ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ: 1

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗಗನ್‌ ಕುಮಾರ್‌  (21)ತಂದೆ:ಕೃಷ್ಣಪ್ಪ ಕೆ ಸಿ ವಾಸ:ಬೆಟ್ಟಂಪ್ಪಾಡಿ ಮನೆ ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು.ಎಂಬವರ ದೂರಿನಂತೆ ದಿನಾಂಕ:07.08.2022ರಂದು ಸಮಯ 20:30 ಗಂಟೆಗೆ ತಮ್ಮ ಬಾಬ್ತು  ಆಟೋ ರಿಕ್ಷಾದಲ್ಲಿ ತಮ್ಮ ಮನೆಯ ಕಡೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮ ಬೆಟ್ಟಂಪ್ಪಾಡಿ ನಿವಾಸಿ ಸದಾನಂದ ರವರ ಮನೆಯ ಎದುರು ರಸ್ತೆಯಲ್ಲಿ ಹೋಗುತ್ತಿರುವ ಸಮಯ  ರಸ್ತೆಯ ಬದಿಯಲ್ಲಿ ಕಾರೊಂದು ನಿಂತಿರುವದನ್ನು ಕಂಡು ಪಿರ್ಯಾದುದಾರರು ತಮ್ಮ ಆಟೋವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕಾರಿನ ಚಾಲಕ ಬರುವ ತನಕ ಕಾಯುತ್ತಿರುವಾಗ ಆರೋಪಿಗಳಾದ ಗುಲಾಬಿ ಸದಾನಂದ ಸುಮತಿ ರವರು ಬಂದು ಅವಾಚ್ಯ ಶಬ್ದಗಳಿಂದ ಬೈದು ಟೀ ಶರ್ಟ್ ಹಿಡಿದು ಹರಿದು ಹಾಕಿ ಕೈಯಿಂದ ಕುತ್ತಿಗೆ ಹಿಸುಕಿದ್ದು ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ದಾವಿಸಿ ಘಟನೆಯ ಬಗ್ಗೆ ವಿಚಾರಿಸಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ. ಅಲ್ಲದೇ ದಿನಾಂಕ:09.08.2022ರಂದು ಬೆಳಿಗ್ಗೆ 09:00 ಗಂಟೆಗೆ  01 ರಿಂದ 03ನೇ ಆರೋಪಿಗಳು 04ನೇ ಆರೋಪಿ ಸುಂದರ ಪಾಟಾಜೆ ರವರೊಂದಿಗೆ ಸೇರಿ 2ನೇ ಆರೋಪಿ ಪಿರ್ಯಾದುದಾರರಿಗೆ ಕರೆ ಮಾಡಿ ನೀನು 75 ಸಾವಿರ ಹಣ ನೀಡಬೇಕು ಎಂದು ಬೇಡಿಕೆ ಇಟ್ಟು ಬಳಿಕ 50 ಸಾವಿರ ಹಣ ನೀಡಬೇಕು ನೀನು ಹಣ ನೀಡಲು ಹಿಂಜರಿದರೆ  ನಿನ್ನ ವಿರುದ್ದ  ಜಾತಿ ನಿಂದನೆ ಕೇಸು ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆಂದು ಬೆದರಿಕೆ ಒಡ್ಡಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ.  ಅ.