ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಿತಿನ್‌ ದೇವಾಡಿಗ (25), ತಂದೆ:  ಗಣೇಶ್‌ ದೇವಾಡಿಗ, ವಾಸ: ಶ್ರೀ ಭ್ರಾಮರಿ ಮನೆ, ಗರ್ಡಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ: 06-10-2022 ರಂದು ಅವರ ಬಾಬ್ತು ಕೆಎ 21ವಿ 4557 ನೇ ಮೋಟಾರು ಸೈಕಲ್‌ ನ್ನು ಗುರುವಾಯನಕೆರೆ ಕಡೆಯಿಂದ ವೇಣೂರು ಕಡಗೆ  ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಸಂಜೆ 6.30 ಗಂಟೆಗೆ ಬೆಳ್ತಂಗಡಿ ತಾಲೂಕು, ಕುವೆಟ್ಟು ಗ್ರಾಮದ ಬದ್ಯಾರು ಎಂಬಲ್ಲಿಗೆ ತಲುಪುತಿದ್ದಂತೆ ಪಿರ್ಯಾಧಿದಾರರ ವಿರುದ್ದ ದಿಕ್ಕಿನಿಂದ ಅಂದರೆ ವೇಣೂರು ಕಡೆಯಿಂದ ಗುರುವಾಯನಕೆರೆ ಕಡೆಗೆ ಕೆಎ 21 ಎ 4110 ನೇ ಪಿಕ್‌ ಆಫ್‌ ವಾಹನವನ್ನು ಅದರ ಚಾಲಕ ದುಡುಕುತನದಿಂದ  ಯಾವುದೇ ಸೂಚನೆ  ನೀಡದೇ ಒಮ್ಮೇಲೆ ರಸ್ತೆಯ ಬಲಬದಿಗೆ ಚಲಾಯಿಸಿ ಪಿರ್ಯಾದುದಾರರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮೋಟಾರು ಸೈಕಲ್‌ನೊಂದಿಗೆ ರಸ್ತೆಗೆ ಬಿದ್ದು ಬಲಕಾಲಿನ ಪಾದಕ್ಕೆ, ಬಲಕಾಲಿನ ತೊಡೆಗೆ ಮೂಳೆ ಮುರಿತದ ರಕ್ತ ಗಾಯ,ಬಲ ಕೈಯ ಮೊಣಗಂಟಿಗೆ ತರಚಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಫಾದರ್‌ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ .ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 119/2022 ಕಲಂ; 279,338ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರುಕ್ಮಯ್ಯ ಗೌಡ. ಪ್ರಾಯ 65 ವರ್ಷ, ತಂದೆ: ದಿ. ಮುತ್ತಪ್ಪ ಗೌಡ ವಾಸ: ಟಪ್ಪಲು ಕೊಟ್ಟಿಗೆ ಮನೆ,  ಬಜತ್ತೂರು  ಗ್ರಾಮ, ವಳಾಲು ಅಂಚೆ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 06-10-2022 ರಂದು 18:00 ಗಂಟೆಗೆ ಆರೋಪಿ ಚಾಲಕ ಶಿವರಾಮ ಎಂಬವರು  KA-25-Z-3103ನೇ ನೋಂದಣಿ ನಂಬ್ರದ ಕಾರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಟಪ್ಪಾಲು ಕೊಟ್ಟಿಗೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಹೆದ್ದಾರಿಯ ಬದಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಾದ ರುಕ್ಮಯ್ಯ ಗೌಡರವರಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದುದಾರರು ಕಾರಿನ ಮುಂಭಾಗದ ಗ್ಲಾಸಿನ ಮೇಲೆ ಬಿದ್ದು ನಂತರ ಕಾರಿನ ಮೇಲೆ ಎಸೆಯಲ್ಪಟ್ಟು, ಅವರ ಬಲ ಕಾಲಿನ ಕೋಲು ಕಾಲಿಗೆ ಗುದ್ದಿದ ರಕ್ತಗಾಯ, ತಲೆಯ ಹಿಂಬದಿ ಗುದ್ದಿದ ಗಾಯ, ಎಡಕಾಲಿನ ಪಾದದ ಬಳಿ ಗುದ್ದಿದ ನೋವು ಮತ್ತು ದೇಹಕ್ಕೆ ಗುದ್ದಿದ ನೋವಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 152/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಯ್ಯದ್‌ ಸಿನಾನುದ್ದೀನ್‌. ಪ್ರಾಯ 18 ವರ್ಷ, ತಂದೆ: ಅಬ್ದುಲ್‌ ರಹಿಮಾನ್ ವಾಸ: 5-114/1‌, ಹಿರ್ತಡ್ಕ ಮಠ ಮನೆ,  ಉಪ್ಪಿನಂಗಡಿ ಅಂಚೆ ಮತ್ತು  ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 06-10-2022 ರಂದು 20:00 ಗಂಟೆಗೆ ಆರೋಪಿ ಕಾರು ಚಾಲಕ ಅನ್ವೇಷ್ ಎಂಬವರು  KA-21-Z-3134ನೇ ನೋಂದಣಿ ನಂಬ್ರದ ಕಾರಿನಲ್ಲಿ ಆಶಾ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಉಪ್ಪಿನಂಗಡಿ ಕಡೆಯಿಂದ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಸುಬ್ರಮಣ್ಯ ಕ್ರಾಸ್‌ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆ ನೀಡದೇ ಏಕಾಏಕಿಯಾಗಿ ಸುಬ್ರಮಣ್ಯ ಕಡೆಗೆ ಹೋಗುವ ರಸ್ತೆ ಕಡೆಗೆ ತಿರುಗಿಸಿ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಸಯ್ಯದ್‌ ಸಿನಾನುದ್ದೀನ್‌ ರವರು ಸಹಸವಾರರಾಗಿ ಅಬ್ದುಲ್‌ ತಮೀಮ್‌ ರವರು ಸವಾರರಾಗಿ ಮಠ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EB-9773ನೇ ನೋಂದಣಿ ನಂಬ್ರದ ಸ್ಕೂಟರಿಗೆ ಕಾರು ಅಪಘಾತವಾಗಿ, ಪಿರ್ಯಾದುದಾರರು, ಸವಾರ ಅಬ್ದುಲ್‌ ತಮೀಮ್‌ ರವರು ಸ್ಕೂಟರ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಎಡ ಕಣ್ಣಿನ ಬಳಿ ರಕ್ತಗಾಯ, ಎಡ ಕೆನ್ನೆಗೆ, ಎಡಕಾಲಿಗೆ ತರಚಿದ ಗಾಯ, ಎಡಕಾಲಿನ ಪಾದಕ್ಕೆ ರಕ್ತಗಾಯ, ಅಬ್ದುಲ್‌ ತಮೀಮ್‌ ರವರಿಗೆ ಮುಖಕ್ಕೆ ರಕ್ತಗಾಯ, ಎಡಕಾಲಿನ ಮೊಣಗಂಟಿಗೆ ರಕ್ತ ಗಾಯ, ಎಡ ಕೈಗೆ, ಎದೆಗೆ ಗುದ್ದಿದ ಗಾಯಗಳಾಗಿ, ಚಿಕಿತ್ಸೆ ಬಗ್ಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಬ್ದುಲ್‌ ತಮೀಮ್‌ ರವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ,.