ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎ.ಹೆಚ್ ಸಿದ್ದೀಕ್ (36) ತಂದೆ: ಹಸೈನರ್ ದೊಡ್ಡಡ್ಕ ಮನೆ, ಗೂನಡ್ಕ ಪೋಸ್ಟ್ ಸಂಪಾಜೆ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 29.12.2022 ರಂದು ಪುತ್ತೂರಿನಿಂದ ಮೋಟಾರ್ ಸೈಕಲ್ ನಂ: ಕೆಎ 21 ಕೆ 1396 ನೇದರಲ್ಲಿ ಸವಾರಿ ಮಾಡಿಕೊಂಡು ಕಲ್ಲುಗುಂಡಿಗೆ ಹೋಗುತ್ತಿರುವರೇ ಸಮಯ ಸುಮಾರು 19:45 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಜಟ್ಟಿಪಳ್ಳ ಕ್ರಾಸ್ ಎಂಬಲ್ಲಿ ತಲುಪುತ್ತಿದ್ದಂತೆ ಎದುರುಗಡೆಯಿಂದ ಬಂದ ಕೆಎ 12 ಯು 6256 ನೇದರ ಮೋಟಾರ್ ಸೈಕಲ್ ಸವಾರ ರಮೇಶ್ ಎಂಬಾತನು  ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ  ಬಿದ್ದು ಎಡ ಕೈ ಮೊಣಗಂಟಿಗೆ ಗಾಯವಾಗಿದ್ದವರನ್ನು ಅಲ್ಲೇ ಇದ್ದ ಪಿರ್ಯಾದುದಾರರ ಪರಿಚಯದ ಮುಸ್ತಫ ಹಾಗೂ ಇತರರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌    ಠಾಣಾ ಅ,ಕ್ರ   ನಂ: 04/2023 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರೇಖಾ ಜೆ ನಾಯ್ಕ್‌ (37 ಪ್ರಾಯ)‌ಗಂಡ: ಯು ವಸಂತ ಕುಮಾರ್ ವಾಸ: 4-140‌, ಗಾಂಧಿಪಾರ್ಕ್‌ ಮನೆ, ಉಪ್ಪಿನಂಗಡಿ ಗ್ರಾಮ & ಅಂಚೆ,, ಪುತ್ತೂರು ಎಂಬವರ ದೂರಿನಂತೆ ದಿನಾಂಕ 08-01-2023 ರಂದು 16:00 ಗಂಟೆಗೆ ಆರೋಪಿ ಸ್ಕೂಟರ್‌ ಸವಾರ ಪ್ರನೇಶ್‌  ಎಂಬವರು KA-21-Y-8485 ನೇ ನೋಂದಣಿ ನಂಬ್ರದ ಸ್ಕೂಟರ್‌ನ್ನು ರಥಬೀರಿ- ಉಪ್ಪಿನಂಗಡಿ ಬಸ್ಸ್‌ ನಿಲ್ದಾಣ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಉಪ್ಪಿನಂಗಡಿ ರಾಮಕೃಷ್ಣ ಸೊಸೈಟಿ ಬಳಿ ಇರುವ ಅವರ ಮನೆಯ ಕಂಪೌಂಡ್‌ ಒಳಗಡೆಯಿಂದ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೇಲೆ ಚಲಾಯಿಸಿದ ಪರಿಣಾಮ, ಫಿರ್ಯಾದಿದಾರರಾದ ರೇಖಾ ಜೆ ನಾಯ್ಕ್‌  ರವರು ಸಹ ಸವಾರೆಯಾಗಿ ವಸಂತಕುಮಾರ್‌ರವರು ಸವಾರರಾಗಿ ಸದ್ರಿ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-21-EB-0334 ನೇ ನೋಂದಣಿ ನಂಬ್ರದ ಸ್ಕೂಟರ್‌ಗೆ ಅಪಘಾತವಾಗಿ, ಇಬ್ಬರೂ ಸ್ಕೂಟರ್ ನೊಂದಿಗೆ ರಸ್ತೆಗೆ ಬಿದ್ದು