ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦1

ಸುಳ್ಯ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಪ್ರವೀಣ್ (28) ತಂದೆ: ಶಿವನ್ ವಾಸ: ಕಂದಡ್ಕ, ಸಿಆರ್ ಸಿ ಕಾಲೋನಿ , ದುಗ್ಗಲಡ್ಕ ಅಂಚೆ, ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ: 07.04.2022 ರಂದು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕಂದಡ್ಕ ಸೇತುವೆ ಬಳಿ ನಿಂತುಕೊಂಡಿರುವಾಗ ಸಮಯ ಸುಮಾರು 18:00 ಗಂಟೆಗೆ ಕೆಎ 12 ಆರ್ 6615 ನೇದರ ಮೋಟಾರ್ ಸೈಕಲ್ ಸವಾರ ಸಿನಿತ್ ಎಂಬಾತನು ಸುಳ್ಯ ಕಡೆಯಿಂದ ಗುತ್ತಿಗಾರು ಕಡೆಗೆ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಬಂದು ಸೇತುವೆಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಆತನು ಮೋಟಾರ್ ಸೈಕಲ್ ಸಮೇತ ಬಿದ್ದು, ತಲೆಗೆ,ಎದೆಗೆ ಗಾಯವಾಗಿದ್ದವನನ್ನು ಪಿರ್ಯಾದುದಾರರು ಮತ್ತು ಅಲ್ಲೇ ಇದ್ದ ಧನಂಜಯ ಎಂಬವರು ಉಪಚರಿಸಿ ಸಿನಿತ್ ನನ್ನು ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದತಂದು ಒಳರೋಗಿಯಾಗಿ ದಾಖಲಿಸಿರುವುದಾಗಿದ್ದು ನಂತರ ಸಿನಿತ್ ನನ್ನು ಆತನ ಮನೆಯವರು ಹೆಚ್ಚಿನ  ಚಿಕಿತ್ಸೆಯ ಬಗ್ಗೆ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 41/2022 ಕಲಂ: 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: ೦1

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಾರಾಯಣ ಗೌಡ (46), ತಂದೆ ದಿ.ರಾಮ ಗೌಡ, ಪೊಲೀಸ್ ಹೆಡ್ ಕಾನ್ಸ್ ಸ್ಟೇಬಲ್,  ಶಂಕರ ನಾರಾಯಣ ಪೊಲೀಸ್ ಠಾಣೆ. ಉಡುಪಿ ಜಿಲ್ಲೆ ರವರ ದೂರಿನಂತೆ,  ತನ್ನ ಸಹೊದ್ಯೋಗಿ ಲೋಹಿತ ರವರೊಂದಿಗೆ ಮಾನ್ಯ ಕುಂದಾಪುರ ಎಸಿಜೆ ಮತ್ತು ಜೆಎಂಎಪ್ ಸಿ ನ್ಯಾಯಾಲಯದ ಸಿಸಿ ನಂಬ್ರ 1799/22 ರಲ್ಲಿ ವಾರಂಟ್ ಜ್ಯಾರಿಯ ಬಗ್ಗೆ ಬೆಳ್ತಂಗಡಿ ತಾಲೂಕು ಪಿಲ್ಯ ಗ್ರಾಮದ ಗೋಳಿಕಟ್ಟೆ ಎಂಬಲ್ಲಿಗೆ ದಿನಾಂಕ 08.04.2022 ರಂದು ಸಂಜೆ ಸುಮಾರು 4.30 ಗಂಟೆಗೆಬಂದಾಗ ವಾರಂಟ್ ಆಸಾಮಿ ಅಬ್ದುಲ್ ಲತೀಪ್ ಎಂಬಾತನು ಕಾಣ ಸಿಕ್ಕಿದಾಗ ಆತನಲ್ಲಿ ಪಿರ್ಯಾದಿದಾರರು “ನಾವು ಶಂಕರನಾರಾಯಣ ಪೊಲೀಸ್ ಠಾಣಾ ಪೊಲೀಸರು ಎಂದು ಹೇಳಿ ತನ್ನ ಐಡಿ ಕಾರ್ಡ್ ಗಳನ್ನು ತೋರಿಸಿ ನಿಮಗೆ ಮಾನ್ಯ ನ್ಯಾಯಾಲಯದ ವಾರಂಟ್ ಇದೆ” ಎಂದು ಹೇಳಿ ವಾರಂಟ್ ಪ್ರತಿಯನ್ನು ತೋರಿಸಿ ನಮ್ಮೊಂದಿಗೆ ಬರುವಂತೆ ತಿಳಿಸಿದಾಗ ಆಪಾದಿತನು ವಾರಂಟನ್ನು ಕಿತ್ತುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಕಾಲರ್ ಹಿಡಿದು  ಉರುಡಾಟ ನಡೆಸಿ ಇತರ ಆರೋಪಿಗಳನ್ನು ಕರೆದು ಅಕ್ರಮಕೂಟ ಸೇರಿಸಿ ಆಪಾದಿತನು ಲೋಹಿತರವರ ಎಡಕೈ ತೋರುಬೆರಳಿಗೆ ಕಚ್ಚಿ ಗಾಯಗೊಳಿಸಿ  ಪಿರ್ಯಾದಿ ಮತ್ತು ಲೋಹಿತರವರಿಗೆ ಆರೋಪಿತರೆಲ್ಲಾ ಕೈಯಿಂದ ಹೊಡೆದು  ಕಲ್ಲು ಎಸೆದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 22-2022 ಕಲಂ: 143, 147, 148, 504, 353, 332 ಜೊತೆಗೆ 149   ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: ೦2

