ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಮೇಶ್ (45) ವರ್ಷ ತಂದೆ : ಗುರುವ ನಾಯ್ಕ್ ವಾಸ : ಬಿ ಆರ್ ನಗರ ಮನೆ, ಕಲ್ಲಡ್ಕ ಗೋಳ್ತ ಮಜಲು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 07-06-2022 ರಂದು ತನ್ನ ಬಾಬ್ತು KA-19-AC-1770 ಬಜಾಜ್ ಮ್ಯಾಕ್ಷಿಮೋ ಟೆಂಪೋವನ್ನು ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಪೂರ್ಲಿಪಾಡಿ ಕೆ,ಎನ್ ಬೇಕರಿ ಎಂಬಲ್ಲಿ ಬೆಂಗಳೂರು-ಮಂಗಳೂರು ರಾಷ್ಟೀಯ ಹೆದ್ದಾರಿಯ ಬದಿ ಕಚ್ಚಾ ರಸ್ತೆಯಲ್ಲಿ ನಿಲ್ಲಿಸಿ ನೌಶಾದ್ ಎಂಬುವವರು ಸಿಮೇಂಟ್ ಸೀಟನ್ನು ಲೋಡ್ ಮಾಡುತ್ತಿದ್ದ ಸಮಯ ಸುಮಾರು ಮಧ್ಯಾಹ್ನ 2:00 ಗಂಟೆಗೆ ಮಾಣಿ ಕಡೆಯಿಂದ KA-19-MB-6218 ನೇ ನಂಬರಿನ ಮಾರುತಿ ಆಲ್ಟೊ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ನೌಶಾದ್ ರವರಿಗೆ ಮತ್ತು ನನ್ನ ರಿಕ್ಷಾ ಟೆಂಪೋದ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ನೌಶಾದ್ ರವರು ರಸ್ತೆಗೆ ಎಸೆಯಲ್ಪಟ್ಟು ಕಾಲಿಗೆ ಮೈ, ಕೈಗೆ ಗುದ್ದಿದ ಗಾಯವಾಗಿರುತ್ತದೆ ಅಲ್ಲದೆ ಕಾರಿನಲ್ಲಿದ್ದ ಚಾಲಕ ಇಬ್ರಾಹಿಂ ಮತ್ತು ಸಫಿಯಾ ಎಂಬುವವರಿಗೂ ರಕ್ತ ಗಾಯಗಳಾಗಿದ್ದು ಕೂಡಲೆ ಗಾಯಾಳುಗಳನ್ನು ಅಲ್ಲಿ ಸೇರಿದ ಜನರ ಸಹಾಯದಿಂದ ಎತ್ತಿ ಉಪಚರಿಸಿ ಅದೇ ರಸ್ತೆಯಲ್ಲಿ ಬರುತ್ತಿದ್ದ ವಾಹನವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಕಳುಹಿಸಿಕೊಟ್ಟಿದ್ದು ನೌಶಾದ್ ರವರನ್ನು ಮಂಗಳೂರು ಕಂಕನಾಡಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 66/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಜಯ್‌ ಕುಮಾರ್‌ ರೈ ಪ್ರಾಯ 47 ವರ್ಷ, ತಂದೆ: ದಿ|| ಐತಪ್ಪ ಶೆಟ್ಟಿ, ವಾಸ:  2-151, ಸರೋಳಿ ಮನೆ, ಕೋಡಿಂಬಾಡಿ  ಗ್ರಾಮ ಮತ್ತು ಅಂಚೆ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 06-06-2022 ರಂದು 19-15 ಗಂಟೆಗೆ ಆರೋಪಿ ಸ್ಕೂಟರ್‌ ಸವಾರ ವಿತೇಶ್‌ ಕುಮಾರ್‌ ರೈ ಎಸ್‌ ಎಂಬವರು KA-21-K-9429 ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ಪಿರ್ಯಾದುದಾರರಾದ ವಿಜಯ ಕುಮಾರ್ ರೈ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಸಾರ್ವಜನಿಕ ರಸ್ತೆಯಲ್ಲಿ ಸರೋಳಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಸರೋಳಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಸ್ಕೂಟರ್‌ ಸ್ಕಿಡ್‌ ಆಗಿ ಎಡಭಾಗಕ್ಕೆ ಮಗುಚಿ ಬಿದ್ದು, ಪಿರ್ಯಾದುದಾರರ ಎಡಕೈಯ ಅಂಗೈ ಮೇಲುಗಡೆ ಮತ್ತು ಮುಂಗೈಗೆ ತರಚಿದ ಗಾಯ ಮತ್ತು ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  103/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಲಿಗೆ ಪ್ರಕರಣ: 1

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ರತ್ನ, ವಾಸ- ಚೂರಿಪದವು ಮನೆ, ನಿಡ್ಪಳ್ಳಿ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದುದಾರರವರು ದಿನಾಂಕ:- 07.06.2022ರಂದು ಬೆಳಿಗ್ಗೆ ಸುಮಾರು 10.30 ಗಂಟೆಗೆ  ತನ್ನ ಮನೆಯಾದ ಚೂರಿಪದವಿನಿಂದ  ರೆಂಜಕ್ಕೆ ಬಂದು  ಬಳಿಕ ವಾಪಾಸು ತನ್ನ ಮನೆಯಾದ  ಚೂರಿಪದವು ಕಡೆಗೆ ಹೋಗುವರೇ ರೆಂಜ  ಕಡೆಯಿಂದ ಚೂರಿಪದವು  ಕಡೆಗೆ ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ  ಬೆಳಿಗ್ಗೆ ಸುಮಾರು 11.45 ಗಂಟೆಗೆ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಕೋನಡ್ಕ ಎಂಬಲ್ಲಿಗೆ ತಲುಪಿದಾಗ  ಫಿರ್ಯಾದುದಾರರ ಹಿಂದಿನಿಂದ ಅಂದರೆ ರೆಂಜ ಕಡೆಯಿಂದ ಚೂರಿಪದವು ಕಡೆಗೆ ಕೆಂಪು ಬಣ್ಣದ ಬುಲ್ಲೆಟ್ ಮೋಟಾರ್ ಸೈಕಲೊಂದರಲ್ಲಿ ಇಬ್ಬರು ವ್ಯಕ್ತಿಗಳು ಹೋಗಿದ್ದು, ಕೆಲವೇ ನಿಮಿಷದಲ್ಲಿ ಸದ್ರಿಯವರು ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ವಾಪಾಸು ರೆಂಜ ಕಡೆಗೆ ಬರುತ್ತಾ ಫಿರ್ಯಾದುದಾರರಿಂದ ಸ್ವಲ್ಪ  ದೂರದಲ್ಲಿ ಮೋಟಾರ್  ಸೈಕಲನ್ನು ನಿಲ್ಲಿಸಿ, ಅದರಲ್ಲಿದ್ದ  ಹಿಂಬದಿ ಸವಾರ ಮೋಟಾರ್ ಸೈಕಲಿನಿಂದ ಇಳಿದು ಮೋಟಾರ್ ಸೈಕಲಿನ ಬಳಿಯಲ್ಲಿ ನಿಂತಿದ್ದು, ಫಿರ್ಯಾದುದಾರರು ಸದ್ರಿಯವರ ಬಳಿಗೆ ತಲುಪುತ್ತಿದ್ದಂತೆ   ಮೋಟಾರ್ ಸೈಕಲಿನ ಬಳಿ ನಿಂತಿದ್ದ ವ್ಯಕ್ತಿಯು  “ಅಕ್ಕಾ ಅಕ್ಕಾ” ಎಂಬುದಾಗಿ ಫಿರ್ಯಾದುದಾರರನ್ನು ಕರೆದು ಫಿರ್ಯಾದುದಾರರ ಬಳಿಗೆ ಬಂದು ಏಕಾಏಕಿ ಫಿರ್ಯಾದುದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಎಳೆದಿದ್ದು, ಆ ವೇಳೆ ಫಿರ್ಯಾದುದಾರರು ಜೋರಾಗಿ ಬೊಬ್ಬೆ ಹಾಕಿ ತನ್ನ ಕರಿಮಣಿ ಸರವನ್ನು  ಗಟ್ಟಿಯಾಗಿ ಹಿಡಿದುಕೊಂಡಿದ್ದು, ಸದ್ರಿಯವನು ಬಲವಾಗಿ ಎಳೆದ ಪರಿಣಾಮ ಫಿರ್ಯಾದುದಾರರ ಚಿನ್ನದ ಕರಿಮಣಿ ಸರ ತುಂಡಾಗಿ ಅದರ ಅರ್ಧ ಭಾಗ ಫಿರ್ಯಾದುದಾರರಲ್ಲಿ ಉಳಿದಿದ್ದು, ಉಳಿದ ಅರ್ಧಭಾಗವನ್ನು ಸದ್ರಿ ವ್ಯಕ್ತಿಯು ಎಳೆದುಕೊಂಡಿದ್ದು, ಫಿರ್ಯಾದುದಾರರ ಬೊಬ್ಬೆ ಕೇಳಿ ಅಲ್ಲಿಗೆ ಕೆಲವರು ಬರುತ್ತಿರುವುದನ್ನು ನೋಡಿ ಸದ್ರಿಯವನು ಬಂದಿದ್ದ ಮೋಟಾರ್ ಸೈಕಲಿನಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು ಮೋಟಾರ್ ಸೈಕಲ್ ಸವಾರನೊಂದಿಗೆ ರೆಂಜ ಕಡೆಗೆ ತೆರಳಿರುತ್ತಾನೆ.  ಫಿರ್ಯಾದುದಾರರ ಚಿನ್ನದ ಕರಿಮಣಿ ಸರವು ಒಟ್ಟು ಸುಮಾರು 26 ಗ್ರಾಂ ಚಿನ್ನವನ್ನು ಹೊಂದಿದ್ದು, ಆ ಪೈಕಿ ಸುಮಾರು 11 ಗ್ರಾಂ ಚಿನ್ನವನ್ನು ಸದ್ರಿ ವ್ಯಕ್ತಿಯು ಸುಲಿಗೆ ಮಾಡಿಕೊಂಡು ಹೋಗಿದ್ದು, ಸುಲಿಗೆ ಮಾಡಿರುವ ಚಿನ್ನದ ಅಂದಾಜು ಮೌಲ್ಯ ರೂಪಾಯಿ 50,000.00 ಆಗಬಹುದು.  ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ: 66/2022  ಕಲo: 392 R/w 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರತ್ನ ಕುಮಾರ್ ಪಿಎಸ್‌ಐ (ತನಿಖೆ) ಸುಳ್ಯ ಪೊಲೀಸು ಠಾಣೆ ರವರು ದಿನಾಂಕ 07.06.2022 ರಂದು ಬೆಳಿಗ್ಗೆ 10.15 ಗಂಟೆಗೆ ಠಾಣಾ ಸಿಬ್ಬಂದಿಗಳೊಂದಿಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕೆಎಸ್‌ಅರ್‌ಟಿಸಿ ಬಸ್‌ ನಿಲ್ದಾಣದ ಹಿಂಭಾಗದ ಹೂವಿನ ಮಾರುಕಟ್ಟೆ ಬಳಿ ಒರ್ವ ವ್ಯಕ್ತಿ ಅಮಲು ಸೇವನೆ ಮಾಡಿ ನಶೆಯಲ್ಲಿದ್ದ ಚರಣ್  ಬಿ ಪ್ರಾಯ 24 ವರ್ಷ, ಬೊಳುವಾರು ಮನೆ ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವೈದ್ಯಾಧಿಕಾರಿಯವರಿಂದ ತಪಾಸಣೆ ನಡೆಸಲಾಗಿ ಆತ ಗಾಂಜಾ ಸೇವನೆ ಮಾಡಿರುವುದು ಧೃಡ ಪಟ್ಟಿರುತ್ತದೆ. ಆದ್ದರಿಂದ ಆತನ ವಿರುದ್ದ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವ ಬಗ್ಗೆ ಸುಳ್ಯ ಪೊಲೀಸು ಠಾಣೆಯಲ್ಲಿ ಅ.