ಅಭಿಪ್ರಾಯ / ಸಲಹೆಗಳು

ಜೀವ ಬೆದರಿಕೆ ಪ್ರಕರಣ: 1

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲೂಯಿಸ್ ಪ್ರಾಯ: 48 ವರ್ಷ, ತಂದೆ: ಪೌಲಸ್ ವಾಸ: ಹೇಡ್ಯಾ ಮನೆ ಕಡಿರುದ್ಯಾವರ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 08.05.2022 ರಂದು ಸಂಜೆ 4.00 ಗಂಟೆ ಸುಮಾರಿಗೆ ಪಿರ್ಯಾದಿದಾರರು ಮಲ್ಲಡ್ಕ ಎಂಬಲ್ಲಿ ರಸ್ತೆಬದಿಯಲ್ಲಿ ನಿಂತುಕೊಂಡಿರುವಾಗ ಆರೋಪಿ ವಾಸು ಗೌಡರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಅವ್ಯಾಚ ಶಬ್ಧಗಳಿಂದ ಬೈದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳುತ್ತಾ ಕೊಕ್ಕೆ ಕತ್ತಿಯಿಂದ ಪಿರ್ಯಾದಿದಾರರ ಎಡ ಕೈ ರಟ್ಟೆ ಹಾಗೂ ಎಡ ಕೈ ಬೆರಳಿಗೆ ಕಡಿದಾಗ ಪಿರ್ಯಾದಿದಾರರು ತಪ್ಪಿಸಲು ಬಲ ಕೈ ಅಡ್ಡ ಹಿಡಿದಾಗ ಕತ್ತಿಯು ಬಲ ಕೈ ಅಂಗೈಗೆ ತಾಗಿ ರಕ್ತ ಗಾಯಗೊಳಿಸಿರುವುದಲ್ಲದೇ ಈ ಸಲ ಬಚಾವ್ ಆಗಿದ್ದಿ ಮುಂದಕ್ಕೆ ನಿನ್ನನ್ನು ನೋಡಿಕೊಳ್ಳುತ್ತೇನೆ. ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 30/2022 ಕಲಂ: 324, 504, 506 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಸುಮಿತ್ರ ಕೆ. ಪ್ರಾಯ- 48 ವರ್ಷ, ಗಂಡ- ತಿಮ್ಮಪ್ಪ ಕೆ. ವಾಸ- ಕುಡ್ಪುನಡ್ಕ ಮನೆ  ಮಾಡ್ನೂರು  ಗ್ರಾಮ, ಪುತ್ತೂರು   ತಾಲೂಕು ಎಂಬವರ ದೂರಿನಂತೆ ಫಿರ್ಯಾದುದಾರರ ಗಂಡ ತಿಮ್ಮಪ್ಪ  ಎಂಬವರು ಈದಿನ ದಿನಾಂಕ:- 08.05.2022ರಂದು ಬೆಳಿಗ್ಗೆ ಸುಮಾರು 7.00 ಗಂಟೆಗೆ  ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಸಾರಕರೆ ಎಂಬಲ್ಲಿರುವ ಬಶೀರ್ ಎಂಬವರ ಮನೆಯ ಛಾವಣಿಯ ಮೂಲೆ ಹೆಂಚಿಗೆ ಸಿಮೆಂಟ್ ಹಾಕುವ ಕೆಲಸಕ್ಕೆಂದು ತನ್ನ  ಮನೆಯಿಂದ  ತೆರಳಿದ್ದು,  ಬಳಿಕ  ಬೆಳಿಗ್ಗೆ ಸುಮಾರು 11.00 ಗಂಟೆಗೆ ಸಾರಕರೆಯ ಬಶೀರ್‌ರವರು ಫಿರ್ಯಾದುದಾರರ  ಮೊಬೈಲಿಗೆ  ಕರೆ ಮಾಡಿ ಫಿರ್ಯಾದುದಾರರ ಗಂಡ ತಿಮ್ಮಪ್ಪರು ಸದ್ರಿ  ಬಶೀರ್‌ರವರ ಮನೆಯ ಛಾವಣಿಯ ಮೂಲೆ ಹೆಂಚಿಗೆ ಸಿಮೆಂಟ್ ಹಾಕುವ ಕೆಲಸ ಮಾಡುತ್ತಿದ್ದ  ವೇಳೆ ಮನೆಯ ಅಟ್ಟದಿಂದ ನೆಲಕ್ಕೆ ಬಿದ್ದು, ಗಾಯಗೊಂಡಿದ್ದು, ಸದ್ರಿಯವರನ್ನು ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ.  ಅದರಂತೆ ಫಿರ್ಯಾದುದಾರರು ತನ್ನ ಮಗನಾದ ಭರತ್ ಪ್ರಜ್ವಲ್‌ ಎಂಬವನನ್ನು ತನ್ನ ಜೊತೆಯಲ್ಲಿ ಕರೆದುಕೊಂಡು  ಪುತ್ತೂರು ಸರಕಾರಿ ಆಸ್ಪತ್ರೆಗೆ ಬಂದಾಗ,  ಫಿರ್ಯಾದುದಾರರ ಗಂಡನನ್ನು ಬಶೀರ್‌ರವರು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ತಂದಾಗ ಮಧ್ಯಾಹ್ನ  ಸುಮಾರು 11.55 ಗಂಟೆಗೆ ಫಿರ್ಯಾದುದಾರರ ಗಂಡ ತಿಮ್ಮಪ್ಪರವರು ಮೃತಪಟ್ಟಿರುವುದಾಗಿ  ವೈದ್ಯಾಧಿಕಾರಿಯವರು  ತಿಳಿಸಿರುವ ವಿಚಾರ ಫಿರ್ಯಾದುದಾರರಿಗೆ ಬಶೀರ್‌ರವರಿಂದ ತಿಳಿದಿರುತ್ತದೆ.  ಬಳಿಕ ಫಿರ್ಯಾದುದಾರರು ತನ್ನ ಗಂಡನ ಜೊತೆಯಲ್ಲಿ ಈದಿನ ಕೆಲಸ ಮಾಡುತ್ತಿದ್ದ ಮಾಡನ್ನೂರಿನ ವಿಠಲ ಎಂಬವರಲ್ಲಿ ವಿಚಾರಿಸಲಾಗಿ ತಿಮ್ಮಪ್ಪರವರು  ದಿನಾಂಕ:- 08.05.2022ರಂದು ಸದ್ರಿ ವಿಠಲನ ಜೊತೆಯಲ್ಲಿ ಸಾರಕರೆಯ ಬಶೀರ್‌ರವರ ಸೂಚನೆಯಂತೆ ಬಶೀರ್‌ರವರ ಹಳೆಯ ಮನೆಯ ಛಾವಣಿಯ ಮೂಲೆ ಹೆಂಚಿಗೆ ಸಿಮೆಂಟ್ ಹಾಕುವ ಕೆಲಸ ಮಾಡುತ್ತಿದ್ದ ವೇಳೆ ಬೆಳಿಗ್ಗೆ ಸುಮಾರು 10.30 ಗಂಟೆಗೆ ಸದ್ರಿ ಮನೆಯ ಅಟ್ಟದಿಂದ ನೆಲಕ್ಕೆ ಬಿದ್ದು ಗಾಯಗೊಂಡಿರುವುದಾಗಿ ವಿಠಲರವರು ಫಿರ್ಯಾದುದಾರರಲ್ಲಿ ತಿಳಿಸಿರುತ್ತಾರೆ. ಸಾರಕರೆಯ ಬಶೀರ್‌ರವರು ಯಾವುದೇ ಮುನ್ನೆಚ್ಚರಿಕೆಯನ್ನು ವಹಿಸದೇ ಹಾಗೂ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಫಿರ್ಯಾದುದಾರರ ಗಂಡನ ಮೂಲಕ ತನ್ನ ಹಳೆಯ ಮನೆಯ ಛಾವಣಿಯ ಮೂಲೆ ಹೆಂಚಿಗೆ ಸಿಮೆಂಟ್  ಹಾಕುವ ಕೆಲಸ ಮಾಡಿಸಿರುವುದೇ  ಈ ಘಟನೆಗೆ ಕಾರಣ ಎಂಬುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಅಕ್ರ  57/2022 ಕಲಂ 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ:08.05.2022 ರಂದು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 57/2022 ಕಲಂ:323, 354, 451,504,506,509, 427, ಜೊತೆಗೆ 34 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂತೋಷ  ತಂದೆ: ಮೊನು ಮುಲ್ಯ ವಾಸ ಕೌಡಿಚ್ಚಾರ ಮನೆ ಅರಿಯಡ್ಕ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದುದಾರರು ಮತ್ತು ಅವರ  ಅಣ್ಣ  ಚಂದ್ರಹಾಸ ಎಂಬವರು ಕೌಡಿಚ್ಚಾರಿನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದು, ದಿನಾಂಕ:- 08.05.2022ರಂದು ಬೆಳಿಗ್ಗೆ ಸುಮಾರು 8.30 ಗಂಟೆಗೆ ಮನೆಯಲ್ಲಿದ್ದ ಚಂದ್ರಹಾಸನು ತನಗೆ ಎದೆ ನೋವಾಗುತ್ತಿರುವುದಾಗಿ ಹೇಳಿದ್ದು,  ಅದರಂತೆ  ಫಿರ್ಯಾದುದಾರರು ಆಟೋರಿಕ್ಷಾವೊಂದರಲ್ಲಿ ಚಂದ್ರಹಾಸನನ್ನು ಚಿಕಿತ್ಸೆಯ ಬಗ್ಗೆ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಸದ್ರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 9.45 ಗಂಟೆಗೆ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಚಂದ್ರಹಾಸನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಚಂದ್ರಹಾಸನು ಹೃದಯದ ಖಾಯಿಲೆಯಿಂದಲೋ ಅಥವಾ ಇನ್ನಿತರ ಕಾರಣದಿಂದಲೋ ಮೃತಪಟ್ಟಿದ್ದು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ UDR 14/2022 u/s 174 crpc ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-05-2022 10:37 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080