ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 • ಸುಳ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಉಲ್ಲಾಸ್ ಎ, ವಿ (25) ತಂದೆ: ವಾಸುದೇವ ಎ,ಟಿ ಅಮೆಮನೆ, ಪಾಲಡ್ಕ ,ಆಲೆಟ್ಟಿ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 04.07.2022 ರಂದು ತಮ್ಮ ಬಾಬ್ತು ಕಾರಿನಲ್ಲಿ ಪೆರಾಜೆಯಿಂದ ಆಲೆಟ್ಟಿಗೆ ಮಾಣಿ- ಮೈಸೂರು ಹೆದ್ದಾರಿಯಲ್ಲಿ ಬರುತ್ತಿರುವರೇ, ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಪಾಲಡ್ಕ ಎಂಬಲ್ಲಿ ಸಮಯ ಸಮಾರು 08:30 ಗಂಟೆಗೆ ತಲುಪುತ್ತಿದ್ದಂತೆ ಪಿರ್ಯಾದುದಾರರ ಬಾಬ್ತು ಕಾರಿನ ಮುಂದೆ ಸುಳ್ಯ ಕಡೆಗೆ ಹೋಗುತ್ತಿದ್ದ, ಮೋಟಾರ್ ಸೈಕಲ್ ಗೆ ಎದುರಿನಿಂದ ಬಂದ ಅಂದರೆ ಸುಳ್ಯ ಕಡೆಯಿಂದ ಬಂದ ಕಾರ್‌ವೊಂದು ಅದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಕಾರನ್ನು ಆತನ ತಪ್ಪುಬದಿಯಾದ ತೀರಾ ಬಲಬದಿಗೆ ಕಾರನ್ನು ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಸ್ಕೂಟರ್ ಸಮೇತ ಕಚ್ಚಾ ಮಣ್ಣು ರಸ್ತೆಗೆ ಎಸೆಯಲ್ಪಟ್ಟದನ್ನು ಕಂಡು ಪಿರ್ಯಾದುದಾರರು ತನ್ನ ಬಾಬ್ತು ಕಾರನ್ನು ನಿಲ್ಲಿಸಿ, ಸ್ಕೂಟರ್ ಸವಾರನ  ಬಳಿಗೆ ಹೋಗಿ ನೋಡಲಾಗಿ ಬಲಭುಜಕ್ಕೆ, ಬಲಮಣಿಗಂಟಿಗೆ,ಬಲಕೈಬೆರಳಿಗೆ,ಮೂಗಿಗೆ,ಕಾಲಿಗೆ ರಕ್ತಗಾಯ ಮತ್ತು ಶರೀರದ ಇತರ ಭಾಗಗಳಲ್ಲಿ ಗುದ್ದಿದ ಗಾಯವಾಗಿದ್ದವರನ್ನು, ಉಪಚರಿಸಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 80/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ದಯಾಕರ ಆಳ್ವ, 65 ವರ್ಷ, ತಂದೆ: ದಿ|| ಸೀತಾರಾಮ ಆಳ್ವ, ವಾಸ: ಆಳ್ವ ಫಾಮ್ಸ್, ಪೆರುವಾಜೆ ಮನೆ, ಪೆರುವಾಜೆ ಗ್ರಾಮ, ಸುಳ್ಯ ತಾಲೂಕು. ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 04-07-2022 ರಂದು ಸಂಜೆ 6-45 ಗಂಟೆಗೆ ಅವರ ಬಾಬ್ತು ಜೀಪು ನಂ KA21M-0015 ನೇಯದ್ದರಲ್ಲಿ ಮನೆಗೆ ಅಗತ್ಯ ಸಾಮಾನು ಖರೀದಿಯ ಬಗ್ಗೆ ಚಾಲಕನಾಗಿ ಶಂಕರ ಗುರು ಎಂಬಾತನನ್ನು ನೇಮಿಸಿಕೊಂಡು ಬೆಳ್ಳಾರೆ ಪೇಟೆಗೆ ಹೋಗಿ ಅಗತ್ಯ ಸಾಮಾನು ಖರೀದಿಸಿ ವಾಪಾಸ್ಸು