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುಶೀಲ ಬಿ ಪ್ರಾಯ 38 ವರ್ಷ, ಗಂಡ: ದಿ: ಬಾಬು, ವಾಸ: ಕಲ್ಲೇರಿ ಮನೆ, ಎಣ್ಮೂರು ಗ್ರಾಮ ಮತ್ತು ಅಂಚೆ, ಕಡಬ ತಾಲೂಕು, ಎಂಬವರ ದೂರಿನಂತೆ  ಫಿರ್ಯಾದಿದಾರರ ಮಗ ಪದ್ಮನಾಭ ಪ್ರಾಯ 24 ವರ್ಷದವನು ವಿಪರೀತ ಮದ್ಯ ಸೇವಿಸುವ ಚಟವನ್ನು ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ವಿಪರೀತ ಮದ್ಯ ಸೇವಿಸಿದ ಪರಿಣಾಮ ಮಾನಸಿಕ ಖಿನ್ನತೆಗೆ ಒಳಗಾಗಿ ಯಾರೊಂದಿಗೂ ಹೆಚ್ಚಿಗೆ ಬೆರೆಯದೇ ಅವನಷ್ಟಕ್ಕೆ ಇರುತ್ತಿದ್ದವನು ದಿನಾಂಕ 08.04.2022 ರಂದು ಮಧ್ಯಾಹ್ನ 2-00 ಗಂಟೆಯಿಂದ 3-00 ಗಂಟೆಯ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ವಾಸದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ  ಪೊಲೀಸ್ ಠಾಣೆ, ಯುಡಿಆರ್ ನಂ 13/2022 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಚೀಂಕ್ರ ಮುಗೇರ ಪ್ರಾಯ:52 ವರ್ಷ ತಂದೆ;ದಿ/ ದೆಯ್ಯು ಮುಗೇರ ವಾಸ;ಪೆರ್ಮುಡ ಮನೆ ಪಟ್ರಮೆ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಮಗ ವಸಂತ ಪ್ರಾಯ:25 ವರ್ಷ ಎಂಬವರು ದಿನಾಂಕ:08-04-2022 ರಂದು ಮನೆಯ ಮಾಡಿನ ಕೆಲಸ ಮಾಡುತ್ತಿದ್ದವರು ಮಾಡಿಗೆ ಅಡ್ಡಕ್ಕೆ ಬೇಕಾದ ಕಾಟು ಮರದ ಗೆಲ್ಲುಗಳನ್ನು ಕತ್ತರಿಸಿ ತರುವರೇ ಮನೆಯ ಬಳಿ ಇರುವ ಕಾಡಿಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದವರು 17.00 ಗಂಟೆಯವರೆಗು ಮನೆಗೆ ಬಾರದೇ ಇದ್ದ ಕಾರಣ ಪಿರ್ಯಾದುದಾರರು ಅವರನ್ನು ಹುಡುಕುತ್ತಾ ಮನೆಯ ಸಮೀಪದ ಕಲ್ಮಲೆ ಕಾಡಿಗೆ ಹೋದಾಗ ಕಾಡಿನಲ್ಲಿ ವಿದ್ಯುತ್‌ ತಂತಿಯ ಮೇಲೆ ವಸಂತನು ಬಿದ್ದುಕೊಂಡಿದ್ದು  ಆತನ ಕೈ ಕಾಲು, ಸೊಂಟದ ಭಾಗ ಸುಟ್ಟು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯುಡಿಆರ್ ನಂ 20/2022 ಕಲಂ: 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-04-2022 10:48 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080