ಅಭಿಪ್ರಾಯ / ಸಲಹೆಗಳು

ಜೀವ ಬೆದರಿಕೆ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿಜೇತ್ (25) ತಂದೆ: ಮೋನಪ್ಪ ವಾಸ: ನೂಜಿ ಮನೆ, ತೋಡಿಕಾನ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ತಂದೆ ಮೋನಪ್ಪ ಎಂಬಾತನು ವಿಪರೀತ ಮಧ್ಯಪಾನ ಸೇವನೆ ಮಾಡುವ ಚಟವನ್ನು ಹೊಂದಿದ್ದು, ಮದ್ಯಪಾನ ಮಾಡಿ ವಿನಃ ಕಾರಣ ಬೈಯುವ,  ಜಗಳ ಮಾಡುವ ಸ್ವಭಾವದವನಾಗಿದ್ದು, ದಿನಾಂಕ: 07.10.2022 ರಂದು ಸಮಯ ಸುಮಾರು 21:00 ಗಂಟೆಗೆ ಪಿರ್ಯಾದುದಾರರು ಸುಳ್ಯ ತಾಲೂಕು ತೋಡಿಕಾನ ಗ್ರಾಮದ ನೂಜಿ ಮನೆ ಎಂಬ ತಮ್ಮ ಮನೆಯಲ್ಲಿರುವ ಸಮಯ ಆರೋಪಿ ವಿನಃ ಕಾರಣ ಬೊಬ್ಬೆ ಹೊಡೆಯುತ್ತಿರುವಾಗ, ಪಿರ್ಯಾದುದಾರರು ಬೊಬ್ಬೆ ಹೊಡೆಯಬೇಡಿ ನನಗೆ ತಲೆನೋವು ಎಂದು ಹೇಳಿದಾಗ ಆರೋಪಿ ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ  ಶಬ್ದಗಳಿಂದ ಬೈದು, ಮನೆಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಈಗ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳುತ್ತಾ ಕತ್ತಿಯನ್ನು ಪಿರ್ಯಾದುದಾರರ ಕಡೆಗೆ ಬಿಸಿದಾಗ ಕತ್ತಿ ಪಿರ್ಯಾದುದಾರರ ಎಡಬದಿಯ ಎದೆಗೆ ತಾಗಿ ರಕ್ತಗಾಯವಾಗಿದ್ದವರು, ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಬಂದಲ್ಲಿ ಅಲ್ಲಿನ ವೈದ್ಯರು ಪಿರ್ಯಾದುದಾರರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ: 117/2022, 324,504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹಸೀನಾ ಬಾನು ಪ್ರಾಯ 30 ವರ್ಷ ಗಂಡ: ಸಯ್ಯದ್ ಅಫಕ್ ವಾಸ: ಗುರುಂಪುನಾರ್ ಮನೆ ಬನ್ನೂರು ಗ್ರಾಮ ಮತ್ತು ಅಂಚೆ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಹಸೀನಾ ಬಾನು ಪ್ರಾಯ 30 ವರ್ಷ ಗಂಡ: ಸಯ್ಯದ್ ಅಫಕ್ ವಾಸ: ಗುರುಂಪುನಾರ್ ಮನೆ ಬನ್ನೂರು ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕು ಎಂಬವರ ಗಂಡ ಸಯ್ಯದ್ ಅಫಕ್ ಪ್ರಾಯ 39 ವರ್ಷ ಎಂಬವರು ದಿನಾಂಕ: 08.10.2022 ರಂದು ಬೆಳಿಗ್ಗೆ 7.45 ಗಂಟೆಗೆ ಮನೆಯಿಂದ ಉಪಹಾರ ಸೇವಿಸಿ ಬಳಿಕ ನೆಹರೂ ನಗರದ ಜಾಕಿ ಟ್ರೇಡರ್ಸ್ ಅಂಗಡಿಗೆ ವ್ಯವಹಾರಕ್ಕೆಂದು ಹೋಗಿರುತ್ತಾರೆ. ಫಿರ್ಯಾದಿದಾರರ ಗಂಡ ವ್ಯವಹಾರಕ್ಕೆಂದು ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೇ ಚಿಂತೆಗೆ ಒಳಗಾಗಿದ್ದು, ಇದೇ ಸಾಲದ ವಿಚಾರವಾಗಿ ಮನನೊಂದು ಅಥವಾ ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಜಾಕಿ ಟ್ರೇಡರ್ಸ್ ನ ಮೊದಲನೇ ಮಹಡಿಯಲ್ಲಿ ನೈಲಾನ್ ಹಗ್ಗದಿಂದ ದಿನಾಂಕ: 08.10.2022 ರಂದು ಸಮಯ ಬೆಳಿಗ್ಗೆ 7.45 ಗಂಟೆಯಿಂದ ಮಧ್ಯಾಹ್ನ 12.00 ಗಂಟೆಯ ಮಧ್ಯಾವಧಿಯಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ  ಯುಡಿಆರ್‌: 25/2022 ಕಲಂ:174(3) (iv)  ಸಿಆರ್‌ಪಿಸಿ     ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-10-2022 10:23 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080