ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಸಾದ್ ಪಿ (33) ತಂದೆ: ಕರಿಯಪ್ಪ ಪೂಜಾರಿ ವಾಸ: ಬೆಳ್ಳಾರೆ ಮನೆ ಮತ್ತು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 07.01.2023 ರಂದು ತನ್ನ ಬಾಬ್ತು ಆಟೋ ರಿಕ್ಷಾ ನಂ: ಕೆಎ 21 ಎ 8089 ನೇದರಲ್ಲಿ ಬಾಡಿಗೆ ನಿಮಿತ್ತ ಬೆಳ್ಳಾರೆಯಿಂದ ಮೂರು ಜನ ಸಹ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಪಿರ್ಯಾದುದಾರರು ಚಾಲಕರಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಬರುತ್ತಿರುವರೇ ಸಮಯ ಸುಮಾರು 16:15 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಪೈಚಾರು ಬ್ರೀಡ್ಜ್ ಬಳಿಯಲ್ಲಿರುವ ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆ ಎದುರಿನಿಂದ ಸುಳ್ಯ ಕಡೆಯಿಂದ ಪೈಚಾರು ಕಡೆಗೆ ಕೆಎ 19 ಎಡಿ 6019 ನೇದರ ಬೊಲೋರು ವಾಹನದ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ಆಟೋ ರಿಕ್ಷಾ ಕ್ಕೆ ಡಿಕ್ಕಿವುಂಟು ಮಾಡಿದ ಪರಿಣಾಮ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಅದರಲ್ಲಿದ್ದ ಪ್ರಯಾಣಿಕರಾದ ವಿದ್ಯಾ(35)  ಎಂಬವರಿಗೆ ತಲೆಗೆ, ಮುಖಕ್ಕೆ,ಗಂಟಲಿಗೆ ರಕ್ತಗಾಯವಾಗಿದ್ದು, ಸ್ಥಳಿಯರ ಸಹಾಯದಿಂದ ಆಟೋವನ್ನು ಮೇಲಕ್ಕೆ ಎತ್ತಿ ನಂತರ  ವಾಹನವೊಂದರಲ್ಲಿ ವಿಧ್ಯಾರವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ಹಾಗೂ ಆಟೋ ರಿಕ್ಷಾದಲ್ಲಿ ಉಳಿದವರಿಗೆ ಯಾವುದೇ ಗಾಯವಾಗಿರುವುದಿಲ್ಲ ಎಂಬುದಾಗಿ. ಡಿಕ್ಕಿವುಂಟು ಮಾಡಿದ ಬೋಲೋರು ವಾಹನದ ಚಾಲಕ ವಾಹನವನ್ನು ನಿಲ್ಲಿಸದೆ ಹೋಗಿದ್ದು, ಈ ಬಗ್ಗೆ ಸುಳ್ಯ ಪೊಲೀಸ್‌    ಠಾಣಾ ಅ,ಕ್ರ   ನಂ: 02/2023 ಕಲಂ: 279,337 ಐಪಿಸಿ ಮತ್ತು 134(ಎ&ಬಿ) ಐಎಂವಿ ಆ್ಯಕ್ಟ್    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ದಿನಾಂಕ:07.01.2023ರಂದು ಬೆಳಿಗ್ಗೆ 08.30 ಗಂಟೆಗೆ ಸಂದೀಪಕುಮಾರ್ ಶೆಟ್ಟಿ ಪಿಎಸ್ಐ (ಕಾ&ಸು) ವಿಟ್ಲ ಠಾಣೆರವರು ವಿಟ್ಲಪೇಟೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಬೊಳ್ಪಾದೆ ಆಟದ ಮೈದಾನದಲ್ಲಿ ಯಾರೋ ಇಬ್ಬರು ಯುವಕರು ಯಾವುದೋ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದರೆಂಬ ಬಂದ ಖಚಿತ ಮಾಹಿತಿ ಮೇರೆಗೆ ಪಿರ್ಯಾಧಿ ಸಿಬ್ಬಂದಿಗಳೊಂದಿಗೆ 09.30 ಗಂಟೆಗೆ ಬೊಳ್ಪಾದೆ ಎಂಬಲ್ಲಿಗೆ ತಲುಪಿ ಆಟದ ಮೈದಾನದಲ್ಲಿದ್ದ ಆಪಾದಿತರುಗಳಾದ ಅಬೂಬಕ್ಕರ್ ಸಿದ್ದಿಕ್ ,ಕಬೀರ್ ರವರು ಸಾರ್ವಜನಿಕ ಸ್ಥಳದಲ್ಲಿ ಅಮಲು ಪದಾರ್ಥ ಗಾಂಜಾವನ್ನು ಸೇವನೆ ಮಾಡಿ ಅನುಚಿತವಾಗಿ ವರ್ತಿಸಿರುವುದು ತಿಳಿದು ಬಂದಿರುವುದರಿಂದ ಸದ್ರಿಯವರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದು ಸದ್ರಿಯವರನ್ನು ವೈದ್ಯಾಧಿಕಾರಿಗಳು, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ, ದೇರಳಕಟ್ಟೆ, ಮಂಗಳೂರು ಇಲ್ಲಿಗೆ ಕಳುಹಿಸಿದಾಗ ವೈದ್ಯರು ಆಪಾದಿತರುಗಳನ್ನು ಪರೀಕ್ಷೆಗೆ ಒಳಪಡಿಸಿದಲ್ಲಿ ಆರೋಪಿತರು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಿಕರಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 006/2023  ಕಲಂ: 27(ಬಿ) Narcotic Drugs & Psychotropic Substances Act 1985 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚೆನ್ನಪ್ಪ ಕೊರಗ, ಪ್ರಾಯ: 38 ವರ್ಷ, ತಂದೆ: ದಿ. ಬಾಬು ಕೊರಗ, ಎರಮಾಳು ಮನೆ, ಕುಂತೂರು , ಪೆರಾಬೆ ಗ್ರಾಮ, ಕಡಬ ತಾಲೂಕು  ಎಂಬವರ ದೂರಿನಂತೆ ಪಿರ್ಯಾದಿದಾರರು  ಹಾಗೂ ಅಣ್ಣ ಐತ್ತಪ್ಪ(52) ರವರು ಕಡಬ, ಪುತ್ತೂರು, ಸುಳ್ಯ ಕಡೆಗಳಲ್ಲಿ ಕಾಡಿನಿಂದ ಬಳ್ಳಿ ಸಂಗ್ರಹಿಸಿ ಬುಟ್ಟಿ ತಯಾರಿಸಿ ಮಾರಾಟ ಮಾಡುವ ಕೆಲಸಮಾಡಿಕೊಂಡಿದ್ದು,  ಪಿರ್ಯಾದಿದಾರರ  ಅಣ್ಣ ಐತ್ತಪ್ಪ ನಿಗೆ  ಸುಮಾರು 1 ವರ್ಷದ ಹಿಂದೆ ಹೃದಯ ಸಂಬಂಧಿ ಖಾಯಿಲೆ ಉಂಟಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಕೊಂಡಿರುವುದಲ್ಲದೇ  ಇತ್ತೀಚೆಗೆ ಟಿ.ಬಿ ಖಾಯಿಲೆ ಉಂಟಾಗಿದ್ದು ಸುಮಾರು 1 ವಾರದ ಹಿಂದೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿ ಚಿಕಿತ್ಸೆ ಪಡೆದಿರುತ್ತಾನೆ. ದಿನಾಂಕ 02-01-2023 ರಂದು ಪಿರ್ಯಾದಿದಾರರ ಹಾಗೂ ಅಣ್ಣ ಐತ್ತಪ್ಪನು ಬುಟ್ಟಿ ತಯಾರಿಸುವ ಕೆಲಸದ ಬಗ್ಗೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಗೆ ಬಂದು  ಪರಿಚಯದ ಬೊಳ್ಳಾಡಿ ನಾರಾಯಣ ನಾಯ್ಕ ಎಂಬವರ ಮನೆಯ ಅಂಗಳದಲ್ಲಿ ವಾಸ ಇದ್ದು ಸಮೀಪದ ಕಾಡಿನಿಂದ ಬಳ್ಳಿ ಸಂಗ್ರಹಿಸಿ ಬುಟ್ಟಿ ತಯಾರಿಸಿ ಬುಟ್ಟಿಗಳನ್ನು ಪೆರ್ಲಂಪಾಡಿ ಪೇಟೆಯಲ್ಲಿ ಅಂಗಡಿಗೆ ಮಾರಾಟ ಮಾಡುತ್ತಿದ್ದರು.  ದಿನಾಂಕ 04-01-2023 ರಂದು ಬೆಳಗ್ಗೆ ಪಿರ್ಯಾದಿದಾರರು  ತನ್ನ ಮನೆಯಾದ ಕುಂತೂರಿಗೆ ಹೋಗಿದ್ದು,  ಅಣ್ಣ ಐತ್ತಪ್ಪನು ನಾರಾಯಣ ನಾಯ್ಕರ ಅಂಗಳದಲ್ಲಿ ಅಸೌಖ್ಯದಿಂದ ಮಲಗಿದ್ದು, ಆತನಿಗೆ ಉಸಿರಾಡಲು ತೊಂದರೆಯಾಗುತ್ತಿರುವುದಾಗಿ ತಿಳಿಸಿದ್ದು, ದಿನಾಂಕ 07-01-2023 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿದಾರರು  ಕುಂತೂರು ಮನೆಯಲ್ಲಿರುವಾಗ ಊರಿನ ಪರಿಚಯದವರೋರ್ವರು ಐತ್ತಪ್ಪನು ಪೆರ್ಲಂಪಾಡಿಯಲ್ಲಿ ಮೃತಪಟ್ಟಿರುವ ವಿಚಾರ ತಿಳಿಸಿರುತ್ತಾರೆ. ಅದರಂತೆ ಪಿರ್ಯಾದಿದಾರರು  ಪೆರ್ಲಂಪಾಡಿಗೆ ಬಂದು ಅಣ್ಣ ಐತ್ತಪ್ಪನ ಮೃತದೇಹವನ್ನು ನೋಡಿದ್ದು,  ಅಣ್ಣ ಐತ್ತಪ್ಪನು ಸುಮಾರು 1 ವರ್ಷದಿಂದ ಟಿ.ಬಿ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 04-01-2023 ರಂದು ಅಸ್ವಸ್ಥಗೊಂಡು ಮಲಗಿದ್ದವನು ದಿನಾಂಕ 06-01-2023 ರಂದು ಸಂಜೆಯಿಂದ ದಿನಾಂಕ 07-01-2023 ರಂದು ಬೆಳಗ್ಗೆ 6-00 ಗಂಟೆಯ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು.ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್  02/2023 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-01-2023 01:10 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080