ಅಭಿಪ್ರಾಯ / ಸಲಹೆಗಳು

 

ಅಪಘಾತ ಪ್ರಕರಣ: 2

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೊಹಮ್ಮದ್ ಫರ್ ಹಾನ್ , ಪ್ರಾಯ 17 ವರ್ಷ.ತಂದೆ: ಶರಪುದ್ದೀನ್ ಶೇಖ್,  ವಾಸ: # 14-45-Q(2), ಸಾರಾ ಅಪಾರ್ಟ್ ಮೆಂಟ್, ಮದ್ದ ಪರ್ಲಿಯಾ, ಬಿ-ಮೂಡ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 06-08-2022 ರಂದು ತನ್ನ ಸ್ನೇಹಿತ ಅಬ್ದುಲ್ ಸಫ್ವಾನ್ ರವರೊಂದಿಗೆ ಅವರ ಬಾಬ್ತು KA-19-HE-8221 ನೇ ಮೋಟಾರ್ ಸೈಕಲಿನಲ್ಲಿ ಬಿ.ಸಿ.ರೋಡಿನಿಂದ ಶಾಂತಿಯಂಗಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು 15:30 ಗಂಟೆಗೆ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಕೈಕಂಬ ಎಂಬಲ್ಲಿಗೆ ತಲುಪುತ್ತಿದ್ದಂತೆ ಪೊಳಲಿ ದ್ವಾರದ ಕಡೆಯಿಂದ KA-19-AC-1863 ನೇ ಆಟೋರಿಕ್ಷಾವನ್ನು ಅದರ ಚಾಲಕ ಅಬೂಬಕ್ಕರ್ ಎಂಬವರು ಬಿ.ಸಿ.ರೋಡ್ ಮಂಗಳೂರು ಏಕಮುಖ ರಸ್ತೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡ ಹಣೆಗೆ, ಎಡಕೈಗೆ ಗುದ್ದಿದ ಗಾಯ ನೋವು ಆಗಿದ್ದವರನ್ನು ಪ್ರಥಮ ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಸವಾರ ಅಬ್ದುಲ್ ಸಫ್ವಾನ್ ರವರ ಹಣೆಗೆ, ಮೂಗಿಗೆ, ಗುದ್ದಿದ ಗಾಯ, ಮೈಕೈಗೆ ತರಚಿದ ಗಾಯಗೊಂಡವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 87/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಉಮರುಲ್‌ ಫಾರೂಕ್‌ ಪ್ರಾಯ 43 ವರ್ಷ ತಂದೆ: ಮೊಹಿದ್ದೀನ್‌ ವಾಸ: ಕೆರಿಮಾರು ಮನೆ, ಮಿತ್ತಬಾಗಿಲು ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ ದಿನಾಂಕ: 04-08-2022 ರಂದು ಪಿರ್ಯಾಧಿದಾರರು ಕೆಎ 70 ಹೆಚ್‌ 2545 ನೇ ದ್ವಿ ಚಕ್ರ ವಾಹನದಲ್ಲಿ ಸಹ ಸವಾರನಾಗಿ ಕುಳಿತುಕೊಂಡು ದ್ವಿ ಚಕ್ರ ವಾಹನವನ್ನು ಅದರ ಸವಾರ ಸಲೀಂ ರವರು ಸವಾರಿ ಮಾಡಿಕೊಂಡು ಕಡೂರು-ಬಂಟ್ವಾಳ ರಾಷ್ಟೀಯ ಹೆದ್ದಾರಿಯಲ್ಲಿ ಬರುತ್ತಾ ಸಮಯ ಸುಮಾರು ಸಂಜೆ 6.00 ಗಂಟೆಗೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಮುಂಡಾಜೆ ಶೀಟ್‌ ಎಂಬಲ್ಲಿ ದ್ವಿ ಚಕ್ರ ವಾಹನವನ್ನು ಸವಾರ ಸಲೀಂ ರವರು ಒಮ್ಮೆಲೇ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿ ಸವಾರನ ನಿಯಂತ್ರಣ ತಪ್ಪಿ ಪಿರ್ಯಾಧಿದಾರರು ಮತ್ತು ಸಲೀಂ ರವರು ದ್ವಿ ಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾಧಿದಾರರು ಎಡಕಾಲಿಗೆ, ತಲೆಗೆ ಗುದ್ದಿದ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಉಜಿರೆ ಎಸ್‌ ಡಿ ಎಂ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ದ್ವಿ ಚಕ್ರ ವಾಹನ ಸವಾರ ಪೊಲೀಸರಿಗೆ ಅಪಘಾತದ ಬಗ್ಗೆ ಮಾಹಿತಿ ನೀಡಿರುವುದಿಲ್ಲ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ:  104/2022 ಕಲಂ: 279 337 ಭಾ ದಂ ಸಂ,  ಮತ್ತು ಕಲಂ: 134 ಬಿ R/w 187 IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿನಯ ಪ್ರಾಯ 33 ವರ್ಷ ತಂದೆ:ಜನಾರ್ಧನ ಪೂಜಾರಿ ವಾಸ: ಬೆದ್ರೋಡಿ ವಿದ್ಯಾನಗರ ಮನೆ ವಳಾಲು ಅಂಚೆ ಬಜತ್ತೂರು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 06-08-2022 ರಂದು ಮದ್ಯಾಹ್ನ ಸುಮಾರು 12.30 ಗಂಟೆಗೆ ಮನೆಯನ್ನು ಭದ್ರಪಡಿಸಿ ಪಿರ್ಯಾದಿದಾರರು ತನ್ನ ತಂದೆಯವರನ್ನು ನೋಡಲು ಹೆಂಡತಿ ಮಗುವಿನೊಂದಿಗೆ ಸರಪಾಡಿಗೆ ಹೋಗಿ, ದಿನಾಂಕ 07-08-2022ರಂದು ಪಿರ್ಯಾದಿದಾರರು ತನ್ನ ಹೆಂಡತಿ ಮಗುವಿನೊಂದಿಗೆ ಬೆಳಿಗ್ಗೆ 10.45 ಗಂಟೆಗೆ ವಾಪಾಸು ತನ್ನ  ಮನೆಯಾದ ಬಜತ್ತೂರು ಗ್ರಾಮದ ಬೆದ್ರೋಡಿ ಮನೆಗೆ ಬಂದು ಮನೆಯ ಬೀಗವನ್ನು ತೆಗೆದು ಒಳಗೆ ಹೋಗಿ ನೋಡಲಾಗಿ ಯಾರೋ ಕಳ್ಳರು ಹಿಂಬದಿ ಬಾಗಿಲಿನ ಚಿಲಕವನ್ನು ಬಲವಂತವಾಗಿ ಯಾವುದೋ ಹತ್ಯಾರಿನಿಂದ ಮೀಟಿ ತೆಗೆದು ಮನೆಯೊಳಗೆ ಪ್ರವೇಶಿಸಿ ದೇವರಿಗೆ ಧರಿಸಿದ್ದ ಮೂರು ಎಳೆಯ ಅಂದಾಜು 20 ಗ್ರಾಂ ನ ಚಿನ್ನದ ಸರ ಮತ್ತು ರೂ 2000/- ನಗದು ಹಣವನ್ನು ಕಳವು ಮಾಡಿ ಬೆಡ್ ರೂಮ್ ಕಪಾಟನ್ನು ತೆರೆದು ಬಟ್ಟೆಬರೆ ಮತ್ತು ಸೊತ್ತುಗಳು ಚೆಲ್ಲಾಪಿಲ್ಲಿ ಮಾಡಿ ಹೋಗಿರುವುದಾಗಿದೆ. ಕಳವಾದ ಚಿನ್ನದ ಸರದ ಅಂದಾಜು ಮೌಲ್ಯ 90,000/- ಆಗಿದ್ದು, ನಗದು ಹಣ ಸೇರಿ ಒಟ್ಟು 92,000/- ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 86/2022 ಕಲಂ:  454,457 380 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಾರ್ವತಿ ಪ್ರಾಯ 58 ಗಂಡ ದಿ, ಕರುಣಾಕರ ವಾಸ ಶಿವಾಜಿ ನಗರ ಮನೆ, ನೆಕ್ಕರೆಕಾಡು ವಿಟ್ಲ ಕಸಬಾ ಗ್ರಾಮ,ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಸಾರಾಂಶವೇನೆಂದರೆ ಪಿರ್ಯಾಧಿದಾರರ ಮಗ ಸುರೇಶ ಪ್ರಾಯ 25 ವರ್ಷ ಎಂಬಾತನು ಸುಮಾರು ಎರಡುವರೆ ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ದಿನಾಂಕ:04-08-2022 ರಂದು ಬೆಳಿಗ್ಗೆ 10.00 ಗಂಟೆಯಿಂದ 11.00 ಗಂಟೆಯ ಮದ್ಯೆ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ನೆಕ್ಕರೆಕಾಡು ಶಿವಾಜಿ ನಗರ ಎಂಬಲ್ಲಿರುವ ಮನೆಯ ಮನೆಯ ಹಾಲ್‌ ನಲ್ಲಿ ಸಿಮೆಂಟ್‌ ಶೀಟ್‌ ಅಳವಡಿಸಿರುವ ಕಬ್ಬಿಣ್ಣದ ರಾಡ್‌ ಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿಯೇ.ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 32/2022  ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-08-2022 10:32 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080