ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಬೆಳ್ತಂಗಡಿ  ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಂಜಪ್ಪ (50)ತಂದೆ: ಚನ್ನು ವಾಸ: ನೆಲ್ಲಿಗುಡ್ಡೆ  ಮನೆ , ಪಿಲಿಕಲ, ನೆರಿಯ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 09-10-2022 ರಂದು ಪಿರ್ಯಾಧಿದಾರರು ಕೆಎ 20 -8031 ನೇ ಸರ್ವಿಸ್‌ ಜೀಪಿನಲ್ಲಿ ಸಂಬಂಧಿಕರಾದ ಪಿರ್ಯಾಧಿದಾರರ ತಮ್ಮ ಗುರುವ, ತಮ್ಮನ ಹೆಂಡತಿ ಯಮುನಾ, ತಮ್ಮನ ಮಕ್ಕಳಾದ ಸಂತೋಷ, ಸಾಮು ಎಂಬವರೊಂಗೆ ಸಹ ಪ್ರಯಾಣಿಕರಾಗಿ ಕುಳಿತುಕೊಂಡು ಜೀಪನ್ನು ಅದರ ಚಾಲಕ ರಾಜೇಶ್‌ ರವರು ಕಾರ್ಯತಡ್ಕ ಕಡೆಯಿಂದ ಕುದ್ರಾಯ ಕಡೆಗೆ ಚಲಾಯಿಸಿಕೊಂಡು ಬರುತ್ತಾ  ಸಮಯ ಸುಮಾರು ಮದ್ಯಾಹ್ನ 2.15 ಗಂಟೆಗೆ ಬೆಳ್ತಂಗಡಿ ತಾಲೂಕು,ನಿಡ್ಲೆ ಗ್ರಾಮದ ಬರಂಗಾಯ ಎಂಬಲ್ಲಿಗೆ ತಲುಪುತ್ತಿದ್ದಂತೆ   ಜೀಪ್‌ನ್ನು ಅದರ ಚಾಲಕ ಒಮ್ಮೆಲೇ ದುಡುಕುತನದಿಂದ ಚಲಾಯಿಸಿ ಜೀಪು ಚಾಲಕನ ಚಾಲನಾ ಹತೋಟಿ ತಪ್ಪಿ  ಮಗಚಿ ಬಿದ್ದು ಪಿರ್ಯಾದುದಾರರಿಗೆ ಸೊಂಟಕ್ಕೆ ಗುದ್ದಿದ ಗಾಯ, ಬಲ ಕೈಗೆ ಗುದ್ದಿದ ಗಾಯ, ಗುರುವ ರವರಿಗೆ ಕುತ್ತಿಗೆಗೆ ,ಹೊಟ್ಟೆಗೆ ಗುದ್ದಿದ ಗಾಯ,ಯಮುನಾರವರಿಗೆ  ತಲೆಗೆ ಗುದ್ದಿದ ಗಾಯ,ಸಂತೋಷ ರವರಿಗೆ  ಎಡ ಕಾಲಿನ ಮೊಣಗಂಟಿಗೆ ಗುದ್ದಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಉಜಿರೆ ಎಸ್‌ ಡಿ ಎಂ ಆಸ್ಪತ್ರೆಯಲ್ಲಿ ಹಾಗೂ ಜೀಪು ಚಾಲಕ ರಾಜೇಶರವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ  ಸಂಚಾರ  ಪೊಲೀಸ್ ಠಾಣೆ ಅ.ಕ್ರ: 120/2022 ಕಲಂ 279,337 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚಂದ್ರಹಾಸ. ಪ್ರಾಯ 41 ವರ್ಷ, ತಂದೆ: ದಿ.ರಾಮಣ್ಣ ಗೌಡ ವಾಸ: ಸಾಲೆ ಮನೆ,  ಹಿರೇಬಂಡಾಡಿ  ಗ್ರಾಮ & ಅಂಚೆ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 09-10-2022 ರಂದು 10:00 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ವಾಸಪ್ಪ ಕೆ ಎಂಬವರು  KA-19-ER-0333ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು ಉಪ್ಪಿನಂಗಡಿ-ಹಿರೇಬಂಡಾಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಹಿರೇಬಂಡಾಡಿ ಕಡೆಗೆ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಚಂದ್ರಹಾಸರವರು ಸವಾರರಾಗಿ ಚೇತನ್‌ ಕುಮಾರ ಎಂ.