ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಂಜು ಪ್ರಸಾದ್ (47), ತಂದೆ: ವಿಶ್ವನಾಥ ಶೆಟ್ಟಿ, ವಾಸ: ರನ್ನಡಿಮನೆ, ಗರ್ಡಾಡಿ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ:04-10-2022 ರಂದು ಮೋಟಾರು ಸೈಕಲ್‌ ನಂಬ್ರ: ಕೆಎ 19 ಇಕೆ 0470 ನೇ ದ್ವಿಚಕ್ರ ವಾಹನವನ್ನು ಅದರ ಸವಾರ ಅಶೋಕ ಎಂಬುವರು ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 11.30 ಗಂಟೆಗೆ  ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ರನ್ನಾಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ದ್ವಿಚಕ್ರ ವಾಹನವನ್ನು ಸವಾರ ದುಡುಕುತನದಿಂದ ಸವಾರಿ ಮಾಡಿ ಸವಾರನ ಚಾಲನಾ ಹತೋಟಿ ತಪ್ಪಿ ದ್ವಿಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದು ತಲೆಯ ಹಿಂಬದಿಗೆ ಗುದ್ದಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 118/2022 ಕಲಂ; 279,337ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸೀತಾರಾಮ ನಾಯ್ಕ, ಪ್ರಾಯ: 50 ವರ್ಷ, ತಂದೆ: ದಿ.ಪರಮೇಶ್ವರ ನಾಯ್ಕ, ವಾಸ: ಕುರಿಂಜ ಮಣ್ಣಾಪು ಮನೆ, ಅರಿಯಡ್ಕ ಗ್ರಾಮ ಮತ್ತು ಅಂಚೆ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿರವರು ಅವರ ಜೊತೆ ಕೆಲಸ ಮಾಡುತ್ತಿದ್ದ ಮಾಧವ ಎಂಬವರನ್ನು ಕೆಎ-19—ಹೆಚ್-8277ನೇ ಮೋಟಾರು ಸೈಕಲಿನಲ್ಲಿ ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಸವಣೂರಿಗೆ ಹೋಗಲೆಂದು ತಿಂಗಳಾಡಿಯಿಂದ ಸವಣೂರು ಕಡೆಗೆ ಸೊರಕೆ ಮೂಲಕ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಸಂಜೆ 4.00 ಗಂಟೆಗೆ ಪುತ್ತೂರು ತಾಲೂಕು ಸರ್ವೆ ಗ್ರಾಮದ ಸರ್ವೆ ರಿಕ್ಷಾ ನಿಲ್ದಾಣದ ಬಳಿಗೆ ತಲುಪುತ್ತಿದ್ದಂತೆ ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಕೆಎಲ್-14-ಜಿ-0526 ನೇ ಟಾಟಾ ಸುಮೋವನ್ನು ಅದರ ಚಾಲಕ ವಿಘ್ನೇಶ್ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ಬಲ ಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲಿಗೆ ಢಿಕ್ಕಿಯನ್ನುಂಟು ಮಾಡಿದ ಪರಿಣಾಮ ಫಿರ್ಯಾದಿದಾರರು ಮತ್ತು ಮಾಧವರವರು ರಸ್ತೆಗೆ ಬಿದ್ದವರನ್ನು ಸಾರ್ವಜನಿಕರು ಬಂದು ಎಬ್ಬಿಸಿ ಆರೈಕೆ ಮಾಡಿ ನೋಡಿದಾಗ ಫಿರ್ಯಾದಿದಾರರ ಬಲ ಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯ, ಎಡ ಕಾಲಿನ ಹೆಬ್ಬೆರಳಿಗೆ ತರಚಿದ ಗಾಯ, ತಲೆಯ ಬಲ ಭಾಗದಲ್ಲಿ ಗುದ್ದಿದ ಗಾಯವಾಗಿದ್ದು ಮಾಧವರವರಿಗೆ ಮೇಲ್ನೋಟಕ್ಕೆ ಯಾವುದೇ ಗಾಯವಾಗಿರದೇ ಇದ್ದು, ಗಾಯಗೊಂಡಿದ್ದ ಫಿರ್ಯಾದಿದಾರರನ್ನು ಸಾರ್ವಜನಿಕರು ಹಾಗೂ ಮಾಧವರವರು ಚಿಕಿತ್ಸೆಯ ಬಗ್ಗೆ ರಿಕ್ಷಾವೊಂದರಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆಯನ್ನು ನೀಡಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಚಿಕಿತ್ಸೆಯನ್ನು ನೀಡಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅ.ಕ್ರ : 94/2022  ಕಲo: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಇರ್ಷಾದ್ (24 ವರ್ಷ) ತಂದೆ: ಹೈದರ್ ವಾಸ: ಮನೆ ನಂಬ್ರ 2-406 ಮುರಾಜೆ, ಕೋಡಿಂಬಾಳ ಗ್ರಾಮ ಮತ್ತು ಅಂಚೆ ಕಡಬ ಎಂಬವರ ದೂರಿನಂತೆ ಫಿರ್ಯಾದುದಾರರು ಕೆಎ-19-ಎಬಿ-4862 ನೇ ಲಾರಿಯ ಚಾಲಕರಾಗಿದ್ದು, ದಿನಾಂಕ:06-10-2022 ರಂದು ಲಾರಿಯನ್ನು ಮಂಗಳೂರಿನಿಂದ ಚಲಾಯಿಸಿಕೊಂಡು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಬರುತ್ತಾ ಬೆಳಿಗ್ಗೆ 7.50 ಗಂಟೆಗೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಎಂಬಲ್ಲಿಗೆ ತಲುಪಿದಾಗ ಫಿರ್ಯಾದುದಾರರ ಎದುರುನಿಂದ ಅಂದರೆ ಸುಳ್ಯ ಕಡೆಯಿಂದ ಒಂದು ಕಾರನ್ನು ಅದರ ಚಾಲಕನು ಅತೀವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರಾ ಬಲಬದಿಗೆ ಬಂದು ಫಿರ್ಯಾದುದಾರರ ಲಾರಿಗೆ ಡಿಕ್ಕಿಪಡಿಸಿರುತ್ತಾನೆ. ಫಿರ್ಯಾದುದಾರರು ಕೂಡಲೇ ಲಾರಿಯನ್ನು ಅಲ್ಲೇ ನಿಲ್ಲಿಸಿ, ಫಿರ್ಯಾದುದಾರರು ಹಾಗೂ ಅಲ್ಲಿ ಸೇರಿದ ಇತರರು ಕಾರಿನ ಬಳಿ ಹೋಗಿ ಕಾರಿನಲ್ಲಿದ್ದವರನ್ನು ಉಪಚರಿಸಿ ಒಂದು ಕಾರಿನಲ್ಲಿ ಗಾಯಾಳುಗಳನ್ನು ಕರೆದುಕೊಂಡು ಹೋಗಿ ಪುತ್ತೂರು ಧನ್ವಂತರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯಾಧಿಕಾರಿಯವರು ಗಾಯಾಳುಗಳನ್ನು ಪರೀಕ್ಷಿಸಿ ಒಳರೋಗಿಗಳನ್ನಾಗಿ ದಾಖಲಿಸಿಕೊಂಡಿರುತ್ತಾರೆ. ಸದ್ರಿ ಕಾರನ್ನು ರಾಝಿಕ್ ಎಂಬವರು ಚಲಾಯಿಸುತ್ತಿದ್ದು, ಆತನಿಗೆ ಮುಖದ ಭಾಗಕ್ಕೆ ಗಾಯವಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಉಳಿದ ನಾಲ್ಕು ಮಂದಿಗೆ ಕೂಡಾ ಗಾಯವಾಗಿರುತ್ತದೆ.ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅ.ಕ್ರ : 95/2022  ಕಲo: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೆ ವೆಂಕಟೇಶ್ ಪ್ರಾಯ: 68 ವರ್ಷ , ತಂದೆ: ಕೃಷ್ಣ ವಾಸ: ವಿನಾಯಕ ಮೋಟಾರ್ ವರ್ಕ್ಸ್  ಮಂಜಲ್ಪಡ್ಪು ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರು  ಮಂಜಲ್ಪಡ್ಪು ಎಂಬಲ್ಲಿ ವಿನಾಯಕ ಮೋಟಾರ್ ವರ್ಕ್ಸ್ ಲಾರಿ ಮೋಟಾರು ವರ್ಕ್ಸ್ ರಿಪೇರಿ ಕೆಲಸ ಮಾಡಿಕೊಂಡಿದ್ದು,ದಿನಾಂಕ: 03-10-2022 ರಂದು ರಾತ್ರಿ ಹೊತ್ತಿನಲ್ಲಿ ಫಿರ್ಯಾದಿದಾರರ ಅಂಗಡಿಯಲ್ಲಿ ಲಾರಿಗೆ ಸಂಬಂಧಪಟ್ಟ ಬ್ರೇಕ್ ಡ್ರಮ್-3, ಸ್ಟ್ರಿಂಗ್ ಪ್ಲೇಟ್, ಕಬ್ಬಿಣದ ಚನಲ್, ಕಬ್ಬಿಣದ ರಾಡ್ , ಕಬ್ಬಿಣದ ಪಟ್ಟಿ , ಕಬ್ಬಿಣದ ಪೈಪು ಇತ್ಯಾದಿ ಸಾಮಗ್ರಿಗಳನ್ನು ಅಂಗಡಿಯಲ್ಲಿ  ಕಳಚಿಟ್ಟು ಮನೆಗೆ ಹೋಗಿದ್ದು, ಮರುದಿವಸ ದಿನಾಂಕ 04.10.2022 ರಂದು  ಬೆಳಿಗ್ಗೆ 9:00 ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಕಳಚಿಟ್ಟ ಲಾರಿಯ ಸಾಮಗ್ರಿಗಳು ಕಳವಾಗಿರುವುದು ಕಂಡು ಬಂದಿರುತ್ತದೆ . ಕಳವಾದ ಸೊತ್ತುಗಳ ಮೌಲ್ಯ ರೂ 55,000/- ಆಗಬಹುದು. ಈ ಬಗ್ಗೆ ಪುತ್ತೂರು ನಗರ ಠಾಣಾ ಅಕ್ರ 82/2022 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-10-2022 10:22 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080