ವಸಂತಕುಮಾರ್‌ ರವರಿಗೆ ಗುದ್ದಿದ ಗಾಯವಾಗಿರುತ್ತದೆ  ಫಿರ್ಯಾದಿದಾರರಿಗೆ ಬಲಕಾಲಿನ ಪಾದಕ್ಕೆ ಹಾಗೂ ಬೆರಳುಗಳಿಗೆ ಎಡಕಾಲಿನ ಮೊಣಗಂಟಿಗೆ ಗುದ್ದಿದ ಹಾಗೂ ರಕ್ತಗಾಯವಾಗಿ ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಆರೋಪಿ ಸ್ಕೂಟರ್‌ ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 04/2023 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿವೇಕಾನಂದ @ ಸತ್ಯನಾರಾಯಣ ಪ್ರಾಯ: 45 ವರ್ಷ ತಂದೆ: ದಿ ತಂಗವೇಲು ವಾಸ: ಸೂತ್ರಬೆಟ್ಟು ಮನೆ ಎ.ಪಿ.ಎಂ.ಸಿ ರಸ್ತೆ ಪುತ್ತೂರು ಕಸ್ಬಾ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರವರು ಪುತ್ತೂರಿನಲ್ಲಿ ತನ್ನ ಅಣ್ಣ  ಗೋಪಿನಾಥ ಎಂಬವರೊಂದಿಗೆ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದು ಬಾಡಿಗೆ ವಾಸವಾಗಿರುವುದಾಗಿದೆ, ದಿನಾಂಕ: 04-01-2023 ರಂದು ಸಂಜೆ 5:00 ಗಂಟೆಗೆ ಪಿರ್ಯಾದಿದಾರರ ಸ್ವಂತ ಊರಾದ ಮಧುರೈ ಎಂಬಲ್ಲಿ ಪಿರ್ಯಾದಿದಾರರ ತಾಯಿಗೆ ಅಸೌಖ್ಯತೆ ಉಂಟಾದ ಕಾರಣ ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ಅಣ್ಣ ಗೋಪಿನಾಥ ರವರು ಬಾಡಿಗೆ ಬಿಡಾರಕ್ಕೆ ಬೀಗ ಹಾಕಿ ಅವರಲ್ಲಿದ್ದ ಒಂದು ಜೊತೆ ಬೀಗದ ಕೀಯನ್ನು ಮನೆಯ ಹೊರಗಡೆ ನಿಲ್ಲಿಸಿದ್ದ ಮೋಟಾರು ಸೈಕಲ್‌ ನ ಬಾಕ್ಸ್‌ ನಲ್ಲಿಟ್ಟು ಇನ್ನೊಂದು ಜೊತೆ ಕೀಯನ್ನು ತಮ್ಮ ಜೊತೆಗೆ ತೆಗೆದುಕೊಂಡು ಅವರ ಸ್ವಂತ ಊರಾದ ಮಧುರೈ ಗೆ ಹೋಗಿರುತ್ತಾರೆ. ದಿನಾಂಕ: 08-01-2023 ರಂದು ಪಿರ್ಯಾದಿದಾರರು ಮತ್ತು ಅವರ ಅಣ್ಣ ಗೋಪಿನಾಥ್‌ ರವರು ವಾಪಾಸ್ಸು  ಬಾಡಿಗೆ ಬಿಡಾರಕ್ಕೆ ಬಂದು ನೋಡಿದಾಗ ಪಿರ್ಯಾದಿದಾರರ ಮನೆಯ ಬೀಗ ಯಥಾ ಸ್ಥಿತಿಯಲ್ಲಿದ್ದು, ಬಾಗಿಲನ್ನು ತೆರೆದು ಪರಿಶೀಲನೆ ಮಾಡಿ ನೋಡಿದಾಗ ಚಾವಡಿ ಮತ್ತು ಬೆಡ್‌ ರೂಮ್‌ ನ ಬಟ್ಟೆ ಬರೆಗಳು ಚೆಲ್ಲಾ ಪಿಲ್ಲಿಯಾಗಿದ್ದು, ಹಾಗೂ ಮನೆಯಲ್ಲಿದ್ದ   1) ನಗದು ರೂ 18,000/- 2 Haiger 32 LCD TV -1 3) UPS Batery -1 4) Iron Box-2 4) Itel key pad Mobile-1 6) Lava Key Pad Mobile-1 7) Sumsung Toch Screen Mobile -1 8) Redme 3 G Mobile -1  9) Nokia Key Pad Old Mobile -1 10) Charge Light Pigen Company -1 11) Bluetooth Speaker Nirmex Company -1 12) Shirt -13 13) Jeens Pant -4 14) Sonata Watch -1 ಕಾಣೆಯಾಗಿದ್ದು, ಬಳಿಕ  ಪಿರ್ಯಾದಿದಾರರು   ನೋಡಿದಾಗ ಹೊರಗಡೆ ನಿಲ್ಲಿಸಿದ್ದ ಮೋಟಾರು ಸೈಕಲ್‌ ನ  ಬಾಕ್ಸ್‌  ತೆರೆದುಕೊಂಡಿದ್ದು ಅದರಲ್ಲಿದ್ದ ಮನೆಯ ಕೀ ಅದರಲ್ಲೆ ಇದ್ದು ಅಲ್ಲದೇ ಮೋಟಾರು ಸೈಕಲ್‌ ನ ಪೆಟ್ರೋಲ್‌ ಟ್ಯಾಂಕ್‌  ಮುಚ್ಚಳ ತೆರೆದುಕೊಂಡಿತ್ತು, ಇದನ್ನು ಗಮನಿಸಿದಾಗ ಯಾರೋ ಕಳ್ಳರು  ಪಿರ್ಯಾದಿದಾರರ ಮನೆಯ ಹೊರಗಡೆ ನಿಲ್ಲಿಸಿದ್ದ ಮೋಟಾರು ಸೈಕಲ್‌ ನ ಬಾಕ್ಸ್‌ ನಲ್ಲಿಟ್ಟಿದ್ದ ಮನೆಯ ಬೀಗದ ಕೀಯನ್ನು ಉಪಯೋಗಿಸಿ ದಿನಾಂಕ: 04-01-2023 ರ ಸಂಜೆ 5:00 ಗಂಟೆಯಿಂದ ದಿನಾಂಕ: 08-01-2023 ರ ಬೆಳಿಗ್ಗೆ 8:00 ಗಂಟೆಯ ಮಧ್ವಾವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಸೊತ್ತಿನ ಅಂದಾಜು ಮೌಲ್ಯ 75,000/- ಆಗಬಹುದು.ಈ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣಾ  ಅ.ಕ್ರ:2/2023 ಕಲಂ: 454, 457, 380 ಐ.ಪಿ.ಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ 08-01-2023 ರಂದು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 02/2023 ಕಲಂ: 323,324,354 ಜೊ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಮೇರಿ  @ ಗೋಪಿ (65),ಗಂಡ: ಪೆದ್ರು @ ಪಿಶಿರಾ ವಾಸ: ಹುರಾಬೆ  ಮನೆ, ಮೂಡುಕೋಡಿ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಬೆಳ್ತಂಗಡಿ  ತಾಲೂಕು  ಮೂಡುಕೋಡಿ  ಗ್ರಾಮದ  ಹುರಾಬೆ  ಎಂಬಲ್ಲಿ ಪಿರ್ಯಾದಿದಾರರಾದ ಗಂಡ  ಪೆದ್ರು @ಪಿಶಿರಾ (70) ಎಂಬವರು  ಗ್ಯಾಂಗ್ರಿನ್‌  ಖಾಯಿಲೆಯಿಂದ  ಬಳಲುತ್ತಿದ್ದು ವಾಕರ್‌  ಸಾಧನದ  ಮೂಲಕ  ನಡೆದಾಡಿಕೊಂಡಿದ್ದವರು   ಇದೇ ವಿಚಾರದಲ್ಲಿ  ಜೀವನದಲ್ಲಿ  ಜಿಗುಪ್ಸೆ ಹೊಂದಿ   ದಿನಾಂಕ:09-01-2023 ರಂದು ಪಿರ್ಯಾದಿದಾರರು  ಮನೆಯಲ್ಲಿ  ಇಲ್ಲದೇ ಇದ್ದ ಸಮಯ  ಮದ್ಯಾಹ್ನ 12:00 ಗಂಟೆಯಿಂದ 14:15  ಗಂಟೆಯ  ಮಧ್ಯೆ ಅವಧಿಯಲ್ಲಿ  