ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಾಮಚಂದ್ರ ಬಟ್ ಪ್ರಾಯ: 61 ವರ್ಷ ತಂದೆ:ದಿ/ ಕೂಡೂರು ಕೃಷ್ಣ ಭಟ್ ವಾಸ: 4-80/9 ಸನ್ನಿಧಿ ಮಹಾತ್ಮ ನಗರ ಬಡಾವಣೆ ಕಾವೂರು ಎಂಬವರ ದೂರಿನಂತೆ ಪಿರ್ಯಾದಿರವರು ಪುತ್ತೂರು ತಾಲೂಕು ಕಬಕ ಗ್ರಾಮದ ಮುರದಲ್ಲಿ ಒಶಿಮಾ ಬ್ಯಾಟರಿ ತಯಾರಿಕಾ ಘಟಕವನ್ನು ಹೊಂದಿದ್ದು , ದಿನಾಂಕ: 05-08-2022 ರಂದು ಬೆಳಿಗ್ಗೆ 8:00 ಗಂಟೆಗೆ ಸದ್ರಿ ಬ್ಯಾಟರಿ ತಯಾರಿಕ ಘಟಕದಲ್ಲಿ ಕಿಟಕಿಯ ಕಬ್ಬಿಣದ ಸರಳನ್ನು ತುಂಡು ಮಾಡಿ ಯಾರೋ ಕಳ್ಳರು ಒಳಗೆ ನುಗ್ಗಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಿಗೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ತಿಳಿಸಿದಂತೆ ಪಿರ್ಯಾದಿದಾರರು ಪ್ಯಾಕ್ಟರಿಗೆ ಬಂದು ಪರಿಶೀಲಿಸಿದಾಗ ಕಿಟಕಿಯ ಸರಳನ್ನು ತುಂಡರಿಸಿ ಯಾರೋ ಕಳ್ಳರು ಒಳಗೆ ಪ್ರವೇಶಿಸಿ ಡ್ರವರಿನಲ್ಲಿದ್ದ ಲೆಕ್ಕಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿ ಅಲ್ಲಿದ್ದ ಕಬ್ಬಿಣದ ಕಪಾಟಿನ ಬೀಗವನ್ನು ಮುರಿದು ಒಳಗಡೆ ಇದ್ದ ರೂ 39,600/- ನ್ನು ಕದ್ದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ   ಅ.ಕ್ರ: 69/2022 ಕಲಂ: 454, 457, 380 ಐ.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪ್ರಕರಣದ ಸಂತ್ರಸ್ಥ ಬಾಲಕಿಯು ಪಿಯುಸಿ ವ್ಯಾಸಾಂಗ ಮಾಡಿ ಹಾಸ್ಟೇಲ್ ನಲ್ಲಿ ಇರುವುದಾಗಿದೆ. ದಿನಾಂಕ 31.12.2019 ರಂದು  ಹೊಸ ವರ್ಷದ ಆಚರಣೆ ಮತ್ತು ಪ್ರಾರ್ಥನೆಗಾಗಿ ಧಾರ್ಮಿಕ ಸ್ಥಳಕ್ಕೆ ತಂಗಿ ಜೊತೆಯಲ್ಲಿ ಹೋಗಿದ್ದು ಆವೇಳೆ ಸಂತ್ರಸ್ಥ ಬಾಲಕಿಯ ಪರಿಚಯದ ಆರೋಪಿ ಜೋಯಿಸನ್ ಎಂಬಾತನು ಅಲ್ಲಿದ್ದು, ಸಮಯ 17.30 ಗಂಟೆಗೆ ನಿರ್ಜನ ಸ್ಥಳಕ್ಕೆ ಮಾತಾಡಲು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವುದಾಗಿದೆ. ಇದಲ್ಲದೆ ಸಂತ್ರಸ್ಥ ಬಾಲಕಿಯ ಸಂಬಂಧಿಕರ ಮನೆಯಲ್ಲಿ ದಿನಾಂಕ 18.12.2021 ರಂದು 21.00 ಗಂಟೆಗೆ ಊಟ ಮಾಡಿ ಮಲಗಿದ್ದ ಸಮಯ ಸಂಬಂದಿ ಪಿಯೂಷ್ ಎಂಬಾತನು ಸಂತ್ರಸ್ಥ ಬಾಲಕಿಯ ಇಚ್ಚೆಗೆ ವಿರುದ್ದವಾಗಿ  ಲೈಂಗಿಕ ಕಿರುಕುಳ ನೀಡಿರುತ್ತಾನೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 57-2022 ಕಲಂ  376,354 ಐಪಿಸಿ ಮತ್ತು 4,7,8 ಪೋಕ್ಸೋ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಸೋನಿಯಾ ಡೇಸಾ,  ಪ್ರಾಯ: 27 ವರ್ಷ, ಗಂಡ: ಜುಗುಲ್ ಕ್ರಾಸ್ತಾ,  ವಾಸ: ಗೋಲ್ಡ್ ಪ್ಯಾಲೇಸ್ ಎಸ್ಟೇಟ್ ಎದುರು, ಎಲ್ಯಾರ್ ಪದವು ಮನೆ, ಅಣ್ಣುಮೊಗರು ಗ್ರಾಮ,  ಮಂಗಳೂರು ಎಂಬವರ ದೂರಿನಂತೆ ಫಿರ್ಯಾದಿದಾರರ ತಂದೆ ಸಾಲ್ವಾದೋರ್ ಡೆಸಾ ಮತ್ತು ತಾಯಿ ಕ್ರಿಸ್ತಿನ್ ಡೆಸಾರವರು ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮದ ಕುಪ್ರಾಡಿ ಎಂಬಲ್ಲಿ ವಾಸವಾಗಿದ್ದು, ಕೃಷಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವುದಾಗಿದೆ. ಫಿರ್ಯಾದಿದಾರರ ತಂದೆ ತಮ್ಮ ಬಾಬ್ತು ಅಡಿಕೆ ತೋಟದಲ್ಲಿ ಸ್ವತಃ ಕೃಷಿ ಕೆಲಸ ಮಾಡುತ್ತಿದ್ದು,  ದಿನಾಂಕ; 06.07.2022 ರಂದು ಬೆಳಿಗ್ಗೆ 09.00 ಗಂಟೆಗೆ ಅಡಿಕೆ ಮರಗಳಿಗೆ  ಔಷಧಿ ಸಿಂಪಡಣೆ ಮಾಡುವರೇ ಏಣಿ ಇಟ್ಟು ಔಷಧಿ ಸಿಂಪಡಣೆ ಮಾಡುವ ಸಮಯ ಅಡಿಕೆ ಮರಕ್ಕೆ ಇಟ್ಟ ಏಣಿಯು ಆಕಸ್ಮಿಕವಾಗಿ ಜಾರಿ ಏಣಿಯಲ್ಲಿದ್ದವರು ನೆಲಕ್ಕೆ ಬಿದ್ದು, ಗಂಭೀರ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಕೂಡಲೇ ಆಂಬ್ಯುಲೆನ್ಸ್ ನಲ್ಲಿ ಮಂಗಳೂರು ಫಾ| ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದವರು ದಿನಾಂಕ: 04.08.2022 ರಂದು ಮಧ್ಯಾಹ್ನ 1.36 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.   .ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಯು ಡಿ ಅರ್ ನಂಬ್ರ 32/2022  ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದೇವರಾಜು, ಪ್ರಾಯ: 48 ವರ್ಷ, ತಂದೆ: ಹನುಮಯ್ಯ ವಾಸ: ಹಿರೇಹಳ್ಳಿ, ಅರಕಲಗೂಡು ತಾಲೂಕು, ಹಾಸನ ಜಿಲ್ಲೆ, ಹಾಲಿವಾಸ: ಗಡಿಕಲ್ಲು, ಸಂಪಾಜೆ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ. ದಿನಾಂಕ: 01.08.2022 ರಂದು ಪಿರ್ಯಾದುದಾರರ ಚಿಕ್ಕಪ್ಪ ತೀರಿಹೋದ ಕಾರಣ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವರೇ ಪಿರ್ಯಾದಿದಾರರು ಅವರ ಊರಿಗೆ ಹೋಗಿದ್ದು, ಲಕ್ಷ್ಮಮ್ಮ ಒಬ್ಬರೇ ಸಂಪಾಜೆಯ ಬಾಡಿಗೆ ಮನೆಯಲ್ಲಿ ಇದ್ದುದಾಗಿದೆ. ದಿನಾಂಕ: 05.08.2022 ರಂದು 08:00 ಗಂಟೆಗೆ ಲಕ್ಷ್ಮಮ್ಮನಲ್ಲಿ ಮಾತನಾಡಲೆಂದು ಪಿರ್ಯಾದಿದಾರರು ನೆರಮನೆಯ ಗೀತಾರವರ ಫೋನ್‌ಗೆ ಕರೆ ಮಾಡಿ ವಿಚಾರಿಸಿದಾಗ ನಿನ್ನೆ ಸಂಜೆಯಿಂದ ಲಕ್ಷ್ಮಮ್ಮನನ್ನು ನೋಡಿರುವುದಿಲ್ಲವೆಂದು ಅವರು ತಿಳಿಸಿದಾಗ ಮನೆಗೆ ಹೋಗಿ ಲಕ್ಷ್ಮಮ್ಮನಲ್ಲಿ ಫೋನ್‌ ನೀಡಲು ಹೇಳಿದಂತೆ ಅವರು ಪಿರ್ಯಾದಿದಾರರ ಬಾಡಿಗೆ ರೂಂಗೆ ಹೋಗಿ ನೋಡಿದಾಗ ಬಾಡಿಗೆ ರೂಂನ ಬಾಗಿಲು ಹಾಕಿದ್ದು, ಎಷ್ಟು ಕರೆದರೂ ಬಾಗಿಲು ತೆರೆಯದೇ ಇದ್ದಾಗ ಹಿಂದಿನ ಬಾಗಿಲಿನ ಮೂಲಕ ನೋಡಿದಾಗ ಲಕ್ಷ್ಮಮ್ಮ ಬಾಡಿಗೆ ರೂಂನ ಅಡುಗೆ ಕೋಣೆಯ ಪಕ್ಕಾಸಿಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡು ನೇತಾಡುತ್ತಿರುವುದಾಗಿ ದೂರವಾಣಿ ಮೂಲಕ ತಿಳಿಸಿದ್ದು, ನಂತರ ಪಿರ್ಯಾದಿದಾರರು ಅವರ ಸಂಬಂಧಿಕರೊಂದಿಗೆ ಸಂಪಾಜೆಗೆ ಬಂದು ನೋಡಿದಾಗ ಲಕ್ಷ್ಮಮ್ಮ ಬಾಡಿಗೆ ಮನೆಯ ಅಡುಗೆ ಕೋಣೆಯ ಪಕ್ಕಸಿಗೆ ನೈಲಾನ್‌ ಹಗ್ಗದಿಂದ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುವ ಸ್ಥಿತಿಯಲ್ಲಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಸುಳ್ಯ ಠಾಣಾ ಪೊಲೀಸ್‌ ಠಾಣಾ ಯುಡಿಆರ್‌ ನಂಬ್ರ 34/2022 ಕಲಂ: 174  CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-08-2022 03:26 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080