ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 02

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ರೆಜೀಶ (39), ತಂದೆ:  ಸುಕುಮಾರನ್‌ M K, ವಾಸ: ಬೊಳ್ಮನಾರು ಮನೆ, ಪುದುವೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 07-11-2022 ರಂದು ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಮೇಲಿನಡ್ಕ ಬಸ್ಸು ನಿಲ್ದಾಣದ ಬಳಿಯಲ್ಲಿ ವಾಹನಕ್ಕೆ ಕಾಯುತ್ತ ನಿಂತಿರುವ ಸಮಯ ಸುಮಾರು ಸಂಜೆ 5.00 ಗಂಟೆಗೆ ಮುಳಿಯಮಜಲು ಮಣ್ಣು ರಸ್ತೆಯಿಂದ ಬುಲೇರೋ ವಾಹನ  ನಂಬ್ರ ಕೆಎ 19 MG 0023 ನೇದನ್ನು ಅದರ ಚಾಲಕಿ ದುಡುಕುತನದಿಂದ  ಚಲಾಯಿಸಿಕೊಂಡು ಧರ್ಮಸ್ಥಳ - ಕಕ್ಕಿಂಜೆ  ಮುಖ್ಯ ರಸ್ತೆಗೆ ಒಮ್ಮೆಲೆ ಚಲಾಯಿಸಿ ಪುದುವೆಟ್ಟು ಕ್ರಾಸ್‌ - ಕಕ್ಕಿಂಜೆ ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ನಂಬ್ರ ಕೆಎ 21 Q 5717 ನೇದಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಹಾಗೂ ಸಹ ಸವಾರಳು ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿರುವ ಪರಿಣಾಮ ಸವಾರನ  ಬಲಕಾಲಿಗೆ ಗುದ್ದಿದ ತರಹದ ,ಸಹ ಸವಾರಳಿಗೆ ಬಲ ಕಾಲಿನ ಕೋಲು ಕಾಲಿಗೆ ರಕ್ತ ಗಾಯ ವಾಗಿರುತ್ತದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 137/2022 ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಅಬ್ದುಲ್‌ ರಹಿಂ (37), ತಂದೆ: ದಿ| ಅಬ್ದುಲ್ಲಾ ಪಿ ಎ, ವಾಸ: ಕೊಪ್ಪದ ಕಜೆ ಮನೆ, ಗೂನಡ್ಕ ಅಂಚೆ. ಸಂಪಾಜೆ ಗ್ರಾಮ,  ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 07.11.2022 ರಂದು ಸುಳ್ಯದಿಂದ ಗೂನಡ್ಕ ಕಡೆಗೆ ತನ್ನ ಬಾಬ್ತು ಮೋಟಾರ್‌ ಸೈಕಲಿನಲ್ಲಿ ಹೊರಟು ಮಾಣಿ – ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಾ ಸಮಯ ಸುಮಾರು 15:40 ಗಂಟೆಗೆ ಸುಳ್ಯ ತಾಲೂಕು  ಅರಂತೋಡು ಗ್ರಾಮದ ಬಿಳಿಯಾರು ಎಂಬಲ್ಲಿರುವ ಪೆಟ್ರೋಲ್‌ ಪಂಪ್‌ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ ಹೋಗುತ್ತಿದ್ದ ಜೀಪೊಂದನ್ನು ಅದರ ಬಾಬ್ತು ಚಾಲಕ ರಸ್ತೆಯಲ್ಲಿ ಹೋಗುತ್ತಿದ್ದ ಕಂಟೈನರ್‌ ಲಾರಿಯೊಂದನ್ನು ಓವರ್‌ಟೇಕ್‌ ಮಾಡುವ ವೇಳೆ ಒಮ್ಮಲೇ ತನ್ನ ಜೀಪನ್ನು ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ರಸ್ತೆಯ ಬಲಬದಿಗೆ ಚಲಾಯಿಸಿ ಓವರ್‌ಟೇಕ್‌ ಮಾಡಿ ಎದುರಿನಿಂದ ಅಂದರೆ ಸಂಪಾಜೆ ಕಡೆಯಿಂದ ಬರುತ್ತಿದ್ದ ಮೋಟಾರ್‌ ಸೈಕಲ್‌ ಗೆ  ಡಿಕ್ಕಿ ಉಂಟು ಮಾಡಿದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ರಸ್ತೆಗೆ ಎಸೆಯಲ್ಪಟ್ಟರು. ಆತನ ಎರಡು ಕೈಗಳಿಗೆ, ತಲೆಗೆ ಹಾಗೂ ಶರೀರದ ಇತರ ಕಡೆಗಳಿಗೆ ರಕ್ತಗಾಯ ಹಾಗೂ ಗುದ್ದಿದ ಗಾಯವುಂಟಾಗಿದ್ದು,  ಆತನನ್ನು ಅಂಬ್ಯುಲೆನ್ಸ್‌ ಒಂದರಲ್ಲಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 130/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕೊಲೆ ಪ್ರಕರಣ: 01

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸೆಲೀಂ   28 ವರ್ಷ, ತಂದೆ:  ಅಬ್ದುಲ್‌ ಕಾದರ್‌ ವಾಸ; ಕೊಕ್ಕೆ ಪುಣಿ ಮನೆ,  ಬೋಳಂತೂರು ಗ್ರಾಮ, ಬಂಟ್ವಾಳ  ತಾಲೂಕು ಎಂಬವರ ದೂರಿನಂತೆ  ಪಿರ್ಯಾದಿಯ  ತಾಯಿಯ ತಮ್ಮನಾದ ರಿಕ್ಷಾ ಚಾಲಕ ಕೆಲಸ ಮಾಡುವ  ಅಬ್ದುಲ್‌ ರಹಿಮಾನ್‌ ಅದ್ರಾಮ ರವರ  ಮನೆಯು  ಅವರ ಮನೆ  ಸಮೀಪವಿದ್ದು,  ದಿನಾಂಕ: 07-11-2022 ರಂದು  ರಾತ್ರಿ 8 ಗಂಟೆಗೆ ಪಿರ್ಯಾದಿದಾರರು  ಮನೆ ಬಳಿ  ಇರುವ ಸಮಯ  ಅಬ್ದುಲ್‌ ರಹಿಮಾನ್‌ ಅದ್ರಾಮರವರು  ಅವರ ಬಳಿ ಬಂದು ತಿಳಿಸಿದಂತೆ  ಅಗತ್ಯದ ಕೆಲಸದ ಬಗ್ಗೆ ಒಂದು ಕಡೆಗೆ ಹೋಗಲಿದೆ. ರಿಕ್ಷಾದಲ್ಲಿ ಪೆಟ್ರೋಲ್‌ ಇಲ್ಲ.  ಪಿರ್ಯಾದಿದಾರರ ಬೈಕ್‌ ನಲ್ಲಿ ಜೊತೆಯಾಗಿ ಹೋಗೋಣವೆಂದು ತಿಳಿಸಿದಂತೆ,   ಪಿರ್ಯಾದಿದಾರರು ಪಲ್ಸರ್‌  ಬೈಕ್‌ ನಲ್ಲಿ ಅಬ್ದುಲ್‌ ರಹಿಮಾನ್‌   ಅದ್ರಾಮರವರನ್ನು  ಹಿಂಬದಿ ಕುಳ್ಳಿರಿಸಿ, ಬೈಕ್‌ ನ್ನು  ಬೋಳಂತೂರು-ಮಂಚಿಕಟ್ಟೆ- ಮೋಂತಿಮಾರು ದ್ವಾರದಿಂದಾಗಿ ಇರಾ ಸೋಮನಾಥ ದೇವಸ್ಥಾನದಿಂದ  ಸ್ವಲ್ಪ ಮುಂದಕ್ಕೆ  ಹೋಗುತ್ತಾ,  ಬಲಕ್ಕೆ ಇರುವ ರಸ್ತೆಯಲ್ಲಿ ಸುಮಾರು  2 ಕಿ.ಮೀ.  ದೂರ  ಹೋಗುತ್ತಾ ಇರಾ ಪದವು ಮಣ್ಣು  ರಸ್ತೆಯ ಪಕ್ಕ   ಅಬ್ದುಲ್‌ ರಹಿಮಾನ್‌ ಅದ್ರಾಮರವರು  ಬೈಕ್‌ ನಿಲ್ಲಿಸಲು  ತಿಳಿಸಿದಂತೆ,  ಪಿರ್ಯಾದಿದಾರರು ಬೈಕ್‌ ನಿಲ್ಲಿಸಿ,  ಇಲ್ಲಿ ಯಾಕೆ ಬೈಕ್‌ ನಿಲ್ಲಿಸಬೇಕೆಂದು ಕೇಳಿದರು. ಆ ಸಮಯ ಅಬ್ದುಲ್‌ ರಹಿಮಾನ್‌ ಅದ್ರಾಮರವರು ಬೈಕಿನಿಂದ ಇಳಿದು ದಿನಾಂಕ: 01-11-2022 ರಂದು ರಾತ್ರಿ 8-30 ಗಂಟೆಗೆ ಸುರಿಬೈಲುನ ಅಬ್ದುಲ್‌ ಸಮಾದ್‌ ನೊಂದಿಗೆ ಜಗಳವಾಗಿ ಸೀಮೆಎಣ್ಣೆ ಹಾಕಿ, ಬೆಂಕಿ ಕೊಟ್ಟು ಪಕ್ಕದ  