ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ವೇಣೂರು ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಸುಂದರ ಪೂಜಾರಿ (51) ತಂದೆ: ಅಣ್ಣು ಪೂಜಾರಿ,  ವಾಸ: ನೂಯಿ ಮನೆ,  ಬಡಕೋಡಿ   ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ, ನೆರೆಕರೆಯ  ಯಾಧವ ಶೆಟ್ಟಿಯ    ಎಂಬವರನ್ನು  ತನ್ನ ಬಾಬ್ತು  ಕೆಎ 19 ಹೆಚ್ ಬಿ 0146   ದ್ವಿಚಕ್ರ ವಾಹನದಲ್ಲಿ ಸಹ ಸವರನ್ನಾಗಿ  ಕುಳ್ಳಿರಿಸಿಕೊಂಡು ಬೆಳ್ತಂಗಡಿ ತಾಲೂಕು  ವೇಣೂರು  ಗ್ರಾಮದ ವೇಣೂರ- ಮೂರ್ಜೆ ಸಾರ್ವಜನಿಕ ರಸ್ತೆಯ  ಕಾಮೆಟ್ಟು ಎಂಬಲ್ಲಿ  ಸಮಯ  ಸುಮಾರು  14:30 ಗಂಟೆ  ತಲುಪುತ್ತಿದ್ದಂತೆ  ಪಿರ್ಯಾದಿದಾರರ   ವಾಹನದ ಹಿಂದಿನಿಂದ ಬಂದ ಕೆ ಎ 19 ಡಿ 8379 ನೇ ಲೈಲಾಂಡ್  ಪಿಕ್ ಆಪ್  ವಾಹನದ ಚಾಲಕನು ನಝೀರ್  ಎಂಬಾತನು  ಅಜಾಗರೂಕತೆ ಮತ್ತು  ನಿರ್ಲಕ್ಷ್ಯತನದಿಂದ    ತನ್ನ ಬಾಬ್ತು  ವಾಹನವನ್ನು  ಚಲಾಯಿಸಿಕೊಂಡು  ಬಂದು,  ಪಿರ್ಯಾದಿದಾರರು  ಚಲಾಯಿಸುತ್ತಿದ್ದ  ದ್ವಿಚಕ್ರ ವಾಹನವನ್ನು  ಓವರ್  ಟೇಕ್   ಮಾಡುವ ಸಮಯ  ದ್ವಿಚಕ್ರ ವಾಹನದ   ಹ್ಯಾಂಡಲ್ ಗೆ ಡಿಕ್ಕಿ ಹೊಡೆದ   ಪರಿಣಾಮವಾಗಿ    ಪಿರ್ಯಾದಿದಾರರು   ಮತ್ತು  ಸಹ ಸವಾರರು ದ್ವಿಚಕ್ರ ವಾಹನ ಸಮೇತಾ  ರಸ್ತೆಗೆ  ಎಸೆಯಲ್ಪಟ್ಟು. ಪಿರ್ಯಾದಿದಾರರಿಗೆ    ಬಲ ಕೈಗೆ ಮಣಿ ಗಂಟಿಗೆ, ಬಲ ಕಾಲಿನ ಗಂಟಿಗೆ, ಭುಜಕ್ಕೆ, ಸೊಂಟಕ್ಕೆ  ತರಚಿತ  ಗಾಯವಾಗಿರುತ್ತದೆ. ಸಹ ಸವಾರವಾಗಿದ್ದ ಯಾಧವ ಶೆಟ್ಟಿಯವರಿಗೆ ಬಲ  ಕಣ್ಣಿನ ಹುಬ್ಬಿನ ಬಳಿ ಹಣೆಗೆ  ರಕ್ತ  ಗಾಯವಾಗಿದ್ದು ಮತ್ತು ಕೆನ್ನೆಗೆ, ಬಲ ಭುಜಕ್ಕೆ, ಬಲ ಕಾಲಿನ  ಗಂಟಿಗೆ ತರಚಿದ ರೀತಿಯ ಗಾಯವಾಗಿರುತ್ತದೆ.  ಗಾಯಾಳು ಯಾಧವ ಶೆಟ್ಟಿಯವರು  ಮೂಡಬಿದ್ರೆ  ಆಳ್ವಾಸ್ ಆಸ್ಪತ್ರೆಯಲ್ಲಿ   ದಾಖಲಾಗಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 77-2021 ಕಲಂ:279,337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 2

