ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವೈ ಪ್ರಕಾಶ್‌ ಜೈನ್‌ ಪ್ರಾಯ 49 ವರ್ಷ ತಂದೆ: ಕುಮಾರಯ್ಯ ಶೆಟ್ಟಿ ವಾಸ: ಕಡೆ ಮನೆ, ಎಳನೀರು, ಮಲವಂತಿಗೆ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 07-12-2022 ರಂದು ನೊಂದಣಿಯಾಗದ ಹೊಸ ಟ್ರಾಕ್ಟರ್‌ ವಾಹನವನ್ನು ಅದರ ಚಾಲಕ ದೀಪಕ್‌ ರವರು ಪಕಿರೇಶ ಎಂಬವರನ್ನು ಕುಳ್ಳಿರಿಸಿಕೊಂಡು ಸಂಸೆ ಗಡಿಯಿಂದ ಬಂಗಾರಪಲ್ಕೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 1.00 ಗಂಟೆಗೆ ಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮದ ಅಬ್ಬಿ ಎಂಬಲ್ಲಿ ಟ್ರಾಕ್ಟರ್‌ ವಾಹನವನ್ನು ದುಡುಕುತನದಿಂದ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಲೋಕೇಶ್‌ ಎಂಬವರಿಗೆ ಢಿಕ್ಕಿ ಹೊಡೆದು ಟ್ರಾಕ್ಟರ್‌ ವಾಹನ ಎಡಮಗ್ಗುಲಾಗಿ ರಸ್ತೆಬದಿಯ ತೋಟಕ್ಕೆ ಮಗಚಿ ಬಿದ್ದ ಪರಿಣಾಮ ಪಾದಚಾರಿ ಲೋಕೇಶ್‌ ರವರು ತಲೆಗೆ, ಮೈಕೈಗಳಿಗೆ ತೀವ್ರ ರಕ್ತಗಾಯ, ಪಕಿರೇಶ, ದೀಪಕ್‌ ರವರು ಸಣ್ಣಪುಟ್ಟ ಗಾಯಗೊಂಡಿದ್ದು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಕಳಶ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಈ ಪೈಕಿ ತೀವ್ರ ಗಾಯಗೊಂಡ ಗಾಯಾಳು ಲೋಕೇಶ್‌ ರವರನ್ನು ವೈದ್ಯಾಧಿಕಾರಿಯವರು ಮಧ್ಯಾಹ್ನ 2.00 ಗಂಟೆಗೆ ಪರೀಕ್ಷಿಸಿ ಲೋಕೇಶ್‌ ರವರನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಸಾಗಿಸುವಾಗಲೇ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಗಾಯಾಳು ಪಕಿರೇಶ ರವರು ಚಿಕಿತ್ಸೆ ಬಗ್ಗೆ ಕಳಶ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿರುತ್ತಾರೆ..ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 157/2022 ಕಲಂ; 279,  337,304 (A) ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಲವೀನ್ (33) ತಂದೆ:ವಿಜಯನ್ ಎ ಎಸ್ ವಾಸ:ಅಡ್ಡೋಳೆ ಮನೆ ಶಿರಾಡಿ ಗ್ರಾಮ ಕಡಬ ಎಂಬವರ ದೂರಿನಂತೆ ಫಿರ್ಯಾದಿದಾರರಾದ ಲವೀನ್ ಪ್ರಾಯ 33 ವರ್ಷ  ತಂದೆ: ವಿಜಯನ್ ಎ.ಎಸ್ ವಾಸ: ಅಡ್ಡೋಳೆ ಮನೆ ಶಿರಾಡಿ ಗ್ರಾಮ ಕಡಬ ತಾಲೂಕು ಎಂಬವರು ದಿನಾಂಕ 06-12-2022 ರಂದು ಮನೆಗೆ ಬೇಕಾದ ಸಾಮಾಗ್ರಿಗಳನ್ನು ತರುವರೇ ಗುಂಡ್ಯ ಪೇಟೆಗೆ  ಮದ್ಯಾಹ್ನ 2.30 ಗಂಟೆಗೆ ಮನೆಯಿಂದ ಹೊರಟು ಗುಂಡ್ಯ ತಲುಪಿ ಮನೆಗೆ ಬೇಕಾದ ಸಾಮಾನು ಖರೀದಿಸಿ ವಾಪಾಸು ಬರುತ್ತಿರುವಾಗ ಕಡಬ ತಾಲೂಕು, ಶಿರಾಡಿ ಗ್ರಾಮದ ಗುಂಡ್ಯ ಸಮೀಪ  ತಲುಪಿದಾಗ ಸಮಯ ಸುಮಾರು 3.50 ಗಂಟೆಗೆ ಫಿರ್ಯಾದಿದಾರರ ಎದುರುಗಡೆಯಿಂದ ಅಂದರೆ ಶಿರಾಡಿ ಕಡೆಯಿಂದ ಗುಂಡ್ಯ ಕಡೆಗೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ  ಬರುತ್ತಿದ್ದ ಮೋಟಾರ್ ಸೈಕಲ್ ನಂ ಕೆಎ21 ಡಬ್ಲ್ಯು 6953 ನೇದರ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ತನ್ನ ವಾಹನವನ್ನು ಚಲಾಯಿಸಿ ಒಮ್ಮೇಲೆ ಸ್ಕಿಡ್ ಆಗಿ ರಸ್ತೆಗೆ ಬಿದ್ದು, ಸಹಸವಾರನಾಗಿರುವ ಹರಿದಾಸನ್ ಎಂಬವರಿಗೆ ಬಲ ಕಾಲು ಕೋಲು ಕಾಲಿಗೆ ಹಾಗೂ ತಲೆಗೆ ಸಾಮಾನ್ಯ ಸ್ವರೂಪದ ಗಾಯವಾಗಿರುತ್ತದೆ. ಮೋಟಾರ್ ಸೈಕಲ್ ನಂ ಕೆಎ21 ಡಬ್ಲ್ಯು 6953 ನೇದರ ಸವಾರ ಸಿನು ಎಂಬವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಅಪಘಾತಕ್ಕೆ ಮೋಟಾರ್ ಸೈಕಲ್ ನಂ ಕೆಎ21 ಡಬ್ಲ್ಯು 6953 ನೇದರ ಸವಾರ ಸಿನು ಎಂಬವರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಈ ಅಪಘಾತಕ್ಕೆ ಕಾರಣವಾಗಿರುತ್ತದೆ..ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   ಅ.ಕ್ರ 125/2022 ಕಲಂ:279 337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೆ ಮಾಯಿನುಕುಂಜ್ಞಿ ಪ್ರಾಯ 48 ವರ್ಷ ತಂದೆ:ಕೆಎ. ಅಬ್ದುಲ್ ರಹೀಮಾನ್ ವಾಸ: ಗೋಳಿತ್ತೊಟ್ಟು ಮನೆ ಗೋಳಿತ್ತೊಟ್ಟು ಗ್ರಾಮ ಕಡಬ ಎಂಬವರ ದೂರಿನಂತೆ ಫಿರ್ಯಾದಿರವರು ದಿನಾಂಕ 06-12-2022 ರಂದು ಮದ್ಯಾಹ್ನ 3.00 ಗಂಟೆಯ ಸಮಯಕ್ಕೆ ಕಲ್ಲಡ್ಕದಲ್ಲಿರುವ ತನ್ನ ಹೆಂಡತಿಯ ತವರು ಮನೆಗೆ ಮದುವೆ ಪ್ರಯುಕ್ತ ಕುಟುಂಬ ಸಮೇತಾ ಹೊರಟು ಹೋಗುವಾಗ ಮನೆಗೆ ಬೀಗ ಹಾಕಿ ಭದ್ರಪಡಿಸಿ ತನ್ನ ತಾಯಿಯನ್ನು ತಂಗಿ ಮನೆಗೆ ಬಿಟ್ಟು ಹೋಗಿರುತ್ತಾರೆ, ದಿನಾಂಕ 07-12-2022 ರಂದು ಬೆಳಿಗ್ಗೆ 06.15 ಗಂಟೆಗೆ ಫಿರ್ಯಾದಿದಾರರ ಅಣ್ಣ ಇಬ್ರಾಹಿಂ ರವರು ಅಂಗಡಿ ತೆರೆದು ಅಂಗಡಿ ವ್ಯಾಪಾರ ಮಾಡುತ್ತಿರುವಾಗ ಬೆಳಿಗ್ಗೆ ಸುಮಾರು 09.00 ಗಂಟೆ ಸಮಯಕ್ಕೆ ಅಂಗಡಿಯಲ್ಲಿ ನೀರು ಖಾಲಿಯಾಯಿತೆಂದು ನೀರಿಗೆ ಪಂಪ್ ಸ್ಟಾರ್ಟ್ ಮಾಡುವರೆ ಫಿರ್ಯಾದಿದಾರರ ಮನೆಯ ಕೀಯನ್ನು ತೆರೆಯಲು ಹೋದಾಗ ಮನೆಯ ಬೀಗ ಮುರಿದಿದ್ದು, ಒಳಗೆ ಹೋಗಿ ನೋಡಿದಾಗ ಗೋದ್ರೇಜ್  ಬೀಗ ತೆಗೆದು ಬಟ್ಟೆಯನ್ನು ಚೆಲ್ಲಾಪಿಲ್ಲಿಯಾಗಿ ಮಾಡಿರುವುದನ್ನು ನೋಡಿ ಫಿರ್ಯಾದಿದಾರರಿಗೆ ಕರೆ ಮಾಡಿ ವಿಚಾರ ತಿಳಿಸಿದ ಕೂಡಲೇ ಫಿರ್ಯಾದಿದಾರರು ಕಲ್ಲಡ್ಕದಿಂದ ಬಂದು ನೋಡಲಾಗಿ ಮನೆಯ ಕೊಠಡಿಗಳಲ್ಲಿ ಇರಿಸಲಾದ 03 ಗೋದ್ರೆಜ್ ಗಳನ್ನು ತೆರೆದು ಅದರಲ್ಲಿದ್ದ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಚಿನ್ನ ಮತ್ತು ಹಣವನ್ನು ಹುಡುಕಿರುತ್ತಾರೆ. ಫಿರ್ಯಾದಿದಾರರು ಮದುವೆ ಪ್ರಯುಕ್ತ ಹೋಗಿರುವುದರಿಂದ ಅವರಲ್ಲಿದ್ದ ಚಿನ್ನಗಳನ್ನೆಲ್ಲಾ ತೆಗೆದುಕೊಂಡು ಹೋಗಿದ್ದು, ಗೋದ್ರೆಜ್ ನಲ್ಲಿ ರೂ 2,000/- ಬಿಟ್ಟುಹೋಗಿದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   ಅ.ಕ್ರ 124/2022 ಕಲಂ:454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಧರ್ಮಸ್ಥಳ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬಾಬು @ ರುದ್ರ  ಪ್ರಾಯ:53ವರ್ಷ ತಂದೆ:ದಿ. ರವಿ ಮುಗೇರ ವಾಸ: ನೆಕ್ಕರೆ ಮನೆ ಅಲಂಕಾರು  ಗ್ರಾಮ ಕಡಬ ಎಂಬವರ ದೂರಿನಂತೆ ಫಿರ್ಯಾದಿದಾರರಾದ ಬಾಬು @ ರುದ್ರರವರು ತನ್ನ ಹೆಂಡತಿ ಮನೆಯಾದ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಪಜಿರಡ್ಕ ಎಂಬಲ್ಲಿಗೆ ದಿನಾಂಕ:06.12.2022 ರಂದು ಸಂಜೆ ಸಮಯ ಆಲಂಕಾರಿನಲ್ಲಿ ಕೆಲಸ ಮುಗಿಸಿಕೊಂಡು ಉಪ್ಪಿನಂಗಡಿಯಿಂದ ಧರ್ಮಸ್ಥಳಕ್ಕೆ ಬರುವ ಕೆ ಎಸ್ ಆರ್ ಟಿ ಸಿ ಬಸ್ಸಲ್ಲಿ ಬಂದು ಧರ್ಮಸ್ಥಳದ ನೀರ ಚಿಲುಮೆ ಎಂಬಲ್ಲಿ ಇಳಿದು ಪಜಿರಡ್ಕ ಕಡೆಗೆ ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ರಾತ್ರಿ ಸಮಯ 9-00 