ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಸಂದೀಪ ನಾಯ್ಕ ಪ್ರಾಯ 38 ವರ್ಷ ತಂದೆ: ದಿ. ಸುಂದರ್ ನಾಯ್ಕ್ ವಾಸ: ಸಮ್ಮಿತ್, ಕೊಡಿಪ್ಪಾಡಿ ರಸ್ತೆ, ನೆಹರು ನಗರ ಅಂಚೆ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 04-03-2022 ರಂದು 23-40 ಗಂಟೆಗೆ ಆರೋಪಿ ಸ್ಕೂಟರ್ ಸವಾರ ದೀಕ್ಷಿತ್ ಎಂಬವರು KA-19-EZ-9674ನೇ ನೋಂದಣಿ ನಂಬ್ರದ ಸ್ಕೂಟರನ್ನು ಒಳರಸ್ತೆಯಾದ ಬೀರಮಲೆ ಕಡೆಯಿಂದ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ದರ್ಬೆ ಪತ್ರಾವೋ ಸರ್ಕಲ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಚಲಾಯಿಸಿದ ಪರಿಣಾಮ, ಹೆದ್ದಾರಿಯಲ್ಲಿ ಪ್ರವೀಣ ಕುಮಾರ್ ರವರು ಸವಾರರಾಗಿ ಮಹಾಬಲ ರವರರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಸಂಪ್ಯ ಕಡೆಯಿಂದ ಮಂಜಲ್ಪಡ್ಪು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-L-5657ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಮಹಾಬಲ ರವರಿಗೆ ತಲೆಗೆ ರಕ್ತವಾಗಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಕಳುಹಿಸಿರುವುದಾಗಿದೆ. ಈ ಬಗ್ಗೆ ಪುತ್ತೂರು ಪುತ್ತೂರು ಸಂಚಾರ ಠಾಣೆ  ಅ.ಕ್ರ:  40/2022 ಕಲಂ: 279,337ಐಪಿಸಿ & 134(A&B) MV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಮಹಾಬಲ ಪ್ರಾಯ 22 ವರ್ಷ ತಂದೆ: ನೀಲಯ್ಯ ಗೌಡ ವಾಸ: ಕಾಂತಾಜೆ ಮನೆ, ಬಂದಾರು ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 05-03-2022 ರಂದು 14-15 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ಮಹಮ್ಮದ್ ಶಪೀಕ್ ಎಂಬವರು KA-19-EL-7812ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿನಲ್ಲಿ ಮಹಮ್ಮದ್ ಶರೀಕ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಗಾಡಗೋಡಿ ಎಂಬಲ್ಲಿ  ಒಳ ರಸ್ತೆಯಿಂದ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಬಂದಾರು-ಕುಪ್ಪೆಟ್ಟಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ಏಕಾಏಕಿಯಾಗಿ ಮಖ್ಯ ರಸ್ತೆಗೆ ಚಲಾಯಿಸಿದ ಪರಿಣಾಮ, ರಸ್ತೆಯಲ್ಲಿ ಪಿರ್ಯಾದಯದಾರರಾದ ಮಹಾಬಲ ರವರು ಚಾಲಕರಾಗಿ ಕುಪ್ಪೆಟ್ಟಿ ಕಡೆಯಿಂದ ಬಂದಾರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-B-6759ನೇ ನೋಂದಣಿ ನಂಬ್ರದ ಅಟೋರಿಕ್ಷಾಗೆ ಮೋಟಾರ್ ಸೈಕಲ್ ಅಪಘಾತವಾಗಿ, ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಸಹ ಸವಾರ ಮಹಮ್ಮದ್ ಶರೀಕ್ ರವರಿಗೆ ಬಲ ಕೋಲು ಕಾಲಿಗೆ ರಕ್ತಗಾಯವಾಗಿ ಪುತ್ತೂರು ಹಿತ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿರುತ್ತಾರೆ. ಆರೋಪಿ ಮೋಟಾರ್ ಸೈಕಲ್ ಸವಾರನಿಗೆ ಸಣ್ಣ ಪುಟ್ಟ ರೀತಿಯ ಗಾಯವಾಗಿರುತ್ತದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  41/2022 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: ೦1

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ  ಶ್ರೀಮತಿ ಅವ್ವಾಬಿ ಪ್ರಾಯ 49 ವರ್ಷ ಗಂಡ ಆದಂ ವಾಸ ಪಂಜಿಕಲ್ಲು ಮನೆ ಇರಾ ಗ್ರಾಮ    ಬಂಟ್ವಾಳ ತಾಲೂಕು ಎಬವರ ದೂರಿನಂತೆ  ಅವರ ಮಗ ತಸ್ಲೀಂ ಇಬ್ರಾಹಿಂ ಪ್ರಾಯ 30 ವರ್ಷ ಈತನು ಈ ಹಿಂದೆ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು ಕೊರೋನಾ ಸಮಯದಲ್ಲಿ  ಊರಿಗೆ ಬಂದು ಇಲ್ಲೆ ಇರುವುದಾಗಿದ್ದು ಕಳೆದ ಜನವರಿಯಲ್ಲಿ ವಿಸಿಟಿಂಗ್ ವೀಸಾದಲ್ಲಿ  ದುಬೈಗೆ ಹೋದವನು ದಿನಾಂಕ 18.02.2022 ರಂದು ವಾಪಸ್ಸು ಊರಿಗೆ ಬಂದು ಮನೆಯಲ್ಲಿಯೇ ಇದ್ದವನು ದಿನಾಂಕ 24.02.2022 ರಂದು ಮನೆಯಲ್ಲಿ ಮಧ್ಯಾಹ್ನ  ಊಟ ಮಾಡಿ 2.00 ಗಂಟೆ ಸಮಯಕ್ಕೆ ಮೊಬಾಯಿಲ್ ಫೋನ್ ನಲ್ಲಿ ಮಾತನಾಡುತ್ತಾ ಮನೆಯಲ್ಲಿದ್ದ ಅಕ್ಟೀವಾ ಹೋಂಡಾನಂಬ್ರ ಕೆಎ19ಎಚ್ ಇ 5150 ನೇದರಲ್ಲಿ ಮನೆಯಿಂದ ಹೊರಟು  ಹೋದವನು ಹೋಗುವಾಗ ಎಲ್ಲಿಗೆ ಹೋಗುವುದಾಗಿ ಎಂದು ಪಿರ್ಯಾದುದಾರರಲ್ಲಿ ಹೇಳಿರುವುದಿಲ್ಲ .ಹಾಗೇ ಹೋದವನು ಈ ತನಕ ಮನೆಗೆ ಮನೆಗೆ ಬಂದಿರುವುದಿಲ್ಲ ಪಿರ್ಯಾದುದಾರರು ಸಂಬಂಧಿಕರ ಮನೆಯಲ್ಲಿ  ಆತನ ಸ್ನೇಹಿತರಲ್ಲಿ ವಿಚಾರಿಸಿದರೂ ಈ ವರೆಗೆ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 19-2022 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸಂತೋಷ್ ನಾಯ್ಕ್, ಪ್ರಾಯ: 42 ವರ್ಷ, ತಂದೆ: ಕೃಷ್ಣ ನಾಯ್ಕ್, ಕಿರಿಯ ಇಂಜಿನಿಯರ್ (ವಿ), ಮೆಸ್ಕಾಂ, ಮಡಂತ್ಯಾರು ಶಾಖೆ, ಪಾರೆಂಕಿ ಗ್ರಾಮ ಎಂಬವರ ದೂರಿನಂತೆ ದಿನಾಂಕ: 05-03-2022 ಬೆಳಿಗ್ಗೆ ಫಿರ್ಯಾದಿದಾರರು ತನ್ನ ಮನೆಯಿಂದ ಮಡಂತ್ಯಾರು ಮೆಸ್ಕಾಂ ಕಛೇರಿಗೆ  ಕರ್ತವ್ಯಕ್ಕೆ ಹೊರಟು ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಫಿಲೋಮಿನಾ ಎಂಬವರ ಮನೆಯ ಬಳಿ ತಲುಪುತ್ತಿದ್ದಂತೆ, ಸಮಯ ಸುಮಾರು ಬೆಳಿಗ್ಗೆ 7.20  ಗಂಟೆಗೆ ಫಿರ್ಯಾದಿದಾರರ ಎದುರಿನಿಂದ  KA21V9948 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ಶಿವಪ್ರಸಾದ್ ಎಂಬಾತನು ತನ್ನ ಬಾಬ್ತು ಮೋಟಾರ್ ಸೈಕಲನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಲೈಟ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಗಾಯಗೊಂಡಿದ್ದಲ್ಲದೆ, ವಿದ್ಯುತ್ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ HT/LT ಲೈನ್ ಇರುವ ವಿದ್ಯುತ್ ಕಂಬ ಕೂಡಾ ಜಖಂ ಗೊಂಡಿದ್ದು, ಇಲಾಖೆಗೆ ಸುಮಾರು 19,000/- ರೂ ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ  17-2022 ಕಲಂ: 279,  427 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದುದಾರರಾದ ಜಯಾನಂದ ಪ್ರಾಯ 46 ವರ್ಷ ತಂದೆ: ರಾಮಣ್ಣ ನಾಯ್ಕ ವಾಸ: ಪೆರಿಯತ್ತೋಡಿ ಮನೆ ಕಬಕ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಅವರ ತಾಯಿ ಕಮಲ (59) ಎಂಬವರು ದಿನಾಂಕ: 04.03.2022 ರಂದು ಮಧ್ಯಾಹ್ನ ಸುಮಾರು 13.30 ಗಂಟೆಗೆ ತನ್ನ ಮನೆಯಾದ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ತನಗೆ ಮಣ್ಣಿ ತಯಾರಿಸುತ್ತಿರುವ ಸಮಯ ಆಕಸ್ಮಿಕವಾಗಿ ಮೃತಳು ಧರಿಸಿದ್ದ ನೈಟಿಗೆ ಬೆಂಕಿ ತಾಗಿ ಸುಟ್ಟ ಗಾಯಗಳಾಗಿ ಮೃತರನ್ನು ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ಸ್  ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ಮೃತರು ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮಯ ದಿನಾಂಕ: 05.03.22 ರಂದು ಬೆಳಿಗ್ಗೆ ಸುಮಾರು 09.00 ಗಂಟೆಗೆ ಸುಟ್ಟ ಗಾಯಗಳ ಪರಿಣಾಮ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಠಾಣಾ  ಯುಡಿಆರ್‌:      07/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-03-2022 11:47 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080