ಜೆ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಹಿರೇಬಂಡಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ kA-21-X-2832ನೇ  ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರು ಮತ್ತು ಸಹಸವಾರ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಸಹಸವಾರ ಚೇತನ್‌ ಕುಮಾರ್‌ ಎಂ.ಜೆ ರವರಿಗೆ ಬಲ ಕೈಯ ಬೆರಳುಗಳಿಗೆ, ಬಲಕಾಲಿನ ಕೋಲು ಕಾಲಿಗೆ ಗುದ್ದಿದ ಹಾಗೂ ಕ್ತಗಾಯವಾಗಿ,  ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಪಿರ್ಯಾದುದಾರರಿಗೆ ಬಲಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯವಾಗಿದ್ದು ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ 154/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರವೀಂದ್ರ , ಪ್ರಾಯ: 49 ವರ್ಷ, ತಂದೆ-ದಿ.ನಾರಾಯಣ ಶೆಟ್ಟಿ, ವಾಸ: ಕಂಬಳದಡ್ಡ ಮನೆ, ಆರ್ಯಾಪು  ಗ್ರಾಮ, ಪುತ್ತೂರು ಎಂಬವರ ದೂರಿನಂತೆ ಫಿರ್ಯಾದುದಾರರಾದ ರವೀಂದ್ರ , ಪ್ರಾಯ: 49 ವರ್ಷ, ತಂದೆ-ದಿ.ನಾರಾಯಣ ಶೆಟ್ಟಿ, ವಾಸ: ಕಂಬಳದಡ್ಡ ಮನೆ, ಆರ್ಯಾಪು  ಗ್ರಾಮ, ಪುತ್ತೂರು ತಾಲೂಕು ಎಂಬವರು ಈದಿನ ದಿನಾಂಕ:- 09.10.2022ರಂದು ಮಧ್ಯಾಹ್ನ ನಟರಾಜ ಎಂಬವರ ಜೊತೆಯಲ್ಲಿ ಸಂಪ್ಯದಿಂದ ತನ್ನ ಮನೆಯಾದ ಕಂಬಳದಡ್ಡ ಕಡೆಗೆ  ದೀಕ್ಷಿತ್  ಎಂಬವರು ಚಲಾಯಿಸಿಕೊಂಡಿದ್ದ KA 21 C 2490ನೇ ಆಟೋರಿಕ್ಷಾದಲ್ಲಿ ಪ್ರಯಾಣಿಕರಾಗಿ ಕುಳಿತುಕೊಂಡು ಸಂಪ್ಯ-ಒಳತ್ತಡ್ಕ ರಸ್ತೆಯಲ್ಲಿ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಕೊಲ್ಯ ಎಂಬಲ್ಲಿರುವ ವಿಶ್ವನಾಥ ಗೌಡರ ಮನೆಯ ಬಳಿಗೆ ಮಧ್ಯಾಹ್ನ ಸುಮಾರು 2.30 ಗಂಟೆಗೆ ತಲುಪಿದಾಗ ಸದ್ರಿ ಆಟೋರಿಕ್ಷಾವನ್ನು ಅದರ ಚಾಲಕನಾದ ದೀಕ್ಷಿತ್ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಆಟೋರಿಕ್ಷಾವು ರಸ್ತೆಯಲ್ಲಿ ಮಗುಚಿ ಬಿದ್ದಿರುತ್ತದೆ. ಈ ಅಪಘಾತದ ಪರಿಣಾಮ ಫಿರ್ಯಾದುದಾರರ ಎಡ ಕೈಯ ಕೋಲು ಕೈ ಮತ್ತು ಮುಂಗೈಯಲ್ಲಿ ಗುದ್ದಿದ ರೀತಿಯ ನೋವು ಮತ್ತು ಬಲ ಕೈಯ ತೋಳಿನಲ್ಲಿ ರಕ್ತ ಗಾಯವಾಗಿರುತ್ತದೆ. ಫಿರ್ಯಾದುದಾರರ ಜೊತೆಯಲ್ಲಿದ್ದ ನಟರಾಜರಿಗೆ ಸಣ್ಣಪುಟ್ಟ ಗುದ್ದಿದ ರೀತಿಯ ನೋವು ಉಂಟಾಗಿರುತ್ತದೆ.  