ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜನಾರ್ಧನ, ಪ್ರಾಯ 42 ವರ್ಷ, ತಂದೆ: ಆನಂದ ಸಪಲ್ಯ, ವಾಸ: ಮರಿಕೆ ಮನೆ, ರಾಮನಗರ, ಉಪ್ಪಿನಂಗಡಿ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 04-09-2022 ರಂದು 12.00 ಗಂಟೆಗೆ ಆರೋಪಿತೆ ಫಾತಿಮತ್‌ ಶೀಫಾನ ಎಂಬವರು  KA-19-ME-9654 ನೇ ನೋಂದಣಿ ನಂಬ್ರದ ಕಾರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ ಮಸೀದಿ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ಬಲಬದಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಸವಾರರಾಗಿ, ಅವರ ಮಗ ಶಶಾಂಕ್‌ (12 ವರ್ಷ) ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ kA-21-EA6821 ನೇ  ನೋಂದಣಿ ನಂಬ್ರದ ಸ್ಕೂಟರಿಗೆ ಕಾರು ಅಪಘಾತವಾಗಿ, ಪಿರ್ಯಾದುದಾರರು ಮತ್ತು ಶಶಾಂಕ್‌ ರವರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕಾಲಿನ ಮೊಣಗಂಟು, ಬಲಕೈಯ ಕೋಲು  ಕೈ  ಮತ್ತು ಎರಡೂ ಕೈ ಮಣಿಗಂಟಿಗೆ ತರಚಿದ ರಕ್ತಗಾಯ ಮತ್ತು  ಶಶಾಂಕ್‌ ರವರಿಗೆ ಬಲಕಾಲಿನ ಪಾದದ ಬಳಿ ಗುದ್ದಿದ ಗಾಯವಾಗಿ, ಉಪ್ಪಿನಂಗಡಿಯ ಸೂರಂಬೈಲು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅಪಘಾತದ ಬಳಿಕ ಆರೋಪಿತೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸದೇ ಮತ್ತು ಪೊಲೀಸ್‌ ಠಾಣೆಗೆ ಮಾಹಿತಿ ನೀಡದೇ ಪರಾರಿಯಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 142/2022 ಕಲಂ: 279, 337 ಐಪಿಸಿ  & 134(A)&(B) IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರದೀಫ್‌ ಶೆಟ್ಟಿ. ಎಸ್‌ ಪ್ರಾಯ 39 ವರ್ಷ, ತಂದೆ: ಸಂಜೀವ ಶೆಟ್ಟಿ, ವಾಸ: ರಾಘವೇಂದ್ರ ನಿಲಯ, ಪಡೀಲ್‌, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 04-09-2022 ರಂದು 12.50 ಗಂಟೆಗೆ ಆರೋಪಿ ಇಬ್ರಾಹಿಂ ಎಂಬವರು  KA-21-B-4083ನೇ ನೋಂದಣಿ ನಂಬ್ರದ ಅಟೋರಿಕ್ಷಾದಲ್ಲಿ ಆಯುಷ್‌ ಪಿ ಶೆಟ್ಟಿ(12ವರ್ಷ) ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಪಡೀಲ್‌ ಕಡೆಗೆ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪಡೀಲ್‌ ಚಾಮುಂಡೇಶ್ವರಿ ಗ್ಯಾರೇಜ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿದ ಪರಿಣಾಮ, ಅಟೋರಿಕ್ಷಾ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದು, ಆಯುಷ್‌ ಪಿ ಶೆಟ್ಟಿ ರವರಿಗೆ ಬಲ ಕೈಗೆ, ತಲೆಯ ಎಡಭಾಗಕ್ಕೆ ಗಾಯ, ಆರೋಪಿ ಚಾಲಕ ಇಬ್ರಾಹಿಂ ರವರಿಗೆ ಕೈಗೆ ಗಾಯಗಳಾಗಿದ್ದು ಇಬ್ಬರನ್ನು ಪುತ್ತೂರು ಪ್ರಗತಿ ಆಸ್ಪತ್ರೆಗೆ ಚಿಕಿತ್ಸೆ ಕರೆದುಕೊಂಡು ಹೋಗಿರುತ್ತಾರೆ. ನಂತರ ಆಯುಷ್‌ ಪಿ ಶೆಟ್ಟಿ ರವರನ್ನು ಪಿರ್ಯಾದುದಾರರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 143/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಯೋಗೀಶ್‌ ವಿ (29), ತಂದೆ: ಎಲ್ಯಾಣ್ಣ ಕುಂಬಾರ, ವಾಸ: ಕುಂಟಿನಿ ಮನೆ, ಲಾಯಿಲಾ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 04-09-2022 ರಂದು ತನ್ನ ಬಾಬ್ತು ಕೆಎ 21 ಕೆ 7746 ನೇ ಮೋಟಾರು ಸೈಕಲ್‌ನ್ನು ಉಜಿರೆ ಕಡೆಯಿಂದ ಲಾಯಿಲಾ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವ ಸಮಯ ಸುಮಾರು ಸಂಜೆ 3.45 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಹಳೆಪೇಟೆ ಎಂಬಲ್ಲಿ ತನ್ನ ಮನೆ ಕಡೆಗೆ ಹೋಗುವರೇ ಬಲಬದಿಯ ಇಂಡಿಕೇಟರ್‌ ಹಾಕಿ ಬಲಬದಿಗೆ ತಿರುಗಿಸಿದಾಗ ಅವರ ಹಿಂದಿನಿಂದ ಅಂದರೆ ಉಜಿರೆ ಕಡೆಯಿಂದ ಲಾಯಿಲಾ ಕಡೆಗೆ ಕೆಎ 19 ಇವೈ 1313 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದನು ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್‌ ಸಮೇತಾ ರಸ್ತೆಗೆ ಬಿದ್ದು ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ, ಗಾಯಾಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ:  109/2022 ಕಲಂ: 279 338 ಭಾ.ದ.ಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬಿದ್ ಪ್ರಾಯ: 23 ವರ್ಷ ತಂದೆ: ಮುಸ್ತಾಫ ವಾಸ: ಸೂರಗುಡ್ಡೆ, ಮೈಂದಾಳ ಮನೆ ನಾವೂರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ:05.09.2022 ರಂದು ಪಿರ್ಯಾದಿದಾರರು ತನ್ನ ಬಾಬ್ತು KA-70-4814ನೇ ಆಟೋರಿಕ್ಷಾದಲ್ಲಿ ಶಕುಂತಳಾ, ಅಶೋಕ, ಶಿವರಾಮ ಎಂಬವರನ್ನು  ಬಾಡಿಗೆ ನಿಮಿತ್ತ ಬಿ.ಸಿ.ರೋಡಿನಿಂದ ಮಣಿಹಳ್ಳ ಕಡೆಗೆ ಹೋಗುತ್ತಾ ಸಮಯ ಸುಮಾರು 12:45 ಗಂಟೆಗೆ ಬಂಟ್ವಾಳ ತಾಲೂಕು ಬಿ-ಕಸಬಾ ಗ್ರಾಮದ ಭಂಡಾರಿಬೆಟ್ಟು ಎಂಬಲ್ಲಿಗೆ ತಲುಪುತ್ತಿದ್ದಂತೆ ಬೆಳ್ತಂಗಡಿ ಕಡೆಯಿಂದ  KA-19-AA-6299 ನೇ ಕಾರನ್ನು ಅದರ ಚಾಲಕ ಜಯರಾಮ ಎಂಬವರು ಏಕಮುಖ ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಕೊಂಡು ಬಂದು ಪಿರ್ಯಾದಿದಾರರ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದ ಬಲಭಾಗ ಜಖಂಗೊಂಡಿದ್ದು  ಆಟೋರಿಕ್ಷಾದಲ್ಲಿದ್ದ ಶಕುಂತಳಾರವರ ಎಡಕೈ ತಟ್ಟಿಗೆ ಗುದ್ದಿದ ಗಾಯ, ಹಣೆಗೆ, ಮುಖಕ್ಕೆ, ಬಲಕೈಗೆ ತರಚಿದ ಗಾಯ ಅಶೋಕರವರಿಗೆ ಹಣೆಗೆ, ತಲೆಯ ಬಲಭಾಗಕ್ಕೆ ಗುದ್ದಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಿರುವುದಾಗಿದೆ. ಪಿರ್ಯಾದಿದಾರರ ತಲೆಯ ಬಲಭಾಗಕ್ಕೆ ಹಾಗೂ ಬಲ ಕೋಲು ಕೈಗೆ ತರಚಿದ ಗಾಯ, ಶಿವರಾಮರವರ ಹಣೆಯ ಎಡಬದಿಗೆ ಗುದ್ದಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಹೊರರೋಗಿಯಾಗಿ ಚಿಕಿತ್ಸೆ ನೀಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 99/2022 ಕಲಂ: 279, 337 ಐಪಿಸಿ ಪೊಲೀಸ್ ಠಾಣೆ ಅ.ಕ್ರ 310/2016 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ನಿಂದನೆ ಪ್ರಕರಣ: 1

 • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಿ ಮಹಮ್ಮದ್‌ ಪ್ರಾಯ 74 ವರ್ಷ ತಂದೆ: ಮೂರ್ಜೆ ಮನೆ, ಪಿಲಾತಬೆಟ್ಟುಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 05-09-2022 ರಂದು ಸಂಜೆ 6-30 ಗಂಟೆಗೆ ತನ್ನ ಬಾಬ್ತು ಕಾರಿನಲ್ಲಿ ಮೂರ್ಜೆಯಿಂದ ಪುಂಜಾಲಕಟ್ಟೆಗೆ ಬರುವ ವೇಳೆ ದೈಕಿನಕಟ್ಟೆ ಪೆಟ್ರೋಲ್‌ ಬಂಕ್‌ ಬಳಿ ಮದರಸಕ್ಕೆ ಬರುವ ವಿದ್ಯಾರ್ಥಿಗಳನ್ನು ಕಾರಿಗೆ ಹತ್ತಿಸುವ ಸಂಧರ್ಭದಲ್ಲಿ  ಫಿರ್ಯಾದಿದಾರರ ಕಾರಿನ ಎದುರಿಗೆ ಸ್ವಿಫ್ಟ್‌ ಕಾರ್‌ ನಲ್ಲಿದ್ದ ಮಹಿಳೆಯು ಅಡ್ಡಕಟ್ಟಿ ಅನಗತ್ಯವಾಗಿ ಅವ್ಯಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಅಲ್ಲದೇ ನಿಮ್ಮ ಮೇಲೆ ಕಂಪ್ಲೇಟ್‌ ಮಾಡುತ್ತೇನೆ ಎಂದು ಹೇಳಿಕೊಂಡು ನಿಂದಿಸಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ  63/2022 ಕಲಂ 341, ,504 ಭಾದಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಉಷಾ ಪ್ರಾಯ: 49ವರ್ಷ, ಗಂಡ: ರಾಮಚಂದ್ರ ವಾಸ: ನೆಗಳಗುಂಡಿ ಮನೆ, ಪಂಬೆತ್ತಾಡಿ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ತನ್ನ ಗಂಡ  ರಾಮಚಂದ್ರ ಭಟ್ ರವರೊಂದಿಗೆ  ದಿನಾಂಕ 04-09-2022 ರಂದು ಪಂಬೆತ್ತಾಡಿ ಸಹಕಾರಿ ಸಂಘದ ಬಳಿ ಆಯುಷ್ಮಾನ್ ಕಾರ್ಡ್ ಮಾಡಿಸುವರೇ ಬಂದವರು  ಕಾರ್ಡ್‌ ಮಾಡಿಸಿದ ಬಳಿಕ ಗಂಡನವರ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಮಯ  ಸಂಜೆ 05-00 ಗಂಟೆಗೆ   ನೆರೆ ಮನೆಯ ಪುರುಷೋತ್ತಮ ಭಟ್ ರವರು ಅವರ ಬಾಬ್ತುಆಲ್ಟೋ ಕಾರಿನಲ್ಲಿ ಬಂದವರು ಕಾರನ್ನು ಬೈಕ್ ಗೆ ಅಡ್ಡವಾಗಿ ನಿಲ್ಲಿಸಿದ್ದು ಪಿರ್ಯಾದಿದಾರರ ಗಂಡ ಮತ್ತು ಪಿರ್ಯಾದಿದಾರರು ಇಳಿದಾಗ  ಎದ್ರಿ ಪುರುಷೋತ್ತಮನು ಪಿರ್ಯಾದಿದಾರರ ಗಂಡನನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು  ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಪಿರ್ಯಾದಿದಾರರು ತಡೆಯಲು ಹೋದಾಗ  ಪಿರ್ಯಾದಿದಾರರಿಗೂ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಮುಂದೆ ನೀನಾಗಲಿ ನಿನ್ನ ಗಂಡನಾಗಲೀ ನೀರಿನ ವಿಷಯಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ   ನಂಬ್ರ  : 87/2022 