ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಯೊಗೀಶ್ .ಎಸ್ ಪ್ರಾಯ 25 ವರ್ಷ, ತಂದೆ: ಸೊಮಪ್ಪ ನಾಯ್ಕ, ವಾಸ: ಮುದ್ರಾಜೆ ಮನೆ, ಕೆದಿಲ ಅಂಚೆ ಮತ್ತು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 05-12-2022 ರಂದು 18-45 ಗಂಟೆಗೆ 1 ನೇ ಆರೋಪಿ KSRTC ಬಸ್ ನಿರ್ವಾಹಕ ಹನುಮಪ್ಪರವರು KA-19-F-3316 ನೇ ನೋಂದಣಿ ನಂಬ್ರದ KSRTC ಬಸ್ಸಿಗೆ ಪ್ರಯಾಣಿಕರು ಹತ್ತಿದ ಬಳಿಕ ನಿರ್ಲಕ್ಷತನದಿಂದ ಬಾಗಿಲು ಹಾಕದೇ ಹಾಗೂ 2 ನೇ ಆರೋಪಿ ಬಸ್ ಚಾಲಕ ಹರೀಶರವರು ಬಾಗಿಲು ಹಾಕಿರುವುದನ್ನು ದೃಢಪಡಿಸಿಕೊಳ್ಳದೇ ಬಸ್ಸನ್ನು ಪುತ್ತೂರು - ಉಪ್ಪಿನಂಗಡಿ ಸಾರ್ವಜನಿಕ ರಸ್ತೆಯಲ್ಲಿ ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿ ತಿರುವಿನಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಬಸ್ಸಿನಲ್ಲಿ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ಪಿರ್ಯಾದುದಾರರ ತಂದೆ ಸೋಮಪ್ಪ ನಾಯ್ಕ, 52 ವರ್ಷರವರು ಬಸ್ಸಿನ ಬಾಗಿಲಿನ ಮೂಲಕ ಬಸ್ಸಿನಿಂದ ಹೊರಗೆ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಾಯಗೊಂಡು ಚಿಕಿತ್ಸೆಗೆ ಆಂಬುಲೆನ್ಸಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತರಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ184/2022 ಕಲಂ: 279, 304(A)  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನವೀನ್‌ ಗೌಡ (37), ತಂದೆ: ರಾಮಣ್ಣ ಗೌಡ, ವಾಸ: ಪರಾರಿ ಮನೆ, ನಡ ಗ್ರಾಮ, ಪೆರ್ಮಾಣು ಅಂಚೆ, ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ ದಿನಾಂಕ: 05-12-2022 ರಂದು ಶೇಖರ ಗೌಡ ಎಂಬವರು ಇತರ ಸಹಪ್ರಯಾಣಿಕರೊಂದಿಗೆ ಕೆಎ 21 A 4081 ನೇ ಆಟೋ ರಿಕ್ಷಾದಲ್ಲಿ ಸಹಪ್ರಯಾಣಿಕರಾಗಿ ಕುಳಿತುಕೊಂಡು ಆಟೋ ರಿಕ್ಷಾವನ್ನು ಅದರ ಚಾಲಕ ಪ್ರಮೋದ್‌ ಎಂಬವರು ಕಿಲ್ಲೂರು ಕಡೆಯಿಂದ ಲಾಯಿಲಾ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ಬೆಳಿಗ್ಗೆ 6.30 ಗಂಟೆಗೆ ಬೆಳ್ತಂಗಡಿ ತಾಲೂಕು ನಡ ಗ್ರಾಮದ, ಕುದ್ಪುಲ ಎಂಬಲ್ಲಿಗೆ ತಲುಪುತ್ತಿದ್ದಂತೆ  ಆಟೋ ರಿಕ್ಷಾವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ  ಆಟೋ  ರಿಕ್ಷಾ ಚಾಲಕನ ಚಾಲನಾ ಹತೋಟಿ ತಪ್ಪಿ ಆಟೋ ರಿಕ್ಷಾ ಎಡಮಗ್ಗುಲಾಗಿ ರಸ್ತೆಗೆ ಮಗುಚಿಬಿದ್ದು ಆಟೋ ರಿಕ್ಷಾದಲ್ಲಿದ್ದ ಶೇಖರ ಗೌಡ ಎಂಬವರು ಎಡಕಾಲಿನ ಪಾದದ ಹಿಮ್ಮಡಿಗೆ, ಎಡಕೈಯ ಬೆರಳುಗಳಿಗೆ ರಕ್ತ ಗಾಯಗೊಂಡು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ .ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 156/2022 ಕಲಂ; 279 337,  ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪುರುಸೋತ್ತಮ 45 ವರ್ಷ ತಂದೆ: ಕೊರಗಪ್ಪ ಪೂಜಾರಿ ವಾಸ:2/72-3 ದಡ್ಡಲಕಾಡು ಮನೆ, ಮುಡನಡುಗೋಡು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 05-12-2022 ರಂದು ಪಿರ್ಯಾದಿದಾರರು KA-19-AC-5185 ನೇ ಆಟೋರಿಕ್ಷಾದಲ್ಲಿ ಚಾಲಕನಾಗಿ ಬಾಡಿಗೆ ನಿಮಿತ್ತ ಬಿ ಸಿ ರೋಡ್ ಎಂಬಲ್ಲಿಗೆ ಬಂದು ಅಲ್ಲಿಂದ ವಾಪಾಸು ಬಾಡಿಗೆ ನಿಮಿತ್ತ ಪ್ರಯಾಣಿಕರಾದ ಹೃತಿಕ ಎಂಬವರನ್ನು ಕರೆದುಕೊಂಡು ಮಂಗಳೂರು ಕಡೆಗೆ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 08:00 ಗಂಟೆಗೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ತಲಪಾಡಿ ಬಸ್ಸ್ ನಿಲ್ದಾಣದ ಬಳಿ ತಲುಪಿದಾಗ ಹಿಂದಿನಿಂದ ಅಂದರೆ ಬಿ ಸಿ ರೋಡು ಕಡೆಯಿಂದ ಕಾರೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಆಟೋರಿಕ್ಷಾ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಪರಿಣಾಮ ಆಟೋರಿಕ್ಷಾ ಚಾಲಕ ಪುರುಷೋತ್ತಮ್ ರವರಿಗೆ ಹಣೆಗೆ, ಎಡ ಭಾಗ ಕೆನ್ನೆಗೆ, ಗಲ್ಲಕ್ಕೆ, ಮೆಲ್ತುಟಿಗೆ, ಬಲಭಾಗ ಭುಜಕ್ಕೆ ಗುದ್ದಿದ ರಕ್ತ ಗಾಯ ಮತ್ತು ತರಚಿರ ಗಾಯ ಹಾಗೂ ಪ್ರಯಾಣಿಕರಾದ ಹೃತಿಕ ಎಂಬವರಿಗೆ ಹಿಂಬದಿ ತಲೆಗೆ ಗುದ್ದಿದ ರಕ್ತ ಗಾಯ, ಬಲ ಮತ್ತು ಎಡ ಕೈಗಳಲ್ಲಿ ತರಚಿದ ಗಾಯವಾಗಿದ್ದು ಬಳಿಕ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಇಬ್ಬರು ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಅಪಘಾತಪಡಿಸಿದ ಕಾರು ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 152/2022 ಕಲಂ: 279, 337, ಐಪಿಸಿ 134 (ಎ ಮತ್ತು ಬಿ),187 ಐ ಎಮ್ ವಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದೇವಿ ಪ್ರಸಾದ್ (34) ವರ್ಷ.ತಂದೆ: ಭೋಜ ಪೂಜಾರಿ.