ಮನೆಯ  ಸಮೀಪ  ಇರುವ   ಕುಡಿಯುವ   ನೀರಿನ  ಬಾವಿಗೆ  ಹಾರಿ ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 01-2023 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಾಜನ್‌ ಟಿ ಜೆ  ಪ್ರಾಯ: 31 ವರ್ಷ ತಂದೆ: ಗೋಪಾಲಕೃಷ್ಣ ಟಿ ಎನ್  ವಾಸ;ತೊಟ್ಟಿ ಪರಂಬಿಲ್ ಮನೆ,ನೆರಿಯ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಮೃತ ಗೋಪಾಲಕೃಷ್ಣರವರು ಒಬ್ಬರೇ ನೆರಿಯ ಗ್ರಾಮದ ನೆಕ್ಕರೆ ಎಂಬಲ್ಲಿ ತನ್ನ ವಾಸದ ಮನೆಯಲ್ಲಿ ವಾಸಿಸುತ್ತಿರುವುದ್ದವರು ದಿನಾಂಕ: 08-01-2023 ರಂದು ಮನೆಯ ಹತ್ತಿರದ ನಿಶಾಂತ್‌ ಎಂಬವರು ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ನಿನ್ನ ತಂದೆಯವರು  2 ದಿನದಿಂದ ಕಾಣುತ್ತಿಲ್ಲ ನಿಮ್ಮ ಮನೆಗೆ ಬಂದಿರುತ್ತಾರಾ? ಎಂದು ವಿಚಾರಿಸಿದ್ದು, ಪಿರ್ಯಾದಿದಾರರ ಮನೆಗೆ ಬಾರದೇ ಇದ್ದುದ್ದರಿಂದ ಕೂಡಲೇ ತಂದೆಯವರು ವಾಸ್ತವ್ಯ ಇರುವ ನೆರಿಯ ಗ್ರಾಮದಲ್ಲಿರುವ ನೆಕ್ಕರೆ ಮನೆ ಎಂಬಲ್ಲಿಗೆ ಹೋಗಿ ನೋಡುವಂತೆ ತಿಳಿಸಿದ ಮೇರೆಗೆ ನಿಶಾಂತ್ ರವರು ಅಲ್ಲಿಗೆ ಹೋಗಿ ನೋಡಿದಾಗ ನಿಮ್ಮ ತಂದೆಯವರು ಮನೆಯೊಳಗೆ ಮಂಚದ ಕೆಳಗೆ ಬಿದ್ದುಕೊಂಡಿದ್ದು ಮೃತ ಪಟ್ಟಂತೆ ಕಂಡು ಬಂದಿರುವುದಾಗಿ ತಿಳಿಸಿದಂತೆ ಫಿರ್ಯಾದಿದಾರರು ದಿನಾಂಕ: 08-01-2023 ರಂದು ರಾತ್ರಿ 11.00 ಗಂಟೆಗೆ ಬಂದು ತನ್ನ ತಂದೆಯವರಿದ್ದ ವಾಸದ ಮನೆಗೆ ಬಂದು ನೋಡಿದಾಗ ಮೃತಪಟ್ಟು ಬಿದ್ದುಕೊಂಡಿರುವುದಾಗಿದೆ. ಮೃತರು ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಚಟ ಹೊಂದಿದ್ದು, ಅಲ್ಲದೇ ಒಂದು ವಾರದಿಂದ ಜ್ವರ ಕೂಡಾ ಬಂದಿದ್ದು, ಮೃತ ಗೋಪಾಲಕೃಷ್ಣ ರು ವಿಪರೀತ ಅಮಲು ಪದಾರ್ಥ ಸೇವನೆ ಮಾಡಿ ಮನೆಯೊಳಗೆ ಕುಸಿದು ಬಿದ್ದು, ಅಥವಾ ಬೇರೆ ಯಾವುದೋ ಕಾಯಿಲೆ ಉಲ್ಬಣ ಗೊಂಡು ಬಿದ್ದು ಮೃತಪಟ್ಟಿದ್ದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ  ಯುಡಿಆರ್ ಕ್ರಮಾಂಕ: 03/2023 ಕಲಂ: 174 ಸಿ ಆರ್‌ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-01-2023 10:39 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080