ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಯುವರಾಜ್‌ ಕೆ (19), ತಂದೆ: ಕೆ ರಾಮ ಮೂರ್ತಿ, ವಾಸ: 245, ವಾರ್ಡ್‌ ನಂಬ್ರ: 3, ಕೆಇಬಿ ಹತ್ತಿರ, ಚೋರ್ನುರ್‌, ಚೋರನೂರು, ಸಂಡೂರು, ಬಳ್ಳಾರಿ  ಎಂಬವರ ದೂರಿನಂತೆ ಪಿರ್ಯಾದಿದಾರರು ಮತ್ತು ಆನಂದಬಾಬುರವರು ದಿನಾಂಕ: 7-12-2022 ರಂದು ಅನೀಲ್‌ ಕುಮಾರ್‌ ಎಂಬವರ ಬಾಬ್ತು ಕೆಎ 70 H 1731 ನೇ ಮೋಟಾರು ಸೈಕಲ್‌ನಲ್ಲಿ ಹಿಂಬದಿ ಸಹ ಸವಾರರಾಗಿ ಕುಳಿತುಕೊಂಡು ಮೋಟಾರು ಸೈಕಲ್‌ನ್ನು  ಅನೀಲ್‌ ಕುಮಾರ್‌ರವರು ಸವಾರಿ ಮಾಡಿಕೊಂಡು ಮೂಡಿಗೆರೆ ಕಡೆಯಿಂದ ಉಜಿರೆ ಕಡೆಗೆ ಬರುತ್ತಿರುವ ಸಮಯ ಸುಮಾರು ರಾತ್ರಿ 10.45 ಗಂಟೆಗೆ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಚಾರ್ಮಾಡಿ 7 ನೇ ತಿರುವು ಬಳಿ ಮೋಟಾರು ಸೈಕಲ್‌ನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿ ಸವಾರನ ಚಾಲನಾ ಹತೋಟಿ ತಪ್ಪಿ ರಸ್ತೆಯ ಬದಿಯ ಸಿಮೇಂಟಿನ ತಡೆಗೊಡೆಗೆ ಢಿಕ್ಕಿ ಹೊಡೆಯಿತು ಪರಿಣಾಮ ಪಿರ್ಯಾದಿದಾರರಿಗೆ ಎಡಕಾಲಿನ ಕೋಲು ಕಾಲಿಗೆ ಮೂಳೆಮುರಿತದ ಗಾಯ, ಇನ್ನೋರ್ವ ಸಹ ಸವಾರ ಆನಂದ ಬಾಬುರವರಿಗೆ ತಲೆಯ ಹಿಂಬದಿಗೆ ತೀವ್ರ ತರಹದ ಗಾಯ, ಮೋಟಾರು ಸೈಕಲ್‌ ಸವಾರನಿಗೆ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ, ಗಾಯಾಳುಗಳೆಲ್ಲಾರು ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 158/2022 ಕಲಂ; 279 338,  ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದಯಾನಂದ, ಪ್ರಾಯ 43 ವರ್ಷ, ತಂದೆ; ದಿವಂಗತ ಬಾಲಕೃಷ್ಣ ನಾಯ್ಕ, ವಾಸ: ಉಂಡಿಲ ಮನೆ, ಕೋಡಿಂಬಾಳ ಗ್ರಾಮ, ಕಡಬ ಎಂಬವರ ದೂರಿನಂತೆ ದಿನಾಂಕ: 6.12.2022 ರಂದು 21.20 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ತನ್ನ ಅಣ್ಣ ಹರೀಶ ಎಂಬವರೊಂದಿಗೆ ಮೋಟಾರು ಸೈಕಲ್ ಕೆಎ-46-ಜೆ-8319 ನೇದರಲ್ಲಿ ಸಹಸವಾರನಾಗಿ ಕುಳಿತುಕೊಂಡು ಪುಂಜಾಲಕಟ್ಟೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗಲೆಂದು ಹೊರಟು ಪಾರೆಂಕಿ ಗ್ರಾಮದ ಮಡಂತ್ಯಾರು ಎಂಬಲ್ಲಿ ಮಡಂತ್ಯಾರು ಉಪ್ಪಿನಂಗಡಿ ಕ್ರಾಸ್ ಹತ್ತಿರ ತಲುಪಿದಾಗ ಎದುರುಗಡೆಯಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಮೋಟಾರ್   ಸೈಕಲ್ ಕೆಎಲ್-17-ಎಲ್-920 ನೇದನ್ನು ಅದರ ಸವಾರ ವಿಷ್ಣು ಎಂಬವರು  ಅಜಾಗರೂಕತೆ ಹಾಗೂ ನಿರ್ಲಕ್ಷತನದಿದ ರಸ್ತೆಯ ಬಲಬದಿಗೆ ಚಲಾಯಿಸಿ ತಂದು ಮೋಟಾರ್ ಸೈಕಲ್  ಕೆಎ-46-ಜೆ-8319 ನೇದಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಪಿರ್ಯಾದಿದಾರರು ಮತ್ತು ಆತನ ಅಣ್ಣ ಮೋಟಾರ್ ಸೈಕಲ್ ಸವಾರ ಹರೀಶ ಎಂಬವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಈ ಪೈಕಿ ಹರೀಶ ರವರ ಬಲಕೈ ಕಿರು ಬೆರಳಿಗೆ ಗುದ್ದಿದ ನೋವು ಮತ್ತು ಬಲ ಕಾಲಿನ ಪಾದಕ್ಕೆ ತೀವ್ರ ಸ್ವರೂಪದ ರಕ್ತ ಗಾಯ ಉಂಟಾಗಿದ್ದು ಆರೋಪಿ ಮೋಟಾರ್ ಸೈಕಲ್ ಸವಾರ ವಿಷ್ಣು ಎಂಬವರಿಗೆ ಕೂಡಾ ತರಚಿದ ನಮೂನೆಯ ಗಾಯವಾಗಿರುತ್ತದೆ.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 95/2022 ಕಲಂ: 279, 337 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 2

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚೆಲುವರಾಜು ಬಿ ಪೊಲಿಸ್‌ ಉಪಾಧೀಕ್ಷಕರು ಕರ್ನಾಟಕ ಲೋಕಾಯುಕ್ತ ಮಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರು ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿದ್ದು, ಸದ್ರಿಯವರಿಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಸ್ನಾನಘಟ್ಟ ಬಳಿ ನೇತ್ರಾವತಿ ನದಿಯಿಂದ ಸೂರ್ಯಕಮಲ್ ಮಹಲ್ ಮದುವೆ ಮಂಟಪದ ಹಿಂಭಾಗ ಇರುವಂತಹ ನೇತ್ರಾವತಿ ನದಿಯಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅದರಂತೆ ದಿನಾಂಕ: 08.12.2022 ರಂದು ಬೆಳಿಗ್ಗೆ 07.00 ಗಂಟೆಗೆ ಪಿರ್ಯಾದಿದಾರರು ಮತ್ತು ಅವರ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಮರಳುಗಾರಿಕೆ ನಡೆಯುತ್ತಿದ್ದು, ಸದ್ರಿ ಸ್ಥಳದಲ್ಲಿ ಮರಳು ತುಂಬಿದ KA19AA2726 ಲಾರಿ ಹಾಗೂ  KA21C1305 ನೇ ಖಾಲಿ ಲಾರಿ ಮತ್ತು ಮರಳು ತುಂಬಿದ ದೋಣಿ ಇರುವುದನ್ನು ಧೃಢಪಡಿಸಿಕೊಂಡು ಸದ್ರಿ ಲಾರಿಗಳ ಚಾಲಕರನ್ನು ವಿಚಾರಿಸಿದಾಗ ತಮ್ಮ ಹೆಸರು ಶಾಫಿ ಮತ್ತು ಅರ್ಷದ್ ಎಂದು ತಿಳಿಸಿದ್ದು. ಸದ್ರಿ ಮರಳನ್ನು ಸಾಗಾಟ ಮಾಡಲು ಪರವಾನಿಗೆ ಇದೆಯೇ ಎಂಬುದರ ಬಗ್ಗೆ ವಿಚಾರಿಸದಾಗ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿದ್ದುದ್ದಲ್ಲದೇ ಹಕೀಂ ಮತ್ತು ಸಿದ್ದಿಕ್ ಎಂಬವರುಗಳು ಈ ಮರಳುಗಾರಿಕೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದಂತೆ ಅಕ್ರಮ ಮರಳು ಸಾಗಾಟಕ್ಕೆ ಉಪಯೋಗಿಸಿದ  ವಾಹನಗಳು  ಹಾಗೂ ಮರಳು ಮತ್ತು ದೋಣಿಯ ಒಟ್ಟು ಮೌಲ್ಯ 8,08,000/ʼ/- ಆಗಬುಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ  89/2022 ಕಲಂ:379 ಮತ್ತು 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಾಜಾರಾಮ್  ಪ್ರಾಯ: 44 ವರ್ಷ  ತಂದೆ: ಶಿವರಾಮ ಭಟ್ ವಾಸ: ಶಿವಕೃಪಾ ಮನೆ, ಬುಡೋಳಿ ಅಂಚೆ, ಪೆರಾಜೆ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾದಿದಾರರು ದಿನಾಂಕ: 08.12.2022 ರಂದು  ಮನೆಯಲ್ಲಿರುತ್ತಾ ಸಮಯ ಬೆಳಗ್ಗಿನ ಸಮಯ  ಅಂಗಡಿಯ ಮ್ಯಾನೇಜರ್ ಸುಧಾಕರ್ ರವರು ಪೋನ್ ಮಾಡಿ ದಿನಾಂಕ: 07.12. 2022 ರಂದು  ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಅವಿನ್ ಕುಮಾರ್ ರವರು  ಸಂಜೆ 6:00 ಗಂಟೆಗೆ  ಅಂಗಡಿ ಶಟರ್ ಹಾಗೂ ಅಂಗಡಿಯ ಎದುರಿನ ಡೋರಿನ ಲಾಕ್ ಹಾಕಿ ಹೋಗಿದ್ದು, ದಿನಾಂಕ: 08.12.2022 ರಂದು  ಕೆಲಸದ ಬಗ್ಗೆ ಬೆಳಿಗ್ಗೆ 8:45 ಗಂಟೆಗೆ ಅಂಗಡಿಗೆ ಬಂದಾಗ ಅಂಗಡಿಯ ಎದುರಿನ ಬಾಗಿಲಿನ ಬೀಗವನ್ನು ಯಾರೋ ತೆಗೆದ ವಿಚಾರವನ್ನು ತಿಳಿಸಿದರು. ಕೂಡಲೇ ಫಿರ್ಯಾದಿದಾರರು ಮನೆಯಿಂದ ಹೊರಟು ಅಂಗಡಿಗೆ ಬಂದಾಗ ಮ್ಯಾನೇಜರ್ ಹಾಗೂ ಕೆಲಸಗಾರರು ಇದ್ದರು. ಅಂಗಡಿಯ ಎದುರಿನ ಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಲಾಗಿ ಯಾರೋ ಕಳ್ಳರು ಅಂಗಡಿಯ ಶಟರಿನ ಬೀಗವನ್ನು ಮುರಿದು ಒಳ ಪ್ರವೇಶಿಸಿರುವುದು ಕಂಡು ಬಂತು. ಛೇಂಬರ್ ನಲ್ಲಿ ನೋಡಿದಾಗ ಟೇಬಲ್ ಡ್ರವರಿನೊಳಗೆ  ಪರ್ಸ್ ನಲ್ಲಿ ಇಟ್ಟ  10,000/- ರೂಪಾಯಿ ಕಾಣೆಯಾಗಿರುವುದು ಕಂಡು ಬಂತು.  ಸದ್ರಿ ಟೇಬಲ್ ನ  ಪಕ್ಕದಲ್ಲಿರುವ ಟೇಬಲ್  ಮೇಲ್ ಇದ್ದ ಅಂಗಡಿಯ Oppo ಕಂಪನಿಯ ಮೊಬೈಲ್ ಸೆಟ್  ಕೂಡ ಕಾಣೆಯಾಗಿರುತ್ತದೆ. ಅಲ್ಲದೆ  ಮ್ಯಾನೇಜರ್  ಸುಧಾಕರ್ ರವರು ಕುಳಿತುಕೊಳ್ಳುವ ಛೇಂಬರ್ ನಲ್ಲಿದ್ದ  Real Me  ಕಂಪನಿಯ ಮೊಬೈಲ್ ಸೆಟ್  ಕೂಡ ಕಳವು ಆಗಿರುತ್ತದೆ. ಯಾರೋ ಕಳ್ಳರು  ಫಿರ್ಯಾದಿದಾರರು ಅಂಗಡಿಗೆ ದಿನಾಂಕ: 07.12.2022 ರಂದು ಸಂಜೆ 6:00 ಗಂಟೆಯಿಂದ ಈ ದಿನ ದಿನಾಂಕ: 08.12.2022 ರಂದು ಬೆಳಿಗ್ಗೆ 8:45 ಗಂಟೆಯ ಮದ್ಯಾವದಿಯಲ್ಲಿ   ಬಾಗಿಲು ಮುರಿದು ಅಂಗಡಿಯೊಳಗೆ  ಪ್ರವೇಶಿಸಿ ಡ್ರವರ್ ನಲ್ಲಿದ್ದ 10,000/- ನಗದು ಹಣ, ತಲಾ 10,000/- ರೂಪಾಯಿ ಮೌಲ್ಯದ ಎರಡು ಮೊಬೈಲ್ ಸೆಟ್ ಗಳನ್ನು ಕಳವು ಮಾಡಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ: 114/2022 ಕಲಂ: 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಜೀವ ಬೆದರಿಕೆ ಪ್ರಕರಣ: 1

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮೊಹಮ್ಮದ್ ಇಮ್ತಿಯಾಜ್  ವಾಸ. ಕೈಕಂಬ ಮನೆ ಬಿಮೂಡ ಗ್ರಾಮ ಬಿ ಸಿ ರೋಡ್ ಬಂಟ್ವಾಳ ಎಂಬವರು ಈ-ಮೇಲ್ ಮುಖಾಂತರ ಕಳುಹಿಸಲಾದ  ದೂರಿನಂತೆ ಪಿರ್ಯಾದಿದಾರರು ದಿನಾಂಕ.07.12.2022 ರಂದು ಬೆಳಿಗ್ಗೆ 09.30 ಗಂಟೆಗೆ ಸುಳ್ಯ ಬಸ್ಸು ನಿಲ್ದಾಣಕ್ಕೆ ಬಂದಾಗ. ತನ್ನ ಪರಿಚಯದ ಯುವತಿ ಕೂಡ ಬಸ್ಸು ನಿಲ್ದಾಣಕ್ಕೆ ಬಂದು ಪಿರ್ಯಾದುದಾರರು ಮತ್ತು ಸದರಿ ಯುವತಿ ಸುಳ್ಯದಲ್ಲಿರುವ ಸಂತೋಷ್ ಫಿಲಂ ಥಿಯೇಟರಿನಲ್ಲಿ ಕಾಂತಾರ ಸಿನಿಮಾ ನೋಡಲು ಮಾತನಾಡಿಕೊಂಡು ಬೆಳಿಗ್ಗೆ ಸಮಯ ಸುಮಾರು 10.20 ಗಂಟೆಗೆ ಥಿಯೇಟರ್ ಬಳಿ ಹೋದಾಗ ಪಿಲಂ ಥಿಯೇಟರ್ ನಲ್ಲಿದ್ದವರು ಸಿನಿಮಾ ಸ್ಟಾರ್ಟ್ ಆಗುವುದು 11.00 ಗಂಟೆಗೆ ಎಂದು ತಿಳಿಸಿದ್ದು. ಅದಕ್ಕೆ ಪಿರ್ಯಾದುದಾರರು ಮತ್ತು  ಯುವತಿ  ಥಿಯೇಟರ್ ಬದಿಯಲ್ಲಿದ್ದ ವೇಯಿಕಲ್ ಪಾರ್ಕಿಂಗ್ ಸ್ಥಳದಲ್ಲಿ ನಿಂತು ಮಾತನಾಡುತ್ತಿರುವಾಗ ಸುಮಾರು 5-10 ಜನರ ಗುಂಪು ತಮ್ಮ ಬಳಿಗೆ ಬರುವುದನ್ನು ನೋಡಿದ ಭಯದಿಂದ ಅಲ್ಲಿಂದ ಹೊರಗೆ ಹೋಗುವಾಗ ಅವರ ಪೈಕಿ ಅಬ್ದುಲ್ ಹಮೀದ್, ಅಶ್ರಫ್, ಸಾದಿಕ್, ಜಾಬೀರ್ ಜಟ್ಟಿಪಳ್ಳ ಸಿದ್ದಿಕ್ ಬೋರು ಗುಡ್ಡೆ ಎಂಬವರು ಇಬ್ಬರನ್ನು ಅಕ್ರಮವಾಗಿ ತಡೆದು ನೀವು ಇಲ್ಲಿ ಯಾಕೇ ನಿಂತಿರುವುದು ಎಂದು ಅವಾಚ್ಯ ಶಬ್ದಗಳಿಂದ ಬೈದಾಗ . ಪಿಲಂ ಸ್ಟಾರ್ಟ್ ಆಗುವುದು 11.00 ಗಂಟೆಗೆ ಎಂದು ಥಿಯೇಟರ್ ನವರು ಹೇಳಿದಕ್ಕೆ ಇಲ್ಲಿ ಬಂದು ನಿಂತು ಮಾತನಾಡುತ್ತಿದ್ದೆವೆ ಅಷ್ಟಕ್ಕೂ ಇದನ್ನು ಕೇಳಲು ನೀವು ಯಾರು ಎಂದು ಹೇಳಿದಕ್ಕೆ 5 ಜನರು ಪಿರ್ಯಾದುದಾರರಿಗೆ ಕೆನ್ನೆಗೆ ಬೆನ್ನಿಗೆ ಕೈಯಿಂದ ಹೊಡೆದು ಇನ್ನು ಮುಂದಕ್ಕೆ ಇಲ್ಲಿಗೆ ಬಂದರೆ ನಿಮ್ಮನ್ನು ಕೊಂದು ಬಿಡುತ್ತೇವೆಂದು ಜೀವ ಬೆದರಿಕೆ ಹಾಕಿರುತ್ತಾರೆ.ಅಷ್ಟರಲ್ಲಿ ಪಿಲೀಂ ಟಾಕೀಸ್ ನಲ್ಲಿದ್ದವರು ಸ್ಥಳಕ್ಕೆ ಬಂದು ಪಿರ್ಯಾದುದಾರರಿಗೆ ಹೊಡೆಯದಂತೆ ತಡೆದ್ದಿದ್ದು.ಪಿರ್ಯಾದುದಾರರಿಗೆ ಹಲ್ಲೆಯಿಂದ  ದೊಡ್ಡ ನೋವು ಆಗದೇ ಇರುವುದರಿಂದ ಚಿಕಿತ್ಸೆ ಪಡೆದಿರುವುದಿಲ್ಲ. ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ.ಕ್ರ 147/22 ಕಲಂ: 341,323,504,506 ಜೊತೆಗೆ 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-12-2022 11:26 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080