ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಕಿರಣ್ ಪ್ರಾಯ 38 ವರ್ಷ ತಂದೆ: ಗೋಪಾಲ ಸುವರ್ಣ  ವಾಸ: ಮಾತೋಶ್ರೀ ನಿವಾಸ, ಮಿತ್ತಬೈಲು, ನಡುಗೋಡು  ಗ್ರಾಮ,     ಕಟೀಲು, ಮಂಗಳೂರು ತಾಲೂಕು  ರವರು  ದಿನಾಂಕ 07-03-2021 ರಂದು ಕೆಎ 20 ಎಎ 4659 ನೇ ಟೆಂಪೋ ಟ್ರಾವೇಲರ್ ವಾಹನದಲ್ಲಿ ಇತರರ ಜೊತೆ ಸಹಪ್ರಯಾಣಿಕರಾಗಿ ಕುಳಿತುಕೊಂಡು ಚಿಕ್ಕಮಗಳೂರಿನಿಂದ ಕಟೀಲು ಕಡೆಗೆ ಹೊರಟು ವಾಹನವನ್ನು ಚಾಲಕ ರಾಜೇಶ್ ರವರು ಕೊಟ್ಟಿಗೆಹಾರ-ಉಜಿರೆ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ಮಧ್ಯಾಹ್ನ 02-30 ಗಂಟೆಗೆ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಚಾರ್ಮಾಡಿ ಘಾಟ್ ನ 1 ನೇ ತಿರುವು ಬಳಿ ದುಡುಕುತನದಿಂದ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳಾದ ಧನರಾಜ್, ಅರ್ಜುನ್ ಕುಮಾರ್ ರವರಿಗೆ ಢಿಕ್ಕಿ ಹೊಡೆದು ನಂತರ ರಸ್ತೆ ಬದಿಯ ದರೆಗೆ ಢಿಕ್ಕಿ ಹೊಡೆದ ಪರಿಣಾಮ ವಾಹನ ಜಖಂಗೊಂಡು ಧನರಾಜ್ ರವರಿಗೆ ತಲೆಗೆ, ಬಲಕಾಲಿಗೆ, ಎಡಕೈ ಮೊಣಗಂಟಿಗೆ ಗುದ್ದಿದ ರಕ್ತ ಗಾಯ, ಅರ್ಜುನ್ ಕುಮಾರ್ ರವರಿಗೆ ಬಲಕಾಲಿನ ಮೊಣಗಂಟಿಗೆ, ಬಲಕೋಲು ಕೈ ಗೆ ಗುದ್ದಿದ ಗಾಯ ಹಾಗೂ ಟೆಂಪೋ ಟ್ರಾವೇಲರ್ ವಾಹನದಲ್ಲಿದ್ದ ಪಿರ್ಯಾದಿದಾರರಿಗೆ ಮತ್ತು ಇತರ ಸಹ ಪ್ರಯಾಣಿಕರಿಗೆ ಗಾಯಗಳಗಿದ್ದು. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 20/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶೇಖರ ಪ್ರಾಯ;26 ವರ್ಷ ತಂದೆ; ಅಣ್ಣು ಗೌಡ ವಾಸ; ಹೊಳೆ ಬದಿ  ಮನೆ ಕೊಕ್ಕಡ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ತನ್ನ ಬಾಬ್ತು ಮೋಟಾರ್ ಸೈಕಲ್ ಕೆ ಎ 21 ಇ ಎ 8563 ಬಜಾಜ್ ಪಲ್ಸರ್ ಬೈಕನ್ನು ದಿನಾಂಕ: 06/03/2021 ರಂದು ಸುಮಾರು ಬೆಳಗ್ಗೆ 6.30 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಮಹಾದ್ವಾರದ ಬಳಿ ಶೌಚಾಲಯದ ಬಳಿ ನಿಲ್ಲಿಸಿ ಜೀಪಿನಲ್ಲಿ ಸುಬ್ರಮಣ್ಯಕ್ಕೆ ಹೋಗಿ ವಾಪಾಸ್ಸು ಅದೇ ದಿನ ಸಂಜೆ ಸುಮಾರು 5 ಗಂಟೆಗೆ ಬಂದು ನೋಡಿದಾಗ ಪಿರ್ಯಾದಿದಾರರು ಸ್ಥಳದಲ್ಲಿ ನಿಲ್ಲಿಸಿದ ಬೈಕ್ ಇಲ್ಲದೇ ಇದ್ದು ಮೋಟಾರ್ ಸೈಕಲ್ ಕೆ ಎ 21 ಇ ಎ 8563 ಬಜಾಜ್ ಪಲ್ಸರ್ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದ್ದು. ಮೋಟಾರ್ ಸೈಕಲ್ ನ ಅಂದಾಜು ಮೌಲ್ಯ 90,000/- ರೂ ಆಗಿದ್ದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 15/2021 ಕಲಂ:379  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಫಿರ್ಯಾದಿದಾರರಾದ  