ಅಪಘಾತ ಪ್ರಕರಣ: ೦5
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಕುಮಾರಿ ಸಿಂಚನಾ ಪ್ರಾಯ: 16 ವರ್ಷತಂದೆ: ಚಂದ್ರಶೇಖರ್ ಕುಲಾಲ್ ವಾಸ: ಕಲ್ಯಾರ್ ಸೋಮಯಾಜಿ ಸೈಟ್ ಮನೆ, ನರಿಕೊಂಬು ಗ್ರಾಮ ಮತ್ತು ಅಂಚೆ , ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:06-12-2021 ರಂದು ಕಾಲೇಜಿಗೆ ಹೋದವರು ಬಸ್ಸಿನಲ್ಲಿ ಪಾಣೆಮಂಗಳೂರಿಗೆ ಬಂದು ಅಲ್ಲಿಂದ ಮನೆ ಕಡೆಗೆ ಮಂಗಳೂರು ಬೆಂಗಳೂರು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಸಮಯ ಸುಮಾರು 16.30 ಗಂಟೆಗೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರು ನಗರ ಎಂಬಲ್ಲಿಗೆ ತಲುಪಿದಾಗ ಬಿ.ಸಿ.ರೋಡ್ ಕಡೆಯಿಂದ KA 06 P 6717 ನೇ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದು ರಸ್ತೆಯ ಎಡಕ್ಕೆ ಚಲಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಬ್ದುಲ್ ಶಮೀರ್ ಗೆ ಡಿಕ್ಕಿ ಹೊಡೆದು ಕಾರು ರಸ್ತೆಯ ಎಡಬದಿಯಲ್ಲಿರುವ ತಗ್ಗು ಪ್ರದೇಶಕ್ಕೆ ಮಗುಚಿ ಬಿದ್ದು ಅಪಘಾತವಾಗಿದ್ದು ,ಅಪಘಾತದಲ್ಲಿ ಪಿರ್ಯಾದಿದಾರರ ಬಲಕೈಗೆ ಗುದ್ದಿದ ಗಾಯವಾಗಿದ್ದು ಅಬ್ದುಲ್ ಶಮೀರ್ ನ ತಲೆಗೆ ಎಡಕಣ್ಣಿನ ಬಳಿ ಹಣೆಗೆ ರಕ್ತಗಾಯ ಹಾಗೂ ಹೊಟ್ಟೆಗೆ ಗುದ್ದಿದ ಗಾಯವಾಗಿರುವುದಲ್ಲದೆ ಕಾರಿನಲ್ಲಿದ್ದವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಗಾಯಗೊಂಡ ಪಿರ್ಯಾದಿದಾರರು ಹಾಗೂ ಅಬ್ದುಲ್ ಶಮೀರ್ ನ ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 135/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಶಿವಪ್ಪ ಪೂಜಾರಿ ಪ್ರಾಯ: 70 ವರ್ಷತಂದೆ: ದಿ||ಅಮ್ಮು ಪೂಜಾರಿ ವಾಸ: ಶ್ರೀದೇವಿ ಕೃಪಾ ಪಾಪೆತ್ತಿಮಾರು ಮನೆ, ಬರಿಮಾರು ಗ್ರಾಮ , ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 06.12.2021 ರಂದು ಅಗತ್ಯ ಕೆಲಸದ ನಿಮಿತ್ತ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕಲ್ಲಡ್ಕ ಎಂಬಲ್ಲಿಗೆ ಬಂದವರು ಸಮಯ ಸುಮಾರು ಬೆಳಿಗ್ಗೆ 09.30 ಗಂಟೆಗೆ ಕಲ್ಲಡ್ಕದಲ್ಲಿರುವ ಮೀನು ಮಾರುಕಟ್ಟೆಗೆ ಹೋಗುವರೇ ರಸ್ತೆ ದಾಟುತ್ತಾ ಮತ್ತೊಂದು ಬದಿಗೆ ತಲುಪುತ್ತಿದ್ದಂತೆ ಮಾಣಿ ಕಡೆಯಿಂದ ಕಾರೊಂದನ್ನು ಅದರ ಚಾಲಕ ವೇಗವಾಗಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಎಡಕಾಲಿನ ಪಾದದ ಮೇಲೆ ಚಕ್ರವನ್ನು ಹಾಯಿಸಿ ಚಲಾಯಿಸಿಕೊಂಡು ಅಪಘಾತಪಡಿಸಿ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದು ಗಾಯಗೊಂಡ ಗಾಯಾಳು ಕಲ್ಲಡ್ಕ ಪುಪ್ಪರಾಜ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾಗಿದ್ದು. