ಅಪಘಾತ ಪ್ರಕರಣ: ೦2
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕೆ. ವಾಮನ ನಾಯಕ್, ಪ್ರಾಯ 61 ವರ್ಷ, ತಂದೆ: ದಿ|| ಗೋವಿಂದ ನಾಯಕ್, ವಾಸ: ಶಾರದಾ ನಿವಾಸ, ಪರ್ಲಡ್ಕ, ಪುತ್ತೂರು ಕಸ್ಬಾ ಗ್ರಾಮ ಎಂಬವರ ದೂರಿನಂತೆ ದಿನಾಂಕ 08-02-2021 ರಂದು 16-20 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ವಿನ್ಯಾಸ್ ಡಿ.ಎಸ್ ಎಂಬವರು KA-21-EB-0719 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್‌ನ್ನು ಪರ್ಲಡ್ಕ-ದರ್ಬೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪರ್ಲಡ್ಕ ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ಪರ್ಲಡ್ಕ ಎಂಬಲ್ಲಿ ಸರಕಾರಿ ಶಾಲೆಯ ಮುಂದುಗಡೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಕೆ. ವರುಣ್ ಗೋವಿಂದ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪರ್ಲಡ್ಕ ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-K-3769 ನೇ ನೋಂದಣಿ ನಂಬ್ರದ ಸ್ಕೂಟರ್‌ಗೆ ಹಿಂದಿನಿಂದ ಅಪಘಾತವಾದ ಪರಿಣಾಮ, ಪಿರ್ಯಾದಿದಾರರು ಮತ್ತು ಸಹಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯ ಮತ್ತು ಸಹಸವಾರನಿಗೆ ಎರಡೂ ಕಾಲು ಮತ್ತು ಕೈಯ ಮೊಣಗಂಟಿಗೆ, ಸೊಂಟ ಹಾಗೂ ಬೆನ್ನಿಗೆ ಗುದ್ದಿದ ಗಾಯವಾಗಿ, ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 30/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸತ್ಯನಾರಾಯಣ.ಸಿ.ಕೆ, ಪ್ರಾಯ 41 ವರ್ಷ, ತಂದೆ: ಕೊರಗಪ್ಪ ನಾಯ್ಕ, ವಾಸ: ಅಯ್ಯನಕಟ್ಟೆ ಮನೆ, ಬಾಳಿಲ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 08-02-2021 ರಂದು ಈ ಪ್ರಕರಣದ ಪಿರ್ಯಾದಿದಾರ ಪತ್ನಿ ಶ್ರೀಮತಿ ಸತ್ಯವತಿಯವರು ಚಾಲಕರಾಗಿ ಹಾಗೂ ಪಿರ್ಯಾದಿದಾರರು ಪ್ರಯಾಣಿಕರಾಗಿ ಪಂಜ ಕಡೆಯಿಂದ ಅಯ್ಯನಕಟ್ಟೆ ಕಡೆಗೆ ಪ್ರಯಾಣಿಸುತ್ತಿದ್ದ ಮಾರುತಿ ಸಿಫ್ಟ್ ಕಾರು ನಂ KA21P-7078 ನೇಯದ್ದಕ್ಕೆ ಸುಳ್ಯ ತಾಲೂಕು ಬಾಳಿಲ ಗ್ರಾಮದ ಅಯ್ಯನಕಟ್ಟೆ ಎಂಬಲ್ಲಿ ಸಂಜೆ 5-30 ಗಂಟೆಗೆ ತಿಮ್ಮಪ್ಪ ಗೌಡ ಎಂಬವರು ಚೊಕ್ಕಾಡಿ ಕಡೆಯಿಂದ ನಿಂತಿಕಲ್ಲು ಕಡೆಗೆ ತನ್ನ ಬಾಬ್ತು ಮೋಟಾರು ಸೈಕಲ್ ನಂ KA21U-6798 ನೇಯದ್ದನ್ನು