ಕುಶಾಲಪ್ಪ ಗೌಡ ಪ್ರಾಯ 65 ವರ್ಷ ತಂದೆ: ದಿ|| ನಾಗಪ್ಪ ಗೌಡ ವಾಸ: ಗುಮ್ಮಟಗದ್ದೆ ಮನೆ ಬೆಟ್ಟಂಪಾಡಿ ಗ್ರಾಮ ಪುತ್ತೂರು ತಾಲೂಕು ರವರ ದೂರಿನಂತೆ  ತನ್ನ ಮಗ 21 ವರ್ಷ ಪ್ರಾಯದ ಪವನ್ ಜಿ ಎಂಬವರಿಗೆ ದೃಷ್ಟಿದೋಷದಿಂದ ಸರಿಯಾಗಿ ಕಣ್ಣು ಕಾಣಸದೇ ಇದ್ದು, ದಿನಾಂಕ 06.03.2021 ರಂದು ರಾತ್ರಿ 8.00 ಗಂಟೆಗೆ ಪವನ್‌ರವರು ರಾತ್ರಿ ಸುಮಾರು 8.00 ಗಂಟೆಗೆ ಮನೆಯಿಂದ ಸ್ವಲ್ಪ ದೂರದಲ್ಲೆ ಗುಮ್ಮಟಗದ್ದೆ ಎಂಬಲ್ಲಿ ನಡೆಯುತ್ತಿದ್ದ ದೈವದ ನೇಮೋತ್ಸವಕ್ಕೆ ಹೋಗಲೆಂದು ಮನೆಯಿಂದ ಹೊರಟು ಕಾಲು ದಾರಿಯಲ್ಲಿ ಹೋಗಿದ್ದು, ದಿನಾಂಕ 07.03.2021 ರಂದು ಬೆಳಿಗ್ಗೆ 06.00 ಗಂಟೆಯಾದರೂ ಮನೆಗೆ ಬಾರದೇ ಇದ್ದುದರಿಂದ ಸದ್ರಿಯವನ ಮೊಬೈಲ್ ಕರೆ ಮಾಡಿದಾಗ ಸ್ವಿಚ್ ಆಫ್ ಎಂದು ಬರುತ್ತಿದ್ದು, ಪಿರ್ಯಾದಿದಾರರು ಮತ್ತು ಮನೆಯವರು ದೈವಸ್ಥಾನಕ್ಕೆ ಹೋಗುವ ಕಾಲುದಾರಿಯಲ್ಲಿ ಹುಡುಕಿಕೊಂಡು ಹೋದಾಗ ಬೆಳಿಗ್ಗೆ 06.00 ಗಂಟೆಗೆ ಕಾಲು ದಾರಿಯ ಬದಿಯಲ್ಲಿದ್ದ ತಿಮ್ಮಪ್ಪ ಗೌಡ ಎಂಬವರ ಅಡಿಕೆ ತೋಟದ ಕೆರೆಯಲ್ಲಿ ಪವನ್‌ನ ಚಪ್ಪಲಿಗಳು ತೇಲಾಡುತ್ತಿರುವುದು ಕಂಡು ಬಂದಿದ್ದು, ಬಳಿದ ಬಿದಿರಿನ ಕೋಲಿನಿಂದ ಕೆರೆಯ ನೀಗೆ ಜಾಲಾಡಿದಾಗ ಪವನ್‌ನ ಮೃತದೇಹ ಕಂಡು ಬಂದಿದ್ದು, ಪವನ್‌ನು ರಾತ್ರಿ ಕಾಲು ದಾರಿ ಬದಿಯ ತೋಟದ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಯುಡಿಆರ್ ನಂಬ್ರ 09/21 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸಚಿನ್ ಪ್ರಾಯ: 23 ವರ್ಷ , ತಂದೆ: ಸುಂದರ , ವಾಸ: ನೆಲ್ಲಿಗುಡ್ಡೆ ಮನೆ ಕಡೇ ಶಿವಾಲಯ ಗ್ರಾಮ ಬಂಟ್ವಾಳ ತಾಲೂಕು ಎಂಬವರು ಬಂಟ್ವಾಳದ ಲೊರೆಟ್ಟೊ ಪದವು ಎಂಬಲ್ಲಿ ವಿದ್ಯುತ್ ಕಂಬ ತಯಾರಿಸುವ ಕೆಲಸ ಮಾಡಿಕೊಂಡಿದ್ದು ಎಂದಿನಂತೆ ಕೆಲಸ ತೆರಳಿದ್ದು ಕೆಲಸದಲ್ಲಿರುವ ಸಮಯ ದಿನಾಂಕ 07.03.2021 ರಂದು ಬೆಳಿಗ್ಗೆ  7:30 ಗಂಟೆಗೆ ಪಿರ್ಯಾದಿದಾರರ ಪರಿಚಯದ ಸುಂದರ ನಾಯ್ಕ ಎಂಬವರು ದೂರವಾಣಿ  ಕರೆ ಮಾಡಿ ಪೆರ್ನೆ ಗ್ರಾಮದ ಅರ್ಬಿ ಎಂಬಲ್ಲಿ ನಿಮ್ಮ ತಂದೆಯವರಾದ ಸುಂದರ ಪ್ರಾಯ: 54 ಎಂಬವರು ಹೊಳೆಯ ಬದಿಯಲ್ಲಿರುವ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮ  ಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಬಂದು ನೋಡಲಾಗಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯು.ಡಿ.ಆರ್ ನಂಬ್ರ 10/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-03-2021 12:33 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080