ವಾಸ: 1-155 ಕಿನ್ನಿಕಟ್ಟ ಮನೆ, ಮಲ್ಲೂರು ಅಂಚೆ,ಮಲ್ಲೂರು ಗ್ರಾಮ, ಮಂಗಳೂರು ಎಂಬವರ ದೂರಿನಂತೆ ದಿನಾಂಕ 05-12-2022 ರಂದು ಪಿರ್ಯಾದಿದಾರರು ಅಗತ್ಯ ಕೆಲಸದ ನಿಮಿತ್ತ ಮೋಟಾರ್‌ ಸೈಕಲ್‌ನಲ್ಲಿ ಬೆಂಜನಪದವು ಕಡೆಯಿಂದ ಕೈಕಂಬ ಕಡೆಗೆ ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 12:15 ಗಂಟೆಗೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಮೊಡಂಕಾಪು ರೈಲ್ವೆ ಬ್ರಿಡ್ಜ್‌ ಬಳಿ ತಲುಪುತ್ತಿದಂತೆ ಪೊಳಲಿ – ಕೈಕಂಬ ರಾಜ್ಯ ಹೆದ್ದಾರಿಯಲ್ಲಿ ಕೈಕಂಬ ಕಡೆಯಿಂದ KA-19-Y-4139 ನೇ ಸ್ಕೂಟರನ್ನು ಅದರ ಸವಾರ ಗಿರಿಯಪ್ಪ ಕುಲಾಲ್‌ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೇಲೆ ರಸ್ತೆಯ ಬಲ ಭಾಗಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ಮುಂದಿನಿಂದ ಸವಾರಿ ಮಾಡಿಕೊಂಡು ಬರುತ್ತಿದ್ದ KA-19-HC-8833 ಸ್ಕೂಟರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಸ್ಕೂಟರ್‌ ಸವಾರಿಣಿ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದು, ಅದೇ ಸಮಯಕ್ಕೆ ಕೈಕಂಬ ಕಡೆಯಿಂದ KA-19-7291 ಲಾರಿಯನ್ನು ಅದರ ಚಾಲಕ ಸಂತೋಷ್‌ ರವರು ವಾಹನಗಳ ನಡುವೆ ನಿರ್ದಿಷ್ಟ ಅಂತರವನ್ನು ಕಾಯ್ದುಕೊಳ್ಳದೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಅಪಘಾತದಿಂದಾಗಿ ರಸ್ತೆಗೆ ಬಿದ್ದ ಮಹಿಳೆಯ ಸ್ಕೂಟರಿಗೆ ಡಿಕ್ಕಿ ಹೊಡೆಸಿರುವುದಾಗಿದೆ. ಕೂಡಲೇ ಪಿರ್ಯಾಧಿದಾರರು ಮಹಿಳೆಯನ್ನು ಎಬ್ಬಿಸಿ ಉಪಚರಿಸಿ ನೋಡಲಾಗಿ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲವಾಗಿ. ವಾಹನವೊಂದರಲ್ಲಿ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಸಾಗಿಸುವಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 153/2022 ಕಲಂ: 279, 304(A) IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೆ ಬಾಲಕೃಷ್ಣ ನಾಯ್ಕ್‌ (49) ತಂದೆ:ದಿ||ನಾರಾಯಣ ನಾಯ್ಕ್‌ ವಾಸ:ಅಮ್ಮ ನಿಲಯ ನಾರಾಯಣ ನಾಯ್ಕ್‌ ಕಂಪೌಂಡ ಕುಳ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರಾದ ಕೆ ಬಾಲಕೃಷ್ಣ ನಾಯ್ಕ ರವರಿಗೆ ಬಂಟ್ವಾಳ ತಾಲೂಕು ಕುಳ ಗ್ರಾಮದಲ್ಲಿ ಜಮೀನು ಇದ್ದು, ದಿನಾಂಕ: 05.12.2022 ರಂದು ಬೆಳಿಗ್ಗೆ 7.00 ಗಂಟೆಗೆ ಸದ್ರಿ ಜಮೀನಿನ ತೋಟಕ್ಕೆ ಪಿರ್ಯಾದಿದಾರರ ಮಗಳು ಹೋದಾಗ ಸರಸ್ವತಿ,ದಯಾನಂದ,ಹರೀಶ್‌,ಶೇಖರ,ವೀಣಾ ಹಾಗೂ ಹಿರಣ್ಯ ಎಂಬವರು ಪಿರ್ಯಾದಿದಾರರ ಬಾಬ್ತು ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ಮಗಳನ್ನು ಸುತ್ತುವರೆದು ಪಿರ್ಯಾದಿದಾರರ ಮಗಳಲ್ಲಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಪಿರ್ಯಾದಿದಾರರು ತೋಟದಲ್ಲಿ ನೆಟ್ಟ 5 ಅಡಿಕೆ ಮರಗಳನ್ನು ಕಡಿದು ಹಾಕಿರುತ್ತಾರೆ, ಅಲ್ಲದೇ ನಾಳೆ ಕೂಡ ಅಡಿಕೆ ಮರಗಳನ್ನು ಕಡಿದು ಹಾಕುತ್ತೇವೆ ಎಂಬುದಾಗಿ ಬೆದರಿಕೆ ಒಡ್ಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 191/2022  ಕಲಂ:447,504,506,427 ಜೊತೆಗೆ 149 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ: 05-12-2022 ರಂದು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ 87/2022 ಕಲಂ: 498(a),323,324,354(a), 506 ಜೊತೆಗೆ 149 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 4

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನವೀನಚಂದ್ರ, ಪ್ರಾಯ 36 ವರ್ಷ, ತಂದೆ. ಪುಟ್ಟಣ್ಣ ನಾಯ್ಕ,ವಾಸ.ಅಂಬಟೆಕೋಡಿ ಮನೆ , ಕೆಯ್ಯೂರು ಗ್ರಾಮ ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರಾದ ನವೀನಚಂದ್ರ, ಪ್ರಾಯ 36 ವರ್ಷ, ತಂದೆ. ಪುಟ್ಟಣ್ಣ ನಾಯ್ಕ,ವಾಸ.ಅಂಬಟೆಕೋಡಿ ಮನೆ , ಕೆಯ್ಯೂರು ಗ್ರಾಮ ಪುತ್ತೂರು ತಾಲೂಕುರವರ ನೆರೆಮನೆಯಲ್ಲಿ ವಾಸವಾಗಿರುವ ಹರೀಶ್ಚಂದ್ರ ನಾಯ್ಕ(ಪ್ರಾಯ.28ವರ್ಷ)ರವರು ಮತ್ತು ನೆಟ್ಟಾರಿನ ಹರೀಶ,ಅಂಬಟೆಕೋಡಿಯ ರಾಜೇಶ ಮತ್ತು ಪಿರ್ಯಾದಿದಾರರು ದಿನಾಂಕ 05.12.2022 ರಂದು ಸಂಜೆ ಸುಮಾರು 4.30 ಘಂಟೆಯ ಸಮಯಕ್ಕೆ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಬೊಳಿಕ್ಕಳ ಎಂಬಲ್ಲಿರುವ ಕಿಂಡಿ ಅಣೆಕಟ್ಟಿನ ಕೆಳಭಾಗದಲ್ಲಿ ಗೌರಿ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿದ್ದು,ಸದ್ರಿ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಸಂಜೆ ಸುಮಾರು 4.35 ಗಂಟೆಗೆ ಪಿರ್ಯಾದಿದಾರರ ಜೊತೆಯಲ್ಲಿದ್ದ ಹರೀಶ್ಚಂದ್ರ ನಾಯ್ಕರು ಹೊಳೆಯ ನೀರಿನಲ್ಲಿ ಮುಳಗಿ ಕಣ್ಮರೆಯಾಗಿದ್ದು, ಬಳಿಕ ಪಿರ್ಯಾದಿದಾರರು ಮತ್ತು ಜೊತೆಯಲಿದ್ದ ಹರೀಶ ಮತ್ತು ರಾಜೇಶ ಸೇರಿಕೊಂಡು ಸದ್ರಿ ಸ್ಥಳದ ಹೊಳೆಯ ನೀರಿನಲ್ಲಿ ಹರೀಚಂದ್ರ ನಾಯ್ಕರನ್ನು ಹುಡುಕಿದರೂ ಸದ್ರಿಯವರು ಪತ್ತೆಯಾಗಿರುವುದಿಲ್ಲ , ಬಳಿಕ ಈ ವಿಚಾರವನ್ನು ಠಾಣೆಗೆ ಬಂದು ತಿಳಿಸಲಾಗಿ ಪೊಲೀಸ ಸಿಬ್ಬಂದಿಯವರು,ಅಗ್ನಿಶಾಮಕ ದಳದವರು