ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಿತೇಶ್ ಪ್ರಾಯ 24 ವರ್ಷ ತಂದೆ: ಆನಂದ ಪೂಜಾರಿ ವಾಸ: ಬ್ರಹ್ಮರಕೂಟ್ಲು ಮನೆ, ಕಳ್ಳಿಗೆ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 08-03-2021 ರಂದು ಪಿರ್ಯಾದಿದಾರರು ಕೆಎ 08 ಎಂ 2572 ನೇ ಕಾರನ್ನು ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 9.10 ಗಂಟೆಗೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಮುಂಡಾಜೆ ಶೀಟ್ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ ಕೆಎ 19 ವೈ 3790 ನೇ ಮೋಟಾರು ಸೈಕಲ್ ನಲ್ಲಿ ಸವಾರ ಆನಂದ ಗೌಡ ರವರು ಸಹ ಸವಾರನನ್ನಾಗಿ ಹರೀಶ ಎಂಬವರನ್ನು ಕುಳ್ಳಿರಿಸಿಕೊಂಡು ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನ ಜಖಂ ಆಗಿ ಮೋಟಾರು ಸೈಕಲ್ ಸವಾರ ಆನಂದ ಗೌಡ ಮತ್ತು ಸಹ ಸವಾರ ಹರೀಶ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ  ಬಿದ್ದು ಆನಂದ ಗೌಡ ರವರು ಬಲಕಾಲಿನ ತೊಡೆಗೆ, ಬಲಕಾಲಿನ ಮೊಣಗಂಟಿಗೆ ಗುದ್ದಿದ ರಕ್ತ ಗಾಯ, ಹರೀಶ ರವರು ಬಲಕಾಲಿನ ಮೊಣಗಂಟಿಗೆ, ಬಲಕಾಲಿನ ಕೋಲು ಕಾಲಿಗೆ, ಪಾದಕ್ಕೆ ಗುದ್ದಿದ ರಕ್ತಗಾಯಗೊಂಡಿರುತ್ತಾರೆ. ಗಾಯಾಳುಗಳ ಪೈಕಿ ಹರೀಶ ರವರು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿದ್ದು ಆನಂದ ಗೌಡ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಆಸ್ಪತ್ರೆಗೆ  ಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 21/2021, ಕಲಂ; 279,337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುಲೈಮಾನ್‌, ಪ್ರಾಯ 36 ವರ್ಷ, ತಂದೆ: ಎ. ಹಸನಬ್ಬ, ವಾಸ:  ಕಂಚರಬೊಟ್ಟು ಮನೆ, ಬಿಳಿಯೂರು  ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 06-03-2021 ರಂದು 14-30 ಗಂಟೆಗೆ ಆರೋಪಿ ಕಾರು ಚಾಲಕ ಪಿ.ಹೆಚ್‌ ಹಂಝ ಎಂಬವರು KA-34-M-1304 ನೇ ನೋಂದಣಿ ನಂಬ್ರದ ಓಮ್ನಿ ಕಾರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಮೈರಕಟ್ಟೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ತೀರಾ ತಪ್ಪು ಬದಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರ ಅಣ್ಣ ಮಹಮ್ಮದ್‌ ಎಂಬವರು ಸವಾರರಾಗಿ, ಪೆರ್ನೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ  KA-19-EN-1300 ನೇ ನೋಂದಣಿ ನಂಬ್ರದ ಸ್ಕೂಟರ್‌ಗೆ ಅಪಘಾತವಾಗಿ, ಮಹಮ್ಮದ್‌ ರವರು ರಸ್ತೆಗೆ ಎಸೆಯಲ್ಪಟ್ಟು, ಎಡಕಾಲಿನ ಪಾದ, ಮಣಿಗಂಟು, ಬಲಕೈಯ ಕಿರುಬೆರಳಿಗೆ, ಕೈಗೆ ಹಾಗೂ ಭುಜಕ್ಕೆ ಗಾಯವಾಗಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  43/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಯುವರಾಜ ಪ್ರಾಯ 31 ವರ್ಷ ತಂದೆ: ದಿ. ಪದ್ಮನಾಭ ಪೂಜಾರಿ ವಾಸ:ಕುರ್ಮಾನು ಮನೆ ಬಾಳ್ತಿಲ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ತಮ್ಮನಾದ ಉದಯರಾಜ ಬೆಂಗಳೂರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ಕೊರೋನಾ ಸಮಯದಲ್ಲಿ ಊರಿನಲ್ಲಿದ್ದು ನಂತರ ಅಗಸ್ಟ್ 2020 ತಿಂಗಳಿನಲ್ಲಿ ಬೆಂಗಳೂರಿಗೆ ಕೆಲಸಕ್ಕೆ ಹೋದವನು ದಿನಾಂಕ 20-02-2021 ರ ವರೆಗೆ ಮನೆಯವರೊಂದಿಗೆ ಸಂಪರ್ಕದಲ್ಲಿದ್ದವನು ಆ ಬಳಿಕ ಸಂಪರ್ಕದಲ್ಲಿರುವುದಿಲ್ಲ, ಆತನನ್ನು ಎಲ್ಲಾ ಕಡೆ ಹುಡುಕಾಡಿ, ಸಂಬಂಧಿಕರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಸಿಕ್ಕಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 30-2021 ಕಲಂ: ಗಂಡಸು ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆ ಬೆದರಿಕೆ ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಿ ವಾಸಪ್ಪ ಗೌಡ ಪ್ರಾಯ;52 ವರ್ಷ ತಂದೆ; ಲೋಕಯ್ಯಗೌಡ ವಾಸ; ಪುತ್ಯೆ  ಮನೆ , ಕಾರ್ಯತ್ತಡ್ಕ ಅಂಚೆ ಕಳಂಜ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿರವರು ದಿನಾಂಕ 07-03-2021 ರಂದು ಮದ್ಯಾಹ್ನ 3.00 ಗಂಟೆಗೆ ತನ್ನ ಪಾಲಿನ ಜಾಗದಲ್ಲಿ  ಕೆಲಸ ಮಾಡುತ್ತಿದ್ದ ಸಮಯದಲ್ಲಿ ದೂರದ ಸಂಬಂದಿಕರು ಮತ್ತು ಪರಿಸರದವರಾದ ಕೃಷ್ಣಪ್ಪ ಗೌಡ, ಪದ್ಮಯ್ಯ ಗೌಡ, ನೋಣಯ್ಯ ಗೌಡ, ಸೀತಾರಾಮ , ಬಿರ್ಮಣ್ಣ ಗೌಡ ,ರಂಜಿತ್ ,ರಮೇಶ ಎಂಬವರುಗಳು ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅವ್ಯಾಚ ಶಬ್ದಗಳಿಂದ ಬೈಯುತ್ತಾ ಕೈಯಿಂದ ಪದ್ಮಯ್ಯ ರವರು ಹೊಡೆದುದಲ್ಲದೆ ,ನೋಣಯ್ಯರವರು ಮತ್ತು ಇತರರು ಕಾಲಿನಿಂದ ಒದ್ದು ನೀನು ಇಲ್ಲಿ ಬಾರಿ ಕೃಷಿ ಕೆಲಸ ಮಾಡಿತ್ತಿಯಾ, ಇಲ್ಲಿ ಇದ್ದು ನಮಗೆ ಸಡ್ಡು ಹೊಡೆಯುತ್ತಿಯಾ  ಇಲ್ಲಿಂದ ಹೋಗಬೇಕು ಇಲ್ಲದಿದ್ದರೆ ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಲ್ಲದೆ ಕೃಷಿಗೆ ಆಳವಡಿಸಿದ ಪೈಪು ಹಾಳು ಮಾಡಿರುತ್ತಾರೆ. ನನಗೆ ಕೈಯಿಂದ ಹೊಡೆದ ಪರಿಣಾಮ ಸೊಂಟ, ಕಾಲು ಕೈಗಳಿಗೆ ಗುದ್ದಿದ ನೋವಾಗಿರುವುದ್ದರಿಂದ ನಾನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 16/2021 ಕಲಂ:143,147, ,447,504,323,506,427, ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

ವೇಣೂರು ಪೊಲೀಸ್ ಠಾಣೆ : ದಿನಾಂಕ: 08/03/2021 ರಂದು  ವೇಣೂರು ಠಾಣೆಯಲ್ಲಿ ಅ.ಕ್ರ ನಂಬ್ರ-17/2021 ಕಲಂ: 354(D)(2)  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಮಹಿಳಾ ಪೊಲೀಸ್ ಠಾಣೆ : ದಿನಾಂಕ 08-03-2021 ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ 11/2021 ಕಲಂ 354(ಎ) 354(ಡಿ) ಭಾದಂಸಂಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬಾಬು ಕೆ (50) ತಂದೆ: ಮನ್ಸಾ ಮುಗೇರಾ ವಾಸ: ಕುಕ್ಕುಜಡ್ಮ ಕಾಲೋನಿ, ಅಮರಮುಡ್ನೂರು ಗ್ರಾಮ ಸುಳ್ಯ  ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಮಗ ಸಂದೇಶ (20) ಎಂಬವನು ಕೂಲಿ ಕೆಲಸ ಮಾಡುತ್ತಿದ್ದು ಅದರಂತೆ ದಿನಾಂಕ 07.03.2021 ರಂದು ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಪಿಲಿಕೋಡಿ ಎಂಬಲ್ಲಿರುವ ದಯಾನಂದ ಎಂಬುವವರ ಮನೆಗೆ ಅಡಿಕೆ ಮರದಿಂದ ಅಡಿಕೆಯನ್ನು ತೆಗೆಯಲು ಹೋಗಿದ್ದು ಸಮಯ ಸುಮಾರು 12:30 ಗಂಟೆಗೆ ಅಡಿಕೆ ಮರದ ಮಧ್ಯೆಗೆ ಏರಿ ಕತ್ತಿ ಕಟ್ಟಿದ ಕೋಲು (ದೋಂಟಿ)ನಿಂದ ಅಡಿಕೆ ತೆಗೆಯುತ್ತಿರುವ ಸಮಯ ದೋಂಟಿ ಕೈಯಿಂದ ಜಾರಿ ಎಡಬದಿ ತೋಡೆಗೆ ತಾಗಿ ತೀವ್ರ ರಕ್ತಸ್ರಾವ ಆದವನನ್ನು  ದಯಾನಂದ ಮತ್ತು ಇತರರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿದ್ದು ನಂತರ ಸಮಯ ಸುಮಾರು 17:53 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಸಂದೇಶನು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 20/2021 ಕಲಂ: 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-03-2021 03:58 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080