ಕಲಂ  341,323, 504,506 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್‌ ಠಾಣೆ : ಪಿರ್ಯಾಧಿದಾರರಾದ ಪುರುಷೋತ್ತಮ ಭಟ್ ,ಪ್ರಾಯ:48 ವರ್ಷ, ತಂದೆ: ದಿ|| ಸುಬ್ರಾಯ ಭಟ್ ,ನೆಗಳಗುಂಡಿ ಮನೆ, ಪಂಬೆತ್ತಾಡಿ ಗ್ರಾಮ,ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ: 04-09-2022 ರಂದು ಸಾಯಂಕಾಲ 05:00 ಗಂಟೆಗೆ ಪಿರ್ಯಾದಿದಾರರಾದ  ಪುರುಷೋತ್ತಮ ಭಟ್ ರವರು ಸುಳ್ಯ ತಾಲೂಕು ಪಂಬೆತ್ತಾಡಿ ಗ್ರಾಮದ ಪಂಬೆತ್ತಾಡಿ ಹಾಲು ಸೊಸೈಟಿಯ ಹತ್ತಿರ ಇರುವ ಅಂಗಡಿಗೆ ಬಂದಾಗ ಪಿರ್ಯಾದಿದಾರರನ್ನು ಆರೋಪಿಗಳಾದ ರಾಮಚಂದ್ರ ಭಟ್, ಉಷಾ ಭಟ್ ಕಲ್ಚಾರು ಶ್ರೀವತ್ಸ,ಸುಬ್ರಹ್ಮಣ್ಯ ಭಟ್ ,ಶ್ರೀಮತಿ ಶ್ಯಾಮಲಾ ಭಟ್, ಮತ್ತು ಅಶೋಕ ರವರು ಸಮಾನ ಉದ್ದೇಶದಿಂದ ಪಿರ್ಯಾದಿದಾರರನ್ನು  ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಎಡಗೈನ ಕೊಲು ಕೈಗೆ ಮತ್ತು ಬಲಗಡೆಯ ಹಣೆಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ,ಇನ್ನೂ ಮುಂದಕ್ಕೆ ನಮ್ಮ ತಂಟೆಗೆ ಬಂದರೆ ನಿನ್ನನ್ನು  ಕೊಲ್ಲದೇ ಬಿಡುವುದಿಲ್ಲ, ಎಂದು ಹೇಳಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ   ನಂಬ್ರ  : 88 /2022 ಕಲಂ  143,147,148,341,504,324,506, ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಉಮಾನಾಥ ಪ್ರಾಯ 48 ವರ್ಷ ತಂದೆ: ದಿ ಗಿರಿಯಪ್ಪ ಮೂಲ್ಯ ವಾಸ: ನಾಯಿಲ್ ಮನೆ ನರಿಕೊಂಬು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 02-09-2022 ರಂದು ಬೆಳಿಗ್ಗೆ 7.30 ಗಂಟೆಗೆ ಫಿರ್ಯಾದಿದಾರರ ತಾಯಿಯು ಅತ್ತೆಯ ಮನೆಗೆ ಹೋದ ಸಮಯ ಅತ್ತೆಯು ಗಿರಿಜಾ ಹಾಗೂ ಅವರ ಮಗ ರಾಮಚಂದ್ರ ಪ್ರಾಯ 40 ವರ್ಷ, ಸ್ನಾನಗೃಹದಲ್ಲಿ ಕುಸಿದು ಬಿದ್ದು ಕೊಂಡಿರುವುದನ್ನು ನೋಡಿ ಫಿರ್ಯಾದಿದಾರರ ತಾಯಿಯು ಕೊಡಲೇ ಮನೆಗೆ ಬಂದು ತಿಳಿಸಿದಂತೆ ಫಿರ್ಯಾದಿದದಾರರು ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದು,  ಅಲ್ಲಿ ಪರೀಕ್ಷಿಸಿದ ವೈದ್ಯರು ಯಾವುದೋ ಕ್ರಿಮಿ ಕೀಟನಾಶಕ ವಿಷ ಪದಾರ್ಥ ಸೇವಿಸಿರುವುದಾಗಿ ತಿಳಿಸಿದ್ದು,  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನಲಾಕ್ ಆಸ್ವತ್ರೆಗೆ  ದಾಖಲಿಸಿರುವುದಾಗಿದೆ. ಫಿರ್ಯಾದಿದಾರರ ಅತ್ತೆಯು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 05-09-2022 ರಂದು ಬೆಳಿಗ್ಗೆ 8.33 ಗಂಟೆಗೆ  ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 35/2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-09-2022 10:46 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080