ಗಂಟೆಗೆ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಪಜಿರಡ್ಕ ಕಾಲನಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಫಿರ್ಯಾದಿದಾರರ ಎದುರುಗಡೆಯಿಂದ ಆರೋಪಿಗಳಾದ ಶಂಕರ, ಮತ್ತು ಶಂಕರನ ಮಕ್ಕಳಾದ ಸದಾಶಿವ ಹಾಗೂ ಶಶಿ ಎಂಬವರುಗಳು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ನೀನು ನಿನ್ನ ಹೆಂಡತಿಗೆ ಮನೆ ಕಟ್ಟಲು ಪೌಂಡೇಶನ್ ಹಾಕಿದ್ದು ಮುಂದಕ್ಕೆ ಮನೆ ಕಟ್ಟಿ ಕೊಡಬಾರದು ನೀನು ಮನೆ ಕಟ್ಟಲು ಪ್ರಾರಂಬಿಸಿದರೆ ನಿನ್ನ ಕೈಕಾಲು ಮುರಿಯುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಆರೋಪಿ ಸದಾಶಿವನು ಆತನ ಕೈಯಲ್ಲಿದ್ದ ಕತ್ತಿಯಿಂದ ಫಿರ್ಯಾದಿದಾರರ ಎಡ ಗೈ ರಟ್ಟೆಗೆ ಕಡಿದು ರಕ್ತ ಗಾಯ ಮಾಡಿರುವುದಲ್ಲದೇ,ಅರೋಪಿ ಶಶಿ ಎಂಬಾತನು ಒಂದು ಕಬ್ಬಿಣದ ಸರಳಿನಿಂದ ಬೆನ್ನಿಗೆ ಹೊಟ್ಟೆಯ ಬಲಭಾಗಕ್ಕೆ ಹೊಡೆದು ನೋವುಂಟು ಮಾಡಿದ್ದು ನೋವು ತಾಳಲಾರದೇ ಜೋರಾಗಿ ಬೊಬ್ಬೆ ಹಾಕಿದಾಗ ಬೊಬ್ಬೆ ಕೇಳಿ ಅಲ್ಲಿಗೆ ಫಿರ್ಯಾದಿದಾರರ ಪತ್ನಿ ತೇಜಸ್ವಿ  ಓಡಿಕೊಂಡು ಬರುವುದನ್ನು ನೋಡಿದ ಆರೋಪಿಗಳು ಈಗ ನೀನು ಬದುಕಿದ್ದೀಯಾ? ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿ ಹಲ್ಲೆ ಮಾಡಲು ಬಳಸಿದ ಕತ್ತಿಯನ್ನು ಅಲ್ಲೇ ಹುಲ್ಲುಗಳ ಮಧ್ಯೆ ಬಿಸಾಡಿ ಹೋಗಿದ್ದು ಫಿರ್ಯಾದಿದಾರರು ತನಗಾದ ಗಾಯದ ಬಗ್ಗೆ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುವುದಾಗಿದೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ 88/2022 ಕಲಂ:341, 504, 323,324, 506 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

 • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ:  07-12-2022 ರಂದು ಬಂಟ್ವಾಳ ಗ್ರಾಮಾಂತರ ಠಾಣೆ ಕಲಂ 366(A), 376 IPC ಮತ್ತು ಕಲಂ 4 POCSO Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹೆಚ್.ಟಿ ದ್ರುವ ಪ್ರಾಯ 43 ರ್ಷ ತಂದೆ : ದಿ.