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗಣೇಶ್, ಪ್ರಾಯ: 28 ವರ್ಷ, ತಂದೆ: ಶೀನಪ್ಪಗೌಡ, ವಾಸ; ಕುಂಟಿನಿ ಮನೆ , ಕಳಿಯಾ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ,  ಪಿರ್ಯಾದಿ ದಾರರು ಉಜಿರೆ ಗ್ರಾಮದ ರೆಬೆಲೋ ಕಾಂಪ್ಲೆಕ್ಸ್‌ ನಲ್ಲಿ ಹುಲ್ಲು ಕಟಾವು ಯಂತ್ರಗಳ ರಿಪೇರಿ ಅಂಗಡಿಯನ್ನು ಹೊಂದಿದ್ದು ದಿನಾಂಕ 07-12-2021 ರಂದು ಮದ್ಯಾಹ್ನ ತನ್ನ ಬಾಬ್ತು ದ್ವಿಚಕ್ರ ವಾಹನ  ನಂಬ್ರ ಕೆ ಎ21 ವಿ 7631 ಬೈಕಿನಲ್ಲಿ ಉಟಕ್ಕೆ ಹೋಗಿ ಬಂದು ಮದ್ಯಾಹ್ನ ಸಮಯ 14:00 ಗಂಟೆಗೆ ಅಂಗಡಿ ಬದಿಯಲ್ಲಿ ನಿಲ್ಲಿಸಿ ರಿಪೇರಿ ಕೆಲಸದಲ್ಲಿ ತೊಡಗಿಕೊಂಡಿದ್ದು ಸಾಯಂಕಾಲ ಸಮಯ ಸುಮಾರು 19:00 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗಲೆಂದು ಬೈಕ್‌ ಬಳಿಗೆ ಹೋದಾಗ ಬೈಕ್‌ ಕಾಣದೇ ಇರುವಾಗ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದಿರುವುದಿಲ್ಲ ತನ್ನ ಬಾಬ್ತು  ದ್ವಿಚಕ್ರ ವಾಹನ  ನಂಬ್ರ ಕೆ ಎ21 ವಿ 7631 ನ್ನು ಯಾರೋ ಕಳ್ಳರು ದಿನಾಂಕ 07-12-2021 ರ ಸಮಯ ಮದ್ಯಾಹ್ನ 14:00 ಗಂಟೆಯಿಂದ ಸಾಯಂಕಾಲ 19:00 ಗಂಟೆಯ ಮದ್ಯದ ಅವದಿಯಲ್ಲಿ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಬೈಕಿನ ಅಂದಾಜು ಮೊತ್ತ ಸುಮಾರು 35,000/- ಆಗಬಹುದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಅ.ಕ್ರ 104/2021 ಕಲಂ: 379 ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸುಂದರ  ಗೌಡ  ಪ್ರಾಯ: 66 ವರ್ಷ ತಂದೆ: ದಿ!! ತಿಮ್ಮಪ್ಪ ಗೌಡ ವಾಸ: ಯೂನಿಯನ್ ಬ್ಯಾಂಕ್ ಹತ್ತಿರ ಮನೆ ಉಪ್ಪಿನಂಗಡಿ ಗ್ರಾಮದ ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 06.12.2021 ರಂದು ಬೆಳಿಗ್ಗೆ  ಸುಮಾರು 10:45 ಗಂಟೆಗೆ ಸಮಯಕ್ಕೆ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಯೂನಿಯನ್ ಬ್ಯಾಂಕ್ ಬಳಿ ಯಲ್ಲಿ ತಮ್ಮ ಮನೆಯ ಮುಂದೆ  ಪಿರ್ಯಾದಿದಾರರ ಬಾಬ್ತು ಟಿ.ವಿ.