ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 03

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಅಕ್ಬರ್ ಆಲಿ (25), ತಂದೆ: ಅಬ್ದುಲ್ ರಹಿಮಾನ್, ವಾಸ: ಪಿಲಿಚಂಡಿಕಲ್ಲು ಮನೆ, ಕುವೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ,  ದಿನಾಂಕ: 06-11-2022 ರಂದು ಕೆಎ 04 KB 0053 ನೇ ಮೋಟಾರು ಸೈಕಲ್‌ನ್ನು  ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ರಾತ್ರಿ 9.30 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸ್ಬಾ ಗ್ರಾಮದ ವಾಣಿಕಾಲೇಜು ಬಳಿ ತಲುಪುತ್ತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಗುರುವಾಯನಕೆರ ಕಡೆಯಿಂದ ಬೆಳ್ತಂಗಡಿ ಕಡೆಗೆ ಕೆಎ 21 S 7231 ನೇ ದ್ವಿಚಕ್ರ ವಾಹನವನ್ನು ಅದರ ಸವಾರ ಸಹಸವಾರನನ್ನು ಕುಳ್ಳಿರಿಸಿಕೊಂಡು ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರಿಗೆ ಎಡಕೈಯ ಮಣಿಗಂಟಿಗೆ, ಎಡಭುಜಕ್ಕೆ ಗುದ್ದಿದ ಗಾಯ, ಢಿಕ್ಕಿ ಹೊಡೆದ ದ್ವಿಚಕ್ರ ಸವಾರ ಚಿದಾನಂದನಿಗೆ ಬಲಕಾಲಿನ ಮೊಣಗಂಟಿಗೆ, ಎಡಕಾಲಿನ ಹೆಬ್ಬೆರಳಿಗೆ ಗುದ್ದಿದ ಗಾಯ, ಸಹಸವಾರ ಉದಯರವರಿಗೆ ತಲೆಯ ಎಡಭಾಗಕ್ಕೆ ಗುದ್ದಿದ ಗಾಯ, ಬಲಕಾಲಿನ ಹೆಬ್ಬೆರಳಿಗೆ ಗುದ್ದಿದ ಗಾಯವಾಗಿರುತ್ತದೆ, ಗಾಯಳುಗಳ ಪೈಕಿ ಪಿರ್ಯಾದಿದಾರರು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ, ಚಿದಾನಂದ ಮತ್ತು ಉದಯರವರು ಮಂಗಳೂರು ವೇನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 135/2022 ಕಲಂ; 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಸುಭಾಷ್ ಚಂದ್ರ ತಂದೆ: ಬಾಬು ಗೌಡ ವಾಸ :ಕುವೆಲೆ ಮನೆ, ಕರಾಯ ಗ್ರಾಮ, ಬೆಳ್ತಂಗಡಿ ತಾಲ್ಲೂಕು ಎಂಬವರ ದೂರಿನಂತೆ ದಿನಾಂಕ: 07-11-2022 ರಂದು ಕೆಎ 51 P 6325ನೇ ಕಾರಿನಲ್ಲಿ ಸಹಪ್ರಯಾಣಿಕರಾಗಿ ಗೋಮತಿ,ಸಂತೋಷ,ನವ್ಯ ರವರನ್ನು ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಮದ್ಯಾಹ್ನ 3.30 ಗಂಟೆಗೆ ಬೆಳ್ತಂಗಡಿ ತಾಲೂಕು ರೇಖ್ಯಾ ಗ್ರಾಮದ ನೇಲ್ಯಡ್ಕ ಎಂಬಲ್ಲಿಗೆ ತಲುಪುತ್ತಿದ್ದಂತೆ ನೇಲ್ಯಡ್ಕ ಒಳರಸ್ತೆಯಿಂದ ಕೆಎ 21 W 7141 ನೇ ದ್ವಿಚಕ್ರ ವಾಹನವನ್ನು ಅದರ ಸವಾರ ಒಮ್ಮೆಲೆ ಅಜಾಗರೂಕತೆ ಹಾಗೂ ನಿರ್ಲಕ್ಷದಿಂದ ರಾಷ್ಟ್ರೀಯ ಹೆದ್ದಾರಿ ಸಾಗುವ ವಾಹನಗಳನ್ನು ಗಮನಿಸದೇ ಮುಖ್ಯ ರಸ್ತೆಗೆ ಚಲಾಯಿಸಿ ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ರಸ್ತೆಯ ಬಲಬದಿಯ ಗುಂಡಿಗೆ ಮಗುಚಿ ಬಿದ್ದುದ್ದಲ್ಲದೇ ದ್ವಿಚಕ್ರ ವಾಹನ ಸವಾರ ದ್ವಿಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದನು ಪರಿಣಾಮ ಕಾರಿನಲ್ಲಿದ್ದ ಗೋಮತಿಯವರಿಗೆ ಮುಖಕ್ಕೆ,ನವ್ಯ ರವರಿಗೆ ಮುಖಕ್ಕೆ ಹಾಗೂ ಸಂತೋಷ ರವರಿಗೆ ಎಡಕೈಗೆ ಮುರಿತದ ಗಾಯ, ಪಿರ್ಯಾದಿದಾರರಿಗೆ ಬಲಕಾಲಿಗೆ ತರಚಿದ ಗಾಯ ಎದೆಗೆ ಗುದ್ದಿದ ಗಾಯವಾಗಿರುತ್ತದೆ .