ಕ್ರ 89/2022 ಕಲಂ 323,504 384 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪುನೀತ್‌  ಮಾಡತ್ತಾರ್‌ ಪ್ರಾಯ(36),ತಂದೆ:  ನೀಲಪ್ಪ ಗೌಡ, ವಾಸ:  ಮೂಡತ್ತಾರು ಮನೆ,  ವಿಟ್ಲ ಮುಡ್ನೂರು  ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ ಸದಸ್ಯರಾಗಿದ್ದು ಈ ದಿನ ದಿನಾಂಕ:09.08.2022 ರಂದು  ಸಂಜೆ ಸುಮಾರು 5.30 ಗಂಟೆಗೆ ತನ್ನ ವಾರ್ಡ್‌ನ ಬೋಳಿಗದ್ದೆ ಎಂಬಲ್ಲಿ  ಮಾಡತ್ತಡ್ಕ- ಪೈಸರಿ ರಸ್ತೆಯ ಕಾಂಕ್ರೀಟ್‌ಕರಣ ಕಾಮಗಾರಿ ನಡೆಯುತ್ತಿದ್ದ ಪರಿಶೀಲನೆ  ಬಗ್ಗೆ ಹೋಗಿದ್ದು  ಆ ಸಮಯ  ಚಂದಳಿಕೆ  ಕಡೆಯಿಂದ  ಅಪಾಚಿ ಮೋಟಾರು  ಸೈಕಲ್‌ನಲ್ಲಿ  ಬಂದಿದ್ದ ಪಿರ್ಯಾದಿದಾರರ ಪರಿಚಯದ  ಗಣೇಶ್‌ ಕೇಪು ಮತ್ತು  ನಿಶಂತ್‌@ ನಿತಿನ್‌  ಪಿರ್ಯಾದಿದಾರರ  ಬಳಿ ಬಂದು ಗಣೇಶನು ಅವಾಚ್ಯ ಶಬ್ದಗಳಿಂದ ಬೈದು  ಮೋಟಾರು ಸೈಕಲ್‌ ಸವಾರರಿಬ್ಬರು  ಮೋಟಾರು ಸೈಕಲ್‌ನಿಂದ  ಕೆಳಗಿಳಿದು  ನಿಶಂತ್‌@ ನಿತಿನ್‌ ಪಿರ್ಯಾದಿದಾರರ ಮುಖಕ್ಕೆ  ಹಾಗು ಬೆನ್ನಿನ ಭಾಗಕ್ಕೆ  ಕೈಯಿಂದ ಹೊಡೆದನು. ಗಣೇಶ್‌ನು ಅಲ್ಲಿಯೇ  ಬಿದ್ದುಕೊಂಡಿದ್ದ ಜಲ್ಲಿಕಲ್ಲನ್ನು  ಹೆಕ್ಕಿ  ಕುತ್ತಿಗೆಯ ಭಾಗಕ್ಕೆ ಕಲ್ಲಿನಿಂದ ಹೊಡೆದನು. ಆಗ ಅಲ್ಲಿದ್ದವರು  ಪಿರ್ಯಾದಿದಾರರಿಗೆ  ಹೊಡೆಯುವುದನ್ನು  ಕಂಡು ಬಿಡಿಸಲು ಬಂದಾಗ, ಗಣೇಶನು  ಒಂದು  ಚೂರಿಯನ್ನು  ತೋರಿಸಿ “ನಮ್ಮನ್ನು  ಈ ರಸ್ತೆಯಿಂದ  ಮುಂದಕ್ಕೆ  ಹೋಗಲು ಬಿಡದೇ ಇದ್ದರೆ ನಿನ್ನನ್ನು ಕೊಂದು ಹಾಕುವುದಾಗಿ  ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ ನಂಬ್ರ 129/2022    ಕಲಂ:323, 324, 504, 506 ಜೊತೆ 34  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ಸುಳ್ಯ ಪೊಲೀಸ್ ಠಾಣೆ : ದಿನಾಂಕ 09.08.2022 ರಂದು ಸುಳ್ಯ ಠಾಣಾ ಪೊಲೀಸ್ ಠಾಣೆಯಲ್ಲಿ ಅ. ಕ್ರ 88/2022 ಕಲಂ: 323, 504, 506, ಐಪಿಸಿ ಮತ್ತು ಕಲಂ: 3(1)(s) SC/ST Act 2015 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಯೋಗೇಶ್(43) ತಂದೆ: ಅಂತಪ್ಪ ಬೆಳ್ಚಾಡ ವಾಸ: ಕಾಂತಡ್ಕ ಮನೆ ವಿಟ್ಲ ಕಸಬ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿಯಾದಿದಾರರು ದಿನಾಂಕ:09.08.2022 ರಂದು ಬೆಳಿಗ್ಗೆ 8.30 ಗಂಟೆ ಸುಮಾರಿಗೆ, ಕಾಡಿಗೆ ಹೋಗಿ ಕಟ್ಟಿಗೆ ತರುವರೇ ನಮ್ಮ ಮನೆಯಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ನೆಕ್ಕರೆ ಕಾಡು