ತಿಮ್ಮರಾಯ ಗೌಡ ವಾಸ: ಹ್ಯಾರನೆ ಗ್ರಾಮ ಕಟ್ಟಾಯ ಹೋಬಳಿ ಅಗೀಲೆ ಅಂಚೆ ಹಾಸನ ಎಂಬವರ ದೂರಿನಂತೆ ಫಿರ್ಯಾದಿದಾರರಾದ ಹೆಚ್.ಟಿ ದ್ರುವ ಪ್ರಾಯ 43 ರ್ಷ ತಂದೆ : ದಿ.ತಿಮ್ಮರಾಯ ಗೌಡ ವಾಸ: ಹ್ಯಾರನೆ ಗ್ರಾಮ ಕಟ್ಟಾಯ ಹೋಬಳಿ ಅಗೀಲೆ ಅಂಚೆ ಹಾಸನ ತಾಲೂಕು ಮತ್ತು ಜಿಲ್ಲೆ ಎಂಬವರು ಕಳೆದ 18 ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಬಸ್‌ ನಲ್ಲಿ ಚಾಲಕ/ ನಿರ್ವಾಹಕವಾಗಿ ಕರ್ತವ್ಯ  ನಿರ್ವಹಿಸಿಕೊಂಡಿದ್ದು, ದಿನಾಂಕ: 07.12.2022 ರಂದು ಸುಳ್ಯ ಕೆ.ಎಸ್.ಆರ್‌.ಟಿ.ಸಿ ಘಟಕದಿಂದ ಸಾಯಂಕಾಲ 7.00 ಗಂಟೆಗೆ ಕೆಎ 21 ಎಫ್‌ 0158 ನೇ ಬಸ್‌ ನಲ್ಲಿ ಸುಳ್ಯ ಮುಂಡರಗಿ ರೂಟ್‌ ನಲ್ಲಿ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸಿಕೊಂಡು ರಾತ್ರಿ 7.50 ಗಂಟೆಗೆ ಪುತ್ತೂರು  ಕೆ.ಎಸ್.ಆರ್‌.ಟಿ.ಸಿ ಬಸ್‌ ನಿಲ್ದಾಣ ತಲುಪಿ ಬಸ್‌ ನ್ನು ನಿಲ್ಲಿಸಿ ಜನರನ್ನು ಹತ್ತಿಸಿಕೊಂಡು ರಾತ್ರಿ ಸಮಯ ಸುಮಾರು 8.00 ಗಂಟೆಗೆ ಬಸ್‌ ಹೊರಡುವ ಸಮಯ ಓರ್ವ ಪ್ರಯಾಣಿಕನು ಫಿರ್ಯಾದಿದಾರರಲ್ಲಿ ಬಂದು ಬೆಳ್ಳಿಟ್ಟಿಗೆ ಒಂದು ಟಿಕೆಟ್‌ ಕೇಳಿರುತ್ತಾರೆ. ಆಗ ಫಿರ್ಯಾದಿದಾರರು ನೀವು ಬಸ್ ನ ಒಳಗೆ ಕುಳಿತುಕೊಳ್ಳಿ ಅಲ್ಲಿ ನಾನು ಟಿಕೆಟ್‌ ಕೊಡುತ್ತೇನೆ ಎಂದು ಹೇಳಿದಾಗ ಪುನಃ ಆತನು ನೀವು ಇಲ್ಲಿಯೇ ಟಿಕೆಟ್‌ ಕೊಡಿ ನಮ್ಮವರು ಒಳಗೆ ಇದ್ದಾರೆ ನಾನು ಹೋಗುತ್ತೇನೆ ನನ್ನ ಕೈಯಲ್ಲಿ ಟಿಕೆಟ್‌ ಕೊಡಿ ಎಂದು ಹೇಳಿದಾಗ ಫಿರ್ಯಾದಿದಾರರು  ನಾನು ಒಳಗಡೆ ಇರುವ ವ್ಯಕ್ತಿಯಲ್ಲಿ ಟಿಕೆಟ್‌ ಕೊಡುತ್ತೇನೆ ಅವರ ಕೈಯಲ್ಲಿ ಹಣ ಕೊಡಿ ಎಂದು ಹೇಳಿದಾಗ ಆರೋಪಿಯು ನನ್ನಲ್ಲಿ ಟಿಕೆಟ್‌ ಕೊಟ್ಟರೆ ಏನಾಗುತ್ತದೆ ನಿನ್ನ ಅಪ್ಪನ ಬಸ್ಸಾ ಎಂದು ಬೈದನು. ನಂತರ ಫಿರ್ಯಾದಿದಾರರು ಬಸ್‌ ನ್ನು ಹತ್ತಿ ಬಸ್ಸಿನ ಮೆಟ್ಟಿಲಿನ ಮೇಲೆ ನಿಂತಾಗ ಪುನಃ ಆರೋಪಿಯು ಟಿಕೆಟ್‌ ನನ್ನ ಕೈಯಲ್ಲಿ ಕೊಡು ಎಂದು ಹೇಳಿದಾಗ ನಿನ್ನ ಕೈಯಲ್ಲಿ ಕೊಟ್ಟರೆ ನೀನು ಅದನ್ನು ಇಟ್ಟುಕೊಂಡು ಹೋದರೆ ಮುಂದೆ ತನಿಖಾಧಿಕಾರಿಯವರು ಬಂದರೆ ನನಗೆ  ತೊಂದರೆಯಾಗುತ್ತದೆ ಎಂದು ಹೇಳಿದಾಗ ಆರೋಪಿಯು ಏಕಾಏಕಿಯಾಗಿ ಕೋಪಗೊಂಡು ಫಿರ್ಯಾದಿದಾರರು ಧರಿಸಿದ್ದ ಸಮವಸ್ತ್ರದ  ಕಾಲರ್‌ ಪಟ್ಟಿ ಹಿಡಿದು ಎಳೆದು ಆತನ ಕೈಯಲ್ಲಿದ್ದ ಕೀಯಿಂದ ಗಲ್ಲಕ್ಕೆ ಹಾಗೂ ಹಲ್ಲಿಗೆ  ಹಲ್ಲೆ ನಡೆಸಿದನು. ಆಗ ಫಿರ್ಯಾದಿದಾರರು ಆರೋಪಿಯ  ಕೈಯಲ್ಲಿದ್ದ ಕೀಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಪಿರ್ಯಾದಿದಾರರ ಬಲಕೆನ್ನೆಗೆ ಹಲ್ಲೆ ನಡೆಸಿರುವುದಾಗಿದೆ. ಹಲ್ಲೆಯಿಂದ ಗಾಯಗೊಂಡ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣಾ  ಅ.ಕ್ರ: 101/2022 ಕಲಂ: 504,324,323,353 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 2

 • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪುಷ್ಪಾ ಪ್ರಾಯ: 48 ವರ್ಷ ಗಂಡ: ರತ್ನಾಕರ ಶೆಟ್ಟಿ ವಾಸ: ಬಾರೆಕಾಡು ಮನೆ, ಬಿ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರ  ಗಂಡ ರತ್ನಾಕರ ಶೆಟ್ಟಿರವರು ದಿನಾಂಕ:06-12-2022 ರಂದು ಮನೆಯ ಪಕ್ಕದಲ್ಲಿ ಪೈಂಟಿಂಗ್ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ 2.00 ಗಂಟೆಯ ಸಮಯಕ್ಕೆ ವಾಪಾಸು ಬಂದು ತಲೆ ಸುತ್ತು ಬರುತ್ತಿರುವುದಾಗಿ ತಿಳಿಸಿದ್ದು,  ತಲೆಗೆ ತಣ್ಣೀರನ್ನು ಹಾಕಿಕೊಂಡು ಅಲ್ಲೇ ಕುಸಿದು ಬಿದ್ದರು. ತಕ್ಷಣ ಪಿರ್ಯಾದಿದಾರರು ನೆರೆಮನೆಯ ಕೇಶವ ಎಂಬವರ ಸಹಾಯದಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಅದರಂತೆ ಸಂಜೆ 5.45 ಗಂಟೆಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ 6.10 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 47-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎನ್.‌ ಚಿದಾನಂದ, ಪ್ರಾಯ: 34 ವರ್ಷ, ತಂದೆ: ಬಾಲಕೃಷ್ಣ ಕೊಡಂಕೇರಿ, ವಾಸ: ಕೊಡಂಕೇರಿ ಮನೆ, ಅರಂತೋಡು ಗ್ರಾಮ ಮತ್ತು ಅಂಚೆ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ತಾಯಿ ಕಮಲ (62), ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 05.12.2022 ರಂದು ಸುಳ್ಯ ತಾಲೂಕು ಅರಂತೋಡು ಗ್ರಾಮದ ಕೊಡಂಕೇರಿ ಎಂಬಲ್ಲಿ ತಮ್ಮ ಮನೆಯ ಬಳಿ ಇರುವ ತೆಂಗಿನ ಮರಗಳ ಬುಡದಲ್ಲಿ ಕೆಸ ಮಾಡಿಕೊಂಡಿದ್ದ ಸಮಯ ಸುಮಾರು 10:00 ಗಂಟೆಗೆ ಪಿರ್ಯಾದಿದಾರರ ಜಾಗದಲ್ಲಿದ್ದ ಒಣಗಿದ ತೆಂಗಿನ ಮರವೊಂದು ಆಕಸ್ಮಿಕವಾಗಿ ಬುಡಸಮೇತ ಪಿರ್ಯಾದಿದಾರರ ತಾಯಿ ಕಮಲರವರ ಮೇಲೆ ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರು ಕಮಲರವರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಅಂಬ್ಯಲೆನ್ಸ್ ಒಂದರಲ್ಲಿ ಸುಳ್ಯ ಕೆವಿಜೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿರುತ್ತಾರೆ. ಬಳಿಕ ಅದೇ ದಿನ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು, ಅಲ್ಲಿನ ವೈದ್ಯರು ಪಿರ್ಯಾದಿದಾರರ ತಾಯಿಯವರಿಗೆ ಚಿಕಿತ್ಸೆ ನೀಡಿದಲ್ಲಿ ಕಮಲರವರು ಚಿಕಿತ್ಸೆಗೆ ಯಾವುದೇ ರೀತಿ ಸ್ಪಂದನೆ ನೀಡದೇ ಇರುವುದರಿಂದ ವಾಪಾಸು ಕರೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ ಪಿರ್ಯಾದಿದಾರರು ಕಮಲರವರನ್ನು ವಾಪಾಸು ಸುಳ್ಯ ಕೆವಿಜಿ ಆಸ್ಪತ್ರೆಗೆ ದಿನಾಂಕ: 06/12/2022 ರಂದು ಸಾಯಂಕಾಲ ಕರೆದುಕೊಂಡು ಬಂದು ಚಿಕಿತ್ಸೆ ಬಗ್ಗೆ ದಾಖಲಿಸಿರುವುದಾಗಿದೆ. ದಿನಾಂಕ: 07.12.2022 ರಂದು ಸುಳ್ಯ ಕೆವಿಜಿ ಆಸ್ಪತ್ರೆ ವೈದ್ಯರು ಕೂಡಾ ಪಿರ್ಯಾದಿದಾರರ ತಾಯಿ ಕಮಲರವರ ಮೆದುಳು ನಿಷ್ಕ್ರಿಯ ಗೊಂಡಿರುವುದರಿಂದ ಚಿಕಿತ್ಸೆಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲವಾಗಿ ತಿಳಿಸಿದ್ದುದರಿಂದ ಪಿರ್ಯಾದಿದಾರರು ತಾಯಿ ಕಮಲರವರನ್ನು ದಿನಾಂಕ: 07.12.2022 ರಂದು ಸಾಯಂಕಾಲ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು, ಕಮಲರವರು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆಗೆ ಸ್ಪಂದಿಸದೇ 17:09 ಗಂಟೆಗೆ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ದೃಢಪಡಿಸಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಆರ್‌ ನಂಬ್ರ 53/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-12-2022 11:26 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080