ಯಾದಿದಾರರ ಅಂಗಿಯ ಕಾಲರ್ ಪಟ್ಟಿ  ಹಿಡಿದು ಹೆಲ್ಮೆಟ್‌ನಿಂದ ಪಿರ್ಯಾದಿದಾರರ ಎದೆಗೆ ಬೆನ್ನಿಗೆ ಮತ್ತು ಎಡಕೋಲು ಕೈಗೆ ಹಲ್ಲೆ ನಡೆಸಿ ನೋವುಂಟು ಮಾಡಿದ್ದು, ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿದಾಗ ಗಿರೀಶ್‌ರವರ  ತಾಯಿ ಶಾರದಾ ಮತ್ತು ಗಿರೀಶ್‌ರವರ ಹೆಂಡತಿ ಅಲ್ಲಿಗೆ ಬರುವುದನ್ನು ನೋಡಿ , ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿ ಹೆಲ್ಮೆಟ್ ಸಮೇತವಾಗಿ ಆತನ ದ್ವಿಚಕ್ರ ವಾಹನದಲ್ಲಿ ಹೋಗಿರುತ್ತಾನೆ. ಹಲ್ಲೆಗೊಂಡ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು. ಈ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣಾ ಅ.ಕ್ರ: 98/2022 ಕಲಂ: 341,504,324,506 ಐಪಿಸಿ     ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂತೋಷ್‌ ನಾಯ್ಕ ಪ್ರಾಯ 40 ವರ್ಷ ತಂದೆ: ದಿ ರಾಮಣ್ಣ ನಾಯ್ಕ ವಾಸ: ಪಡ್ಡಾಯೂರು ಮನೆ ಪಡ್ನೂರು ಗ್ರಾಮ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿರವರು ಪುತ್ತೂರು ತಾಲೂಕು ಕಬಕ ಗ್ರಾಮದ ನಗರ ಎಂಬಲ್ಲಿ ಹೋಟೇಲ್‌ ಪಂಚಮಿ ಎಂಬ ಉದ್ಯಮವನ್ನು ನಡೆಸುತ್ತಿದ್ದು, ದಿನಾಂಕ: 04.12.2022 ರಂದು ಸಂಜೆ ಹೋಟೇಲ್‌ ನಲ್ಲಿ ಕೆಲಸ ಮುಗಿಸಿ ತನ್ನ ಮನೆಯಾದ ಪಡ್ನೂರು ಗ್ರಾಮದ ಪಡ್ಡಾಯೂರು ಎಂಬಲ್ಲಿಗೆ  ತನ್ನ ದ್ವಿ ಚಕ್ರ ವಾಹನದಲ್ಲಿ ಸಮಯ ಸುಮಾರು ಸಂಜೆ 4.00 ಗಂಟೆಗೆ ತಲುಪಿದಾಗ ತನ್ನ ಮನೆಗೆ ಹೋಗುವ ರಸ್ತೆಯಲ್ಲಿ ಭಾಸ್ಕರ ನಾಯ್ಕ ಎಂಬಾತನು ತನ್ನ ಬಾಬ್ತು ರಿಕ್ಷಾವನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ್ದು, ಆ ಸಮಯ ಫಿರ್ಯಾದಿದಿದಾರರು ರಿಕ್ಷಾವನ್ನು ರಸ್ತೆಯಿಂದ ತೆಗೆಯುವಂತೆ ತಿಳಿಸಿದಾಗ ಭಾಸ್ಕರ ನಾಯ್ಕ ಎಂಬಾತನು ಅವಾಚ್ಯ ಶಬ್ದಗಳಿಂದ ಬೈದು ರಸ್ತೆಯ ಬದಿಯಲ್ಲಿದ್ದ ಮರದ ಸೋಂಟೆಯನ್ನು ತೆಗೆದುಕೊಂಡು ಫಿರ್ಯಾದಿದಾರರ ಎಡ ಕೈಯ ಮೊಣಗಂಟಿಗೆ ಹಲ್ಲೆ ನಡೆಸಿದಾಗ ಅದೇ ಸಮಯ ಗಿರೀಶ್‌ ಎಂಬಾತನು ಕಬ್ಬಿಣದ ರಾಡ್‌ ನ್ನು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಎಡಕೈಯ ರಟ್ಟೆಗೆ ಹಾಗೂ ಎರಡೂ ಕಾಲಿನ ತೊಡೆಗಳಿಗೆ ಹಲ್ಲೆ ನಡೆಸಿರುತ್ತಾನೆ. ಆಗ ಫಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದಾಗ ಮನೆಯಲ್ಲಿದ್ದ ಫಿರ್ಯಾದಿದಾರರ ತಾಯಿ ಹಾಗೂ ಅಳಿಯ ಚೇತನ್‌ ರವರು ಫಿರ್ಯಾದಿದಾರರ ಬಳಿಗೆ ಬರುವುದನ್ನು ನೋಡಿದ ಆರೋಪಿಗಳು ಫಿರ್ಯಾದಿದಾರರಿಗೆ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣಾ ಅ.