ಎಂಬಲ್ಲಿಗೆ ಬಂದಿದ್ದು,ಅಲ್ಲಿ ಕಟ್ಟಿಗೆ ತುಂಡು ಮಾಡುತ್ತಿರುವ ಸಮಯ ಕಾಡಿನ  ಪೊದೆಯ ಪಕ್ಕದಲ್ಲಿ ಒಂದು ತೆಲೆಬುರುಡೆ ಕಾಣ ಸಿಕ್ಕಿದ್ದು, ಅದನ್ನು ಗಮನಿಸಿದಾಗ ಮನುಷ್ಯನ ತಲೆಬುರುಡೆಯಂತೆ ಕಂಡು ಬಂದಿರುತ್ತದೆ. ಬಳಿಕ ಸದ್ರಿ ಪೊದೆಯ ಸ್ವಲ್ಪ ದೂರದಲ್ಲಿ ಖಾಲಿ ಜಾಗದ ಮೇಲೆ  ಮೃತ ದೇಹದ ಮೂಳೆಗಳು ಕಂಡು ಬಂದಿದ್ದು,ಅದರ ಪಕ್ಕದಲ್ಲಿ ಹಸಿರು ಬಣ್ಣದಲ್ಲಿ ಹೂವಿನ ಚಿತ್ರಗಳಿರುವ ಲುಂಗಿ, ಹರಿದಿರುವ ಬಿಳಿ ಬಣ್ಣದ ಶರ್ಟ್ ,ಕಪ್ಪು ಬಣ್ಣದ  ಚಪ್ಪಲ್  ಮತ್ತು ಸಿಗರ್ ಲೈಟರ್ ಬಿದ್ದುಕೊಂಡಿರುವುದನ್ನು ಕಂಡೆನು. ಸದ್ರಿ ತಲೆಬುರುಡೆ ಮತ್ತು ಮೂಳೆಗಳು ಮನುಷ್ಯನ ದೇಹದ ಅವಶೇಷದಂತೆ ಕಂಡು ಬಂದಿದ್ದು, ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 35/2022  ಕಲಂ 174 (3) (iv)  ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಪ್ಪು ಪಾಟಾಳಿ ಪ್ರಾಯ 67 ವರ್ಷತಂದೆ: ದಿ| ಸುಬ್ಬ ಪಾಟಾಳಿ,ವಾಸ: 3-211 ಅಜೇರುಮಜಲು ಮನೆ, ಪುಣಚ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಮಗ ಬಾಲಕೃಷ್ಣ (39) ಅವಿವಾಹಿತನಾಗಿದ್ದು,  ಗಾರೆ ಕೆಲಸ ಮಾಡಿಕೊಂಡಿರುತ್ತಾನೆ, ಬಾಲಕೃಷ್ಣನು ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯನಾಗಿದ್ದು, ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದು. ದಿನಾಂಕ: 08-08-2022 ರಂದು ಆತನು ಕೆಲಸಕ್ಕೆ ಹೋಗದೇ ಮನೆಯಲ್ಲಿ ಇದ್ದು, ಸಾಯಂಕಾಲ ಸುಮಾರು 3.45 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಹೆಂಡತಿ ಶ್ರೀಮತಿ ಬೇಬಿರವರಿಗೆ ಬಾಲಕೃಷ್ಣನು ಮುಂದಕ್ಕೆ ಮನೆಗೆ ಬರುವುದಿಲ್ಲ ಎಂದು ತಿಳಿಸಿ ಅಜೇರುಮಜಲುನಿಂದ ಹೊರಟು ಹೋಗಿರುತ್ತಾನೆ. ಈವರೆಗೆ ಮನೆಗೆ ಬಾರದೇ ಇದ್ದು, ಆತನ ಮೊಬೈಲ್ ಗೆ ಕರೆ ಮಾಡಲಾಗಿ ಸ್ವಿಚ್ ಆಫ್ ಆಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 128/2022 ಕಲಂ ಮನುಷ್ಯ ಕಾಣೆ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-08-2022 10:52 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080