ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦1

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮೊಹಮ್ಮದ್‌ ಸಾದಿಕ್‌, ಪ್ರಾಯ 39 ವರ್ಷ, ತಂದೆ: ಪಿ.ಹೆಚ್‌. ಇಬ್ರಾಹಿಂ, ವಾಸ: ಜನತಾ ಗೃಹ, ಕಾರ್ಲ, ಪೆರ್ನೆ ಅಂಚೆ & ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 09-12-2022 ರಂದು 14:45 ಗಂಟೆಗೆ ಆರೋಪಿ ಸ್ಕೂಟರ್‌ ಸವಾರ ಸುಪ್ರೀತ್‌ ಎಂಬವರು  KA-70-J-2595 ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ಮಶ್ವಿತ್‌ ಎಂಬವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ ಕಡೆಯಿಂದ ಪೆರ್ನೆ ಕಡೆಗೆ  ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಎಂಬಲ್ಲಿ ಹೋಂಡಾ ಶೋ ರೂಂ ಬಳಿ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಉಪ್ಪಿನಂಗಡಿ ಕಡೆಯಿಂದ ಪೆರ್ನೆ ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿದ್ದ KA-21-EC-2960 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿನ ಹಿಂಭಾಗಕ್ಕೆ ಸ್ಕೂಟರ್‌ ಅಪಘಾತವಾಗಿ ಎಲ್ಲರೂ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಎಡಕೋಲು ಕೈ ಮತ್ತು ಬಲಕೋಲು ಕಾಲಿಗೆ ಗಾಯವಾಗಿ, ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಆರೋಪಿ ಸವಾರನಿಗೆ ಗಾಯಗಳಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಹೋಗಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 187/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: ೦1

ವಿಟ್ಲ ಪೊಲೀಸ್ ಠಾಣೆ : ದಿನಾಂಕ: 08.12.2022 ರಂದು ಪ್ರಸನ್ನಕುಮಾರ್‌ ಹೆಚ್‌ಸಿ ರವರು ಕರ್ತವ್ಯದ ನಿಮಿತ್ತ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ವಿಟ್ಲ ಖಾಸಗಿ ಬಸ್ಸ್ ನಿಲ್ದಾಣದಲ್ಲಿದ್ದ  ಸಮಯ ಬೆಳಗ್ಗೆ 09.40 ಗಂಟೆಗೆ ಮೂವರು ವ್ಯಕ್ತಿಗಳು ಸಾರ್ವಜನಿಕ ಸ್ಥಳವಾದ ಬಸ್ ತಂಗುದಾಣದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಕೈಯಿಂದ ದೂಡಾಡಿಕೊಂಡು ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗವಾಗುವ ರೀತಿಯಲ್ಲಿ ಕಲಹ ನೆಡೆಸುತ್ತಿರುವುದ್ದನ್ನು ಕಂಡು ಠಾಣೆಗೆ ಮಾಹಿತಿ ನೀಡಿ ಹೆಚ್ಚುವರಿ ಸಿಬ್ಬಂದಿಗಳನ್ನು ಬರಮಾಡಿಕೊಂಡು ಕಲಹ ನೆಡೆಸುತ್ತಿದ್ದ 1 ಚಿಂತನ್ (32)  2)  ಹೊನ್ನಯ್ಯ (32) 3) ಯತಿ ರಾಜ್ (36) ರವರನ್ನು ಹಿಡಿದು ಠಾಣೆಗೆ ಹಾಜರುಪಡಿಸಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 192/2022  ಕಲಂ:160 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: ೦2

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರೇಮ ಪ್ರಾಯ  36 ವರ್ಷ ಗಂಡ: ರವಿ ವಾಲ್ಮೀಕಿ ವಾಸ: ಸಾಸಿವೆ ಹಳ್ಳಿ ನವಲಗುಂದ ತಾಲೂಕು ಧಾರವಾಡ ಜಿಲ್ಲೆ  ಪ್ರಸುತ್ತ ವಿಳಾಸ: ಪರ್ಲಿಯಾ ರೆಸಿಡೆನ್ಸಿ ಮಿತ್ತಬೈಲು  ಬಿ ಮೂಡ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 08-12-2022 ರಂದು ಬಂಟ್ವಾಳ ತಾಲೂಕು ಬಿ  ಮೂಡ ಗ್ರಾಮದ ಬಿ ಸಿ ರೋಡಿನ ಪ್ಲೈ ಓವರ ಅಂಗಡಿ ಕಟ್ಟಡದ ಎದುರು ಯಾರೋ ವ್ಯಕ್ತಿ ಮಲಗಿದಲ್ಲಿಯೇ ಮೃತಪಟ್ಟು ರಾತ್ರಿ 10.00 ಗಂಟೆಗೆ ಪತ್ತೆಯಾಗಿರುವುದಾಗಿ  ದಿನಾಂಕ 09-12-2022 ರಂದು ಮಾಹಿತಿ ಬಂದಂತೆ  ಫಿರ್ಯಾಧಿದಾರರು ಬಂಟ್ವಾಳ ನಗರ ಠಾಣೆಗೆ ಬಂದು ಮೃತದೇಹದ ಭಾವಚಿತ್ರಗಳನ್ನು ನೋಡಿದ್ದು, ಮೃತ ವ್ಯಕ್ತಿ ಫಿರ್ಯಾದಿದಾರರ ಗಂಡ ರವಿ ವಾಲ್ಮಿಕಿ ಎಂದು ತಿಳಿದಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 48-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಲಕ್ಷ್ಮಣ ಗೌಡ ಪ್ರಾಯ: 49  ವರ್ಷ  ತಂದೆ: ಶೀನಪ್ಪ ಗೌಡ  ತಂದೆ: ಕಂಬಳದಡ್ಡ ಮನೆ ಬೆಳ್ಳಿಪ್ಪಾಡಿ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ: 08-12-2022 ರಂದು ಸಂಜೆ 5:00 ಗಂಟೆಗೆ   ಪಿರ್ಯಾದಿದಾರರು ಮನೆಯಲ್ಲಿಲ್ಲದ ಸಮಯ ಎಂದಿನಂತೆ ರಾತ್ರಿ ಉಳಕೊಳ್ಳುವರೇ ಶೀನಪ್ಪ ಗೌಡರವರು ಸದಾರಾಮ ರೈ ರವರ ಜಮೀನಿನಲ್ಲಿರುವ ಮನೆಗೆ ಹೋಗಿರುತ್ತಾರೆ. ಪಿರ್ಯಾದಿದಾರರ ತಂದೆ ಜೊತೆ ಕೆಲಸ ಮಾಡುವ ಪದ್ಮನಾಭ, ಎಂಬವರು ಪಿರ್ಯಾದಿದಾರರ ಮನೆಗೆ ಬಂದು ಶೀನಪ್ಪಗೌಡರವರು ಸದಾರಾಮ ರೈ ರವರ ಮನೆಯ ಪಕ್ಕಾಸಿಗೆ ನೇಣು ಬಿಗಿದು ಮೃತಪಟ್ಟಿರುವ ಸ್ಥಿತಿಯಲ್ಲಿರುತ್ತಾರೆ ಎಂದು ತಿಳಿಸಿದಂತೆ ಸದಾರಾಮ ರೈ ರವರ ಮನೆಯ ಬಳಿ ಬಂದು ನೋಡಿದಾಗ ಪಿರ್ಯಾದಿದಾರರ ತಂದೆಯವರು ಅವರು ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಸದಾರಾಮ ರೈ ರವರ ಮನೆಯ ಹೆಂಚು ಛಾವಣಿಯ ಮಾಡಿನ ಎದುರುಗಡೆ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಯುಡಿಆರ್‌ ನಂ: 36/2022 ಕಲಂ: 174  ಸಿ .ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 10-12-2022 12:24 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080