ಕ್ರ: 99/2022 ಕಲಂ:341,504,324,506 ಜೊತೆಗೆ  34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಾನಕಿ(52) ಗಂಡ: ಪಿಜಿನ  ವಾಸ:ಗುಂಡ್ಯಡ್ಕ ಮನೆ,ಅಡ್ಕಾರು, ಜಾಲ್ಸೂರು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಗಂಡ ಪಿಜಿನ (60)  ಎಂಬಾತನು ವಿಪರೀತ ಮದ್ಯಪಾನ ಸೇವನೆ ಮಾಡುವ ಚಟವನ್ನು ಹೊಂದಿದ್ದು, ಮದ್ಯಪಾನ ಮಾಡಿದ ಸಮಯದಲ್ಲಿ ವಿನಃ ಕಾರಣ ಪಿರ್ಯಾದುದಾರರೊಂದಿಗೆ ಜಗಳ ಮಾಡುವ ಸ್ವಭಾವದವನಾಗಿದ್ದು, ಅದರಂತೆ ದಿನಾಂಕ 03.12.2022 ಮದ್ಯಪಾನ ಮಾಡಿ ಬಂದು ಪಿರ್ಯಾದುದಾರರೊಂದಿಗೆ ವಿನ: ಕಾರಣ ಸಮಯ ಸುಮಾರು 19:00 ಗಂಟೆಗೆ ಜಗಳ ಮಾಡಿದ್ದು, ಪಿರ್ಯಾದುದಾರರು ತಮ್ಮ ಮನೆಯ ಪಕ್ಕದಲ್ಲಿರುವ ತಮ್ಮನಾದ ರಮೇಶ ಎಂಬವರ ಮನೆಗೆ ಹೋಗಿ ವಾಪಾಸ್ 21:00 ಗಂಟೆಗೆ ಮನೆಗೆ ಬಂದಲ್ಲಿ ಪಿಜಿನ ನು ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕರ್, ಗುಂಡ್ಯಡ್ಕ ಎಂಬಲ್ಲಿರುವ  ತಮ್ಮ ಮನೆಯ ಎದುರಿನ ಜಗಲಿಯ ಅಡ್ಡಕ್ಕೆ ತನ್ನ ಲುಂಗಿಯನ್ನು ಕಟ್ಟಿ ಹಾಗೂ ಇನ್ನೊಂದು ತುದಿಯನ್ನು ತನ್ನ ಕುತ್ತಿಗೆಗೆ ಕಟ್ಟಿ ಆತ್ಮ ಹತ್ಯೆ ಮಾಡಿಕೊಂಡಿದ್ದು. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ  ಯುಡಿಆರ್   ನಂ: 51/2022 ಕಲಂ: 174 ಸಿಆರ್  ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಡಿ ತಾರನಾಥ, ತಂದೆ:ದಿ||ಅಣ್ಣಪ್ಪ ಗೌಡ, ವಾಸ: ದಂಡಿನ ಮನೆ, ನಡುಗಲ್ಲು ಅಂಚೆ, ನಾಲ್ಕೂರು ಗ್ರಾಮ, ಸುಳ್ಯ ಎಂಬವರ ದೂರಿನಂತೆ ದಿನಾಂಕ 03-12-2022 ರಂದು ಸಂಜೆ 06-00 ಗಂಟೆಗೆ  ಪಿರ್ಯಾದಿದಾರರು ಮನೆಯಿಂದ ಅವರ ಬಾಬ್ತು ರಬ್ಬರ್‌ ತೋಟಕ್ಕೆ ಹೋಗುತ್ತಿರುವಾಗ ನಾಲ್ಕೂರು ಗ್ರಾಮ   ಕಂದ್ರಪ್ಪಾಡಿಗೆ ಹೋಗುವ ತಿರುವು ರಸ್ತೆಯ ಬದಿಯಲ್ಲಿ ಒಬ್ಬ ವ್ಯಕ್ತಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ  ಬಿದ್ದುಕೊಂಡಿದ್ದು  ಪಿರ್ಯಾದಿದಾರರು ಅವರ ಹತ್ತಿರ ಹೋಗಿ ವಿಚಾರಿಸಿದಾಗ ಆವರು ಮಾತನಾಡದೇ ಇದ್ದು ಕೂಡಲೇ 108  ಅಂಬುಲೇನ್ಸ್‌ ಕರೆಸಿದಾಗ, ಅವರು  ಸ್ಥಳಕ್ಕೆ ಬಂದು ಪರೀಕ್ಷಿಸಿ  ವ್ಯಕ್ತಿಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಬಳಿಕ ಕೂಡಲೇ  ಒಂದು ಖಾಸಾಗಿ ಅಂಬುಲೇನ್ಸ್ ನಲ್ಲಿ  ಸುಳ್ಯ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಲ್ಲಿ ಅಲ್ಲಿಯ  ವೈದ್ಯಾಧಿಕಾರಿಯವರು ಕೂಡ ಪರೀಕ್ಷಿಸಿ  ವ್ಯಕ್ತಿಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಬಳಿಕ  ಮೃತ ದೇಹವನ್ನು   ಆಸ್ಪತ್ರೆಯ ಶವಗಾರದಲ್ಲಿ ಇರಿಸಿರುವುದಾಗಿದೆ.  ಸದ್ರಿ ವ್ಯಕ್ತಿ ಹೆಸರು ವಿಳಾಸ ತಿಳಿದಿರುವುದಿಲ್ಲ. ಆತನು  ಖಾವಿ ಕಲರಿನ ಲುಂಗಿ ಮತ್ತು  ಮೆರೂನ್‌  ಕಲರಿನ   ಅಂಗಿ ಧರಿಸಿದ್ದು, ಆತನಿಗೆ ಸುಮಾರು  52 ವರ್ಷ ಆಗಬಹುದು. ಈ ಬಗ್ಗೆ ಸುಬ್ರಮಣ್ಯ  ಯುಡಿಆರ್ ನಂಬ್ರ  : 22/2022ಕಲಂ   , 174 ಸಿಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 05-12-2022 12:03 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080