ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 5

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಫಯಾಜ್.ಕೆ ಪ್ರಾಯ: 27 ವರ್ಷ  ತಂದೆ: ಮೊಯಿದ್ದೀನ್ ಕುಂಞಿ ವಾಸ: ಅಜ್ಜಿನಡ್ಕ ಮನೆ, ಕೋಟೆಕಾರ್ ಗ್ರಾಮ, ಮಂಗಳೂರು ಎಂಬವರ ದೂರಿನಂತೆ ದಿನಾಂಕ 05-10-2022 ರಂದು ಪಿರ್ಯಾದಿದಾರರ ಬಾವ ಉಮ್ಮರ್ ಫಾರೂಕ್ ರವರ ಬಾಬ್ತು KA-20-N-3459 ನೇ ಕಾರಿನಲ್ಲಿ ತಾಯಿ ಮತ್ತು ತಂಗಿಯವರೊಂದಿಗೆ ಮೂಡಿಗೆರೆಗೆ ಕಾರ್ಯಕ್ರಮದ ನಿಮಿತ್ತ ಮುಡಿಪು ಕಡೆಯಿಂದ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 07:30 ಗಂಟೆಗೆ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ನೇತ್ರಾವತಿ ಬ್ರಿಡ್ಜ್ ಬಳಿ ತಲುಪಿದಾಗ ಬಿ.ಸಿ.ರೋಡ್ ಕಡೆಯಿಂದ KA-19-HA-4765 ನೇ ಸ್ಕೂಟರನ್ನು ಅದರ ಸವಾರ ರಾಧಕೃಷ್ಣ ನಾಯಕ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದು ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಬಿದ್ದ ಪರಿಣಾಮ ಬಲಕಾಲು ಮೊಣಗಂಟಿಗೆ, ತಲೆಗೆ ಗುದ್ದಿದ ಹಾಗೂ ರಕ್ತಗಾಯಗೊಂಡವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಜ್ಯೋತಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ  ಅ.ಕ್ರ 116/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪದ್ಮನಾಭ ಆಳ್ವ(47), ತಂದೆ: ಸಂಜೀವ ಆಳ್ವ, ವಾಸ: ಪಲಸ್ತಡ್ಕ ಮನೆ, ಹತ್ಯಡ್ಕ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 04-10-2022 ರಂದು ಮೋಟಾರು ಸೈಕಲ್‌ ನಂಬ್ರ: ಕೆಎ 21 ವಿ 8102 ನೇ ದ್ದನ್ನು ಅದರ ಸವಾರ ಚಿದಾನಂದ ಎಂಬವರು ಕೊಕ್ಕಡ ಕಡೆಯಿಂದ ಅರಸಿನಮಕ್ಕಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಸಂಜೆ 5.00 ಗಂಟೆಗೆ ಬೆಳ್ತಂಗಡಿ ತಾಲೂಕು ಹತ್ಯಡ್ಕ ಗ್ರಾಮದ ಪಲಸ್ತಡ್ಕ ಎಂಬಲ್ಲಿ ಮೋಟಾರು ಸೈಕಲ್‌ನ್ನು ದುಡುಕುತನದಿಂದ ಸವಾರಿ ಮಾಡಿ ಸವಾರನ ಚಾಲನ ಹತೋಟಿ ತಪ್ಪಿ ಮೋಟಾರು ಸೈಕಲ್‌ನೊಂದಿಗೆ ರಸ್ತೆಗೆ ಬಿದ್ದು ಹಣೆಗೆ ತಲೆಗೆ ಗುದ್ದಿದ ತೀವ್ರ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ .ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 117/2022 ಕಲಂ; 279,338ಭಾದಂಸಂ.  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದಿನೇಶ್ ಶೆಟ್ಟಿ (44) ತಂದೆ: ಗೋವಿಂದ ಶೆಟ್ಟಿ ವಾಸ: ಮಂಜಲೊಟ್ಟು ಮನೆ, ಸುಲ್ಕೇರಿ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 04.10.2022 ರಂದು ಸುಮಾರು ರಾತ್ರಿ 9.45 ಗಂಟೆಗೆ ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದ ಮಂಜುನಗರ ಎಂಬಲ್ಲಿ ನಾರಾವಿ-ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ ಗುರುವಾಯನಕೆರೆ ಅತ್ತ ಕಡೆಯಿಂದ ಬೈಕ್ ನಂಬ್ರ ಕೆ ಎ 70 ಹೆಚ್ 2001 ನೇದನ್ನು ಅದರ ಸವಾರ ಸಂತೋಷ ಎಂಬಾತನು  ದುಡುಕುತನ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರ ಎಡಬದಿಗೆ ಚಲಾಯಿಸಿ ಮಣ್ಣು ರಸ್ತೆಯ ಸಮೀಪವಿದ್ದ  ದೊಡ್ಡ ಮರಕ್ಕೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಬೈಕ್ ನೊಂದಿಗೆ ರಸ್ತೆಗೆ ಬಿದ್ದು ತಲೆಗೆ, ಮುಖಕ್ಕೆ, ಹೊಟ್ಟೆಗೆ ಹಾಗೂ ಎಡಕೈಗೆ ತೀವ್ರ ರಕ್ತದ ಗಾಯವಾಗಿ ಅಂಬುಲೆನ್ಸ್ ನಲ್ಲಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 60/2022 ಕಲಂ: 279, 304(A) IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರದೀಪ್‌ ಪ್ರಾಯ 40 ವರ್ಷ, ತಂದೆ: ಸಂಜೀವ ಪೂಜಾರಿ ವಾಸ: ಕಾಡಬೆಟ್ಟು ಗ್ರಾಮ ಪಿಲಾತ್ತಬೆಟ್ಟು ಗ್ರಾಮ ನೈನಾಡು ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಮಡಂತ್ಯಾರು ಪ್ರತೀಕ್ಷ ವೆಲ್ಡಿಂಗ್ ಶಾಫ್ ನ ಮಾಲಕರಾಗಿದ್ದು, ದಿನಾಂಕ: 04.10.2022 ರಂದು ಬೆಳಿಗ್ಗೆ  ಪಿರ್ಯಾದಿದಾರರು ವೆಲ್ಡಿಂಗ್ ಶಾಫ್ ಗೆ ಬಂದವರು  ಕೆಲಸದ ನಿಮಿತ್ತ  ತನ್ನ ಬಾಬ್ತು ಮೋಟಾರು ಸೈಕಲಿನಲ್ಲಿ ಬಳ್ಳಮಂಜಕ್ಕೆ ಹೋದವರು ಕೆಲಸ ಮುಗಿಸಿಕೊಂಡು ಸಂಜೆ  ಮೋಟಾರು ಸೈಕಲಿನಲ್ಲಿ ಮರಳಿ ಮಡಂತ್ಯಾರು ಕಡೆಗೆ ಮಡಂತ್ಯಾರು- ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬರುತ್ತಾ ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಬಂಗೇರಕಟ್ಟೆ ತಿರುವು ರಸ್ತೆ ಬಳಿ ತಲುಪುತ್ತಿದ್ದಂತೆ, ಪಿರ್ಯಾದಿದಾರರ ಎದುರಿನಿಂದ ಅಂದರೆ ಮಡಂತ್ಯಾರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಮೋಟಾರು ಸೈಕಲ್ ನಂಬ್ರ KA21V2444 ನೇದರ ಸವಾರ ಪಿರ್ಯಾದಿದಾರರ ಪರಿಚಯದ ವಿಖ್ಯಾತ್ ಎಂಬವನು ತನ್ನ ಮೋಟಾರು ಸೈಕಲನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ ಮೋಟಾರು ಸೈಕಲ್ ಸ್ಕಿಡ್ ಆಗಿ ಸವಾರ ವಿಖ್ಯಾತ್ ಹಾಗೂ ಸಹ ಸವರೆ ಚಂದ್ರಕಲಾ ಎಂಬವರು ಮೋಟಾರು ಸೈಕಲ್ ಸಮೇತಾ ಡಾಮಾರು ರಸ್ತೆಗೆ ಬಿದ್ದವರನ್ನು ಪಿರ್ಯಾದಿದಾರರು ಹಾಗೂ ಇತರರು ಸೇರಿ ಆರೈಕೆ ಮಾಡಿ ಚಿಕಿತ್ಸೆಯ ಬಗ್ಗೆ ಕಾಸಾಗಿ ವಾಹನದಲ್ಲಿ ಪುಂಜಾಲಕಟ್ಟೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆಸ್ಪತ್ರೆ ಮುಚ್ಚಿರುವುದರಿಂದ ಖಾಸಾಗಿ ಆಂಬ್ಯುಲೆನ್ಸ್ ನಲ್ಲಿ ಮಂಗಳೂರು ಏಜೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಚಂದ್ರಕಲಾ ಎಂಬವರನ್ನು ಚಿಕಿತ್ಸೆಯ ಬಗ್ಗೆ ಒಳರೋಗಿಯಾನ್ನಾಗಿ  ದಾಖಲು ಮಾಡಿಕೊಂಡಿದ್ದು, ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 76/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂತೋಷ, ಹೆಚ್‌ ,ಪ್ರಾಯ 29 ವರ್ಷ , ತಂದೆ: ಕೃಷ್ಣ ಹೆಚ್‌ವಾಸ: ಹಾಡಿಕಲ್ಲು ಮನೆ, ಮಡಪ್ಪಾಡಿ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ನಿನ್ನೆ ದಿನಾಂಕ: 04-10-2022 ರಂದು ತಾನು ಕೆಲಸ ಮಾಡಿಕೊಂಡಿರುವ ಸುಳ್ಯದ ಭಗವತಿ ಗ್ಯಾರೇಜ್‌ ನಲ್ಲಿ ಆಯುಧ ಪೂಜೆ ಕಾರ್ಯಕ್ರಮ ಮುಗಿಸಿ ಅವರ ಗೆಳೆಯ ಅರಂಬೂರಿನ ಉಮೇಶ್‌ ಎಂಬವರ ಗ್ಯಾರೇಜ್‌ ಗೆ ಆಯುಧ ಪೂಜೆಗೆಂದು ತನ್ನ ಮೋಟಾರ್‌ ಸೈಕಲ್‌ ನಂಬ್ರ KA21H0295 ನೇದರಲ್ಲಿ ಅವರ ಗೆಳೆಯ ರವಿ ಕುಮಾರ್‌ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಅರಂಬೂರು ಕಡೆಗೆ ಮಾಣಿ ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಾ ರಾತ್ರಿ ಸಮಯ ಸುಮಾರು 20:30 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ವಿಷ್ಣುಸರ್ಕಲ್‌ ಬಳಿ ತಲುಪುತ್ತಿದ್ದಂತೆ ಹಿಂದಿನಿಂದ ಅಂದರೆ ಸುಳ್ಯ ಕಡೆಯಿಂದ ಕಾರೊಂದು ಪಿರ್ಯದಿದಾರರ ಮೋಟಾರ್‌ ಸೈಕಲನ್ನು ಓವರ್‌ ಟೇಕ್‌ ಮಾಡಲು ಪ್ರಯತ್ನಿಸಿ  ಆತನ ತೀರಾ ಎಡಬದಿಗೆ ಬಂದು ಪಿರ್ಯದಿದಾರರ ಮೋಟಾರ್‌ ಸೈಕಲ್‌ ಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯದಿದಾರರು ಹಾಗೂ ಸಹಸವಾರ ರವಿಕುಮಾರ್‌ ಮೋಟಾರ್‌ ಸೈಕಲ್‌ ಸಮೇತ ಡಾಮಾರು ರಸ್ತೆಗೆ ಬಿದ್ದವರನ್ನು ನೋಡಿದ ಕೆಲವರು ಅಲ್ಲಿಗೆ ಬಂದು ಅವರನ್ನು ಉಪಚರಿಸಿ ನೋಡಲಾಗಿ ಪಿರ್ಯದಿದಾರರ ಬಲಕಾಲಿಗೆ, ತರಚಿದ ಹಾಗೂ ತಲೆಗೆ ಗುದ್ದಿದ ನೋವು ಹಾಗೂ ಸಹಸವಾರ ರವಿಕುಮಾರ್‌ ರವರಿಗೆ ಬಲಕಾಲಿನ ಪಾದಕ್ಕೆ ತರಚಿದ ಗಾಯವುಂಟಾಗಿರುತ್ತದೆ. ಅಪಘಾತ ಉಂಟು ಮಾಡಿದ ಕಾರಿನ ಚಾಲಕನು ಕಾರನ್ನು ನಿಲ್ಲಿಸದೇ ಅಲ್ಲಿಂದ ಹೋಗಿರುತ್ತಾನೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 115/2022 ಕಲಂ: 279,337 ಐಪಿಸಿ ಮತ್ತು ಕಲಂ 134(ಎ) ‍‍‍‍& (ಬಿ) ಐ.ಎಂ.ವಿ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ದರೋಡೆ  ಪ್ರಕರಣ: 1

  • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಜರುದ್ದೀನ್‌  ಪ್ರಾಯ (32) ತಂದೆ:ಉಮರಬ್ಬ ವಾಸ:ಬಜಲ್‌ ಮನೆ ಮಂಗಳೂರು ನಗರ ಎಂಬವರ ದೂರಿನಂತೆ ಪಿರ್ಯಾದುದಾರರಾದ ಅಜರುದ್ದೀನ್‌ (32) ಎಂಬಾತನು ದಿನಾಂಕ:04.10.2022 ರಂದು  ತನ್ನ ಪರಿಚಯದ ರಮೇಶ್‌ ಎಂಬಾತನನ್ನು ಬೇಟಿ ಮಾಡುವರೇ ಕಡಬ ತಾಲೂಕು ಮರ್ಧಾಳಕ್ಕೆ ಬಂದಿದ್ದು ನಂತರ ರಮೇಶ್‌ ಎಂಬಾತನು ಸಿಗದೇ ಇದುದರಿಂದ ವಾಪಾಸ್ಸು ಮಂಗಳೂರಿಗೆ ಹೋಗುವರೇ ಸುಬ್ರಹ್ಮಣ್ಯ–ಉಪ್ಪಿನಂಗಡಿ ರಸ್ತೆಯಲ್ಲಿ ಮಂಗಳೂರು ಕಡೆಗೆ ತನ್ನ ಬಾಬ್ತು KA-19 EX-9085 ಮೊಟಾರ್‌ ಸೈಕಲ್‌ನಲ್ಲಿ ಹೋಗುತಿದ್ದಾಗ ಸಮಯ ಸುಮಾರು ರಾತ್ರಿ 09.30 ಗಂಟೆಗೆ ಕಡಬ ತಾಲೂಕು ಮರ್ಧಾಳ ಜಂಕ್ಷನ್‌ನಿಂದ ಸುಮಾರು 1 ಕಿ.ಮೀ ದೂರದ ಬೊಳ್ಳೂರು ಕ್ರಾಸ್‌ ಬಳಿ  ಬರುತ್ತಿದ್ದಂತೆ ರಸ್ತೆಯ ಎಡಬದಿಯಲ್ಲಿದ್ದ 3 ಜನ ಅಪರಿಚಿತ ಯುವಕರು ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ಬಳಿಕ ನಿನ್ನಲ್ಲಿರುವ ಹಣವನ್ನು ಕೊಡು ಎಂದು ಏರು ದ್ವನಿಯಲ್ಲಿ ಕೇಳಿರುತ್ತಾರೆ. ಆದರೆ ಪಿರ್ಯಾದುದಾರರು ಹಣ ಕೊಡಲು