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 136/2021 ಕಲಂ 279,337 ಐಪಿಸಿ 134 (ಎ&ಬಿ) ಮೋ ವಾ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಅಬ್ರಾಹಂ ಪ್ರಾಯ 31 ವರ್ಷ ತಂದೆ ಮೊತನ್ ವಾಸ ; ಪದವು ಮನೆ ಕುಂತೂರು ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ:05.12.2021 ರಂದು KA-21 U-8243ನೇ ಮೊಟಾರ್ ಸೈಕಲ್‌ನಲ್ಲಿ ತನ್ನ ಮನೆಯಾದ ಕುಂತೂರು ಪದವಿನಿಂದ ಸಹ ಸವಾರನಾದ ಬಾಬು ಗೌಡ ಎಂಬವರನ್ನು ಕುಳ್ಳಿರಿಸಿಕೊಂಡು ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಕಡಬ ತಾಲೂಕು ಅಲಂಕಾರು ಗ್ರಾಮದ ಅಲಂಕಾರು ಜಂಕ್ಷನ್ ಎಂಬಲ್ಲಿಗೆ ಸಮಯ 10.00 ಗಂಟೆಗೆ ತಲುಪಿದಾಗ ಪಿರ್ಯಾದುದಾರರ ಎದುರುಗಡೆಯಿಂದ ಹೋಗುತ್ತಿದ್ದ KA-21 P-2159 ನೇ ಆಲ್ಟೋ ಕಾರು ವಾಹನದ ಚಾಲಕನಾದ ಆರೋಪಿತನು ಒಮ್ಮೆಲೆ ತನ್ನ ಕಾರು ವಾಹನದ ಎಡಬದಿಯ ಇಂಡಿಕೇಟರ್ ಹಾಕದೇ ಕಾರು ವಾಹನವನ್ನು ಒಮ್ಮೆಲೇ ಎಡಕ್ಕೆ ಅಂದರೆ ಶರವೂರು ಕಡೆಗೆ ತಿರುಗಿಸಿದ ಪರಿಣಾಮ ಹಿಂದಿನಿಂದ ಹೋಗುತ್ತಿದ್ದ ಪಿರ್ಯಾದುದಾರರು ತನ್ನ ಮೋಟಾರ್ ಸೈಕಲ್ ಕಾರಿಗೆ ತಾಗಿದ ಪರಿಣಾಮ ಮೋಟಾರ್ ಸೈಕಲ್ ಸವಾರನಾದ ಪಿರ್ಯಾದುದಾರರು ಮತ್ತು ಸಹಸವಾರನಾದ ಬಾಬುಗೌಡ ಎಂಬವರು ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡವರನ್ನು ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಉಪಚರಿಸಿ ಗಾಯಾಳುಗಳಾದ ಮೋಟಾರ್ ಸೈಕಲ್ ಸವಾರನಾದ ಪಿರ್ಯಾದುದಾರರನ್ನು ಮತ್ತು ಮೋಟಾರ್ ಸೈಕಲ್ ಹಿಂಬದಿ ಸಹ ಸವಾರನಾದ ಬಾಬುಗೌಡರವರನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುವುದಾಗಿರುತ್ತದೆ ಮೋಟಾರ್ ಸೈಕಲ್ ಸವಾರನಿಗೆ ಬಲಭುಜಕ್ಕೆ ಗುದ್ದಿದ ಗಾಯ ಮತ್ತು ತಲೆಯ ಬಲಬದಿಗೆ, ಬಲಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿದ್ದು ಸಹ ಸವಾರನಾದ ಬಾಬುಗೌಡ ಎಂಬವರಿಗೆ ಹಣೆಯ ಬಲಬಾಗಕ್ಕೆ ಮತ್ತು ಬಲಭುಜಕ್ಕೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 102/2021 ಕಲಂ. 