ಅಪಘಾತ ಪ್ರಕರಣ: 01
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಮಹಮ್ಮದ್ ನಶಿಲ್ ಪ್ರಾಯ: 17 ತಂದೆ: ಅಬ್ದುಲ್ಲಾ ವಾಸ: ವಳವೂರು, ಉಮನಗುಡ್ಡೆ ಮನೆ ತುಂಬೆ ಗ್ರಾಮ , ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 09-11-2022 ರಂದು ಪಿರ್ಯಾದಿದಾರರು ತನ್ನ ಪರಿಚಯದ ಮುಜಾಮಿಲ್ ರವರು ಚಲಾಯಿಸಿಕೊಂಡು ಬಂದ ಯಾವುದೇ ನಂಬರ್ ಪ್ಲೇಟ್ ಅಳವಡಿಸದ ಯಮಹಾ ಎಫ್ ಝಡ್ ಮೋಟಾರ್ ಸೈಕಲ್ ನಲ್ಲಿ ಸಹಸವಾರನಾಗಿ ಕುಳಿತುಕೊಂಡು ತುಂಬೆ ಕಾಲೇಜು ಕಡೆಗೆ ಹೋಗುತ್ತಾ ಸಮಯ ಬೆಳಿಗ್ಗೆ 08:50 ಗಂಟೆಗೆ ಬಂಟ್ವಾಳ ತಾಲೂಕು ತುಂಬೆ ಗ್ರಾಮದ ರಾಮಲಕಟ್ಟೆ ಎಂಬಲ್ಲಿಗೆ ತಲುಪಿದಾಗ ಮೋಟಾರ್ ಸೈಕಲ್ ಸವಾರ ಮುಜಾಮಿಲ್ ರವರು ಮೋಟಾರ್ ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಫಿರ್ಯಾದಿದಾರರು ಹಾಗೂ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅಪಘಾತವಾಗಿದ್ದು ಫಿರ್ಯಾದಿದಾರರಿಗೆ ಹಾಗೂ ಮೋಟಾರ್ ಸೈಕಲ್ ಸವಾರನಿಗೆ ಮುಖಕ್ಕೆ ಹಾಗೂ ಕಾಲುಗಳಿಗೆ ರಕ್ತಗಾಯವಾಗಿದ್ದು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಮಂಗಳೂರಿಗೆ ಕಳುಹಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 138/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕೊಲೆಯತ್ನ ಪ್ರಕರಣ: 02
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ಅರ್ಫಾಸ್ ಪ್ರಾಯ 18 ವರ್ಷ ತಂದೆ: ಜಬ್ಬರ್ ವಾಸ: ನಂದಾವರ ಕುರುಬರ ಕೇರಿ ಸಜಿಪ ಮುನ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ, ದಿನಾಂಕ 08-11-2022 ರಂದು ಮನೆ ಬಳಿ ಇರುವ ನಂದಾವರ ಕೋಟೆಯ ಮೈದಾನಕ್ಕೆ ಗೆಳೆಯರ ಜೊತೆ ಆಟವಾಡಲು ಹೋಗಿದ್ದು, ಆಟವಾಡಿದ ಬಳಿಕ ರಾತ್ರಿ 8.00 ಗಂಟೆಗೆ ಮೈದಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಫಿರ್ಯಾದಿದಾರರ ಪರಿಚಯದ ತಾಳಿಪಡಪ್ಪು ನವಾಜ್, ಆತನ ಮೂರು ಗೆಳಯರೊಂದಿಗೆ ಪಲ್ಸರ್ ಮೋಟಾರ ಸೈಕಲ್ ನಲ್ಲಿ ಬಂದು ಅದರಲ್ಲಿ ನವಾಜ್ ನು ಫಿರ್ಯಾದಿದಾರರಲ್ಲಿ 10 ಸಾವಿರ ರೂ ಸಾಲ ಕೊಡಬೇಕೆಂದು ಕೇಳಿದನು, ಆಗ ಫಿರ್ಯಾದಿದಾರರು ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದೇನೆ ಈಗ ನನ್ನಲ್ಲಿ ಸಾಲ ಕೊಡಲು ಹಣವಿರುವುದಿಲ್ಲ ಎಂದು ಹೇಳಿದ್ದು. ಏಕಾಏಕಿ ನವಾಜನು ಅವಾಚ್ಯ ಶಬ್ದಗಳಿಂದ ಬೈದು, ನೀನು ಸಾಲ ಕೇಳಿದಾಗ ನಾನು ಕೊಡುತ್ತೇನೆ, ನಾನು ಕೇಳಿದಾಗ ನೀನು ಯಾಕೆ ಕೊಡುವುದಿಲ್ಲ ಎಂದು ಹೇಳುತ್ತಾ ಆತನ ಪ್ಯಾಂಟಿನ ಕಿಸೆಯಲ್ಲಿ ಇಟ್ಟುಕೊಂಡು ಬಂದಿದ್ದ ಚೂರಿಯನ್ನು ತೆಗೆದು ಫಿರ್ಯಾದಿದಾರರ ಎದೆಗೆ ತಿವಿದು ರಕ್ತಗಾಯ ಮಾಡಿರುತ್ತಾನೆ. ಆಗ ಫಿರ್ಯಾದಿದಾರರು ಬೊಬ್ಬೆ ಹಾಕುವಾಗ ಅಲ್ಲಿಂದ ಆರೋಪಿಗಳು ಸದ್ರಿ ಮೋಟಾರ ಸೈಕಲ್ ನಲ್ಲಿ ಹೋಗಿರುತ್ತಾರೆ. ಬೊಬ್ಬೆ ಕೇಳಿ, ಸ್ವಲ್ವ ದೂರದಲ್ಲಿ ಸಾದಿಕ್ ಹಾಗೂ ರಾಫಿತ್ ರವರು ಬಂದಿದ್ದು, ಅವರ ಸಹಾಯದಿಂದ ಮನೆಗೆ ಬಂದಿರುತ್ತೇನೆ ನಂತರ ಅಣ್ಣನಾದ ಮಹಮ್ಮದ್ ಸಫಾನ ವಿಚಾರ ತಿಳಿದು ಬಂಟ್ವಾಳ ಸರಕಾರಿ ಆಸ್ವತ್ರೆಗೆ ಚಿಕಿತ್ಸೆಗಾಗಿ ಕರೆ ತಂದಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ: 108/2022 ಕಲಂ: 504, 324, 307 ಜೊತೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಕೃಷ್ಣಕುಮಾರ್ ಪ್ರಾಯ 29 ವರ್ಷ ತಂದೆ:ದಿ||ಗೋವಿಂದ ನಾಯ್ಕ್ ವಾಸ:ನೆಗಳಗುರಿ ಮನೆ, ಅಳಿಕೆ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:08-11-2022 ರಂದು ರಾತ್ರಿ 8.00 ಗಂಟೆಯ ಸಮಯಕ್ಕೆ ಪಿರ್ಯಾಧಿದಾರರು ಹಾಗೂ ಅವರ ತಾಯಿ ಮನೆಯಲ್ಲಿರುವಾಗ ಪಿರ್ಯಾಧಿ ಹಾಗೂ ಅವರ ತಾಯಿ ತಾವಿರುವ ವಾಸದ ಮನೆಯನ್ನು ಆಪಾದಿತ ಹರೀಶನಿಗೆ ಬಿಟ್ಟು ಕೊಡದೆ ಇರುವ ಕಾರಣಕ್ಕಾಗಿ ಹರೀಶನು ಪಿರ್ಯಾಧಿ ಹಾಗೂ ಅವರ ತಾಯಿ ವಾರಿಜರನ್ನು ಅವಾಚ್ಯ ಶಬ್ದಗಳಿಂದ ಬೈದು ನಿಮಗೆ ಒಂದು ಗತಿ ಕಾಣಿಸುತ್ತೇನೆ ಎಂದು ಹೇಳಿ ಪಿರ್ಯಾಧಿ ಹಾಗೂ ಅವರ ತಾಯಿ ವಾರಿಜರವರನ್ನು ಕೊಲ್ಲುವ ಉದ್ದೇಶದಿಂದ ತಾನು ಕೆಲಸಕ್ಕೆ ತೆಗೆದುಕೊಂಡು ಹೋಗುವ ಕತ್ತಿಯಿಂದ ಪಿರ್ಯಾಧಿಯನ್ನು ಕಡಿಯಲು ಬಂದಾಗ ತಪ್ಪಿಸಿಕೊಳ್ಳವಷ್ಟರಲ್ಲಿ ಕತ್ತಿಯಿಂದ ತಲೆಯ ಹಿಂಬದಿಯ ಬಲ ಭಾಗಕ್ಕೆ ಎರಡು ಬಾರಿ ಕಡಿದನು ಆಗ ತಡೆಯಲು ಬಂದ ತಾಯಿಯನ್ನು ತಡೆದು ಕೈಯಿಂದ ದೂಡಿ ಹಾಕಿ ತಾಯಿಯವರನ್ನು ಕೂಡಾ ಕೊಲ್ಲುವ ಉದ್ದೇಶದಿಂದ ತಲೆಯ ಬಲಭಾಗಕ್ಕೆ ಮತ್ತು ಕೈಗೆ ಕಡಿದನು ,ಆಗ ಪಿರ್ಯಾಧಿ ಹಾಗೂ ಅವರ ತಾಯಿ ಜೋರಾಗಿ ಬೊಬ್ಬೆ ಹೊಡೆದಾಗ ಆಪಾದಿತ ಹರೀಶ್ ಕತ್ತಿಯೊಂದಿಗೆ ಮನೆಯಿಂದ ಹೊರಗೆ ಹೋಗಿರುತ್ತಾನೆ. ಹಲ್ಲೆಯಿಂದ ಗಾಯಗೊಂಡ ಗಾಯಾಳುಗಳನ್ನು ಅಂಬುಲೆನ್ಸ ಒಂದರಲ್ಲಿ ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 173/2022 ಕಲಂ: 504,341,324,307 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: 04
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಎಂ. ದೊರೆಸ್ವಾಮಿ, ಪ್ರಾಯ: 45 ವರ್ಷ, ತಂದೆ: ವಿ. ಮಾರಿಯಪ್ಪನ್, ವಾಸ: ನೆಲ್ಲಕುಮೇರಿ ಮನೆ, ಸಂಪಾಜೆ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದು, ಪತ್ನಿ ಮಹಾಲಕ್ಷ್ಮಿ ಕೆ., ಪ್ರಾಯ: 38 ವರ್ಷ ಮತ್ತು ಇಬ್ಬರೂ ಹೆಣ್ಣು ಮಕ್ಕಳೊಂದಿಗೆ ವಾಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರ ಪತ್ನಿ ಮಹಾಲಕ್ಷ್ಮಿ ರವರು ಮನೆವಾರ್ತೆ ನೋಡಿಕೊಂಡು ಮನೆಯಲ್ಲಿಯೇ ಇದ್ದವರು, ದಿನಾಂಕ: 04.10.2022 ರಂದು ಬೆಳಿಗ್ಗೆ 6:00 ಗಂಟೆಗೆ ಪಿರ್ಯಾದಿದಾರರು ಎಂದಿನಂತೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋದವರು ಕೆಲಸ ಮುಗಿಸಿ ವಾಪಾಸು 12:00 ಗಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ಮಕ್ಕಳು ಮಾತ್ರ ಇದ್ದು ಪತ್ನಿ ಮಹಾಲಕ್ಷ್ಮಿ ಕಾಣಿಸದೇ ಇದ್ದು, ಮಕ್ಕಳಲ್ಲಿ ವಿಚಾರಿಸಿದಾಗ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಬೆಳಿಗ್ಗೆ 10:30 ಗಂಟೆಗೆ ಹೋಗಿರುವುದಾಗಿ ತಿಳಿಸಿರುತ್ತಾರೆ. ಬಳಿಕ ರಾತ್ರಿಯಾದರೂ ಮಹಾಲಕ್ಷ್ಮಿ ಯು ಮನೆಗೆ ಬಾರದೇ ಇದ್ದು, ಪಿರ್ಯಾದಿದಾರರು ಮಹಾಲಕ್ಷ್ಮಿಯ ಬಗ್ಗೆ ಅವರ ಸಂಬಂಧಿಕರಲ್ಲಿ, ಪರಿಚಯಸ್ಥರಲ್ಲಿ, ನೆರೆಕರೆಯವರಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗದೇ ಇದ್ದು, ಆ ನಂತರ ತಮಿಳುನಾಡಿಗೆ ತೆರಳಿ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಲ್ಲಿ ಮಹಾಲಕ್ಷ್ಮಿ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ 131/2022 ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಮೀತ್ ಕುಮಾರ ಪ್ರಾಯ:48 ವರ್ಷ ವಾಸ:ಸಿನಿಯರ್ ರೆಜಿನಲ್ ಮ್ಯಾನೇಜರ್ ಇಂಡಿಯನ್ ಓವರ್ ಸಿಸ್ ಬ್ಯಾಂಕ್ ರೆಜಿನಲ್ ಆಫೀಸ್ ಮಂಗಳೂರು ದ.ಕ ಜಿಲ್ಲೆ ಎಂಬವರ ದೂರಿನಂತೆ ರಾಮಕುಂಜದಲ್ಲಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮಂಗಳೂರು ಶಾಖಾ ವ್ಯವಸ್ಥಾಪಕರಾಗಿ ಆರೋಪಿತನಾದ ಚೇತನ್ ಶರ್ಮಾ ರವರು ಈ ಹಿಂದೆ ಕಾರ್ಯನಿರ್ವಹಿಸುತಿದ್ದು ಆರೋಪಿತನು ಸದ್ರಿ ಬ್ಯಾಂಕ್‌ನಲ್ಲಿ ಮಹೇಶ್, ಸವಿತ ಶರ್ಮಾ, ರೇಣುಕ, ಅಕ್ಷಯ್.ಎಸ್, ನಿಖಿತಾ ಎಸ್, ರಾಹುಲ್, ಎಸ್, ಉಮಾ ಚತುರ್ವೇದಿ ಎಂಬವರ ಹೆಸರಿನಲ್ಲಿ 21 ನಕಲಿ ಲೋನ್ ಖಾತೆಗಳನ್ನು ತೆರೆದು ಸದ್ರಿ ಖಾತೆಗಳಿಗೆ ಒಟ್ಟು71,29,350/- ರೂಗಳನ್ನು ಯಾವುದೇ KYC ಪ್ರಕ್ರಿಯ ದಾಖಲೆ,ಖಾತೆ ತೆರೆಯುವ ದಾಖಲೆಗಳನ್ನು ಪಡೆಯದೇ ಸಾಲ ಮಂಜೂರು ಮಾಡಿ ಸದ್ರಿ ಖಾತೆಗಳಿಗೆ ಹಣ ಜಮಾವಣೆ ಮಾಡಿ ತದನಂತರ ಬೇರೆ ಬೇರೆ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುತ್ತಾನೆ ಬಳಿಕ 21 ನಕಲಿ ಲೋನ್ ಖಾತೆಗಳಿಗೆ ಆರೋಪಿತನು ಒಟ್ಟು 51,31,141/- ರೂಗಳನ್ನು ಜಮೆ ಮಾಡಿರುತ್ತಾನೆ. ಬ್ಯಾಂಕ್ ಆಡಿಟ್ ಸಮಯದಲ್ಲಿ ಆರೋಪಿತನು ಅಕ್ರಮವಾಗಿ ಬೇರೆ ಬೇರೆ ಖಾತೆಗಳನ್ನು ಹಣ ಸಂದಾಯ ಮಾಡಿದ ಬಗ್ಗೆ ಪ್ರಾಥಮಿಕ ವಿಚಾರಣೆಯಲ್ಲಿ ಕಂಡು ಬಂದಿದ್ದು ಬಳಿಕ ಆರೋಪಿತನಾದ ಚೇತನ್ ಶರ್ಮಾ ಎಂಬವರನ್ನು ದಿನಾಂಕ:19.05.2022 ರಂದು ಅಮಾನತು ಮಾಡಲಾಗಿರುತ್ತದೆ ಆರೋಪಿತನು ತೆರೆದಿದ್ದ ನಕಲಿ ಖಾತೆಗಳಿಂದ 19,98,208/- ರೂ ಲೋನ್ ಬಾಕಿ ಇರುತ್ತದೆ.