ಎಸ್ ಜುಪಿಟರ್  ಮೋಟಾರ್ ಸೈಕಲ್ ನಂಬ್ರ  KA 21 ಯು 1338 ನೇದನ್ನು ತಮ್ಮ ಮನೆಯಲ್ಲಿ ನಿಲ್ಲಿಸಿ ಹೋಗಿದ್ದು, ನಂತರ ವಾಪಾಸು ಬಂದು ಮನೆಯ ಮುಂದೆ ಮೋಟಾರ್ ಸೈಕಲ್ ನಿಲ್ಲಿಸಿದ ಜಾಗಕ್ಕೆ ಪಿರ್ಯಾದಿದಾರರು ಬಂದು ನೋಡಿದಾಗ ಮೋಟಾರ್ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಇರದೇ ಇದ್ದು, ಮೋಟಾರ್ ಸೈಕಲ್ ನ ಪತ್ತೆಯ ಬಗ್ಗೆ ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗದೇ ಇದ್ದು, ಪಿರ್ಯಾದಿದಾರರ ಬಾಬ್ತು ಬಾಬ್ತು ಟಿ.ವಿ.ಎಸ್ ಜುಪಿಟರ್  ಮೋಟಾರ್ ಸೈಕಲ್ ನಂಬ್ರ  KA 21 ಯು 1338 ನೇ ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್ ಸೈಕಲ್ ನ ಅಂದಾಜು ಮೌಲ್ಯ ಸುಮಾರು ರೂ. 20,000/- ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 154/2021  ಕಲಂ   379 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿಘ್ನೇಶ್ವರ  ಭಟ್ ಪ್ರಾಯ 54  ವರ್ಷ ತಂದೆ:ಶ್ಯಾಮ  ಭಟ್ ವಾಸ:ನೂಜಿ ಮನೆ  ಉಪ್ಪಿನಂಗಡಿ  ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ  ಪತ್ಮಿ ವಿದ್ಯಾ ಕುಮಾರಿ ಪ್ರಾಯ 49 ವರ್ಷ ಎಂಬವರನ್ನು ಸುಮಾರು 24 ವರ್ಷಗಳ ಹಿಂದೆ ಮದುವೆಯಾಗಿದ್ದು ಅವರಿಗೆ ಮಕ್ಕಳಾಗಿರುವುದಿಲ್ಲ.  ದಿನಾಂಕ: 07-12-2021ರಂದು ಬೆಳಿಗ್ಗೆ 07.30ಗಂಟೆಗೆ   ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ  ನೂಜಿ ಮನೆ ಎಂಬಲ್ಲಿ ಪಿರ್ಯಾದಿದಾರರು   ಪುರೋಹಿತ ವೃತ್ತಿಗೆ ಹೋಗಿ ಸಮಯ  ವಾಪಾಸು  ರಾತ್ರಿ 11.00ಗಂಟೆಗೆ ಮನೆಗ ಬಂದ ಸಮಯ  ಪಿರ್ಯಾದಿದಾರರ ಪತ್ನಿ ವಿದ್ಯಾ ಕುಮಾರಿ ರವರು  ಮನೆಯಲ್ಲಿ ಪ್ರಜ್ಷೆ ಇಲ್ಲದೆ ಬಿದ್ದವರನ್ನು ಉಪ್ಪಿನಂಗಡಿಯ  ಕೆ ಜಿ ಭಟ್‌  ರವರಲ್ಲಿ ಕರೆತಂದಾಗ ವೈದ್ಯರು ವಿದ್ಯಾ ಕುಮಾರಿ ಯವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ:41/2021 ಕಲಂ:174 ಸಿ.ಆರ್.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-12-2021 10:43 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080