ಗುಡ್ಡದಲ್ಲಿ  ಸಾಯಿಸಿದ್ದೇನೆ. ಹೆಣವನ್ನು ಗುಂಡಿಗೆ ಹಾಕಿ ಮುಚ್ಚಲು ಸಹಕರಿಸುವಂತೆ ಪಿರ್ಯಾದಿದಾರರನ್ನು ಕೇಳಿಕೊಂಡಾಗ, ಗಾಬರಿಗೊಂಡ ಪಿರ್ಯಾದಿದಾರರು ಅಬ್ದುಲ್‌ ರಹಿಮಾನ್‌ ಅದ್ರಾಮರವರನ್ನು ಅಲ್ಲೇ ಬಿಟ್ಟು ತಪ್ಪಿಸಿ, ಬೈಕ್‌ ರೈಡ್‌ ಮಾಡಿಕೊಂಡು   ನೇರವಾಗಿ ಅವರ  ಮನೆಗೆ ಬಂದಿರುವುದಾಗಿದೆ, ಈ ಬಗ್ಗೆ  ಬಂಟ್ವಾಳ ಗ್ರಾಮಾಂತರ ಠಾಣೆ  ಅ.ಕ್ರ: 82/2022, ಕಲಂ: 302, 201  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 01

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರಸನ್ನ  (38) ತಂದೆ; ದಿ/ ವ್ಯಾಸರಾಯ ಆಚಾರಿ ವಾಸ: ಸಂಜಯ ನಗರ, ಬೆಳ್ತಂಗಡಿ ಕಸಬಾ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ  ಪಿರ್ಯಾದುದಾರರ ಅಣ್ಣ ಪ್ರಶಾಂತ್‌ ಆಚಾರಿ (41)  ಎಂಬವರು  ಬಡಗಿ ಕೆಲಸಮಾಡಿಕೊಂಡಿದ್ದು ಸದ್ರಿಯವರು  ಗುರುವಾಯನಕೆರೆ ಕಡೆಯಲ್ಲಿ ಮನೆಯ ಮಹಡಿಯ ಮರದ ಪಕ್ಕಾಸಿನ ಕೆಲಸವನ್ನು ಮಾಡಿ ಈ ಕೆಲಸಕ್ಕಾಗಿ ಬಾಡಿಗೆಗೆ ಪಡೆದುಕೊಂಡಿದ್ದ ಕಬ್ಬಿಣದ ಏಣಿಯನ್ನು ದಿನಾಂಕ:08-11-2022 ರಂದು 19.00 ಗಂಟೆಗೆ  ವಾಪಾಸು  ಪಿರ್ಯಾದುದಾರರ ಗೂಡ್ಸ್ ವಾಹನದಲ್ಲಿ ತಂದು ಮೈತ್ರಿ ಎಂಟರ್‌ ಪ್ರೈಸಸ್‌ ಗೆ ಕೊಡಲು ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದ  ವೇಳೆ  ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಪರಿಕ್ರಮ ವಸತಿ ಗೃಹದ ಬಳಿಯಲ್ಲಿ ಕಟ್ಟುತ್ತಿದ್ದ ಪ್ಲೆಕ್ಸ್‌ ಗೆ ತಾಗಿ ಪ್ಲೆಕ್ಸ್‌ ಅಲ್ಲಿಯೇ ಹಾದು ಹೋಗುತ್ತಿದ್ದ ವಿದ್ಯುತ್‌ ತಂತಿಗೆ ಆಕಸ್ಮಿಕವಾಗಿ ತಾಗಿ ವಿದ್ಯುತ್‌ ಹರಿದು  ಕುಸಿದು ಬಿದಿರುವುದಲ್ಲದೇ ಪ್ಲಕ್ಸ್‌ ಕಟ್ಟುತ್ತಿದ್ದ ಸತೀಶ್ ನು ಕುಸಿದು ಬಿದಿದ್ದು ಕೂಡಲೇ ಇಬ್ಬರನ್ನೂ ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ  ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಚಿಕಿತ್ಸೆಯನ್ನು ನೀಡಿದಲ್ಲಿ ಪ್ರಶಾಂತ ಆಚಾರಿ  ಚಿಕಿತ್ಸೆ ಫಲಕಾರಿಯಾಗದೇ 20.16 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ  ಯು ಡಿ ಆರ್ ನಂ 48/2022 ಕಲಂ;174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-11-2022 07:54 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080