ಮನೆ ಕಡೆಗೆ ಬೆಳ್ಳಾರೆ-ಸವಣೂರು ರಸ್ತೆಯಲ್ಲಿ ಪ್ರಯಾಣಿಸುತ್ತಾ ರಾತ್ರಿ 8-15 ಗಂಟೆಗೆ ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಬೋರಡ್ಕ ಎಂಬಲ್ಲಿಗೆ ತಲಪಿದಾಗ ವಿಪರೀತ ಮಳೆ ಸುರಿಯುತ್ತಿದ್ದರೂ ಜೀಪು ಚಾಲಕ ಶಂಕರಗುರು ಜೀಪನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಜೀಪು ರಸ್ತೆಯ ಬಲಬದಿ ಮಣ್ಣು ಕಚ್ಚಾ ರಸ್ತೆಯಲ್ಲಿ ಚಲಿಸಿ ಚರಂಡಿಗೆ ವಾಲಿ ಅಲ್ಲಿಯೇ ಇದ್ದ ಮರಕ್ಕೆ ಡಿಕ್ಕಿಹೊಡೆಯಿತು. ಕೂಡಲೇ ಸ್ಥಳೀಯರು ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಬಂದು ಪಿರ್ಯಾದುದಾರರನ್ನು ಹಾಗೂ ಜೀಪು ಚಾಲಕರನ್ನು ಜೀಪಿನಿಂದ ಇಳಿಸಿ ಉಪಚರಿಸಲಾಗಿ ಪಿರ್ಯಾದುದಾರರಿಗೆ ಅಲ್ಲಲ್ಲಿ ಸಣ್ಣ ಪುಟ್ಟ ಗುದ್ದಿದ ನೋವು, ಜೀಪು ಚಾಲಕ ಶಂಕರ ಗುರುರವರಿಗೆ ಬಲ ಕೈಗೆ ಗುದ್ದಿದ ಗಾಯ ಹಾಗೂ ತಲೆಗೆ ಗುದ್ದಿದ ಮತ್ತು ರಕ್ತಗಾಯಗಳಾಗಿದ್ದು ಸ್ಥಳಕ್ಕೆ 108 ಅಂಬುಲೆನ್ಸ್ ವಾಹನವನ್ನು ತರಿಸಿ ಗಾಯಾಳು ಶಂಕರ ಗುರು ರವರನ್ನು ಪಿರ್ಯಾದಿದಾರರು ಮತ್ತು ಸುಂದರ ರಾಜ್ ಎಂಬವರು ಬೆಳ್ಳಾರೆ ಕ್ಲಿನಿಕ್ ಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಶಂಕರುಗುರು ರವರನ್ನು ಪರೀಕ್ಷೆ ನಡೆಸಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು,  ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ ಅ.ಕ್ರ 54/2022 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಹೇಮಾ ಪ್ರಾಯ: 45 ವರ್ಷ, ಗಂಡ; ಕೆಂಪೇಗೌಡ ವಾಸ; ಮನೆ ನಂ, 190/1 ತುಷ್ಟಿ ನಿಲಯ, ಕಾಮಧೇನು ನಗರ ಬಿ. ನಾರಾಯಣಪುರ, ವೈಟ್ ಫೀಲ್ಡ್ ರಸ್ತೆ ಬೆಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರು ತಮ್ಮ ಕುಟುಂಬದೊಂದಿಗೆ ದಿನಾಂಕ 30.06.2022 ರಂದು ಬೆಂಗಳೂರಿನಿಂದ ಬೆಳ್ತಂಗಡಿ ತಾಲುಕು ಧರ್ಮಸ್ಥಳ ಗ್ರಾಮದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕತ್ಸಾಲಯ ಶಾಂತಿವನಕ್ಕೆ ಚಿಕಿತ್ಸೆ ಬಗ್ಗೆ ಶಾಂತಿವನಕ್ಕೆ ಬಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಾ ಎಂದಿನಂತೆ ದಿನಾಂಕ 03.07.2022 ರಂದು ಬೆಳಿಗ್ಗೆ 5.00 ಗಂಟೆಗೆ ಎದ್ದು ಯೋಗ ಮಾಡಲು ತಯಾರಾಗಿ 5.30 ಗಂಟೆಗೆ ಅವರಿದ್ದ ಮಹಿಳಾ ವಾರ್ಡ್‌ ಆದ ಸೌಖ್ಯ ಎಂಬ ವಾರ್ಡಿನ ಬೆಡ್‌ ಬಳಿ ಪಿರ್ಯಾದಿದಾರರ ಬಾಬ್ತು 80 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ 6000/-  ನಗದು ಹಣವನ್ನು ವ್ಯಾನಿಟಿ ಬ್ಯಾಗನಲ್ಲಿಟ್ಟು ಜಿಫ್‌ ಹಾಕಿ ಭದ್ರಪಡಿಸಿ ಪಿರ್ಯಾದಿದಾರರು ಇದ್ದ ಬೆಡ್‌ ಹತ್ತಿರ ಇಟ್ಟು ಮಗಳೊಂದಿಗೆ ಯೋಗಕ್ಕೆ ಹೋಗಿದ್ದು, ಯೋಗ ಮುಗಿಸಿ ಬೆಳಿಗ್ಗೆ 8.15 ಗಂಟೆಗೆ ಮರಳಿ ಪಿರ್ಯಾದಿದಾರರು ತಾವು ಇದ್ದ ಬೆಡ್‌ ಗೆ ಬಂದು ಅದೇ ದಿನ ಅದೇ ಸಮಯಕ್ಕೆ ವ್ಯಾನಿಟಿ ಬ್ಯಾಗ್‌ ಬಟ್ಟೆ ಬರೆಗಳನ್ನು ಹಿಡಿದುಕೊಂಡು ಹತ್ತಿರದಲ್ಲಿದ್ದ ಸಿ.ಓ.ಇ ಬ್ಲಾಕಿಗೆ ಸ್ಥಳಾಂತರವಾಗಿ ವ್ಯಾನಿಟಿ ಬ್ಯಾಗ ನೋಡಿದಾಗ ಜಿಪ್‌ ತೆರೆದಿರುವುದು ಕಂಡು ಕೂಡಲೆ ಬ್ಯಾಗ್‌ ನ್ನು ಚೆಕ್‌ ಮಾಡಿ ನೋಡಿದಾಗ ಅದರಲ್ಲಿದ್ದ 230000/- ರೂ ಮೌಲ್ಯದ  ಚಿನ್ನದ ಮಾಂಗಲ್ಯ ಸರ ಹಾಗೂ  6000/- ನಗದು ಹಣ ಇಲ್ಲದೇ ಇದ್ದು, ಕೂಡಲೆ ಪಿರ್ಯಾದಿದಾರರು ಇದ್ದ ವಾರ್ಡಗೆ ಬಂದು ಹುಡುಕಾಡಿದ್ದು ನಂತರ ಅಲ್ಲಿಯ ಮ್ಯಾನೇಜರ್ ಹಾಗೂ ಸಿಬ್ಬಂದಿಗಳಲ್ಲಿ ತಿಳಿಸಿ ವಿಚಾರಿಸಿದಾಗ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅಕ್ರ 49/2022 ಕಲಂ 380 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 2

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ವಸಂತಿ ಪ್ರಾಯ 50 ವರ್ಷ      ಗಂಡ:ಮುಂಡಪ್ಪ    ವಾಸ:ಬಂಡಿತಡ್ಕ ಮನೆ, ಕನ್ಯಾನ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ಗಂಡ ಮುಂಡಪ್ಪ ಪ್ರಾಯ 65 ವರ್ಷ ಎಂಬವರು ಸುಮಾರು 02 ದಿನಗಳಿಂದ ಕೆಲಸಕ್ಕೆ ಹೋಗದೆ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಬಂಡಿತಡ್ಕ ಎಂಬಲ್ಲಿರುವ ಮನೆಯಲ್ಲಿದ್ದವರು ದಿನಾಂಕ:04-07-2022 ರಂದು ಬೆಳಿಗ್ಗೆ 09.30 ಗಂಟೆಗೆ ಮುಂಡಪ್ಪರವರು ಕನ್ಯಾನದ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಈ ವರೆಗೆ ಮನೆಗೂ ಬಾರದೆ ಸ್ನೇಹಿತರ ಮನೆಗೂ ಹೋಗದೆ ಮತ್ತು ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ..ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 112/2022  ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಿಶಾಲ್ ಪ್ರಾಯ 19 ವರ್ಷ ತಂದೆ ಜನಾರ್ಧನ ಸಫಲ್ಯ ಸಜಿಪಪಡು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 03-07-2022 ರಂದು ಆದಿತ್ಯವಾರ ಪಿರ್ಯಾದಿದಾರರು   ತಮ್ಮ  ವಿಕಾಸ್‌, ಸಂಬಂದಿವರಾದ  ಅಶ್ವಿತ್‌,  ಲಿಖಿತ್‌,  ಹರ್ಷಾ ರವರು  ಸೇರಿ  ರುಕ್ಮಯ್ಯ ರವರ ಮನೆಯ  ತೋಟದಲ್ಲಿ ಹುಲ್ಲು ತೆಗೆಯುವರೇ  ಹೋಗಿದ್ದು  ಸಂಜೆ 5.00 ಗಂಟೆಗೆ ತೋಟದ ಕೆಲಸ ಮುಗಿಸಿ ಮನೆಯ ಪಕ್ಕದ ನೇತ್ರಾವತಿ ನದಿಗೆ ಕೈ ಕಾಲು ತೊಳೆಯುವರೇ ಹೋಗಿದ್ದು,  ನದಿಯಲ್ಲಿ ಕೈಕಾಲು ತೊಳೆಯುತ್ತಿದ್ದ ಸಮಯ ವಿಪರೀತ ಮಳೆಯಿಂದ ಒಮ್ಮೆಲೇ ನದಿಯಲ್ಲಿ ನೀರು ಬಂದು ಅಶ್ವಿತ್‌ ಮತ್ತು ಹರ್ಷಾ ರವರು ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಆಗ ಪಿರ್ಯಾದಿದಾರರು  ಇತರರು ಅವರನ್ನು ರಕ್ಷಣೆಮಾಡಲು ಹೋದಾಗ ಹರ್ಷಾ ನನ್ನು ಸ್ವಲ್ಪ ದೂರದಲ್ಲಿ ನದಿ ನೀರಿನಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದು, ಆದರೆ ಅಶ್ಚಿತ್‌ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುತ್ತಾನೆ. ಅಶ್ವಿತ್‌ ನನ್ನು  ಎಷ್ಟು ಹುಡುಕಾಡಿದರೂ ಸಿಕ್ಕಿರುವುದಿಲ್ಲ ನಂತರ ಹರ್ಷಾ ನನ್ನು ದೇರಳಕಟ್ಟೆ ಕಣಚೂರು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 48/2022 ಕಲಂ ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಕೊಲೆ ಪ್ರಕರಣ: 2

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮ್ಯಾತ್ಯೂ ಆಂಟನಿ (54) ತಂದೆ:ಆಂಟನಿ, ವಾಸ: ತೋಯತುಂಗ ವಯಲಿಲ್, ಬಡೆಕ್ಕಾವು ಮನೆ, ನಾವೂರು ಗ್ರಾಮ,  ಬೆಳ್ತಂಗಡಿ ಎಂಬವರ ದೂರಿನಂತೆ ಯೋಹನಾನ್ @ ಬೇಬಿರವರ ಹೆಂಡತಿ ಎಲಿಯಮ್ಮರವರು ಸುಮಾರು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಈ ಬಗ್ಗೆ ಮಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುತ್ತಿರುವುದಾಗಿದೆ. ಯೋಹನಾನ್ @ ಬೇಬಿರವರ ಪತ್ನಿ ಎಲಿಯಮ್ಮರವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದವರು ದಿ: 05.07.2022 ರಂದು ಬೆಳಿಗ್ಗೆ 5.30 ಗಂಟೆ ಸಮಯಕ್ಕೆ ಮನೆಯ ಕೋಣೆಯ ಒಳಗೆ ಮಂಚದಲ್ಲಿ ಮಲಗಿದ್ದ ಗಂಡ ಯೋಹನಾನ್ @ಬೇಬಿರವರ ತಲೆಯ ಭಾಗಕ್ಕೆ ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿದೆ.ಈ ಬಗ್ಗೆ ಬೆಳ್ತಂಗಡಿ ಠಾಣಾ ಅಕ್ರ ಸಂ:44/2022 ಕಲಂ:302  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಮಹಮ್ಮದ್ ನೌಫಲ್ ಪ್ರಾಯ 28 ವರ್ಷ ತಂಧೆ: ಎಸ್ ಹೆಚ್ ಹನೀಫ ವಾಸ: ಶಾಂತಿಯಂಗಡಿ ಮನೆ ಬಿ ಮೂಡ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ಗೆಳಯನಾದ ಆಸೀಫ ತಂದೆ: ಬಿ ಅಬ್ದುಲ್ ಖಾದರ್ ವಾಸ: ಶಾಂತಿಯಂಗಡಿ ಮನೆ ಬಿ ಮೂಡ ಗ್ರಾಮ ಬಂಟ್ವಾಳ ತಾಲೂಕು ಪ್ರತಿದಿನ ಕೆಲಸ ಮುಗಿಸಿ ಸಂಜೆ ಅಥವಾ ರಾತ್ರಿ ಶಾಂತಿಯಂಗಡಿ ಬಳಿ ಸೇರುತ್ತಿದ್ದರು. ದಿನಾಂಕ: 04-07-2022 ರಂದು ರಾತ್ರಿ 10.30 ಗಂಟೆಗೆ ಪಿರ್ಯಾಧಿದಾರರು ಮನೆಯಲ್ಲಿರುವಾಗ ಗೆಳಯ ಆಸೀಫನು ಕರೆ ಮಾಡಿ ಶಾಂತಿಯಂಗಡಿ ಸ್ಟೋರ್ ಬಳಿ ಇದ್ದೇನೆ ಮಾರಿಪಳ್ಳ ಮಹಮ್ಮದ್ ನೌಫೆಲ್, ಮಹಮ್ಮದ್ ನೌಸೀರ ನನ್ನನ್ನು ಸ್ಕೂಟಿ ಜೊತೆಗೆ ತಡೆದು ಹೊಡೆಯಲು ಬಂದು ಧಮ್ಕಿ ಹಾಕುತ್ತಿದ್ದಾರೆ ಕೊಡಲೇ ಬರುವಂತೆ ಹೇಳಿದನು. ಆಗ ಪಿರ್ಯಾಧಿದಾರರು ಆಸೀಫನ ತಮ್ಮ, ಅನ್ಸಾರ, ಗೆಳಯರಾದ ಕೌಶಿಕ್, ನಿಜಾಮುದ್ದೀನ ಸೇರಿಕೊಂಡು ಶಾಂತಿಯಂಗಡಿ ಸ್ಟೋರ್ ಬಳಿ ಮೋಟಾರ ಸೈಕಲ್ ನಲ್ಲಿ ಹೋಗಿದ್ದು, ಅಲ್ಲಿದ್ದ ಆಸೀಫ್ ನನ್ನು ಪಿರ್ಯಾಧಿದಾರರು ವಿಚಾರಿಸಿದಲ್ಲಿ 1 ರಿಂದ 2 ನೇ ಆರೋಪಿತರು ಕೈಯಿಂದ ಹೊಡೆದು ಕೊಲೆ ಮಾಡುವುದಾಗಿ ಧಮ್ಕಿ ಹಾಕಿ ಪೊನ್ನೊಡಿಯಲ್ಲಿರುವ ಲಗೂನ್ ಕೊಕೊನೆಟ್ ಹೊಟೇಲ್ ಕಡೆಗೆ ಹೋಗಿರುತ್ತಾರೆ ಮತ್ತು ಅಲ್ಲಿಗೆ ಬರುವಂತೆಯೂ ಬೆದರಿಕೆ ಹಾಕಿರುತ್ತಾರೆಂದು ತಿಳಿಸಿರುತ್ತಾನೆ. ಆಗ ಪಿರ್ಯಾಧಿದಾರರು ಏನೆಮದು ವಿಚಾರ ಮಾಡಿ ತಕರಾರನ್ನು  ಸರಿ ಮಾಡುವ ಎಂದು ಹೇಳಿ ಆಸೀಫ್ ನನ್ನು ಆತನ ಡಿಯೋ ಮೋಟಾರ ಸೈಕಲ್ ನಲ್ಲಿ ಕರೆದುಕೊಂಡು ಪೊನ್ನೊಡಿಯಲ್ಲಿರುವ ಲಗೂನ್ ಕೊಕೊನೆಟ್ ಹೊಟೇಲ್ ಬಳಿ ಇರುವ ಗೂಡಂಗಡಿ ಹತ್ತಿರ ಹೋಗಿದ್ದು, ಅಲ್ಲಿ ಗೂಡಂಗಡಿ ಬಳಿಯಲ್ಲಿದ್ದ 1 ರಿಂದ 2 ನೇ ಆರೋಪಿತರಲ್ಲಿ ಪಿರ್ಯಾಧಿದಾರರು ಯಾಕೆ ನೀವು ಆಸೀಫನಿಗೆ ಹೊಡೆದು ಧಮ್ಕಿ ಹಾಕಿದ್ದೀರಿ ಎಂದು ವಿಚಾರ ಮಾಡುತ್ತಿದ್ದಂತೆಯೂ ನೌಫಾಲ್ ನು ನೀನು ಬಾರಿ ಪಂಚಾಯತಿಗೆ ಮಾಡುತ್ತೀಯ ಎಂದು ಬೈದು ಮರದ ಸೊಂಟೆಯಿಂದ ಪಿರ್ಯಾಧಿದಾರರ ಡ ಕನ್ಣಿನ ಬಳಿ, ಎಡಭುಜಕ್ಕೆ ಹೊಡೆದನು ಆಗ ಆಸೀಫ, ಅನ್ಸಾರ, ಕೌಸೀರ್  ಮತ್ತು ನಿಜಾಮುದ್ದೀನ  ತಡೆಯಲು ಬಂದಾಗ 1 ರಿಂದ 2 ನೇ ಆರೋಪಿತರೊಂದಿಗೆ ಉರುಡಾಟ ಆಗಿದ್ದು, ಆಗ ನೌಪಾಲ್ ನ್ನು ಆಸೀಫ್ ನನ್ನು ಉದ್ದೇಶಿಸಿ ಅವ್ಯಾಚ ಶಬ್ಧಗಳಿಂದ ಬೈದು, ನಿನ್ನನ್ನು ಇವತೇ ಮುಗಿಸದೇ ಬಿಡುವುದಿಲ್ಲ ಎಂದು ಹೇಳುತ್ತಾ ಆತನ ಕೈಯಲ್ಲಿದ್ದ ಚೂರಿಯಿಂದ ಆಸೀಫನಿಗೆ ಹೊಟ್ಟೆಯ ಬಲ ಬದಿಗೆ ಎದೆಗೆ ಕೈಗೆ ತಿವಿದನು, ಆಗ ಆಸೀಫ್ ನು ಬೊಬ್ಬೆ ಹೊಡೆಯುತ ನೆಲಕ್ಕೆ ಕುಸಿದು ಬಿದ್ದನು. ಆಗ ಬೊಬ್ಬೆ ಕೇಳಿ ನೆರೆಯವರು ಸೇರಿದರು ಗಾಯಗೊಂಡ ಆಸೀಫನನ್ನು ವಾಹನದಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ವತ್ರೆಗೆ ಗೆಳೆಯರು ಕರೆದುಕೊಂಡು ಬಂದಿರುತ್ತಾರೆ ಸದ್ರಿ ಆಸ್ವತ್ರೆಯ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿಕೊಟ್ಟ ಆಸೀಫನು ತ್ರೀವ ಗಾಯದಿಂದ ಮೃತಪಟ್ಟಿರುವುದು ತಿಳಿಯಿತು. ಈ ಘಟನೆ ಸುಮಾರು ರಾತ್ರಿ 11.00 ಗಂಟೆಗೆ ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆ ಅ.ಕ್ರ 67/2022  ಕಲಂ: 323, 504, 324, 506, 302 ಜೊತೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 1

 • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಶ್ರಫ್‌ ಕಲ್ಲೇಗ (55) ವಾಸ: ಮುರ ಮನೆ ನೆಹರೂ ನಗರ ಅಂಚೆ ಕಬಕ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 29.06.2022 ರಂದು ಪುತ್ತೂರಿನ ದರ್ಬೆ ವೃತ್ತದ ಬಳಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಏರ್ಪಡಿಸಿದ ಪ್ರತಿಭಟನಾ ಸಭೆಯಲ್ಲಿ ಶ್ರೀ ಕೃಷ್ಣ ಉಪಾದ್ಯಯ ಕಲ್ಲಡ್ಕ ಎಂಬುವರು ಕೋಮು ಪ್ರಚೋದನಾಕಾರಿ ಭಾಷಣ ಮಾಡಿರುವುದಾಗಿ ನೀಡಿದ ದೂರಿನಂತೆ ಪುತ್ತೂರು ನಗರ ಠಾಣಾ ಅ.