ಮತ್ತು ಸ್ಥಳಿಯರು ಹರೀಶ್ಚಂದ್ರ ನಾಯ್ಕರು ಸ್ನಾನ ಮಾಡುತ್ತಿದ್ದ ಸ್ಥಳದ ಹೊಳೆಯ ನೀರಿನಲ್ಲಿ ಹುಡುಕಿದಾಗ ದಿನಾಂಕ 05.12.2022 ರಂದು  ರಾತ್ರಿ  ಸುಮಾರು 9.30 ಗಂಟೆಗೆ ಬೊಳಿಕ್ಕಳ ಕಿಂಡಿ ಅಣೆಕಟ್ಟಿನ ಕೆಳಭಾಗದಲ್ಲಿ ಗೌರಿ ಹೊಳೆಯ ನೀರಿನೊಳಗಡೆ ಹರೀಶ್ಚಂದ್ರ ನಾಯ್ಕರವರ ಮೃತ ದೇಹವು ಪತ್ತೆಯಾಗಿರುತ್ತದೆ.ಸದ್ರಿ ಹರೀಶ್ಚಂದ್ರ ನಾಯ್ಕರು ದಿನಾಂಕ 05.12.2022 ರಂದು ಸಂಜೆ 4.30 ಗಂಟೆಯಿಂದ 4.35 ಗಂಟೆಯ ಮಧ್ಯೆ ಕೆಯ್ಯೂರು ಗ್ರಾಮದ ಬೊಳಿಕ್ಕಳ ಎಂಬಲ್ಲಿ ಗೌರಿ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಸಮಯ ಗೌರಿ ಹೊಳೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ UDR NO 38/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದ್ರಶೇಖರ್. ಪ್ರಾಯ:38  ವರ್ಷ.ತಂದೆ: ಕಾಂತಪ್ಪಗೌಡ. ವಾಸ: ವಳಕಟ್ಟೆ ಮನೆ, ಕೇಪು ಗ್ರಾಮ, ನೀರ್ಕಜೆ ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ಅಕ್ಕ ಶ್ರೀಮತಿ ಸೇಸಮ್ಮ ಪ್ರಾಯ 50 ವರ್ಷ ರವರಿಗೆ  ಈ ಹಿಂದೆ ಮಾನಸಿಕ ಖಾಯಿಲೆಯಿದ್ದು, ಔಷದೋಪಚಾರ ವನ್ನು ಮಾಡಿ ಗುಣಮುಖಳಾಗಿದ್ದು, ಇತ್ತೀಚಿನ ದಿನಗಳಲ್ಲಿ ಪುನಃ ಮಾನಸಿಕ ಖಾಯಿಲೆಯು ಕಾಣಿಸಿಕೊಂಡು ಖಿನ್ನತೆಗೆ ಒಳಗಾದ ಕಾರಣದಿಂದ ಮನನೊಂದು ದಿನಾಂಕ:05.12.2022 ರಂದು ಬೆಳಿಗ್ಗೆ 7:30 ಗಂಟೆಯಿಂದ 9:30 ಗಂಟೆಯ ಮಧ್ಯೆ ಅಕ್ಕ ತನ್ನ ಮನೆಯಾದ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಕೈಂತಿಲ ಎಂಬಲ್ಲಿರುವ ತೋಟದ ಒಂದು ಬದಿಯಲ್ಲಿ ಅಕ್ಕ ಸೇಸಮ್ಮಳು ಬಿದ್ದುಕೊಂಡಿದ್ದಳು ಅಲ್ಲಿ ಯಾವುದೋ ವಿಷ ಪದಾರ್ಥದ ಘಾಟು ವಾಸನೆ ಬರುತ್ತಿತ್ತು, ಅವಳ ಮೈಯಲ್ಲಿ ಯಾವುದೇ ಚಲನ ವಲನ ಕಂಡು ಬಾರದೇ ಇದ್ದುದರಿಂದ ಪಿರ್ಯಾಧಿ ಕೂಡಲೇ ಆಟೋ ರಿಕ್ಷಾ ಒಂದರಲ್ಲಿ ಚಿಕಿತ್ಸೆ ಬಗ್ಗೆ ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯ ವೈದ್ಯಾಧಿಕಾರಿರವರು ಬೆಳಿಗ್ಗೆ ಸಮಯ ಸುಮಾರು 9:45 ಗಂಟೆಗೆ ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 47/2022   ಕಲಂ 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಸಾದ್‌ , ಪ್ರಾಯ: 24 ವರ್ಷತಂದೆ: ಅಣ್ಣು ವಾಸ: ಎನ್ನಡ್ಕ ಮನೆ, ಶಿಬಾಜೆ ಗ್ರಾಮ, ಬೆಳ್ತಂಗಡಿ ತಾಲೂಕು   ಎಂಬವರ ದೂರಿನಂತೆ ಪಿರ್ಯಾದಿದಾರರಾದ ತಂದೆ ಅಣ್ಣು ರವರು ಆರ್ಥಿಕ ಸಮಸ್ಯೆಯಿಂದ ಬಳುತ್ತಿದ್ದವರು