ಆಟೋರಿಕ್ಷಾದ ಚಾಲಕನಾದ ದೀಕ್ಷಿತ್‌ರಿಗೆ ಮೇಲ್ನೋಟಕ್ಕೆ ಯಾವುದೇ ರೀತಿಯ ಗಾಯ ಉಂಟಾಗಿರುವುದಿಲ್ಲ.  ಈ ಅಪಘಾತವನ್ನು ನೋಡಿದ ರವಿಚಂದ್ರ ಎಂಬವರು ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಪುತ್ತೂರಿನ ಆದರ್ಶ ಆಸ್ಪತ್ರೆಗೆ  ಕರೆದುಕೊಂಡು ಬಂದಾಗ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಫಿರ್ಯಾದುದಾರರಾದ ರವೀಂದ್ರರನ್ನು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದು, ನಟರಾಜರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ ಕ್ರ 96/2022 ಕಲಂ:279,337 ಭಾ.ದಂ ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗಣೇಶ ನಾಯ್ಕ್    (36) ತಂದೆ ಸಂಜೀವ ನಾಯ್ಕ ವಾಸ: ಸಿಂತಾನಿ ಗುಡ್ಡೆ ಮನೆ, ನಾವೂರು  ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದುದಾರರು ನಾವೂರು ಗ್ರಾಮದ ಸಿಂತಾನಿ ಗುಡ್ಡೆ ಮನೆ ಎಂಬಲ್ಲಿ ವಾಸವಾಗಿದ್ದು ಪೂಪಾಡಿಕಟ್ಟೆ ಎಮ್ ಎಸ್ ಇ ಝಡ್ ನಲ್ಲಿ ಕೆಲಸಮಾಡಿಕೊಂಡಿರುವುದಾಗಿದೆ. ದಿನಾಂಕ  09.10.2022 ರಂದು ಬೆಳಗ್ಗೆ 09.00 ಗಂಟೆಗೆ ಮನೆಯ ಜಾನುವಾರಗಳನ್ನು ನೇತ್ರಾವತಿನದಿಯ ಬಳಿ ಮೇಯಿಸಲು ಹೋಗಿದ್ದ ಸಮಯ ನದಿಯಲ್ಲಿ ಒಂದು ಹೆಂಗಸಿನ ಮೃತ ದೇಹ ತೇಲಾಡಿಕೊಂಡಿರುವುದನ್ನು ಕಂಡು ನೋಡಲಾಗಿ ಮೃತ ದೇಹವು ಬಾತುಹೋಗಿರುತ್ತದೆ. ಮೃತ ದೇಹದ ಮೈಮೇಲೆ ಹಳದಿ ಬಣ್ಣದ ಟಾಪ್ , ಕಪ್ಪು ಬಣ್ಣದಲ್ಲಿ ಹಳದಿ ಬಣ್ಣದಲ್ಲಿ ಹೂವುಗಳಿರುವ ಪ್ಯಾಂಟ್ ಧರಿಸಿರುವುದು ಕಂಡುಬಂದಿರುತ್ತದೆ. ಮೃತ ಹೆಂಗಸು ಸುಮಾರು 30 ರಿಂದ 35 ವರ್ಷ ವಯಸ್ಸಾಗಿರಬಹುದು . ಮೃತ ಹೆಂಗಸು ಎಲ್ಲಿಯೊ ಆಕಸ್ಮೀಕವಾಗಿ ನೀರಿಗೆ ಬಿದ್ದು ಅಥವಾ ನೀರಿಗೆ ಹಾರಿ ಆತ್ಮಹತ್ಯೆಮಾಡಿಕೊಂಡು ನೀರಿನಲ್ಲಿ ತೇಲಿಕೊಂಡುಬಂದಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್‌ ನಂ 52-2022 ಕಲಂ 174 ( C )  ಸಿ ಆರ್‌ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-10-2022 10:34 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080