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹೇಶ್ ಕೆ (35) ತಂದೆ: ಕುಶಾಲಪ್ಪ ವಾಸ: ಹೆದ್ದಾರಿ ಮನೆ, ಕಂದ್ರಪ್ಪಾಡಿ ಅಂಚೆ, ದೇವಚಳ್ಳ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ:04.12.2021ರಂದು ಪಿರ್ಯಾದುದಾರರು ಬಿಳಿಯಾರಿನಲ್ಲಿ ವಿದ್ಯುತ್ ಕೆಲಸವನ್ನು ಮುಗಿಸಿ ಬಿಳಿಯಾರಿನಿಂದ ಅರಂತೋಡು ಮೆಸ್ಕಾಂ ಕಛೇರಿಗೆ ತಮ್ಮ ಬಾಬ್ತು ಪಿಕ್‌ಅಪ್ ವಾಹನದಲ್ಲಿ ಹೋಗುತ್ತಿರುವಾಗ ಸಂಜೆ ಸಮಯ ಸುಮಾರು 5:40 ಗಂಟೆಗೆ ಸುಳ್ಯ ತಾಲೂಕು ಅರಂತೋಡು ಗ್ರಾಮದ ಕೊಡೆಂಕಿರಿ ಎಂಬಲ್ಲಿಗೆ ತಲುಪುತಿದ್ದಂತೆ ಅರಂತೋಡು ಕಡೆಯಿಂದ ಸುಳ್ಯ ಕಡೆಗೆ ಕೆಎಲ್ 14 ಝಡ್ 2648 ನಂಬ್ರದ ಮೋಟಾರ್ ಸೈಕಲ್ ಸವಾರ ನಿಜಾಮುದ್ದೀನ್ ಬಿ ಅಜಾಗರೂಕತೆ ಹಾಗೂ ತೀರ ನಿರ್ಲಕ್ಷ್ಯತನದಿಂದ ತಪ್ಪು ಬದಿಯಲ್ಲಿ ಸವಾರಿ ಮಾಡಿ ಪಿರ್ಯಾದುದಾರರ ಬಾಬ್ತು ಪಿಕ್‌ಅಪ್ ವಾಹನದ ಎದುರು ಡಿಕ್ಕಿಪಡಿಸಿ ರಸ್ತೆಗೆ ಎಸೆಯಲ್ಪಟ್ಟು ತಲೆ ಹಾಗೂ ಬಲ ಕಾಲಿಗೆ ರಕ್ತಗೊಂಡವನನ್ನು ಪಿರ್ಯಾದುದಾರರು ಆ್ಯಂಬುಲೇನ್ಸ್ ವೊಂದರಲ್ಲಿ ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ವೈದ್ಯಾದಿಕಾರಿಯವರ ಸೂಚನೆ ಮೇರೆಗೆ ಸುಳ್ಯ ಕೆ ವಿ ಜಿ ಆಸ್ವತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 92/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಯಜ್ಞೇಶ (43) ತಂದೆ: ದಾಮೋದರ ಆರ್ಚಾಯ ವಿ ವಾಸ: ವಾಟೆಡ್ಕ ಮನೆ, ಬಾಳೆಮೂಲೆ ಅಂಚೆ, ಎಣ್ಮಕಜೆ ಗ್ರಾಮ,ಕಾಸರಗೋಡು ತಾಲೂಕು, ಕೇರಳ ಎಂಬವರ ದೂರಿನಂತೆ ದಿನಾಂಕ:05.12.2021 ಸಮಯ ಸುಮಾರು 17:15 ಗಂಟೆಗೆ ಪಿರ್ಯಾದುದಾರರು ಮತ್ತು ಅವರ ಬಾವ ಚಿದಾನಂದ ಎಂಬರೊಂದಿಗೆ ಕೆಎ 21 ಆರ್ 6021 ನಂಬ್ರದ ಮೋಟಾರ್ ಸೈಕಲ್‌ನಲ್ಲಿ ತಮ್ಮ ಸಂಬಂದಿಕರ ಮನೆಗೆ ಹೋಗುವರೇ ಜಾಲ್ಸೂರು ಜಂಕ್ಷನ್‌ಗೆ ಬಂದು, ಬಳಿಕ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಜಾಲ್ಸೂರು ಜಂಕ್ಷನ್ ಬಳಿ ರಸ್ತೆಯ ಕಚ್ಚಾ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದಾಗ ಜಾಲ್ಸೂರು ಜಂಕ್ಷನ್ ಕಡೆಯಿಂದ ಮುರೂರು ಕಡೆಗೆ ಹೋಗುತ್ತಿದ್ದ ಕೆಎಲ್ 14 ಎನ್ 1170 ನಂಬ್ರದ ರಿಡ್ಜ್ ಕಾರಿನ ಚಾಲಕ ಸುನೈಪ್(19) ಅಜಾಗರೂಕತೆ ಹಾಗೂ ತೀರ ನಿರ್ಲಕ್ಷತನದಿಂದ ಜಿಗ್ ಜಾಗ್ ಆಗಿ ಕಾರನ್ನು ಚಾಲನೆ ಮಾಡಿ ಪಿರ್ಯಾದುದಾರರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್‌ಗೆ ತಾಗಿಸಿ ಯೂ ಟರ್ನ್ ಆಗಿ ರಸ್ತೆಯ ಬಲ ಬದಿಗೆ ತಿರುಗಿ ಮಗುಚಿ ಬಿದ್ದ ಪರಿಣಾಮ ಕಾರಿನ ಒಳಗೆ ಇದ್ದ ಪ್ರಯಾಣಿಕರಾದ ಪವಾಜ್ ಮತ್ತು ಮಹಮ್ಮದ್ ಇಶಾನ್ ರಕ್ತ ಗಾಯಗೊಂಡು ಚಿಕಿತ್ಸೆ ಬಗ್ಗೆ ಸುಳ್ಯ ಆಸ್ವತ್ರೆಗಳಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಪಸ್ಟ್ ನ್ಯೂರೋ ಆಸ್ವತ್ರೆ ಹಾಗೂ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ವತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 93/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಮನುಷ್ಯ ಕಾಣೆ ಪ್ರಕರಣ: ೦1
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೇರಿ ಪ್ರಾಯ:63 ವರ್ಷ ಗಂಡ: ಮಥಾಯಿ ವಾಸ; ನೇರ್ತನೆ ಮನೆ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:10-09-2021 ರಂದು ಬೆಳಗ್ಗೆ 10.00 ಗಂಟೆಗೆ ಮನೆಯಿಂದ ಕೇರಳ ರಾಜ್ಯದ ಕಾಸರಗೋಡು ಕುಂಞಗಾಡು ಕಡೆಗೆ ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ತೆರಳಿದ್ದು ಈವರೆಗೆ ಸಂಬಂಧಿಕರ ಮನೆಗೂ ತೆರಳದೇ ಮನೆಗೂ ಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 79/2021 ಕಲಂ:ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦3
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ದಿಲೀಪ್ ಜೈನ್ (36) ತಂದೆ: ದಿ. ಶ್ರೀದರ ಬಳ್ಳಾಲ್ ವಾಸ: ಪೆರಿ ಬೆಟ್ಟು ಮನೆ, ತೋಡಾರು ಗ್ರಾಮ ಮತ್ತು ಅಂಚೆ, ಮೂಡಬಿದ್ರೆ ತಾಲೂಕು ಎಂಬವರ ದೂರಿನಂತೆ ದಿನಾಂಕ: 06-12-2021 ರಂದು ಪಿರ್ಯಾದುದಾರರು ಹೊಟೆಲ್ ನಲ್ಲಿ ಕರ್ತವ್ಯದಲ್ಲಿದ್ದ ಸಮಯ ಸುಮಾರು 12.00 ಗಂಟೆಯ ವೇಳೆಗೆ ಸುಮಾರು 60 ರಿಂದ 65 ವರ್ಷ ಪ್ರಾಯದ ಅಪರಿಚಿತ ಗಂಡಸು ವ್ಯಕ್ತಿಯು ಹೊಟೆಲ್ ನ ಹೊರಗಡೆ ಅಂಗಾತನ ಬಿದ್ದುಕೊಂಡಿರುವುದನ್ನು ನೋಡಿದ್ದು, ಆತನ ಬಳಿ ಹೋಗಿ ನೋಡಲಾಗಿ ಉಸಿರು ನಿಂತು ಹೋಗಿದ್ದು, ಶರೀರವು ನಿಶ್ಚಲವಾಗಿರುತ್ತದೆ. ಪಿರ್ಯಾದುದಾರರು ಆತನ ಜೇಬನ್ನು ಪರಿಶೀಲಿಸಲಾಗಿ ಅದರಲ್ಲಿ ಆತನ ಆಧಾರ್ ಕಾರ್ಡ್ ಇದ್ದು, ಆತನ ಹೆಸರು ಪ್ರಹ್ಲಾದ್ ಎಂಬುವುದಾಗಿದ್ದು, ಊರು ಗಂಗಾವತಿ ಎಂಬುವುದಾಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯು ಡಿ ಆರ್ 58/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಝಕರಿಯ ಪ್ರಾಯ 47 ವರ್ಷ, ತಂದೆ ;ಅಬ್ಬೋನು ಬ್ಯಾರಿ , ವಾಸ: ಆತೂರು ಮನೆ ಕೊಯಿಲಾ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರು ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 27-11-2021 ರಂದು ಎಂದಿನಂತೆ ಪಿರ್ಯಾದಿಯ ತಮ್ಮನಾದ ಹಬೀಬ್ ಎಂಬುವರು ಕಟ್ಟಡ ಕಾರ್ಮಿಕರಾಗಿದ್ದು ಕೆಲಸದ ಬಗ್ಗೆ ಆತೂರು ಬೈಲು ಎಂಬಲ್ಲಿನ ಷರೀಫ್ ಮುಸ್ತಿಯಾರ್ ಎಂಬುವರ ಮನೆಯ ಕಟ್ಟಡದ ಕೆಲಸ ಮಾಡುವರೇ ಹೋಗಿದ್ದು ಕೆಲಸ ಮಾಡುತ್ತಿದ್ದ ಸಮಯ ಸಂಜೆ 4-00 ಗಂಟೆಗೆ ಕಟ್ಟಡದ ಕೆಲಸ ಮಾಡುತ್ತಿರುವಾಗ ಕಟ್ಟಡದ ಸ್ಲಾಬ್ ಮೇಲಿನಿಂದ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದಿದ್ದು. ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿದ್ದು ತಕ್ಷಣ ಹಬೀಬ್ ಎಂಬವವರನ್ನು ಉಪಚಾರಿಸಿ ಆರೈಕೆ ಮಾಡಿ ಚಿಕಿತ್ಸೆಯ ಬಗ್ಗೆ ಮಂಗಳುರಿನ ತೇಜಸ್ವಿನಿ ಆಸ್ವತ್ರೆಗೆ ಒಳ ರೋಗಿಯಾಗಿ ದಾಖಲು ಮಾಡಿದ್ದು ಚಿಕಿತ್ಸೆಯಲ್ಲಿ ಇದ್ದವರು ದಿನಾಂಕ 06-12-2021 ರಂದು 11-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 29/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೃಷ್ಣ ಮಣಿಯಾಣಿ ಪ್ರಾಯ 75 ವರ್ಷ, ತಂದೆ : ದಿ; ಚೋಯಿ ಮಣಿಯಾಣಿ, ವಾಸ: ಯಾದವ ನಿಲಯ, ಧೋಲ್ತೋಡಿ, ಬಾಳಿಲ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಅವರ ಮಗ ರಾಮಚಂದ್ರ ಮಣಿಯಾಣಿ ಪ್ರಾಯ 51 ವರ್ಷ ದವನು ಇಲೆಕ್ಟ್ರೀಶಿಯನ್ ವೃತ್ತಿ ಮಾಡಿಕೊಂಡಿದ್ದವರು ಕಳೆದ ಲಾಕ್ ಡೌನ್ ಬಳಿಕ ಸರಿಯಾಗಿ ಕೆಲಸವು ಸಿಗದೇ ತೀವ್ರ ಅರ್ಥಿಕ ಸಮಸ್ಯೆ ಉಂಟಾಗಿ ಮನೆಯಲ್ಲಿಯೇ ಇದ್ದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದವರು ಫಿರ್ಯಾದಿದಾರರ ಸಣ್ಣ ಮಗ ಮನೋಹರ ರವರು ಖರೀದಿಸಿರುವ ಸುಳ್ಯ ತಾಲೂಕು ಪರುವಾಜೆ ಗ್ರಾಮದ ಪೆರುವಾಜೆ ಎಂಬಲ್ಲಿಗೆ ದಿನಾಂಕ 05.12.2021 ರಂದು ಬೆಳಿಗೆ ಕೃಷಿ ತೋಟದಲ್ಲಿ ಹುಲ್ಲು ತೆಗೆಯುವ ಕೆಲಸಕ್ಕೆ ಹೋದವರು ಮಧ್ಯಾಹ್ನ 12-30 ಗಂಟೆಯವರೆಗೆ ಕೆಲಸ ಮಾಡಿ ಬಳಿಕ ಹೊರಗಡೆ ಹೋದವರನ್ನು ಹುಡುಕಾಡಿದಾಗ ಅಲ್ಲಿಯೇ ಮನೆಯ ಹತ್ತಿರದ ಕಾಡು ಪ್ರದೇಶದಲ್ಲಿ ಮರವೊಂದಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿ ಆರ್ ಸಂಖ್ಯೆ 33/2016 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.