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 153/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಲಕ್ಷ್ಮೀಶ ಕೆ ಪ್ರಾಯ: 24 ವರ್ಷ  ತಂದೆ: ಸುಂದರ ಪೂಜಾರಿ ವಾಸ: ಪುಣ್ಚತ್ತಾರು ಕಾರಡ್ಕ ಮನೆ ಕಾಣಿಯೂರು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು  ಗೀತಾ ಬಾರ್‌ ಎಂಡ್‌ ರೆಸ್ಟೋರೆಂಟ್‌ ಕುಳ ಗ್ರಾಮ ಎಂಬಲ್ಲಿ ಕ್ಯಾಶರ್‌ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ: 07-10-2022 ರಂದು ಬೆಳಿಗ್ಗೆ ಸಮಯ ಸುಮಾರು 11:30 ಗಂಟೆಗೆ ಪಿರ್ಯಾದಿದಾರರು ಕೆಲಸ ನಿರ್ಹಿಹಿಸುತ್ತಿದ್ದ  ಗೀತಾ ಬಾರ್‌ ಎಂಡ್‌ ರೆಸ್ಟೋರೆಂಟ್‌ ಬಾಬ್ತು   ರೂ 94,000/- ಹಣದೊಂದಿಗೆ ಜಮೆ ಮಾಡಲು ಕರ್ನಾಟಕ ಬ್ಯಾಂಕ್‌ ಕಬಕ ಶಾಖೆಗೆ ತೆರಳಿದ್ದು, ಆ ಸಮಯ ಪಿರ್ಯಾದಿದಾರರ ಪರಿಚಯದ ಅಳಕೆ ಮಜಲು ನಿವಾಸಿ ಅಕ್ಷಿತ್‌ ಭಂಡಾರಿ ಎಂಬಾತನು ಪಿರ್ಯಾದಿದಾರರನ್ನು ಏಕಾಏಕಿ ತಡೆದು ನಿಲ್ಲಿಸಿ ಕೈಗಳಿಂದ ಪಿರ್ಯಾದಿದಾರರ ಎಡಕೆನ್ನೆಗೆ ಹೊಡೆದನು . ಪಿರ್ಯಾದಿದಾರರು ತಪ್ಪಿಸಿಕೊಂಡು ಬ್ಯಾಂಕ್‌ ನ ಒಳಗೆ ಓಡಿ ಹೋದಾಗ ಅಕ್ಷಿತ್‌ ಭಂಡಾರಿಯು ಪಿರ್ಯಾದಿದಾರರ ಹಿಂಬಾಲಿಸಿಕೊಂಡು ಕೈಯಲ್ಲಿ ಒಂದು ಸೋಡಾ ಬಾಟ್ಲಿಯನ್ನು ಹಿಡಿದುಕೊಂಡು ಬ್ಯಾಂಕ್‌  ನ ಒಳಗಡೆ ಬಂದು ಪಿರ್ಯಾದಿದಾರರ ಕಡೆಗೆ ಎಸೆದನು. ಆ ಸಮಯ ಪಿರ್ಯಾದಿದಾರರು ತಪ್ಪಿಸಿಕೊಂಡಾಗ ಆತನು ಎಸೆದ ಸೋಡಾ ಬಾಟ್ಲಿಯು ಬ್ಯಾಂಕ್‌ ಗೆ ಗ್ರಾಹಕರಾಗಿ ಬಂದಿದ್ದ ಉಮೇಶ್‌ ನಾಯ್ಕ ಎಂಬವರ ಹಣೆಗೆ ತಾಗಿ ಗಾಯವಾಗಿರುತ್ತದೆ.ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ   ಅ.ಕ್ರ: 83/2022 ಕಲಂ: 341, 323, 324 ಐ.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಕವಿತ ಪ್ರಾಯ: 40 ವರ್ಷ ಗಂಡ: ಬಾಲಕೃಷ್ಣ ವಾಸ: ಪಡೀಲ್ ಮನೆ ಒಂಜರೆಬೈಲು ಮುಂಡಾಜೆ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ಬಾಲಕೃಷ್ಣರವರು ಸುಮಾರು  10 ವರ್ಷಗಳಿಂದ ಧರ್ಮಸ್ಥಳದ ಅತಿಥಿ ಗೃಹದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದರು. ದಿನಾಂಕ:07-10-2022 ರಂದು ಎಂದಿನಂತೆ ಅತಿಥಿ ಗೃಹದಲ್ಲಿ ಕರ್ತವ್ಯಕ್ಕೆ ಬೆಳಿಗ್ಗೆ ಹೋಗಿದ್ದು, ಸದ್ರಿ ಅತಿಥಿ ಗೃಹದ ಪಾಳಿಯ ಕರ್ತವ್ಯವನ್ನು ಮುಗಿಸಿ ಮಧ್ಯಾಹ್ನ 2-00 ಗಂಟೆಗೆ ಮನೆಗೆ ಬಂದಿರುತ್ತಾರೆ. ನಂತರ ಮನೆಯಲ್ಲಿ ಊಟ ಮುಗಿಸಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದವರು ಸಂಜೆ ಸಮಯ ಕಾಫಿಕುಡಿದು ಮನೆಯಲ್ಲಿ ಕುಳಿತುಕೊಂಡಿದ್ದು ಸಂಜೆ 5-00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಗಂಡ ಬಾಲಕೃಷ್ಣರವರಿಗೆ ವಾಂತಿ ಪ್ರಾರಂಭವಾಗಿದ್ದು ಕೂಡಲೇ ಪಿರ್ಯಾದಿದಾರರು ಹಾಗೂ ಮೈದನನಾದ ನಾಗರಾಜ ನಾಯ್ಕ ರವರು ಸೇರಿ ಮೈದುನನ ಬಾಬ್ತು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಉಜಿರೆ ಎಸ್ ಡಿ ಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದು, ಸಂಜೆ 6-51 ಗಂಟೆಗೆ ಬಾಲಕೃಷ್ಣರವರು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆಂದು ವೈದ್ಯರು ತಿಳಿಸಿದ್ದು.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯು ಡಿ ಆರ್‌ 58/2022 ಕಲಂ: 174 ಸಿಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವೆಂಕಪ್ಪಗೌಡ ಪ್ರಾಯ 56 ವರ್ಷ ತಂದೆ: ದಿ: ಕಾಂತಪ್ಪ ಗೌಡ ವಾಸ:ಬಡಕೋಡಿಮನೆ ಕೇಪುಗ್ರಾಮ ಬಂಟ್ವಾಳ ತಾಲೂಕು  ಎಂಬವರ ದೂರಿನಂತೆ ಪಿರ್ಯಾದಿ ವೆಂಕಪ್ಪ ಗೌಡರು ಹಾಗೂ  ಅಣ್ಣ ಶೀನಪ್ಪ ಗೌಡರವರು ತೆಂಗಿನ ಕಾಯನ್ನು ಮರದಿಂದ ಕೀಳುವ ವೃತ್ತಿಯವರಾಗಿದ್ದು  ದಿನಾಂಕ:07.10.2022 ರಂದು   ನೆರೆಯ ಹೇಮಾವತಿ ಎಂಬವರ  ತೋಟದ ತೆಂಗಿನ ಮರದಿಂದ ತೆಂಗಿನ ಕಾಯನ್ನು ಕೀಳುವ ಸಲುವಾಗಿ ಅವರ ಮನೆಗೆ ಹೋಗಿದ್ದು ಮರ ಎರುವರೇ  ಅಲ್ಯೂಮಿನಿಯಂ ಏಣಿಯು  ಗುಡ್ಡದ ಒಂದು ಮರಕ್ಕೆ ಒರಗಿಸಿಟ್ಟಿದ್ದು ಸದ್ರಿ ಏಣಿಯನ್ನು ಮೃತ ಶೀನಪ್ಪ ಗೌಡರವರು ಎತ್ತಿಕೊಂಡು ಹೇಮಾವತಿರವರ ತೋಟಕ್ಕೆ ತರುತ್ತಿರುವಾಗ ಹೇಮಾವತಿರವರ ಗುಡ್ಡದಿಂದ ಹಾದು ಹೋಗಿರುವ ಹೈಟೆನ್ಸ್‌ನ್‌  ವಿದ್ಯುತ್‌  ತಂತಿಗೆ  ಏಣಿಯು  ಆಕಸ್ಮಿಕವಾಗಿ   ತಾಗಿ ಏಣಿಗೆ ವಿದ್ಯುತ್‌ ಪ್ರವಹಿಸಿ ಶೀನಪ್ಪ ಗೌಡರ ಮೈ ಮೇಲೂ ವಿದ್ಯುತ್‌ ಪ್ರವಹಿಸಿದ ಪರಿಣಾಮ ಶೀನಪ್ಪ ಗೌಡರನ್ನು ದೂರ ಎಸೆಯಲ್ಪಟ್ಟಿದ್ದು ಆರೈಕೆ ಮಾಡಲಾಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 39/2022  ಕಲಂ 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-10-2022 10:36 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080