ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದಯಾನಂದ ಶೆಟ್ಟಿ ಪ್ರಾಯ 50 ವರ್ಷ ತಂದೆ: ದಿ| ಪೂವಪ್ಪ ಶೆಟ್ಟಿ ವಾಸ: ಕಜೆಕ್ಕಾರು ಮನೆ, ಉಪ್ಪಿನಂಗಡಿ ಗ್ರಾಮ ಮತ್ತು ಅಂಚೆ, ಪುತ್ತೂರು ಎಂಬವರ ದೂರಿನಂತೆ ದಿನಾಂಕ  04-02-2023 ರಂದು 19-00 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಕಾರ್ತಿಕ್‌ ಎಂಬವರು KA-21-R-4680 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಪೆರಿಯಡ್ಕ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಹೆದ್ದಾರಿಯನ್ನು ದಾಟಿ ರಸ್ತೆಯ ಬದಿಯನ್ನು ತಲುಪಿದ ಪಿರ್ಯಾದುದಾರರ ತಮ್ಮ ದಿನೇಶ ಶೆಟ್ಟಿ ರವರಿಗೆ ಮೋಟಾರ್‌ ಸೈಕಲ್‌ ಅಪಘಾತವಾಗಿ, ದಿನೇಶ ಶೆಟ್ಟಿ ರವರಿಗೆ ತಲೆಗೆ, ಎದೆಗೆ, ಬಲಕಾಲಿಗೆ ಗಾಯಗಳಾಗಿ, ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಆರೋಪಿ ಮೋಟಾರ್‌ ಸೈಕಲ್‌ ಸವಾರ ಕಾರ್ತಿಕ್‌ ರವರಿಗೆ ಗಾಯಗಳಾಗಿದ್ದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ..ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 25/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಿವಪ್ರಸಾದ್ ಪ್ರಾಯ 25 ವರ್ಷ ತಂದೆ: ಶೇಖರ ಕುಲಾಲ್ ವಾಸ; #2-59 ಹೆರೊಟ್ಟು ಮನೆ, ಕಾವಳಪಡೂರು ಗ್ರಾಮ, ವಗ್ಗ ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 04-02-2023 ರಂದು ಪಿರ್ಯಾಧಿದಾರರು ಕೆಲಸ ಮುಗಿಸಿ ತನ್ನ ಬಾಬ್ತು KA-19-EW-8009 ನೇ ಮೋಟಾರ್ ಸೈಕಲಿನಲ್ಲಿ ಬಂಟ್ವಾಳ ಕಡೆಯಿಂದ ಮನೆ ಕಡೆಗೆ ಬಂಟ್ವಾಳ – ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಾ ಸಮಯ ಸುಮಾರು ರಾತ್ರಿ 10:15 ಗಂಟೆಗೆ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿಗೆ ತಲಪುತ್ತಿದಂತೆ ಎದುರಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ KA-19-EM-5519 ನೇ ಮೋಟಾರ್ ಸೈಕಲನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾಧಿದಾರರು ಮತ್ತು ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ಗಳ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದು, ಪಿರ್ಯಾಧಿದಾರರಿಗೆ ಎಡಬದಿ ಹುಬ್ಬಿನ ಬಳಿ ತರಚಿದ ಗಾಯ, ಎಡಕಾಲು ಬೆರಳುಗಳಿಗೆ ಗುದ್ದಿದ ಮತ್ತು ತರಚಿದ ಗಾಯ ಹಾಗೂ ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರನಿಗೆ ಎಡ ತೊಡೆಗೆ ಗುದ್ದಿದ ಗಾಯ, ಎಡ ಕಾಲು ಮೊಣಗಂಟಿಗೆ ಗುದ್ದಿದ ಮತ್ತು ತರಚಿದ ಗಾಯ, ಬಲ ದವಡೆಗೆ ತರಚಿದ ಗಾಯಗಳಾದವರು. ಬಂಟ್ವಾಳ ಸಾರ್ವಜನಿಕ ತಾಲೂಕು ಆಸ್ಪತ್ರೆಗೆ ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಪಿರ್ಯಾಧಿದಾರರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿ ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ ನವೀನ್ ರವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಸಲಹೆ ನೀಡಿದ ಮೇರೆಗೆ ನವೀನ್ ರವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ  ಪೊಲೀಸ್ ಠಾಣೆ ಅ.ಕ್ರ : 23/2023 ಕಲಂ :  279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

  • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ ದಿನಾಂಕ: 05-02-2023 ರಂದು ಬಂಟ್ವಾಳ ನಗರ ಠಾಣೆಯಲ್ಲಿ ಕಲಂ: 143, 147, 504, 354(b), 323, 506, 509 ಜೊತೆ 149 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶರಣ್‌ ಹೆಚ್. ಪ್ರಾಯ: 30 ವರ್ಷ,  ತಂದೆ: ದೇವಪ್ಪ. ವಾಸ: ಚರ್ಚ್‌ ಹತ್ತಿರ  5ನೇ ವಾರ್ಡ್‌, ಹೂವಿನ ಹಡಗಲಿ ಗ್ರಾಮ ಹೂವಿನ ಹಡಗಲಿ ತಾಲೂಕು, ಎಂಬವರ ದೂರಿನಂತೆ ಪಿರ್ಯಾದಿದಾರರು ಎರಡು ದಿನಗಳಿಂದ  ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಬಾಹುಬಲಿ ಬೆಟ್ಟ ರಸ್ತೆಯಲ್ಲಿರುವ ಸನ್ನಿಧಿ ಕ್ರಾಸ್‌ ಎಂಬಲ್ಲಿಸರಕಾರದ ವತಿಯಿಂದ  ನೀರಾವರಿ ಕಾಮಗಾರಿ ಬಗ್ಗೆ ಪೈಪು ಸಂಗ್ರಹಣೆ ಮಾಡುವ ಸ್ಥಳದಲ್ಲಿ ನೀರಿಗೆ ಅಳವಡಿಸಲು ಲಾರಿಯಲ್ಲಿ ಬಂದಿದ್ದ ಕಬ್ಬಿಣದ ಪೈಪ್‌ನ್ನು ಕ್ರೈನ್‌ ಮುಖೇನಾ ಅನ್‌ ಲೋಡ್‌ ಮಾಡುವ ವೇಳೆ ಸಹಾಯಕನಾಗಿ ಕೆಲಸಕ್ಕೆ ಬಂದಿದ್ದು  ದಿನಾಂಕ: 05-02-2023 ರಂದು ಬೆಳಿಗ್ಗೆ 6.15 ಗಂಟೆಗೆ ಪಿರ್ಯಾದಿದಾರರನ್ನು ಇಂಜಿನಿಯರ್‌ ನೂತನ್‌ ಶಾಸ್ತ್ರಿ ಎಂಬವರು  ಕೆಲಸಕ್ಕೆ ಬರುವಂತೆ ಹೇಳಿದ ಮೇರೆಗೆ ಪಿರ್ಯಾದಿದಾರರು ಕೆಲಸಕ್ಕೆ ಹೋಗಿದ್ದು ಜೊತೆಯಲ್ಲಿ ಇತರ ಕೆಲಸಗಾರರಾದ ರಾಜು ಮತ್ತು ವಿರುಪಾಕ್ಷರವರು  ಇದ್ದು ಆಂಧ್ರದಿಂದ ಬಂದಿದ್ದ 18 ಚಕ್ರದ ಲಾರಿಯಲ್ಲಿ ಚಾಲಕ ಮಧುಸೂದನ್‌ ರೆಡ್ಡಿ ಎಂಬವರಿದ್ದು ಅವರ ಲಾರಿ  AP 39 TX 2118 ನೇ ಲಾರಿಯಲ್ಲಿ ಒಟ್ಟು 42 ಕಬ್ಬಿಣದ ಪೈಪ್‌ಗಳಿದ್ದು ಒಂದು ಕಬ್ಬಿಣದ ಪೈಪ್‌ ಸುಮಾರು 40 ಅಡಿ ಉದ್ದದ ಸುಮಾರು 2 ಅಡಿ ಸುತ್ತಳತೆಯ ಸುಮಾರು 600 ಕೆ.ಜಿ ಭಾರವಿರುತ್ತದೆ. ಪಿರ್ಯಾದಿದಾರರು ಹಾಗೂ  ಲಾರಿಯ ಚಾಲಕನಾದ ಮಧುಸೂದನ್‌ ರೆಡ್ಡಿಯವರು ಕೆಳಗಿನಿಂದ ಪೈಪ್‌ಗೆ ಕಟ್ಟಿದ್ದ ಚೈನ್‌ನ್ನು ಬಿಚ್ಚುತ್ತಿದ್ದಂತೆಯೇ ಬೆಳಿಗ್ಗೆ ಸುಮಾರು 8.00 ಗಂಟೆಯ ವೇಳೆಗೆ ಒಮ್ಮೆಲೇ ಕಬ್ಬಿಣದ ಪೈಪುಗಳು ಜಾರಿ ಇವುಗಳ ಪೈಕಿ ಒಂದು ಪೈಪು ಕೆಳಗಿದ್ದ ಲಾರಿ ಚಾಲಕ ಮಧುಸೂದನ್‌ ರೆಡ್ಡಿಯವರ ಮುಖಕ್ಕೆ ಬಡಿದು ಪೆಟ್ಟಾದವರನ್ನು ಕೂಡಲೇ ಪಿರ್ಯಾದಿದಾರರು ಹಾಗೂ ಇತರ ಕೆಲಸಗಾರರು ಸೇರಿ ಮಧುಸೂದನ್ ರವರನ್ನು ಎತ್ತಿ ನೋಡಲಾಗಿ ಅವರ ತಲೆ ಹಾಗೂ ಮುಖದ ಭಾಗವು ಸಂಪೂರ್ಣ ಜಖಂಗೊಂಡು ಅಲ್ಲಿಯೇ ಮೃತಪಟ್ಟಿರುತ್ತಾರೆ..ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 04/2023 ಕಲಂ: 304 (A) ಜೊತೆಗೆ 34  ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹರೀಶ್, ಪ್ರಾಯ: 45 ವರ್ಷ, ತಂದೆ: ಲಿಂಗಪ್ಪ ಪೂಜಾರಿ, ವಾಸ: ಮಡ್ಡಬೆಟ್ಟು ಮನೆ, ಬರಿಮಾರು ಗ್ರಾಮ, ಕಾಗೆಕಾನ ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದುದಾರರ  ತಂಗಿ ಗೀತಾವತಿ, 42 ವರ್ಷರವರಿಗೆ ಹುಟ್ಟಿದಾಗಲೇ ಮಾತು ಬಾರದೇ ಕಿವಿ ಕೇಳದೇ ಇದ್ದು, ಈ ಕಾರಣದಿಂದ ಅವರಿಗೆ ಮದುವೆಯಾಗದೇ ಮನೆಯಲ್ಲಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 04.02.2023 ರಂದು ರಾತ್ರಿ 11 ಗಂಟೆಯಿಂದ ದಿನಾಂಕ: 05.02.2023 ರಂದು ಬೆಳಿಗ್ಗೆ 05.45 ರ ಮದ್ಯೆ ಮನೆಯ ಅಡಿಕೆಯನ್ನು ಒಣಹಗಲು ಹಾಕಲು ಅಳವಡಿಸಿದ ಡ್ರೈಯರ್ ನ ಒಳಗೆ ಕಬ್ಬಿಣದ ರಾಡ್ ಗೆ ಚೂಡಿದಾರ್ ಶಾಲ್ ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ  05/2023  ಕಲಂ 174  ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-02-2023 10:22 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080