ಮನೆಯ ಕಾಮಾಗಾರಿ ಕೂಡ ಪೂರ್ತಿಗೊಳಿಸದೇ ಇದ್ದು ಈ ವಿಚಾರದಲ್ಲಿ ಕೂಡ ಮನನೊಂದು ದಿನಾಂಕ: 02-12-2022 ರಂದು ತಮ್ಮ ಮನೆಯಾದ ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಎನ್ನಡ್ಕ ಎಂಬಲ್ಲಿ ರಾತ್ರಿ 9.30 ಗಂಟೆಗೆ ಮನೆಯಲ್ಲಿ ತಂದಿಟ್ಟಿದ್ದ ರಬ್ಬರ್ ಶೀಟ್ ಮಾಡಲು ರಬ್ಬರ್ ಹಾಲಿಗೆ ಬೆರೆಸುವ ಆಸಿಡ್ ನ್ನು ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದವರನ್ನು ಚಿಕಿತ್ಸೆ ಬಗ್ಗೆ  ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈಧ್ಯರು ಪರೀಕ್ಷೀಸಿ ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದವರು ದಿನಾಂಕ: 04-12-2022 ರಂದು ಮದ್ಯಾಹ್ನ ಸಮಯ 3.37 ಗಂಟೆಗೆ ಮೃತ ಪಟ್ಟಿರುವುದಾಗಿ ವೈಧ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯುಡಿಆರ್‌ ಕ್ರಮಾಂಕ: 73/2022 ಕಲಂ: 174 ಸಿ ಆರ್‌ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಡಿ ತಾರನಾಥ, ತಂದೆ:ದಿ||ಅಣ್ಣಪ್ಪ ಗೌಡ, ವಾಸ: ದಂಡಿನ ಮನೆ, ನಡುಗಲ್ಲು ಅಂಚೆ, ನಾಲ್ಕೂರು ಗ್ರಾಮ, ಸುಳ್ಯ ಎಂಬವರ ದೂರಿನಂತೆ ದಿನಾಂಕ 03-12-2022 ರಂದು ಸಂಜೆ 06-00 ಗಂಟೆಗೆ  ಪಿರ್ಯಾದಿದಾರರು ಮನೆಯಿಂದ ಅವರ ಬಾಬ್ತು ರಬ್ಬರ್‌ ತೋಟಕ್ಕೆ ಹೋಗುತ್ತಿರುವಾಗ ನಾಲ್ಕೂರು ಗ್ರಾಮ   ಕಂದ್ರಪ್ಪಾಡಿಗೆ ಹೋಗುವ ತಿರುವು ರಸ್ತೆಯ ಬದಿಯಲ್ಲಿ ಒಬ್ಬ ವ್ಯಕ್ತಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ  ಬಿದ್ದುಕೊಂಡಿದ್ದು  ಪಿರ್ಯಾದಿದಾರರು ಅವರ ಹತ್ತಿರ ಹೋಗಿ ವಿಚಾರಿಸಿದಾಗ ಆವರು ಮಾತನಾಡದೇ ಇದ್ದು ಕೂಡಲೇ 108  ಅಂಬುಲೇನ್ಸ್‌ ಕರೆಸಿದಾಗ, ಅವರು  ಸ್ಥಳಕ್ಕೆ ಬಂದು ಪರೀಕ್ಷಿಸಿ  ವ್ಯಕ್ತಿಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಬಳಿಕ ಕೂಡಲೇ  ಒಂದು ಖಾಸಾಗಿ ಅಂಬುಲೇನ್ಸ್ ನಲ್ಲಿ  ಸುಳ್ಯ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಲ್ಲಿ ಅಲ್ಲಿಯ  ವೈದ್ಯಾಧಿಕಾರಿಯವರು ಕೂಡ ಪರೀಕ್ಷಿಸಿ  ವ್ಯಕ್ತಿಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ  ಯುಡಿಆರ್    ನಂಬ್ರ  : 22/2022 ಕಲಂ   , 174 ಸಿಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-12-2022 10:54 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080