ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕರುಣಾಕರ ಪ್ರಾಯ: 34 ವರ್ಷ ತಂದೆ: ತಿಮಪ್ಪ ಮೂಲ್ಯ  ವಾಸ : #4-16 ನಾಯಿಲ ಮನೆ, ನರಿಕೊಂಬು ಗ್ರಾಮ ಮತ್ತು ಅಂಚೆ,     ಪಾಣೆಮಂಗಳೂರು, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 08-02-2023 ರಂದು ಪಿರ್ಯಾಧಿದಾರರು ತನ್ನ ಬಾಬ್ತು ಅಂಗಡಿಯಲ್ಲಿದ್ದ ಸಮಯ ಸಾರ್ವಜನಿಕರೊಬ್ಬರು ಕರೆ ಮಾಡಿ ಪಿರ್ಯಾದಿದಾರರ ಅಣ್ಣ ಚಂದ್ರಹಾಸ ಕುಲಾಲ್ ರವರಿಗೆ ತುಂಬೆ ಬಿ ಎ ಕಾಲೇಜು ಬಳಿ ಅಪಘಾತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಬಳಿಕ ಪಿರ್ಯಾಧಿದಾರರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿ ಅವರ ಅಣ್ಣ ಚಂದ್ರಹಾಸ ಕುಲಾಲ್ ರವರನ್ನು ನೋಡಲಾಗಿ   ಹಿಂಬದಿ ತಲೆಗೆ ಗುದ್ದಿದ ರಕ್ತ ಗಾಯ, ಮುಖಕ್ಕೆ ಗುದ್ದಿದ ಮತ್ತು ತರಚಿದ ಗಾಯ, ಕೈ ಕಾಲುಗಳಲ್ಲಿ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು ಪಿರ್ಯಾಧಿದಾರರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಆಟೋರಿಕ್ಷಾ ಚಾಲಕನನ್ನು ಅಪಘಾತದ ಬಗ್ಗೆ ವಿಚಾರಿಸಲಾಗಿ ಆಟೋರಿಕ್ಷಾ ಚಾಲಕ ಕಿಶೋರ್ ರವರು ಫರಂಗಿಪೇಟೆ ಕಡೆಯಿಂದ ಬಿ ಸಿ ರೋಡು ಕಡೆಗೆ ಬರುತ್ತಿದ್ದ ಸಮಯ ಸುಮಾರು ಬೆಳಿಗ್ಗೆ 09:30 ಗಂಟೆಗೆ ಬಂಟ್ವಾಳ ತಾಲೂಕು ತುಂಬೆ ಗ್ರಾಮದ ತುಂಬೆ ಬಿ ಎ ಕಾಲೇಜು ಬಳಿ ತಲುಪುತ್ತಿದಂತೆ ಅದೇ ಮಾರ್ಗವಾಗಿ ಆಟೋರಿಕ್ಷಾ ಮುಂದಿನಿಂದ ಸುಮಾರು 100 ಅಡಿ ಅಂತರದಲ್ಲಿ ಮೋಟಾರ್ ಸೈಕಲೊಂದನ್ನು ಅದರ ಸವಾರ ಸಹ ಸವಾರನನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸಹ ಸವಾರನನ್ನು ರಸ್ತೆಗೆ ಬೀಳಿಸಿ ಮೋಟಾರ್ ಸೈಕಲನ್ನು ನಿಲ್ಲಿಸದೆ ಪರಾರಿಯಾಗಿರುವುದಾಗಿ ತಿಳಿಸಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 25/2023 ಕಲಂ: 279, 337 ಐಪಿಸಿ , 134(A&B) 187 ಐಎಮ್ ವಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

  • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 07-02-2022 ರಂದು 18.30 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ  ಎಮ್ ಎಸ್ ಎಸ್ ಲಾಡ್ಜ್ ನಲ್ಲಿ   ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ನಿರೀಕ್ಷಕರಿಗೆ ಬಂದ ಮಾಹಿತಿ ಮೇರೆಗೆ  ಸದ್ರಿ ಸ್ಥಳಕ್ಕೆ ಧಾಳಿ  ಠಾಣಾ ಸಿಬ್ಬಂಧಿಗಳೊಂದಿಗೆ ಸಮಯ ಸುಮಾರು 20.15 ಗಂಟೆಗೆ ಧಾಳಿ ನಡೆಸಿ ವೇಶ್ಯಾವಾಟಿಕೆ ನಿರತರಾಗಿದ್ದ ಆರೋಪಿಗಳಾದ  ಸಂತೋಷ್ , ಇರ್ಷಾದ್ ಪಿ  ಇವರುಗಳನ್ನು  ವಶಕ್ಕೆ ಪಡೆದುಕೊಂಡು, ಕೃತ್ಯದಲ್ಲಿ  5 ನೊಂದ‌ ಮಹಿಳೆಯರನ್ನು ಮಹಿಳೆಯರನ್ನು  ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 05/2023 ಕಲಂ:3,4,5(D) ITP ACT ಯಂತೆ ಪ್ರಕರಣ ದಾಖಲಿಸಲಾಗಿದೆ. ಕೃತ್ಯದಲ್ಲಿ ಲಾಡ್ಜ್ ಮಾಲಿಕರು, ಮ್ಯಾನೇಜರ್ ಹಾಗೂ ಇತರರ ಪಾತ್ರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಅಕ್ರ ನಂ 05/2023 ಕಲಂ:3,4,5(D) ITP ACT ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ: 08.02.2023 ರಂದು 08.00 ಗಂಟೆಗೆ ಬೆಳ್ತಂಗಡಿ ತಾಲೂಕು ನಿಡ್ಲೆ  ಗ್ರಾಮದ, ಬೂಡುಜಾಲು ಶಾಂತಿನಗರ ಎಂಬಲ್ಲಿರುವ ಸಾರ್ವಜನಿಕ ಬಸ್ಸು ತಂಗುದಾಣದ ಹಿಂಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡುತ್ತಿದ್ದ ಆರೋಪಿಗಳಾದ ಆಶೋಕ ಮತ್ತು ಯಶೋಧರ ಎಂಬವರನ್ನು ಧರ್ಮಸ್ಥಳ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಅನೀಲಕುಮಾರ್ ಡಿ ಹಾಗೂ ಸಿಬ್ಬಂದಿಯವರು ವಶಕ್ಕೆ ಪಡೆದು, ಸದ್ರಿಯವರಿಂದ ಮದ್ಯದ ಬಾಟಲಿ, ಲೋಟ, ಹಾಗೂ ಚೀಲವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ. ಕ್ರ 07/2023 ಕಲಂ: 15(ಎ) 32(3) ಕೆ ಇ ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ:05-02-2023 ರಂದು ಬೆಳಿಗ್ಗೆ ಸಮಯ ಸುಮಾರು  09.30 ಗಂಟೆಗೆ ಸಮಯ ಪಿರ್ಯಾದಿದಾರರ ಗಂಡನ ತಮ್ಮನ ಮಗ ಪಿಪಿ ಪ್ರಸಾದ್ ಎಂಬಾತನು ಪಿರ್ಯಾದಿದಾರರು  ಒಬ್ಬರೇ ಮನೆಯಲ್ಲಿ ಇರುವ ಸಮಯ  ಏಕಾಏಕಿ  ಮನೆಯ ಅಂಗಳಕ್ಕೆ  ಆಕ್ರಮ ಪ್ರವೇಶ ಮಾಡಿ ತುಳು ಭಾಷೆಯಲ್ಲಿ ಅವಾಚ್ಯ ಶಬ್ದದಿಂದ ಬೈದು, ಪಿರ್ಯಾದಿದಾರರೊಂದಿಗೆ ಅನುಚಿತವಾಗಿ ವರ್ತಿಸಿ,  ಹಲ್ಲೆ ನಡೆಸಿದಾಗ ಜೋರಾಗಿ ಬೊಬ್ಬೆ ಹೊಡೆದಿದ್ದು, ಈ ವೇಳೆ ನೆರೆಯ ಮನೆಯವರು ಹಾಗೂ ಪೇಟೆಯಿಂದ ಬರುತ್ತಿದ್ದ ಪಿರ್ಯಾದಿದಾರರ ಗಂಡ  ಸ್ಥಳಕ್ಕೆ ಓಡಿಕೊಂಡು ಬರುವುದನ್ನು ಕಂಡು ಪಿ ಪಿ ಪ್ರಸಾದನು ಪಿರ್ಯಾದಿದಾರನ್ನು ಉದ್ದೇಶಿಸಿ ಜೀವ ಬೆದರಿಕೆ ಒಡ್ಡಿ ಓಡಿ ಹೋಗಿರುತ್ತಾನೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ:447,504,323,354(A) 506 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೆ  ರಾಮ ಚಂದ್ರ  ರಾವ್‌ , (67) ತಂದೆ:  ದಿ|  ಕೆ ಸೋಮಶೇಖರ ರಾವ್‌ , ವಾಸ ಅಮಣ ಬೈಲು  ಮನೆ, ಕರಂಬಾರು  ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾದಿದಾರರ ತಮ್ಮ  ಕೆ. ಸತೀಶ್  ರಾವ್ (60) ಎಂಬವರು  ದಿನಾಂಕ: 08-02-2023 ರಂದು  ಬೆಳಿಗ್ಗೆ  ಸುಮಾರು  08:00 ಗಂಟೆಗೆ ಬೆಳ್ತಂಗಡಿ  ತಾಲೂಕು  ಕರಂಬಾರು  ಗ್ರಾಮದ   ಕಾಪಿನಡ್ಕ  ಎಂಬಲ್ಲಿ  ತನ್ನ   ಮನೆಯ  ಬಳಿ  ತೆಂಗಿನ ಮರಕ್ಕೆ  ಏಣಿ  ಇಟ್ಟು   ಕೊಕ್ಕೆಯಿಂದ  ಸಿಯಾಳ ( ಎಳೆನೀರು) ತೆಗೆಯುವ  ಸಮಯ ಸಿಯಾಳ  ತಲೆಗೆ  ಬಿದ್ದು  ಸುಮಾರು  15 ಅಡಿ  ಎತ್ತರದಿಂದ ನಿಂತಿದ್ದವರು  ಹಿಡಿತ ತಪ್ಪಿ  ಕೆಳಗೆ  ಬಿದ್ದು  ತಲೆಗೆ  ಗಂಭೀರ  ಗಾಯಗೊಂಡವನ್ನು ಫಿರ್ಯಾದಿದಾರರು  ಮತ್ತು  ಇತರರು ಉಜಿರೆ ಎಸ್ ಡಿ ಎಂ  ಆಸ್ಪತ್ರೆಗೆ   ಕರೆದುಕೊಂಡು  ಹೋಗಿ  ಅಲ್ಲಿಂದ  ಹೆಚ್ಚಿನ  ಚಿಕಿತ್ಸೆಯ  ಬಗ್ಗೆ  ಬೆಳ್ತಂಗಡಿ   ಸರಕಾರಿ  ಆಸ್ಪತ್ರೆಗೆ   ಕರೆದುಕೊಂಡು  ಬಂದಾಗ  ವೈದ್ಯರು 10:00 ಗಂಟೆಗೆ  ಪರೀಕ್ಷಿಸಿ  ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 06-2023 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-02-2023 02:35 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080