ಆದುದರಿಂದ ನಕಲಿ ಖಾತೆಗಳನ್ನು ತೆರೆದು ಯಾವುದೇ ರೀತಿಯ ಕ್ರಯ, ಆಸ್ತಿಪತ್ರ, ಮೌಲ್ಯಮಾಪನ ವರದಿ, ಕಾನೂನು ಅಭಿಪ್ರಾಯ, ಅಡಮಾನ ತೆಗೆದುಕೊಳ್ಳದೇ ವಸತಿ ಸಾಲ ಮತ್ತು ಭೂಮಿ ಲಕ್ಷ್ಮೀ ಸಾಲ ಇತ್ಯಾದಿ ಸಾಲಗಳನ್ನು ಮಂಜೂರು ಮಾಡಿ ಬ್ಯಾಂಕ್ ಹಣವನ್ನು ದುರುಪಯೋಗಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 96/2022 ಕಲಂ: ಕಲಂ: 409. 420 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಅಮೃತಾ ಆಳ್ವ, ಪ್ರಾಯ 52 ಗಂಡ: ಅಶೋಕ ಆಳ್ವ, ವಾಸ: ಗುಂಡಾಲ ಮನೆ, ಬಡಗಬೆಳ್ಳೂರು ಅಂಚೆ ಮತ್ತು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ, ಅಶೋಕ ಆಳ್ವ ರವರನ್ನು ಮದುವೆಯಾಗಿ 28 ವರ್ಷಗಳಾಗಿದ್ದು, ಅಶೋಕ ಆಳ್ವರವರು ಸುಮಾರು ವರ್ಷ LIC ಯಲ್ಲಿ ಕೆಲಸ ಮಾಡಿಕೊಂಡಿದ್ದವರು 7 ವರ್ಷಗಳ ಹಿಂದೆ ವಾಹನ ಅಪಘಾತವಾಗಿ ನಂತರ ಸುಮಾರು ವರ್ಷ ಮನೆಯಾದ ಗುಂಡಾಲ ಬಡಗಬೆಳ್ಳೂರು ಗ್ರಾಮ ಎಂಬಲ್ಲಿ ಕೃಷಿ ಕೆಲಸವನ್ನು ಮಾಡಿಕೊಂಡಿರುತ್ತಾರೆ. ದಿನಾಂಕ: 08.11.2022 ರ ಬೆಳಿಗ್ಗೆ 07.10.ಗಂಟೆಗೆ ಶುಭಲಕ್ಷ್ಮೀ ಎಂಬ ಹೆಸರಿನ ಬಸ್ಸಿನಲ್ಲಿ ಅಗತ್ಯ ಕೆಲಸದ ಬಗ್ಗೆ ಮಂಗಳೂರಿಗೆ ವಕೀಲರ ಕಛೇರಿಗೆ ಹೋಗಿ ಬರುವುದಾಗಿ ಪಿರ್ಯಾದಿದಾರರ ಬಳಿ ಹೇಳಿ ಹೋದವರು ಮನೆಗೆ ಬಾರದೆ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದು ಮೊಬೈಲ್ ಫೋನ್ ಗೆ ಕರೆ ಮಾಡಿದಾಗ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂದು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 83/2022 ಕಲಂ ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: 03
ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗುರುರಾಜ್(22), ತಂದೆ: ಬಾಬು ಎಂ, ವಾಸ: ಮುಳ್ಯ ಹೊಸಗದ್ದೆ ಮನೆ, ಅಜ್ಜಾವರ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ: ಬಾಬು ಎಂ ಪ್ರಾಯ 60 ವರ್ಷ, ತಂದೆ: ತಿಮ್ಮ ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು ಕೆಲವು ದಿನಗಳಲ್ಲಿ ಮನೆಗೆ ಬಾರದೇ, ಎಲ್ಲಿಯಾದರೂ ಉಳಕೊಳ್ಳುತ್ತಿದ್ದರು. ದಿನಾಂಕ 08-11-2022ರಂದು ಬಾಬುರವರು ಬೆಳಿಗ್ಗೆ 9:00 ಗಂಟೆಗೆ ಸುಳ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವರು ವಾಪಾಸು ಮನೆಗೆ ಬಾರದೇ ಇದ್ದು, ದಿನಾಂಕ 09-11-2022ರಂದು ಪಿರ್ಯಾದಿದಾರರ ಸಂಬಂಧಿಕರಾದ ಚಂದ್ರಶೇಖರ ಎಂಬವರು ಪಿರ್ಯಾದಿದಾರರಿಗೆ ಫೋನ್ ಕರೆ ಮಾಡಿ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿಯಿರುವ ತನ್ನ ಗೂಡಂಗಡಿಯ ಬದಿಯಲ್ಲಿರುವ ಕಲ್ಲು ಬೆಂಚಿನ ಮೇಲೆ ಬಾಬುರವರು ಮಲಗಿದ ಸ್ಥಿತಿಯಲ್ಲಿದ್ದು, ನೋಡಿದಲ್ಲಿ ಮೃತಪಟ್ಟಿರುವಂತೆ ಕಂಡು ಬರುತ್ತಿರುವುದರಿಂದ ಕೂಡಲೇ ಬನ್ನಿ ಎಂದು ತಿಳಿಸಿದಂತೆ ಪಿರ್ಯಾದಿದಾರರು ಹಾಗೂ ಮನೆಯವರು ಬಂದು ನೋಡಿದಲ್ಲಿ ಬಾಬುರವರು ಮೃತಪಟ್ಟಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂಬ್ರ 48/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹರೀಶ್ ನಾಯಕ್ ಪ್ರಾಯ: 48 ವರ್ಷ, ತಂದೆ: ದಿ.ಸುಂದರ ನಾಯಕ್ ವಾಸ: ಬಳಕ್ಕ ಸಂಟ್ಯಾರು ಮನೆ ಆರ್ಯಾಪು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 08.11.2022 ರಂದು ಫಿರ್ಯಾದುದಾರರು ಕರ್ತವ್ಯ ಮುಗಿಸಿ ಮನೆಗೆ ಹೋಗಲೆಂದು ಸಂಟ್ಯಾರು ಬಸ್ ತಂಗುದಾಣದ ಬಳಿಗೆ ತಲುಪಿದಾಗ ಸದ್ರಿ ಬಸ್ ತಂಗುದಾಣದ ಬಳಿಯಲ್ಲಿ ಜನರು ಗುಂಪು ಸೇರಿದ್ದು. ಫಿರ್ಯಾದುದಾರರು ಕೂಡಾ ಸ್ಕೂಟರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಸದ್ರಿ ಬಸ್ ತಂಗುದಾಣದ ಒಳಗೆ ಹೋಗಿ ನೋಡಿದಾಗ ಬಸ್ ತಂಗುದಾಣದ ಒಳಗೆ ನೆಲದಲ್ಲಿ ಕೊಳಕಾದ ಕಂದು ಬಣ್ಣದಂತೆ ತೋರುವ ಲುಂಗಿ ಮತ್ತು ಕೊಳಕಾದ ಶರ್ಟ್ ನ ಮೇಲೆ ಹಳೆಯ ಟೀ ಶರ್ಟ್ ನಂತೆ ತೋರುವ ಉಡುಪನ್ನು ಧರಿಸಿದ ಸುಮಾರು 55 ವರ್ಷ ಪ್ರಾಯದ ಗಂಡಸು ಒಬ್ಬರು ಮುದುಡಿಕೊಂಡು ಮಲಗಿದ್ದು, ಈ ಬಗ್ಗೆ ಅಲ್ಲಿದ್ದ ಸಾರ್ವಜನಿಕರಲ್ಲಿ ಫಿರ್ಯಾದುದಾರರು ವಿಚಾರಿಸಿದಾಗ ಸದ್ರಿ ವ್ಯಕ್ತಿಯ ಬಗ್ಗೆ ಯಾರಿಗೂ ಪರಿಚಯವಿರದೇ ಇದ್ದು ಬೆಳಗ್ಗಿನಿಂದಲೇ ಸದ್ರಿ ಬಸ್ ತಂಗುದಾಣದಲ್ಲಿ ಮಲಗಿಕೊಂಡಿರುವುದಾಗಿ ತಿಳಿಸಿದ್ದು. ನಂತರ ಫಿರ್ಯಾದುದಾರರು ಮತ್ತು ಅಲ್ಲಿ ಸೇರಿದ್ದ ಇತರ ಸಾರ್ವಜನಿಕರು ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿ, ಸದ್ರಿಯವರ ಹೆಸರು ಮತ್ತು ಊರಿನ ಬಗ್ಗೆ ಕೇಳಲಾಗಿ ಸದ್ರಿಯವರು ಯಾವುದೇ ಉತ್ತರವನ್ನು ನೀಡಿರುವುದಿಲ್ಲ. ಕೂಡಲೇ ಫಿರ್ಯಾದುದಾರರು 108 ಆಂಬುಲೆನ್ಸ್ ಕರೆಸಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಫಿರ್ಯಾದುದಾರರು ಕರ್ತವ್ಯದಲ್ಲಿದ್ದ ಸಮಯ ಠಾಣೆಯಿಂದ ದೂರವಾಣಿ ಕರೆ ಬಂದಂತೆ ಠಾಣೆಗೆ ಬಂದಾಗ ದಿನಾಂಕ 08.11.2022ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿದ್ದ ಅಪರಿಚಿತ ವ್ಯಕ್ತಿಯು ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 09.11.2022 ರಂದು ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ UDR No 33/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಲ್ಲಿಕಾ ಪ್ರಾಯ 32ವರ್ಷ ಗಂಡ: ಜಯಕರ ವಾಸ: ಕುದ್ರೆಬೆಟ್ಟು ಮನೆ ಬಾಳ್ತಿಲ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 09/11/2022 ರಂದು ಎಂದಿನಂತೆ ಬೆಳಿಗ್ಗೆ 8.00 ಗಂಟೆಗೆ ಮಕ್ಕಳನ್ನು ಶಾಲೆಗೆ ಬೀಡಲು ಹೋಗುತ್ತಿದ್ದಾಗ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ತಲುಪಿದಾಗ ಆ ಸಮಯ ಪಿರ್ಯಾದಿದಾರರ ಮಗ ಪ್ರೀತಂ ಅಂಗಡಿಗೆ ಹೋಗಿ ವಾಪಾಸು ಅಟೋರಿಕ್ಷಾದ ಬಳಿ ಬಂದಾಗ ಚಾಲಕರ ಸೀಟಿನಲ್ಲಿ ತಂದೆ ಸ್ಮೃತಿ ತಪ್ಪಿದ್ದು ನೋಡಿ ಇತರರಿಗೆ ತಿಳಿಸಿದಾಗ ಅಲ್ಲೇ ಇದ್ದ ಮೋಹನದಾಸ ರವರು 9 ಗಂಟೆಗೆ ಕಲ್ಲಡ್ಕ ಪುಪ್ಪರಾಜ್ ಆಸ್ವತ್ರೆಗೆ ತಂದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಜಯಕರ್ ರವರು ಹೃದಯಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 40-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.