ಕ್ರ: 57/2022 ಕಲಂ: 505(2) ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುಂದರಿ, ಪ್ರಾಯ 65 ವರ್ಷ ಗಂಡ: ದಿ|ಬಾಬು ಪೂಜಾರಿ, ವಾಸ: ನೀರಬಿದಿರೆ ಮನೆ, ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಮಗ ದೇವನಾಥ ಎನ್.‌ ಪ್ರಾಯ 33 ವರ್ಷ ತಂದೆ: ದಿ| ಬಾಬು ಪೂಜಾರಿ, ಎಂಬವನು ಸುಳ್ಯ ನಗರ ಪಂಚಾಯತ್‌ ನಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಕುಡಿತದ ಚಟ ಹೊಂದಿದ್ದು, ಕೈ ಸಾಲ ಹಾಗೂ ಸಂಘದಿಂದ ಸಾಲ ಮಾಡಿದ್ದಲ್ಲದೇ ಮನೆಯಲ್ಲಿ ಮನೆ ಜಾಗ ಮಾರುವ ಎಂದು ಹೇಳುತ್ತಿದ್ದನು. ಅಲ್ಲದೇ ಅವಿವಾಹಿತನಾಗಿದ್ದು, ಮದುವೆಯಾಗು ಎಂದು ಹೇಳಿದರೂ ಅವನು ಒಪ್ಪದೇ ಇದ್ದವನು ಇದೇ ವಿಚಾರದಿಂದ ಮಾನಸಿಕವಾಗಿ ನೊಂದಿದ್ದವನು ಮನೆಯಲ್ಲಿ ಇರುತ್ತಿದ್ದು, ಒಮ್ಮೊಮ್ಮೆ ತನ್ನ ಸುಳ್ಯದ ರೂಮಿನಲ್ಲಿ ಉಳಕೊಳ್ಳುತ್ತಿದ್ದವನು ದಿನಾಂಕ 03-7-2022 ರಂದು ಬೆಳಿಗ್ಗೆ 5-30 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋದವನು ರಾತ್ರಿ ವಾಪಾಸು ಮನೆಗೆ ಬಾರದೇ ಇದ್ದು, ನಿನ್ನೆ ದಿನಾಂಕ 04-7-2022 ರಂದು ಮಧ್ಯಾಹ್ನ 2-15 ಗಂಟೆಗೆ ಪಿರ್ಯಾದಿದಾರರ ಸೊಸೆ ಶಶಿಕಲಾ ಫೋನ್‌ ಮಾಡಿ ದೇವನಾಥನು ಸುಳ್ಯ ಕಸಬಾ ಗ್ರಾಮದ ಕೋಡಿಯಾಲಬೈಲು ಸೇತುವೆ ಬಳಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದವನನ್ನು ನಗರ ಪಂಚಾಯತ್‌ ನ ಗುರು ಹಾಗೂ ಆಟೋ ಚಾಲಕ ಪ್ರಸಾದ್‌ ರವರು ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದು, ಅದರಂತೆ ದೇವನಾಥನನ್ನು ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆಯಲ್ಲಿದ್ದವನು ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ 05-7-2022 ರಂದು ಬೆಳಿಗ್ಗೆ 2-41 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ UDR No: 29/2022 Sec: 174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 06-07-2022 12:39 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080