ದ್ವಿಚಕ್ರ ಸವಾರ ಥೋಮಸ್‌ M P ರವರಿಗೆ ಮುಖಕ್ಕೆ ,ತಲೆಗೆ ತರಚಿದ ಗಾಯ ಹಾಗೂ ಕೆಎ 21 W 7141 ನೇ ದ್ವಿಚಕ್ರ ವಾಹನದಲ್ಲಿ ಅದರ ಸವಾರ ಥೋಮಸ್‌ M P ರವರು  ಯಾವುದೇ ಮುಂಜಾಗ್ರತೆ ವಹಿಸದೇ ದ್ವಿ ಚಕ್ರ ವಾಹನದ ಕಾಲಬಳಿಯಲ್ಲಿ ನೀಲಿ ಬಣ್ಣದ ಕ್ಯಾನಿನಲ್ಲಿ ಯಾವುದೋ ಕಾರಣಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಆಸೀಡ್‌ ಥೋಮಸ್‌ M P ರವರ ಹೊಟ್ಟೆಗೆ ಮತ್ತು ಹೊಟ್ಟೆಯ ಕೆಳ ಭಾಗಗಳಿಗೆ ಚೆಲ್ಲಿ ಸುಟ್ಟ ಗಾಯವಾಗಿರುತ್ತದೆ. ಗಾಯಾಳುಗಳ ಪೈಕಿ ಗೋಮತಿ,ಸಂತೋಷ,ನವ್ಯ ರವರು ಚಿಕಿತ್ಸೆ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಹಾಗೂ ಥೋಮಸ್‌ ರವರು ಮಂಗಳೂರು ಫಾಧರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ  ಸಂಚಾರ  ಪೊಲೀಸ್ ಠಾಣೆ ಅ.ಕ್ರ:136/2022 ಕಲಂ 279,337.338.283  ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಕೇಶವ ಕೆ, ಪ್ರಾಯ 40  ವರ್ಷ, ತಂದೆ: ದಿ|| ವೆಂಕಪ್ಪ ಪೂಜಾರಿ, ವಾಸ: ಕೇಪುಳು ಮನೆ, ಚಿಕ್ಕಮುಡ್ನೂರು  ಅಂಚೆ & ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 06-11-2022 ರಂದು 18:30 ಗಂಟೆಗೆ ಆರೋಪಿ  ಮೋಟಾರ್ ಸೈಕಲ್ ಸವಾರ ರವಿ ಕೆ ಎಂಬವರು  KA-19-J-7419ನೇ ನೋಂದಣಿ ಮೋಟಾರ್ ಸೈಕಲಿನಲ್ಲಿ ಪಿರ್ಯಾದುದಾರರಾದ ಕೇಶವ ಕೆ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಕೇಪುಳು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕಿನ ಪುತ್ತೂರು ಕಸಬಾ ಗ್ರಾಮದ ಹಾರಾಡಿ ಅಶ್ವಿನಿ ಕ್ಲಿನಿಕ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ದೇವಪ್ಪ ಕೆ ಎಂಬವರು ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-B-9831ನೇ ನೋಂದಣಿ ನಂಬ್ರದ ಅಟೋರಿಕ್ಷಾಗೆ ಮೋಟಾರ್ ಸೈಕಲ್ ಅಪಘಾತವಾಗಿ, ಆರೋಪಿ ಮೋಟಾರ್ ಸೈಕಲ್ ಸವಾರ ರವಿ ಕೆ ಮತ್ತು ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲ ಕಾಲಿನ ಮೊಣಗಂಟಿಗೆ ಗುದ್ದಿದ ಹಾಗೂ ರಕ್ತಗಾಯವಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಆರೋಪಿ ಮೋಟಾರ್ ಸೈಕಲ್ ಸವಾರರಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿದ್ದು ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 172/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 01

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಿವಪ್ರಸಾದ್ ಆಳ್ವ, 46 ವರ್ಷ, ತಂದೆ : ದಿ|| ನಾರಾಯಣ ಆಳ್ವ, ವಾಸ : ಮೊಡಂಕಾಪು, ಬಿ-ಮೂಡ ಗ್ರಾಮ, ಬಂಟ್ವಾಳ ತಾಲೂಕು. ಎಂಬವರ ದೂರಿನಂತೆ ಬಂಟ್ವಾಳ ತಾಲೂಕು, ತುಂಬೆ ಗ್ರಾಮದ, ಕೆಳಗಿನ ತುಂಬೆ, ನೇತ್ರಾವತಿ ನದಿ ಕಿನಾರೆಯ ಬಳಿ ಇರುವ ಪ್ರಕಾಶ್ ಶೆಟ್ಟಿ ತುಂಬೆ ರವರ ಬಾಬ್ತು ಜಾಗದಲ್ಲಿರುವ ಕೃಷಿ ಬೆಳೆಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದು ಎಂದಿನಂತೆ ದಿನಾಂಕ 07-11-2022 ರಂದು ತೋಟ ಜಾಗದಲ್ಲಿರುತ್ತಾ ಸಂಜೆ 5-30 ಗಂಟೆ ಸಮಯಕ್ಕೆ ಪಕ್ಕದ ನೇತ್ರಾವತಿ ನದಿ ಕಿನಾರೆಯಲ್ಲಿ ನಿಂತು ಕೊಂಡಿದ್ದ ಸಮಯ ನೇತ್ರಾವತಿ ನದಿ ನೀರಿನಲ್ಲಿ ಅಂದಾಜು 40-45 ವರ್ಷ ಪ್ರಾಯದ ಓರ್ವ ಅಪರಿಚಿತ ಗಂಡಸಿನ ಮೃತದೇಹವು ಕವುಚಿ ಬಿದ್ದಿದ್ದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 58/2022 ಕಲಂ 174  ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-11-2022 07:52 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080