ಅಪಘಾತ ಪ್ರಕರಣ: 04
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಾಧವ, ಪ್ರಾಯ:46 ತಂದೆ: ದಿ.ನೆಮಣ್ಣಗೌಡವಾಸ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಕ್ವಾಟ್ರಸ ಕಸಬಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ. ದಿನಾಂಕ 04-11-2022 ರಂದು ಪಿರ್ಯಾಧಿದಾರರು ಹಾಗೂ ಪಿಸಿ 2309 ನೇಯವರಿಗೆ ರಾತ್ರಿ ರೌಂಡ್ಸ್ ಕರ್ತವ್ಯಕ್ಕೆ ನೇಮಿಸಿದ ಪ್ರಕಾರ ಪಿರ್ಯಾಧಿದಾರರು ತನ್ನ ಖಾಸಗಿ ಮೋಟಾರ ಸೈಕಲ್ ನಲ್ಲಿ ಹಾಗೂ ಪಿಸಿ 2309 ನೇ ನಾಗರಾಜ್ ಕೆ ಅವರ ಬಾಬ್ತು ಖಾಸಗಿ ಮೋಟಾರ್ ಸೈಕಲ್ ನಂಬ್ರ KA-19-HH-2674 ನೇದರಲ್ಲಿ ವಗ್ಗ, ಸಿದ್ದಕಟ್ಟೆ ರಾಯಿ ಪರಂಗಿಪೇಟೆ ಮುಂತಾದ ಸ್ಥಳಗಳಲ್ಲಿ ಸಂಚರಿಸಿಕೊಂಡು ವಾಪಾಸು ಮಣಿಹಳ್ಳ ಕಡೆಗೆ ಹೋಗುವಾಗ ದಿನಾಂಕ 05-11-2022 ಬೆಳಿಗ್ಗೆ 04.00 ಗಂಟೆಗೆ ಬಂಟ್ವಾಳ ತಾಲೂಕು ಬಿ ಕಸ್ಬಾ ಗ್ರಾಮದ ನಾರಾಯಣ ಗುರು ಸರ್ಕಲ್ ಬಳಿ ತಲುಪುವಾಗ ಪಿರ್ಯಾದಿದಾರರ ಮುಂದಿನಿಂದ ಸವಾರಿ ಮಾಡಿಕೊಂಡು ಹೋಗುತ್ತಿದ್ದ ನಾಗರಾಜ್ ರವರ KA-19-HH-2674 ನೇ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆಗೆ ಬಿದ್ದರನ್ನು ಹಿಂದುಗಡೆಯೇ ಇದ್ದ ಪಿರ್ಯಾಧಿದಾರರು ಹೋಗಿ ಡಾಮಾರು ಮಾರ್ಗಕ್ಕೆ ಬಿದ್ದವರನ್ನು ಎಬ್ಬಿಸಿ ಉಪಚರಿಸಿ ವಿಚಾರಿಸಲಾಗಿ ನಾಯಿಯೊಂದು ರಸ್ತೆಗೆ ಅಡ್ಡ ಬಂದು ನಿಯಂತ್ರಣ ತಪ್ಪಿಬಿದ್ದಿರುವುದಾಗಿ ತಿಳಿಸಿರುವುದಾಗಿದೆ. ರಸ್ತೆಗೆ ಬಿದ್ದ ಪರಿಣಾಮ ನಾಗರಾಜ್ ರವರ ಎಡ ಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯವಾಗಿದ್ದು ಕೂಡಲೇ ಪ್ರಥಮ ಚಿಕಿತ್ಸೆ ಮಾಡಿ ವಾಹನವೊಂದರಲ್ಲಿ ಮಂಗಳೂರಿನ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 136/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸ್ನೇಹಿತ್, ಪ್ರಾಯ 21 ವರ್ಷ, ತಂದೆ: ಸುರೇಶ್ ಮಡಿವಾಳ, ವಾಸ: 7300/2, ನಿನ್ನಿಕಲ್ಲು ಮನೆ, ಉಪ್ಪಿನಂಗಡಿ ಅಂಚೆ & ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ , ದಿನಾಂಕ 03-11-2022 ರಂದು 19:45 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ಧನುಷ್ ಎಂಬವರು KA-19-EF-3166 ನೇ ನೋಂದಣಿ ಮೋಟಾರ್ ಸೈಕಲನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಉಪ್ಪಿನಂಗಡಿ ಕಡೆಯಿಂದ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪದ್ಮವಿದ್ಯಾ ಪೆಟ್ರೋಲ್ ಪಂಪ್ ಬಳಿ ಯಾವುದೇ ಸೂಚನೆ ನೀಡದೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಪೆಟ್ರೋಲ್ ಪಂಪ್ ಕಡೆಗೆ ಹೋಗಲು ಹೆದ್ದಾರಿಗೆ ಅಡ್ಡಲಾಗಿ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರ ತಮ್ಮ ಕೌಶಿತ್ ರವರು ಸವಾರರಾಗಿ ಗಾಂಧಿಪಾರ್ಕ್ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-70-H-2760 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಮೋಟಾರ್ ಸೈಕಲ್ ಅಪಘಾತವಾಗಿ, ಸ್ಕೂಟರ್ ಸವಾರ ಕೌಶಿತ್ ರವರಿಗೆ ಮುಖದ ಬಲಭಾಗಕ್ಕೆ ಹಾಗೂ ಮೊಣಕಾಲಿಗೆ ಗಾಯವಾಗಿರುತ್ತದೆ. ಕೌಶಿತ್ ರವರಿಗೆ ಉಪ್ಪಿನಂಗಡಿಯ ಧನ್ವಂತರಿ ಕ್ಲಿನಿಕ್ ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 170/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ ಅನಿತಾ ಬಿ. ಪ್ರಾಯ 32 ವರ್ಷ, ಗಂಡ: ರಮೇಶ ಗೌಡ, ವಾಸ:ಮೇಲಿನ ಅಜಿರ ಮನೆ, ಬಾರ್ಯ ಅಂಚೆ & ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ. ದಿನಾಂಕ 04-11-2022 ರಂದು 08:30 ಗಂಟೆಗೆ ಆರೋಪಿತೆ ಸ್ಕೂಟರ್ ಸವಾರೆ ಅನುಷಾ ಎಂಬವರು KA-70-H-6014 ನೇ ನೋಂದಣಿ ನಂಬ್ರದ ಸ್ಕೂಟರನ್ನು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಕಡವಿನಬಾಗಿಲು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ಪೂರ್ತಿ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ರಾಜ್ಯ ಹೆದ್ದಾರಿಯ ಬದಿಯಲ್ಲಿ ಕರಾಯ ಕಡೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ಪಿರ್ಯಾದುದಾರರಾದ ಅನಿತಾ.ಬಿ ರವರಿಗೆ ಸ್ಕೂಟರ್ ಅಪಘಾತವಾಗಿ, ಪಿರ್ಯಾದುದಾರರು ರಸ್ತೆಗೆ ಬಿದ್ದು, ಬಲತೊಡೆಯ ಬುಡದಲ್ಲಿ ಗುದ್ದಿದ ತೀವ್ರ ನೋವಿರುವ ಒಳಗಾಯ, ಎಡಭುಜಕ್ಕೆ ಗುದ್ದಿದ ನೋವಾಗಿರುತ್ತದೆ. ಗಾಯಾಳು ಪಿರ್ಯಾದುದಾರರನ್ನು ಚಿಕಿತ್ಸೆಯ ಬಗ್ಗೆ ಉಪ್ಪಿನಂಗಡಿಯ ಧನ್ವಂತರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 171/2022 ಕಲಂ: 279, 337 ಐಪಿಸಿ & 134(ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ತನಿಯಪ್ಪ ಪ್ರಾಯ:35 ತಂದೆ: ಮಂಚ್ಚ ವಾಸ:ದರ್ಖಾಸು ಮನೆ ಆಲಂಕಾರು ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ, ಆಟೋ ರಿಕ್ಷಾ ಚಾಲಕನಾಗಿದ್ದು ದಿನಾಂಕ:04.11.2022 ರಂದು ತನ್ನ ಆಟೋರಿಕ್ಷಾದಲ್ಲಿ ಬಾಡಿಗೆ ನಿಮಿತ್ತ ಹೊರಟು ಕಡಬ ತಾಲೂಕು ಪೆರಾಬೆ ಗ್ರಾಮದ ಜರಿಗುಂಡಿ ಎಂಬಲ್ಲಿ ಆಲಂಕಾರು-ಆರ್ಲ ಡಾಮಾರು ರಾಜ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ ಸಂಜೆ 06.30 ಗಂಟೆಗೆ ತಲುಪುತ್ತಿದ್ದಂತೆ ಪಿರ್ಯಾದುದಾರರ ಎದುರುಗಡೆಯಿಂದ KA-21 B-9045ನೇ ಆಟೋರಿಕ್ಷಾ ಚಾಲಕನಾದ ಆರೋಪಿತನು ಸುರಳಿ ಕಡೆಗೆ ಹೋಗುತಿದ್ದವನು ತನ್ನ ಎದುರು ಬರುತಿದ್ದ ವಾಹನ ಕಂಡು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಆಟೋರಿಕ್ಷಾದ ಬ್ರೇಕನ್ನು ಒಮ್ಮೆಲೇ ಹಾಕಿದ ಪರಿಣಾಮ ಸದ್ರಿ KA-21 B-9045ನೇ ಆಟೋರಿಕ್ಷಾವು ಡಾಮಾರು ರಸ್ತೆಯ ಎಡಬದಿಗೆ ಬಿದ್ದಿದ್ದು ಆಟೋರಿಕ್ಷಾದಲ್ಲಿದ್ದ ಚಾಲಕನಾದ ಆರೋಪಿತ ರಮೇಶ್ ಎಂಬಾತನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಆದರೆ ಆಟೋರಿಕ್ಷಾದಲ್ಲಿ ಹಿಂಬದಿ ಕುಳಿತ ಮೂರ ಜನ ಪ್ರಯಾಣಿಕರ ಪೈಕಿ ಒಬ್ಬನಾದ ವೈಸ್ಲಿ ವರ್ಗಿಸ್ ಎಂಬವರಿಗೆ ಕೈ ಬೆರಳು ಹಾಗೂ ಕಾಲುಗಳಿಗೆ ರಕ್ತಗಾಯ ಹಾಗೂ ತರಚಿದ ರಕ್ತಗಾಯವಾಗಿರುತ್ತದೆ ಸದ್ರಿ ಗಾಯಾಳುವನ್ನು ಸ್ಥಳದಲ್ಲಿದ್ದ ಪ್ರಯಾಣಿಕರು ಮತ್ತು ಪಿರ್ಯಾದುದಾರರು ಸೇರಿಕೊಂಡು ಉಪಚರಿಸಿ ಬಳಿಕ ಪಿರ್ಯಾದುದಾರರ ಆಟೋರಿಕ್ಷಾದಲ್ಲಿ ಗಾಯಾಳುವನ್ನು ಆಲಂಕಾರು ವರೆಗೆ ಕರೆದುಕೊಂಡು ಹೋಗಿ ಆಲಂಕಾರಿನಿಂದ 108 ವಾಹನದಲ್ಲಿ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 95/2022 ಕಲಂ: ಕಲಂ:279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ಪ್ರಕರಣ: 02
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಸಾದಿಕ್ ಪ್ರಾಯ: 30 ವರ್ಷ ತಂದೆ:ಸಯ್ಯದ್ , ಸಾಗರ್ ಅಪಾರ್ಟ್‌ಮೆಂಟ್, ಮದ್ದಡ್ಕ, ಕುವೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು, ಎಂಬವರ ದೂರಿನಂತೆ. ಫಿರ್ಯಾದಿದಾರರು ಮತ್ತು ಅವರ ಹೆಂಡತಿಗೆ ಸುಮಾರು 4 ವರ್ಷಗಳಿಂದ ವಿನಾ ಕಾರಣ ಜಗಳವಾಗುತ್ತಿದ್ದು ದಿನಾಂಕ:04.11.2022 ರಂದು ರಾತ್ರಿ 8.00 ಗಂಟೆಗೆ ಜಗಳವಾಗಿದ್ದು ಈ ಸಮಯ ಫಿರ್ಯಾದಿದಾರರ ಪತ್ನಿಯು ಫಿರ್ಯಾದಿದಾರರ ರೂಮಿನ ಬಾಗಿಲನ್ನು ಹಾಕಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಹೊರಗಿನಿಂದ ಚಿಲಕ ಹಾಕಿದ್ದು ಆ ವೇಳೆಗೆ ಅಲ್ಲಿಗೇ 07 ಜನ ಆರೋಪಿಗಳು ಬಂದಿದ್ದು ಅವರುಗಳ ಪೈಕಿ ಅಶ್ರಫ್ ಎಂಬಾತನು ಮರದ ದೊಣ್ಣೆಯಿಂದ ಹಾಗು ಸಮದ್ ಎಂಬಾತನು ಕಬ್ಬಿಣದ ರಾಡಿನಿಂದ ಫಿರ್ಯಾದಿದಾರರನ್ನು ನೆಲಕ್ಕೆ ದೂಡಿ ಹಾಕಿ ಸೊಂಟಕ್ಕೆ, ಎದೆಗೆ ಕೈಗಳಿಂದ ಹೊಡೆದು ಉಳಿದ ಆರೋಪಿಗಳು ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುವುದಾಗಿದೆ. ಆ ಸಮಯ ಫಿರ್ಯಾದಿದಾರರ ಅಕ್ಕ ಮತ್ತು ಬಾವ ಬರುವುದನ್ನು ನೋಡಿ ಆರೋಪಿಗಳು ಮರದ ದೊಣ್ಣೆ ಮತ್ತು ರಾಡ್ ಸಮೇತ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅಕ್ರ: 62/2022 ಕಲಂ: 143, 147,148,448,504,506,323,324 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜೊಯಿ ಕೆ ಎ ,ಪ್ರಾಯ: 47 ವರ್ಷ,ತಂದೆ:ದಿ | ಅಬ್ರಾಹಂ, ವಾಸ:ಹೊಸಗದ್ದೆ ಮನೆ, ಚಿಬಿದ್ರೆ ಗ್ರಾಮ, ಬೆಳ್ತಂಗಡಿ ತಾಲೂಕು. ಎಂಬವರ ದೂರಿನಂತೆ. ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 26-10-2022 ರಂದು ರಾತ್ರಿ 10-30 ಗಂಟೆಗೆ ಪಿರ್ಯಾದಿದಾರರು ಹೆಂಡತಿ ಮಕ್ಕಳು ಮತ್ತು ತಾಯಿಯೊಂದಿಗೆ ಮನೆಯಲ್ಲಿ ಇರುವಾಗ ಪಿರ್ಯಾದಿದಾರರ ಮನೆಯ ನಾಯಿ ಜೋರಾಗಿ ಬೊಗಳುವುದನ್ನು ಕೇಳಿದ ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ಹೆಂಡತಿ ಶರ್ಲಿ ಎಂಬುವವರು ಟಾರ್ಚ್‌ನ್ನು ಹಿಡಿದುಕೊಂಡು ಅಂಗಳಕ್ಕೆ ಬಂದು ಟಾರ್ಚ್‌ನ ಬೆಳಕನ್ನು ನಮ್ಮ ಕೃಷಿ ಜಾಗದ ಕಡೆಗೆ ಹಾಯಿಸಿದಾಗ ಆರೋಪಿಗಳಾದ ಲಿಸ್ಸಿ ಸನ್ನಿ, ಹೆವೆನ್ ಸನ್ನಿ ರವರು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಆರೋಪಿಗಳ ಪೈಕಿ ಹೆವೆನ್ ಸನ್ನಿ ರವರ ಕೈಯಲ್ಲಿ ಉದ್ದ ಮಚ್ಚು, ಮತ್ತು ಯಾವುದೋ ಕ್ಯಾನ್ ಇದ್ದು ನಂತರ ಲಿಸ್ಸಿ ಸನ್ನಿ ರವರ ಕೈಯಲ್ಲಿ ಬಾಟಲಿ ಮತ್ತು ಟಾರ್ಚ್ ಹಿಡಿದುಕೊಂಡಿದ್ದು ರಬ್ಬರ್ ಮರದ ಸುತ್ತಲೂ ಅಲ್ಲಲ್ಲಿ ದ್ರವರೂಪದ ಪದಾರ್ಥವನ್ನು ಹಾಕುತ್ತಿದ್ದು ಅವರನ್ನು ನೋಡಿದ ಪಿರ್ಯಾದಿದಾರರನ್ನು ಉದ್ದೇಶಿಸಿ ಆರೋಪಿತರು ಈ ಜಾಗ ನಮಗೆ ಸೇರಿದ್ದು ಇಲ್ಲಿ ಇರುವ ಕೃಷಿಬೆಳೆಗಳನ್ನು ವಿಷಹಾಕಿ ಸಾಯಿಸಿ ಜಾಗವನ್ನು ಸ್ವಾದೀನ ಪಡಿಸಿಕೊಳ್ಳುತ್ತೇವೆ. ಈ ಜಾಗದ ವಿಷಯಕ್ಕೆ ಬಂದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆಯನ್ನು ಹಾಕಿ ಕೈಯಲ್ಲಿ ಇದ್ದ ಮಚ್ಚು, ಕ್ಯಾನ್, ಬಾಟಲಿ, ಮತ್ತು ಟಾರ್ಚ್ ನ್ನು ಆರೋಪಿತರು ಹಿಡಿದುಕೊಂಡು ಹೋಗಿರುತ್ತಾರೆ. ನಂತರ ಮನೆಗೆ ಬಂದು ಯಾವುದೇ ದೂರು ನೀಡುವುದು ಬೇಡವೆಂದು ನಿರ್ದರಿಸಿ ಮನೆಯಲ್ಲಿ ಇದ್ದು ಸುಮಾರು 10 ದಿನಗಳ ನಂತರ ಪಿರ್ಯಾದಿದಾರರ ವರ್ಗ ಜಾಗದಲ್ಲಿ ಇರುವ 12 ರಬ್ಬರ್ ಮರಗಳು 2 ಹಲಸಿನ ಮರ 10 ಅಡಿಕೆ ಮರ ಮತ್ತು 10 ಬಾಳೆಗಿಡಗಳು ಒಣಗಿದಂತೆ ಕಂಡು ಬರುತ್ತಿದ್ದು. ಮತ್ತು ಅದರ ಬುಡದ ಸುತ್ತಲೂ ಇರುವ ಹುಲ್ಲುಗಳು ಒಣಗಿರುವುದಾಗಿದೆ. ಈ ಕೃತ್ಯದಿಂದ ಪಿರ್ಯಾದಿದಾರರಿಗೆ ಸುಮಾರು 50 ಸಾವಿರದಷ್ಟು ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ 82/2022 ಕಲಂ: 447,506,427, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.