ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರವೀತ್ (30), ತಂದೆ: ರತ್ನ ರಾಜ್ ಪಡಿವಾಳ, ವಾಸ: ಉದ್ದಾರಗುತ್ತು ಮನೆ, ಕಡಿರುದ್ಯಾವರ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 08-05-2022 ರಂದು ಕೆಎ 70 ಇ 5030 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ಯಶೋಧರ ಎಂಬವರು ಸಹಸವಾರನ್ನನ್ನಾಗಿ ಅಶೋಕ ಎಂಬವರನ್ನು ಕುಳ್ಳಿರಿಸಿಕೊಂಡು ಸೋಮಂತಡ್ಕ ಕಡೆಯಿಂದ ದಿಡುಪೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 11.00 ಗಂಟೆಗೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಶಾರದ ನಗರ ದೇವಿಗುಡಿ ಬಳಿ ದುಡುಕುತನದಿಂದ ಸವಾರಿ ಮಾಡಿ ಸವಾರನ ಚಾಲನಾ ಹತೋಟಿ ತಪ್ಪಿ ಸವಾರ ಮತ್ತು ಸಹಸವಾರ ಮೋಟಾರು ಸೈಕಲ್‌ನೊಂದಿಗೆ ಡಾಮರು ರಸ್ತೆಯ ಎಡಬದಿಯ ಮಣ್ಣು ರಸ್ತೆಗೆ ಮಗುಚಿ ಬಿದ್ದು ಸವಾರ ಯಶೋಧರವರ ತಲೆಗೆ, ಮುಖಕ್ಕೆ, ಹಣೆಗೆ ಗುದ್ದಿದ ತೀವ್ರ ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತಂದಲ್ಲಿ ಇಲ್ಲಿನ ವೈದ್ಯರು ಯಶೋಧರವರನ್ನು ದಿನಾಂಕ: 09-05-2022 ರಂದು ಬೆಳಿಗ್ಗಿನ ಜಾವ 12.25 ಗಂಟೆಗೆ ಪರೀಕ್ಷಿಸಿ ಯಶೋಧರವರನ್ನು ಆಸ್ಪತ್ರೆಗೆ ಸಾಗಿಸುವಾಗಲೇ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 69/2022 ಕಲಂ; 279,337 ,304 (ಎ) ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್ ಇರ್ಷಾದ್ ಎಸ್ ಪ್ರಾಯ 26 ವರ್ಷ, ತಂದೆ: ಅಬೂಬಕ್ಕರ್ ಬ್ಯಾರಿ, ವಾಸ: ಸೊಕಿಲ ಮನೆ, ಬಾರ್ಯ ಅಂಚೆ & ಗ್ರಾಮ, ಬೆಳ್ತಂಗಡಿ ತಾಲೂಕು.ಎಂಬವರ ದೂರಿನಂತೆ ದಿನಾಂಕ 09-05-2022 ರಂದು 05-30 ಗಂಟೆಗೆ ಆರೋಪಿ ಕಾರು ಚಾಲಕ ಮಹಮ್ಮದ್‌ ಸ್ವಾಧಿಕ್‌ ಪಿ ಎಂಬವರು KA-19-MJ-1555ನೇ ನೋಂದಣಿ ನಂಬ್ರದ ಕಾರಿನಲ್ಲಿ ಮಹಮ್ಮದ್‌ ಇರ್ಷಾದ್‌ ಎಸ್‌, ಮಹಮ್ಮದ್‌ ಸಿದ್ದೀಕ್‌ ಎ,  ಮಹಮ್ಮದ್‌ ಮುಸ್ತಾಫಾ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳದ ವೈನಾಡು ಕಡೆಯಿಂದ ಬೆಳ್ತಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ KSRTC ಡಿಪ್ಪೋ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಪರಿಣಾಮ ಕಾರು ರಸ್ತೆಯ ಬದಿ ಮೋರಿಗೆ ಅಪಘಾತವಾಗಿ, ಪಿರ್ಯಾದುದಾರರಿಗೆ ಬಲ ತೋಡೆಗೆ ಗುದ್ದಿದ ಗಾಯ, ಮಹಮ್ಮದ್ ಸಿದ್ದೀಕ್ ಎ ರವರಿಗೆ ಎಡಕಾಲಿನ ಮೊಣ ಗಂಟಿಗೆ ಗುದ್ದಿದ ಗಾಯ ಮತ್ತು ಆರೋಪಿ ಚಾಲಕ ಮಹಮ್ಮದ್ ಸ್ವಾದೀಕ್ ಪಿ ರವರಿಗೆ ಎಡ ಕೈಯ ಕೋಲು ಕೈಗೆ ಗುದ್ದಿದ ಗಾಯ, ಬಲ ಕಾಲಿನ ಮೊಣ ಗಂಟಿಗೆ ಗುದ್ದಿದ ಗಾಯವಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಮಹಮ್ಮದ್ ಮುಸ್ತಫಾರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  89/2022  ಕಲಂ: 279,  337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಧಕೃಷ್ಣ  (48) ತಂದೆ: ದಿ. ಬೆಳಿಯಪ್ಪ  ವಾಸ: ಪಜ್ಜಡ್ಕ ಮನೆ, ಅಲಂಕಾರು ಗ್ರಾಮ ,ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು  ದಿನಾಂಕ 08-05-2022 ರಂದು ಸಂಜೆ ಮನೆಗೆ ದಿನಾಸಿ ಸಾಮಗ್ರಿಗಳನ್ನು ತರುವರೇ ಅಲಂಕಾರು ಪೇಟೆಗೆ ಬಂದಿದ್ದು  ದಿನಾಸಿ ಸಾಮಗ್ರಿಗಳನ್ನು ಖರೀದಿಸಿಕೊಂಡು ಶ್ರೀ ದುರ್ಗ ಸ್ಟೋರ್ ನಲ್ಲಿ ಇಟ್ಟು ಬೇರೆ ಸಾಮಗ್ರಿಗಳನ್ನು ಖರೀದಿಸುವರೇ ಅಲಂಕಾರು ಗ್ರಾಮದ ಅಲಂಕಾರು ಜಂಕ್ಷನ್ ನಿಂದ ಶಾಂತಿ ಮುಗೇರು ಹೋಗುವ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಸುಮಾರು 17-45 ಗಂಟೆಗೆ ಪಿರ್ಯಾದುದಾರರ ಹಿಂದಿನಿಂದ ಅಂದರೆ ಅಲಂಕಾರು ಕಡೆಯಿಂದ ಒಂದು ಮೋಟಾರ್ ಸೈಕಲ್ ಸವಾರ ಅಜಾಗರುಕತೆಯಿಂದ ಚಲಾಯಿಸಿಕೊಂಡು  ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು  ರಸ್ತೆಗೆ ಎಸೆಯಲ್ಪಟ್ಟಿದ್ದು   ನಂತರ ಅಲ್ಲೆ ಇದ್ದ ಪಿರ್ಯಾದುದಾರರ ಚಿಕ್ಕಪ್ಪನ ಮಗ ಆನಂದ ಮತ್ತು ಶಿವನಂದ ರವರು ಉಪಚರಿಸಿ ನೋಡಲಾಗಿ ಪಿರ್ಯಾದುದಾರರಿಗೆ ಎಡ ಕೈಗೆ ಮತ್ತು ಎಡಕಣ್ಣಿನ ಬಳಿ ರಕ್ತ ಗಾಯವಾಗಿದ್ದು ಸೊಂಟ ಮತ್ತು ಬೆನ್ನಿಗೆ ಗುದ್ದಿದ ಗಾಯವಾಗಿರುತ್ತಾದೆ ನಂತರ ಗಾಯಾಳುವನ್ನು  ಆರೈಕೆ ಮಾಡಿ ಪುತ್ತೂರು ಆರ್ದಶ ಅಸ್ವತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಬಗ್ಗೆ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 45/2022 ಕಲಂ. .279.337 IPC    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

  • ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ 09.05.2022 ರಂದು ಪ್ರಕರಣದ ಸಂತ್ರಸ್ಥ ಯುವತಿಯು ಪುತ್ತೂರಿನಲ್ಲಿರುವ ಕಮರ್ಷಿಯಲ್‌ ಕಾಂಪ್ಲೆಕ್ಸ್ ಒಂದರಲ್ಲಿ ಶುಚಿತ್ವ ಕೆಲಸ ಮಾಡುತ್ತಿದ್ದಾಗ ಸುಮಾರು  11.45 ಗಂಟೆಗೆ ಆರೋಪಿ ಬಿಳಿ ಅಂಗಿ ಹಾಗೂ ಬಿಳಿ ವೇಷ್ಟಿ ಧರಿಸಿದ ಸುಮಾರು 25 ವರ್ಷ ವಯಸ್ಸಿನ ಯುವಕನೊಬ್ಬನು ಸದರಿ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ  ಅ.ಕ್ರ:31/2022  ಕಲಂ: 354 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಮಹಿಳಾ ಪೊಲೀಸ್ ಠಾಣೆ : ಪ್ರಕರಣದ ಪಿರ್ಯಾದಿಯ ಅಪ್ರಾಪ್ತ ಪ್ರಾಯದ ಮಗಳು ಆಕೆಯ ಪರಿಚಯದ ಯುವಕನೊಬ್ಬನೊಂದಿಗೆ ಸ್ನೇಹವನ್ನು ಹೊಂದಿದ್ದು, ಆತನೊಂದಿಗೆ ದಿನಾಂಕ 01.04.2022 ರಂದು ಮಾತನಾಡುವ ಸಲುವಾಗಿ ತೆರಳಿರುವುದಾಗಿದೆ. ಆತನು ಸದರಿ ಸಂತ್ರಸ್ಥ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್‌ವೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿರುವುದಾಗಿದೆ ಹಾಗೂ ಈ ವಿಷಯವನ್ನು ಮನೆಯಲ್ಲಿ ತಿಳಿಸಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನಂತೆ ಮಹಿಳಾ ಪೊಲೀಸ್‌ ಠಾಣೆ ಪುತ್ತೂರು ಇಲ್ಲಿ ಮೊಕದ್ದಮೆ ಸಂಖ್ಯೆ: ದ.ಕ. ಅ.ಕ್ರ 20/2022 ಕಲಂ: 376, 506 IPC ಮತ್ತು ಕಲಂ: 4 ಪೊಕ್ಸೋ ಕಾಯಿದೆ 2012 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂಜೀವ ಕೊಟ್ಟಾರಿ ಪ್ರಾಯ 57 ವರ್ಷ ತಂದೆ: ದಿ ಬಾಬು ಕೊಟ್ಟಾರಿ ವಾಸ: 3-26(2) ಅಜೆಕಲ್ ಮನೆ ಅಮ್ಡಾಡಿ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರ ಸಹೋದರನಾದ ಜಯ ಕೊಟ್ಟಾರಿ ಪ್ರಾಯ 55 ವರ್ಷ ಎಂಬಾತನು ಬೆಂಗಳೂರಿನ ನೆಲಮಂಗಲದಲ್ಲಿ ಹೊಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ; 09.05.2022 ರಂದು ಬೆಳಿಗ್ಗೆ ಸಮಯ ಸುಮಾರು 08.30 ಗಂಟೆಗೆ ನನ್ನ ಸಹೋದರ ಜಯ ಕೊಟ್ಟಾರಿ ಮೃತಪಟ್ಟಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ನಾನು ಬಂಟ್ವಾಳ ತಾಲೂಕು ಬಿ. ಮೂಡ ಗ್ರಾಮದ ಬಿ ಸಿ ರೋಡ್ ಬಸ್ ಸ್ಟ್ಯಾಂಡ್ ನ ಒಳಗೆ ನನ್ನ ಸಹೋದರ ಜಯ ಕೊಟ್ಟಾರಿ ನೆಲದ ಮೇಲೆ ಮಲಗಿದ್ದ ಸ್ಥಿತಿಯಲ್ಲಿದ್ದು, ಹತ್ತಿರ ಹೋಗಿ ನೋಡಲಾಗಿ ಮೃತಪಟ್ಟಿರುವುದು ತಿಳಿದು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 19-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-05-2022 11:13 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080