ನಿರಾಕರಿಸಿದಾಗ ಆರೋಪಿತರು  ಪಿರ್ಯಾದುದಾರರನ್ನು ಬಲವಂತವಾಗಿ ಹಿಡಿದುಕೊಂಡು ಕೈಯಿಂದ ಹಲ್ಲೆ ಮಾಡಿ ನಂತರ ಪಿರ್ಯಾದುದಾರರ ಪರ್ಸ್ ಮತ್ತು ಮೊಬೈಲ್‌ ಹಾಗೂ ಮೋಟಾರ್‌ ಸೈಕಲ್‌ನ್ನು ಕಿತ್ತುಕೊಂಡು ಬಳಿಕ ಸದ್ರಿ ಆರೋಪಿತರು “ನೀನು ಈ ವಿಷಯವನ್ನು ಯಾರಲ್ಲಾದರೂ ಹೇಳದರೇ ಅಥವಾ ಪೊಲೀಸು ಠಾಣೆಯಲ್ಲಿ ಕೇಸು ನೀಡಿದರೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 86/2022 ಕಲಂ:341.323.392.506 ಜೊತೆಗೆ 34 IPC-1860  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜೋಯಿ ವಿ ಡಿ ಪ್ರಾಯ: 52 ವರ್ಷ ತಂದೆ: ದಿ!! ದೇವಾಸ್ಯ ವಾಸ: ಆಲಂಗ ಮನೆ ಇಚ್ಲಂಪಾಡಿ  ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಚರ್ಚ್ ನಲ್ಲಿದ್ದ ಸಮಯ ರಾತ್ರಿ ಸುಮಾರು 11.00 ಗಂಟೆಯ ಸಮಯಕ್ಕೆ ಪರಿಚಯದ ನವನೀತ್ ಎಂಬಾತನು ಪಿರ್ಯಾದುದಾರರ ಬಳಿಗೆ ಬಂದು ಶಿರಾಡಿ ವರೆಗೆ ಬಿಡುವಂತೆ ಹೇಳಿದಾಗ ಪಿರ್ಯಾದುದಾರರು ಬಿಡಲು ಹೋದಾಗ ಕಡಬ ತಾಲೂಕು, ಶಿರಾಡಿ ಗ್ರಾಮದ ಪುಲ್ಲೋಟು ಎಂಬಲ್ಲಿಗೆ ತಲುಪಿದಾಗ ನವನೀತನು ಸ್ಕೂಟರ್ ನಿಲ್ಲಿಸುವಂತೆ ಹೇಳಿದ್ದು, ಸ್ಕೂಟರ್ ನಿಲ್ಲಿಸಿದಾಗ ಅಲ್ಲೆ ಪಕ್ಕದಲ್ಲಿ ಅಟೋ ರಿಕ್ಷಾ ಒಂದು ನಿಲ್ಲಿಸಿದ್ದು ಅಟೋ ರಿಕ್ಷಾದಿಂದ ಪಿರ್ಯಾದುದಾರರ ಪರಿಚಯದ ರಾಹುಲ್ ಹಾಗೂ ಸುಜಿತ್ ಎಂಬವರು ಇಳಿದು ಮೂವರು ಅವಾಚ್ಯ ಶಬ್ದಗಳಿಂದ ಬೈದು ರಾಹುಲ್ ಕೈಯಿಂದ ಕುತ್ತಿಗೆಯ ಹಿಂಬದಿಗೆ ಮುಖಕ್ಕೆ ಗುದ್ದಿ ಕಾಲಿನಿಂದ ಹೊಟ್ಟೆಗೆ ತುಳಿದಿರುತ್ತಾನೆ. ನವನೀತ್ ದೊಣ್ಣೆಯಿಂದ ತಲೆಗೆ ಹಾಗೂ ಬಲಬದಿ ಭುಜಕ್ಕೆ ಹೊಡೆದಿರುತ್ತಾನೆ. ಸುಜಿತ್ ಕಲ್ಲಿನಿಂದ ಬಲ ಕಾಲ ಮೊಣಗಂಟಿಗೆ ಹೊಡೆದಿರುತ್ತಾನೆ. ಹಲ್ಲೆಯಿಂದ ಬಲಕಾಲ ಮೊಣಗಂಟಿಗೆ ರಕ್ತಗಾಯ,, ಬಲಕಾಲ ಕೋಲು ಕಾಲು, ಮೂಗು, ಹಣೆಗೆ ತರಚಿದ ಗಾಯ ಹಾಗೂ ಬಲಭುಜಕ್ಕೆ,ಕುತ್ತಿಗೆಯ ಹಿಂಬಾಗ, ಹೊಟ್ಟೆಗೆ ಗುದ್ದಿದ ಗಾಯವಾಗಿರುತ್ತದೆ ವಿಪರೀತ ನೋವು ಕಾಣಿಸಿಕೊಂಡಿರುವುದರಿಂದ ದಿನಾಂಕ: 05-10-2022 ಬೆಳಿಗ್ಗೆ ಪಿರ್ಯಾದುದಾರರ ಪತ್ನಿ ಹಾಗೂ ಮಗ ಖಾಸಗಿ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುರುತ್ತಾರೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲ್ಲದೇ ಬಿಡುವುದಿಲ್ಲ. ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ.ಪಿರ್ಯಾದುದಾರರು ಚಲಾಯಿಸುತ್ತಿದ್ದ ಸ್ಕೂಟರನ್ನು ಕೂಡಾ ಜಖಂಗೊಳಿಸಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 107/2022 ಕಲಂ 323.324.427.504.506. ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಾರೂಕ್ (27) ತಂದೆ: ಅಬ್ದುಲ್ ಖಾದರ್ ವಾಸ: ಹೆಜಮಾಡಿ ಮನೆ, ಕಾಪು ಗ್ರಾಮ, ಉಡುಪಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರರು ತನಗೆ ಪರಿಚಯದ ಮಂಗಳೂರಿನ ಕಾಲೇಜಿನ ವಿದ್ಯಾರ್ಥಿನಿಯರಿಬ್ಬರೊಂದಿಗೆ ದಿನಾಂಕ 04.10.2022 ರಂದು ಮಂಗಳೂರಿನಿಂದ ಮಡಿಕೇರಿಯ ಪ್ರವಾಸ ತಾಣವನ್ನು ನೋಡಲಿಕ್ಕೆ, ಕೆಎ 20 ಎ 0278 ನೇ ನಂಬರ್ ನ ಕಾರಿನಲ್ಲಿ ಹೋಗುತ್ತಿರುವರೇ ಸಮಯ ಸುಮಾರು 21:00 ಗಂಟೆಗೆ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಬಳಿ ತಲುಪುತ್ತಿದಂತೆ ಸುಮಾರು 15 ರಿಂದ 20 ಜನರು ಕಾರು ಮತ್ತು ಮೋಟಾರ್ ಸೈಕಲ್ ನಲ್ಲಿ ಬಂದು ಪಿರ್ಯಾದುದಾರರ ಬಾಬ್ತು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ, ಪಿರ್ಯಾದುದಾರರ ಬಾಬ್ತು ಕಾರು ಬೇರೊಂದು ವಾಹನಕ್ಕೆ ತಾಗಿರುವ ವಿಚಾರವಾಗಿ ಅವ್ಯಾಚವಾಗಿ ಬೈದು  ರಸ್ತೆಯ ಬದಿಯಲ್ಲಿರುವ ವಾಹನವನ್ನು ಸರಿಯಾಗಿ ನೋಡಿಕೊಂಡು ಬರಲು ಆಗುವುದಿಲ್ವ ಎಂದು ಕೇಳಿ ಕೈಯಿಂದ ಹಲ್ಲೆ ಮಾಡಿ, ಕಾಲಿನಿಂದ ತುಳಿದು, ನಿನ್ನನ್ನು ಕೊಂದೆ ಬಿಡುತ್ತೆವೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ, ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ: 116/2022 ಕಲಂ: 143,147,341,323,504,506,R/W 149 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 05-10-2022 ರಂದು ಬಂಟ್ವಾಳ ನಗರ ಠಾಣೆಯಲ್ಲಿ ಕಲಂ: 506, 323 ಐಪಿಸಿ ಮತ್ತು ಕಲಂ 7, 8 ಪೋಕ್ಸೊ ಕಾಯ್ದೆ    ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-10-2022 12:37 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080