ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ: 1

 • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕಿಶೋರ್‌ ಕೆ ಪಿ, ಎಸ್‌ ಎಸ್‌ ಪವರ್‌ ಸಿಸ್ಟಮ್‌, ಎಸ್‌ ಡಿ ಇ ಬಿ ಎಸ್‌ ಎನ್‌ ಎಲ್‌ ಬೆಳ್ಳಾರೆ ಎಂಬವರ ದೂರಿನಂತೆ ಪಿರ್ಯಾದಿದಾರರು ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಬಿ ಎಸ್‌ ಎನ್‌ ಎಲ್‌ ದೂರವಾಣಿ ಕೇಂದ್ರದಲ್ಲಿ ಟವರ್‌ ಟೆಕ್ನಿಶಿಯನ್‌ ಆಗಿ ಕೆಲಸ ಮಾಡುತ್ತಿರುವುದಾಗಿದೆ. ಗುತ್ತಿಗಾರು ಬಿಎಸ್‌ ಎನ್‌ ಎಲ್‌ ದೂರವಾಣಿ ಕೇಂದ್ರದಲ್ಲಿ ನಿಷ್ಕ್ರೀಯಗೊಂಡ ಸುಮಾರು 22 ಬ್ಯಾಟರಿಗಳನ್ನು ಕಟ್ಟಡದ ಒಳಗೆ ಇಟ್ಟಿದ್ದನ್ನು ದಿನಾಂಕ:22.12.2022 ರಂದು ಪಿರ್ಯಾದಿದಾರರು ನೋಡಿದ್ದು, ನಂತರ ಪಿರ್ಯಾದಿದಾರರು ದಿನಾಂಕ:03.01.2023 ರಂದು ದೂರವಾಣಿ ವಿನಿಮಯ ಕೇಂದ್ರದ ಒಳಗಡೆ ಹೋಗಿ ನೋಡಿದಾಗ 21 ಬ್ಯಾಟರಿಗಳು ಕಳವಾಗಿರುವುದು ಕಂಡು ಬಂದಿರುತ್ತದೆ. ಇದರ ಅಂದಾಜು ಮೌಲ್ಯ 46,000/- ರೂ ಆಗಬಹುದು. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆ ಅ.ಕ್ರ ನಂಬ್ರ  : 01/2023 ಕಲಂ: 454,457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆಯತ್ನ ಪ್ರಕರಣ: 1

 • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಫೀದ್‌, ಪ್ರಾಯ:20 ವರ್ಷ,ತಂದೆ:ಹನೀಫ್‌, ವಾಸ: ಕಲ್ಲುಗುಂಡಿ ಮನೆ, ಸಂಪಾಜೆ ಗ್ರಾಮ, ಸುಳ್ಯ ತಾಲೂಕು, ಎಂಬವರ ದೂರಿನಂತೆ ಪಿರ್ಯಾದಿದಾರರಿಗೆ ಈಗ ಒಂದು ವರ್ಷದ ಹಿಂದೆ ಸಾಮಾಜಿಕ ಜಾಲತಾಣವಾದಲ್ಲಿ ಕಡಬ ತಾಲೂಕಿನ ವಿದ್ಯಾರ್ಥಿಯೊಬ್ಬಳ ಪರಿಚಯವಾಗಿದ್ದು, ಆಕೆಯನ್ನು ನೋಡುವ ಸಲುವಾಗಿ ದಿನಾಂಕ:05-01-2023 ರಂದು  ಸುಬ್ರಹ್ಮಣ್ಯಕ್ಕೆ ಕೆಎಸ್‌ ಆರ್‌ ಟಿಸಿ ಬಸ್‌ ನಿಲ್ದಾಣಕ್ಕೆ ಬಂದಿದ್ದು,ಅವಳು ಕಾಲೇಜಿನಿಂದ ಬಸ್ಸು ನಿಲ್ದಾಣಕ್ಕೆ ಬಂದಾಗ ಸುಮಾರು ಸಂಜೆ 4:00 ಗಂಟೆಗೆ ಪಿರ್ಯಾದಿದಾರರು ಅವಳೊಂದಿಗೆ ಮಾತನಾಡುತ್ತಿದ್ದಾಗ, ಅವಳಿಗೆ ಚಾಕಲೇಟ್‌ ನ್ನು ಕೊಡುತ್ತಿದ್ದಾಗ ಯಾರೋ ಪರಿಚಯವಿಲ್ಲದ 2-3 ಜನರು ಬಂದು ಪಿರ್ಯಾದಿದಾರರನ್ನು ಬಲಾತ್ಕಾರವಾಗಿ ಎಳೆದುಕೊಂಡು ಅಲ್ಲೇ ರಸ್ತೆಬದಿಯಲ್ಲಿ ಬಂದು ನಿಂತಿದ್ದ ಜೀಪೊಂದರಲ್ಲಿ ಹಾಕಿದ್ದು, ಆಗ ಪಿರ್ಯಾದಿದಾರರಿಗೆ ಪರಿಚಯವಿಲ್ಲದ 5-6 ಜನರು ಬಂದು ಜೀಪಿನಲ್ಲಿ ಕುಳಿತುಕೊಂಡು ಹತ್ತಿರವಿರುವ ಹಳೇ ಕಟ್ಟಡದ ಕೊಣೆಯೊಳಗೆ ಪಿರ್ಯಾದಿದಾರರನ್ನು ಕೂಡಿ ಹಾಕಿ ಸುಮಾರು10-12 ಜನರು ಕೈಯಲ್ಲಿ ಮರದ ದೊಣ್ಣೆ ಮತ್ತು ಬೆತ್ತಗಳಿಂದ ಪಿರ್ಯಾದಿದಾರರ ತಲೆ, ಎರಡೂ ಕೈಕಾಲುಗಳಿಗೆ, ಭುಜಗಳಿಗೆ, ಬೆನ್ನು ಹಾಗೂ ದೇಹದ ಇತರ ಭಾಗಗಳಿಗೆ ಹೊಡೆದು ಜಖಂಗೊಳಿಸಿ, ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಅವರಲ್ಲಿ ಒಬ್ಬನು ಒಂದು ಚಾಕುವಿನಿಂದ ತಿವಿಯಲು ಪ್ರಯತ್ನಿಸಿದಾಗ ಉಳಿದವರು ಅವನ್ನನ್ನು ತಡೆದು “ಇನ್ನು ಮುಂದೆ, ಹುಡುಗಿಯರ ತಂಟೆಗೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಅವ್ಯಾಚವಾಗಿ ಬೈದು ಬೆದರಿಕೆಯೊಡ್ಡಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ  ಪೊಲೀಸ್ ಠಾಣೆ  ಅ.ಕ್ರ ನಂಬ್ರ 02-2023 ಕಲಂ:323,324,307,365,143,147 ಜೊತೆಗೆ 149 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಗದೀಶ್‌ ಪ್ರಾಯ 38 ವರ್ಷ ತಂದೆ:ವಾಮನ ನಾಯ್ಕ್‌ ವಾಸ:ಭುಜಂಗ ಬೆಟ್ಟು ಮನೆ, ಮಚ್ಚಿನ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ಅಣ್ಣ ಕೇಶವ ನಾಯ್ಕ್‌ ಪ್ರಾಯ 56 ವರ್ಷ ಎಂಬವರು ನಿನ್ನೆ ದಿನಂಕ:04-01-203 ರಂದು ಬಂಟ್ವಾಳ ತಾಲೂಕು ಕೇಪು ಗ್ರಾಮದ ಸಾರಡ್ಕ ಎಂಬಲ್ಲಿರುವ ಕೃಷ್ಣ ಉಪಾದ್ಯ ಎಂಬವರ ತೋಟದಲ್ಲಿ ಕೆಲಸ ಮಾಡಿ ರಾತ್ರಿ ಅಲ್ಲಿಯೇ ಉಳಿದುಕೊಂಡು ಈ ದಿನ ದಿನಾಂಕ:05-01-2023 ರಂದು ಸಂಜೆ 4.30 ಗಂಟೆಯ ಸಮಯಕ್ಕೆ ಹಲಸಿನ ಮರ ಏರಿ ಕಾಳು ಮೆನಸು ತೆಗೆಯುವ ಸಮಯ ಆಕಸ್ಮಿಕವಾಗಿ ಕೈ, ಕಾಲು ಜಾರಿ ಕೆಳಗೆ ನೆಲಕ್ಕೆ ಬಿದ್ದವರನ್ನು ಕೃಷ್ಣ ಉಪಾದ್ಯರವರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಯ ಬಗ್ಗೆ ಸಂಜೆ 5.30 ಗಂಟೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಕೇಶವ ನಾಯ್ಕ್‌ ಮೃತಪಟ್ಟಿರುವುದಾಗಿ ತಿಳಿಸಿದ್ದು.ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 01/2023  ಕಲಂ 174 ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವೆಂಕಪ್ಪನಾಯ್ಕ ಬಿ ಪ್ರಾಯ 42 ವರ್ಷ, ತಂದೆ: ಬೂದು ನಾಯ್ಕ, ವಾಸ: ಬಾಂಕ್ಯ ಮನೆ, ಮೊಗ್ರು  ಗ್ರಾಮ, ಬೆಳ್ತಂಗಡಿ ತಾಲೂಕು. ಎಂಬವರ ದೂರಿನಂತೆ ಪಿರ್ಯಾದಿ ವೆಂಕಪ್ಪ ನಾಯ್ಕ ಬಿ ರವರು ಕೃಷಿ ಮತ್ತು ಅಟೋ ಚಾಲಕ ರಾಗಿದ್ದು ಅವರ ತಂದೆ ಬೂದುನಾಯ್ಕ ಪ್ರಾಯ 73ವರ್ಷ ರವರು ಸುಮಾರು 10 ವರ್ಷದಿಂದ ಉಬ್ಬಸ ಖಾಯಿಲೆಯಲ್ಲಿದ್ದು ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದರೂ ಸಂಪೂರ್ಣ ಗುಣಮುಖವಾಗದೇ ಇದ್ದು ಉಸಿರಾಟದ ತೊಂದರೆಯಿಂದಾಗಿ ಮಾನಸಿಕವಾಗಿ ನೊಂದುಕೊಂಡಿದ್ದು ಇತ್ತೀಚೆಗೆ 10 ದಿವಸದ ಹಿಂದೆ ಉಸಿರಾಟದ ತೊಂದರೆ ಉಲ್ಬಣಗೊಂಡು ಅವರನ್ನು ಚಿಕಿತ್ಸೆಯ ಬಗ್ಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ 03 ದಿವಸ ಚಿಕಿತ್ಸೆ ಕೊಡಿಸಿ ವಾಪಾಸ್ಸು ಮನೆಗೆ ಕರೆದುಕೊಂಡು ಬಂದಿರುವುದಾಗಿದೆ. ಅವರು ಉಬ್ಬಸ ಖಾಯಿಲೆಯಿಂದ ಮನನೊಂದು ದಿನಾಂಕ 05.01.2023 ರ ಬೆಳಿಗ್ಗೆ 09.00 ಗಂಟೆಯಿಂದ ಮಧ್ಯಾಹ್ನ 12.00 ಗಂಟೆಯ ಮಧ್ಯೆ ಪಿರ್ಯಾದಿಯ ಮನೆಯ ಪಕ್ಕದ ಗೇರು ಬೀಜದ ಮರದ ಗೆಲ್ಲಿಗೆ ನೈಲಾನ್ ಹಗ್ಗ ಬಿಗಿದು  ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 03/2023 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ

 

 • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕವಿತಾ ಎನ್‌, ಪ್ರಾಯ:41 ವರ್ಷ, ಗಂಡ:ನಾಗಭೂಷಣ್‌ ಜಿ ಎಸ್‌, ವಾಸ: ನಂಬ್ರ 73,4 ನೇ ಮೈನ್‌ 1 ನೇ ಕ್ರಾಸ್‌ ಸಾರ್ವಭೌಮನಗರ, ಚಿಕ್ಕಲಸಂದ್ರ, ಬೆಂಗಳೂರು   ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ನಾಗಭೂಷಣ್‌ ಜಿ ಎಸ್, ಪ್ರಾಯ:55 ವರ್ಷ ಎಂಬವರು ಬೆಂಗಳೂರಿನ ಬಿಎಮ್‌ ಟಿಸಿ-04 ಡೀಪೋ ಜಯನಗರದಲ್ಲಿ ಚಾಲಕನಾಗಿದ್ದು, ಬಿಲ್ಲೆ ನಂಬ್ರ 10330 ಆಗಿದ್ದು, ಅವರು ಇತ್ತೀಚೆಗೆ ವಿಪರೀತ ಅಮಲು ಪದಾರ್ಥ ಸೇವಿಸುತ್ತಿದ್ದು, ಕರ್ತವ್ಯಕ್ಕೆ ಗೈರು ಹಾಜರಾಗಿ ಸುಮಾರು 3 ವರ್ಷಗಳಿಂದ ಮನೆಗೂ ಕೂಡ ಬರದೇ ಇತ್ತೀಚೆಗೆ ಅಕ್ಟೋಬರ್‌ 26,2022 ರಂದು ಮನೆಗೆ ಬಂದು ವಾಪಸ್ಸು ಮನೆ ಬಿಟ್ಟು ಹೋಗಿದ್ದು, ಬಳಿಕ ನವೆಂಬರ್‌ ತಿಂಗಳಲ್ಲಿ ಮನೆಗೆ ದೂರವಾಣಿ ಕರೆಮಾಡಿ ಮಾತನಾಡಿರುತ್ತಾರೆ. ದಿನಾಂಕ:03-01-2023 ರಂದು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಿಂದ ದೂರವಾಣಿ ಕರೆ ಮಾಡಿ ನಾಗಭೂಷಣ್‌ ರವರು ದಿನಾಂಕ:28-12-2022 ರಂದು ಖಾಯಿಲೆಯಿಂದ ಅಸ್ವಸ್ಥಗೊಂಡವರನ್ನು 108 ಆಂಬ್ಯುಲೆನ್ಸ್‌ ನಲ್ಲಿ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿದ್ದು, ಕಡಬ ಮತ್ತು ಪುತ್ತೂರು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದು ದಿನಾಂಕ:31-12-2022 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆ ಯುಡಿಆರ್ ನಂಬ್ರ  : 01/2023 ಕಲಂ: 174‌ ಸಿಆರ್‌ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-01-2023 11:24 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080