ಕ್ರ 63/22 ಕಲಂ 27 ಎನ್‌ಡಿಪಿಎಸ್‌ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪ್ರಕರಣದ ಪಿರ್ಯಾದುದಾರರಾದ ಅಪ್ರಾಪ್ತ ಪ್ರಾಯದ ಬಾಲಕಿಯ ನೆರೆಕರೆಯವನಾದ ಆರೋಪಿಯು ದಿನಾಂಕ: 30-05-2022 ರಂದು ಬೆಳಿಗ್ಗೆ ಬಾಲಕಿಯು ಮನೆಯಿಂದ ಶಾಲೆಗೆ ತೆರಳುತ್ತಿದ್ದಾಗ ನಿನ್ನನ್ನು ಕಾರಲ್ಲಿ ಶಾಲೆಗೆ ಬಿಡುತ್ತೇನೆ ನೀನು ಬಾ ಎಂದು ಕೈ ಹಿಡಿದು ಕರೆದುಕೊಂಡು ಹೋಗಿ ಶಾಲೆಗೆ ಬಿಡದೇ ಲಾಡ್ಜ್ವೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿರುವುದಾಗಿದೆ. ಅಲ್ಲದೇ ದಿನಾಂಕ: 07-06-2022 ರಂದು ಪಿರ್ಯಾದುದಾರರು ಬೆಳಿಗ್ಗೆ ಮನೆಯಿಂದ ಶಾಲೆಗೆ ತೆರಳುತ್ತಿದ್ದಾಗ ಸದರಿ ಆರೋಪಿಯು ಬಾಲಕಿಯನ್ನು ಬಲತ್ಕಾರವಾಗಿ  ಪಿರ್ಯಾದಿಯ ಕೈ ಹಿಡಿದು ಎಳೆದು  ಕಾರಿನಲ್ಲಿ ಕುಳ್ಳಿರಿಸಿ  ಲಾಡ್ಜ್ವೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿ,  ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯುಸುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ  ಕಲಂ: 363, 376(2)(ಎಫ್)(ಎನ್)  506 ಐ.ಪಿ.ಸಿ. ಮತ್ತು ಕಲಂ; 5 (ಎಲ್), 6 ಪೋಕ್ಸೋ ಕಾಯ್ದೆ 2012 ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರವೀಂದ್ರ ಪ್ರಾಯ 29 ವರ್ಷ ತಂದೆ ಪದ್ಮನಾಭ ಪೂಜಾರಿ ವಾಸ ನವಗ್ರಾಮ ಸೈಟ್ ಮನೆ ಅಮ್ಮುಂಜೆ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದುದಾರರು ವಿಳಾಸದಲ್ಲಿ ತಾಯಿಯೊಂದಿಗೆ ವಾಸವಾಗಿದ್ದು, ಮೇಸ್ತ್ರಿ ಕೆಲಸ ಮಾಡಿಕೊಂಡಿರುತ್ತಾರೆ. ಮನೆಯಲ್ಲಿ  ಹಗಲು ಹೊತ್ತಿನಲ್ಲಿ ತಾಯಿ ಒಬ್ಬರೇ ಇರುವುದಾಗಿದೆ.   ದಿನಾಂಕ 30-05-2022 ರಂದು ಬೆಳಿಗ್ಗೆ ಪಿರ್ಯಾದುದಾರರು ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ತಾಯಿ ಒಬ್ಬರೇ ಇದ್ದರು ಸಾಯಂಕಾಲ 7.00 ಗಂಟೆಗೆ  ಸ್ನಾನ ಮಾಡುವರೇ ಬಿಸಿ ನೀರು  ಕಾಯಿಸುವರೇ  ಒಲೆಗೆ ಬೆಂಕಿ  ಹಾಕುತ್ತಿದ್ದ ಸಮಯ ತೆಂಗಿನ ಗರಿಯಿಂದ ಬೆಂಕಿ  ತಾಯಿ ಉಟ್ಟ ಸೀರೆಗೆ ತಗಲಿದ್ದು  ಇದನ್ನು ತಿಳಿದ ತಾಯಿ ಜೋರಾಗಿ  ಬೊಬ್ಬೆ ಹಾಕಿದಾಗ  ನೆರೆಯ ಗಗನ್  ಹಾಗೂ ಸವಿತಾ ರವರು ಬಂದು ಬೆಂಕಿಯನ್ನು ನಂದಿಸಿ ಪಿರ್ಯಾದುದಾರರಿಗೆ ಪೋನು ಮಾಡಿದ್ದು  ಕೂಡಲೇ ತಾಯಿಯನ್ನು ಆಂಬ್ಯುಲೆನ್ಸ್ ನಲ್ಲಿ  ಮಂಗಳೂರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ  ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಕಂಕನಾಡಿ ಪಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯಲ್ಲಿದ್ದವರು ದಿನಾಂಕ 07-06-2022 ರಂದು ಮಧ್ಯರಾತ್ರಿ 1.52 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ವೈದ್ಯರು  ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 35-2022  ಕಲಂ 174  ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎನ್ ಶಿವಕುಮಾರ್, ಪ್ರಾಯ: 42 ವರ್ಷ,  ತಂದೆ: ಆರ್ ನಿಂಗೇಗೌಡ, ವಾಸ: ಗ್ರಾಮ ಕರಣಿಕರು   ಮೇಲಂತಬೆಟ್ಟು ಗ್ರಾಮ,  ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ಮೇಲಂತಬೆಟ್ಟು ಗ್ರಾಮ ಕರಣಿಕರಾಗಿ 5 ತಿಂಗಳುಗಳಿಂದೆ ಕೆಲಸ ಮಾಡಿಕೊಂಡಿದ್ದು, ಸದ್ರಿಯವರ ಕಚೇರಿಯಲ್ಲಿ ಸುಂದರ್ ಬಿ ಗೌಡ   (45) ರವರು ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಿಹಿಸಿತ್ತಿದ್ದರು, ದಿನಾಂಕ 07.06.2022 ರಂದು ಮೇಲಂತಬೆಟ್ಟು ಗ್ರಾಮ ಕರಣಿಕರ ಕಚೇರಿಯಲ್ಲಿ ಸುಂದರ್ ಬಿ ಗೌಡ ರವರು ಕರ್ತವ್ಯದಲ್ಲಿದ್ದ ಸಮಯ ಸುಮಾರು 12.45 ಗಂಟೆಗೆ ರವರು ಒಮ್ಮೆಲೆ ಕುಸಿದು ಬಿದ್ದು ಅಶ್ವಸ್ಥಗೊಂಡವರನ್ನು ಪಿರ್ಯಾದಿದಾರರು ಆರೈಕೆ ಮಾಡಿ ಕೂಡಲೆ ಒಂದು ವಾಹನದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದು ಅಲ್ಲಿಯ ವೈಧ್ಯರು ಪರೀಕ್ಷಿಸಿ ನೋಡಲಾಗಿ 13.00 ಗಂಟೆಗೆ ಮೃತಪಟ್ಟಿರುವುದಾಗಿ ವೈಧ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್ ನಂಬ್ರ: 24/2022 ಕಲಂ: 174 ಸಿ.ಆರ್.ಪಿ,ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-06-2022 11:32 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080