ಮುಖ್ಯರಸ್ತೆಯಲ್ಲಿ ಪಿರ್ಯಾದುದಾರರು ಪ್ರಯಾಣಿಸುತ್ತಿದ್ದ ಕಾರು ಬರುತ್ತಿರುವುದು ಕಾಣುತ್ತಿದ್ದರೂ, ನಿರ್ಲಕ್ಷ್ಯತನದಿಂದ ಏಕಾಏಕಿ ಕವಲು ರಸ್ತೆಯಿಂದ ಮುಖ್ಯ ರಸ್ತೆಗೆ ಮೋಟಾರು ಸೈಕಲ್ ನ್ನು ಸವಾರಿ ಮಾಡಿದ ಪರಿಣಾಮ ಮೋಟಾರು ಸೈಕಲ್ ಪಿರ್ಯದುದಾರರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಉಂಟಾಗಿ ಜಖಂ ಉಂಟಾಗಿರುವುದಲ್ಲದೇ ಮೋಟಾರು ಸೈಕಲ್ ಮಗುಚಿ ಬಿದ್ದು ಸವಾರ ತಿಮ್ಮಪ್ಪ ಗೌಡರಿಗೆ ಗಾಯ ಉಂಟಾಗಿರುತ್ತದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಆ.ಕ್ರ 07/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦2
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಐ ರಜಾಕ್, ಪ್ರಾಯ: 50 ವರ್ಷ, ತಂದೆ: ಕೆ ಇಬ್ರಾಹಿಂ, ವಾಸ: ಚಿನ್ನು ಕಾಂಪ್ಲೇಕ್ಸ್ , ಡೋರ್ ನಂಬ್ರ: 284 ಮದ್ದಡ್ಕ, ಕುವೆಟ್ಟು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ಅವರ ಬಾಬ್ತು ಬೊಲೆರೋ ವಾಹನ ಕೆಎ 35 ಎಂ 5443 ನೇದನ್ನು ದಿನಾಂಕ: 28-01-2021 ರಂದು ರಾತ್ರಿ 11-30 ಗಂಟೆಗೆ ತಾನು ವಾಸ್ಯವ್ಯವಿರುವ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಚಿನ್ನು ಕಾಂಪ್ಲೇಕ್ಸ್ ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಮನೆಗೆ ಹೋಗಿದ್ದು, ಮರು ದಿನ ದಿನಾಂಕ: 29-01-2021 ರಂದು ಬೆಳಿಗ್ಗೆ 05-30 ಗಂಟೆಗೆ ಎದ್ದು ನೋಡಿದಾಗ ಪಿರ್ಯಾದಿದಾರರ ಬೊಲೆರೋ ವಾಹನ ಇಲ್ಲದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಬೊಲೆರೋ ವಾಹನದ ಮೌಲ್ಯ ರೂ 1,50,000/- ರೂ ಆಗಬಹುದು, ಬೊಲೆರೋ ವಾಹನವನ್ನು ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದೇ ಇರುವುದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 14/2021 US 379 ಐ.ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಿರ್ಯಾದುದಾರರಾದ ಮಹಮ್ಮದ್ ಅನೀಸ್ ಪ್ರಾಯ;41 ವರ್ಷ, ತಂದೆ: ಹಸೈನಾರ್ ವಾಸ: ನೂಜಿಲ ಮನೆ, ಕುಂತೂರು ಗ್ರಾಮ ಪೆರಾಬೆ ಅಂಚೆ ಕಡಬ ಎಂಬವರ ದೂರಿನಂತೆ ಪಿರ್ಯದುದಾರರು ದಿನಾಂಕ:08.02.2021 ರಂದು ಕುಂತೂರು ಪೇಟೆಯಲ್ಲಿ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡು ಸಂಜೆ ಮನೆಗೆ ತೆರಳಿ ಮನೆಯ ಕುಟುಂಬದವರೊಂದಿಗೆ ರಾತ್ರಿ 10.00 ಗಂಟೆಗೆ ಊಟ ಮಾಡಿ ಮನೆಯ ಬಾಗಿಲುಗಳ ಚಿಲಕವನ್ನು ಹಾಕಿಕೊಂಡು ಪಿರ್ಯಾದುದಾರರು ಮತ್ತು ಅವರ ಪತ್ನಿ ಹಾಗೂ ಮಕ್ಕಳು ಮನೆಯ ಮೇಲಿನ ಮಾಳಿಗೆಯ ಕೋಣೆಯಲ್ಲಿ ಮಲಗಿಕೊಂಡಿದ್ದು ಮನೆಯ ಕೆಳನೆಲ ಮಾಳಿಗೆಯ ಒಂದು ಕೋಣೆಯಲ್ಲಿ ಪಿರ್ಯಾದಿಯ ತಾಯಿ ಹಾಗೂ ಮತ್ತೂಂದು ಕೋಣೆಯಲ್ಲಿ ಪಿರ್ಯಾದಿ ತಂದೆಯವರು ಮಲಗಿಕೊಂಡಿರುವಾಗ ರಾತ್ರಿ 02.00 ಗಂಟೆ ಸಮಯಕ್ಕೆ ಯಾರೋ ಕಳ್ಳರು ಮನೆಗೆ ನುಗ್ಗಿ ಕೋಣೆಯಲ್ಲಿ ಮಲಗಿಕೊಂಡಿದ್ದ ಪಿರ್ಯಾದುದಾರರ ತಾಯಿಯವರ ಕಾಲಿನ ಚೈನ್‌ನ್ನು ತೆಗೆಯುತ್ತಿರುವುದನ್ನು ಕಂಡು ಪಿರ್ಯಾದಿಯ ತಾಯಿ ಜೋರಾಗಿ ಬೊಬ್ಬೆ ಹಾಕಿದಾಗ ಯಾರೋ ಕಳ್ಳರು ಮನೆಯಿಂದ ಓಡಿ ಹೋಗಿರುತ್ತಾರೆ.ನಂತರ ನೋಡಲಾಗಿ ಪಿರ್ಯಾದುದಾರರ ತಾಯಿಯವರು ಬಲಕಾಲಿಗೆ ಧರಿಸಿದ್ದ 20 ಗ್ರಾಂ ತೂಕದ ಚಿನ್ನದ ಸರ ಮತ್ತು ತಾಯಿಯವರು ಮಲಗಿದ್ದ ಕೋಣೆಯಲ್ಲಿ ಗೋಡೆಗೆ ನೇತುಹಾಕಿದ್ದ 60 ಗ್ರಾಂ ತೂಕದ ಚಿನ್ನದ ಕುತ್ತಿಗೆ ಸರ ಮತ್ತು ಮನೆಯ ಮೇಲಿನ ಮಾಳಿಗೆಯಲ್ಲಿ ಪಿರ್ಯಾದುದಾರರ ಪತ್ನಿಯು ಧರಸಿದ್ದ 20 ಗ್ರಾಂ ತೂಕದ ಕುತ್ತಿಗೆಯ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿರುತ್ತದೆ. ಹಾಗೂ ಪಿರ್ಯಾದಿಯ ಪಕ್ಕದ ಮನೆಯ ನಿವಾಸಿಯಾದ ಸೈಮನ್ ಎಂಬವರ ಮನೆಯಲ್ಲಿ 5000/- ಹಣವನ್ನು ಕಳವು ಮಾಡಿರುವುದಾಗಿರುತ್ತದೆ.ಕಳವಾದ ಚಿನ್ನಾಭರಣಗಳ ಒಟ್ಟು ತೂಕ 100 ಗ್ರಾಂ ಆಗಿದ್ದು ಅಂದಾಜು ಮೌಲ್ಯ 2.40.000/-ಆಗಬಹುದು ಒಟ್ಟು ಕಳುವಾದ ಅಂದಾಜು ಮೌಲ್ಯ 2,45,000 ರೂ ಆಗುತ್ತದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 12/2021 ಕಲಂ 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕೊಲೆ ಬೆದರಿಕೆ ಪ್ರಕರಣ: ೦1
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಫಾರೂಕ್ (32) ತಂದೆ ಇಸುಬು ವಾಸ; ಕಾಜೂರು ಮನೆ ಮಿತ್ತಬಗಿಲು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಗುಜುರಿ ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ: 09-02-2021 ರಂದು 16-30ಗಂಟೆಗೆ ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಕಾಜೂರು ಎಂಬಲ್ಲಿ ಪಿರ್ಯಾದಿದಾರರು ಹಾಗೂ ಇತರರು ಕಾಜೂರು ಉರೂಸ್ ಬಗ್ಗೆ ಅಂಗಡಿ ಎಲಂ ಸ್ಥಳದ ವಿಚಾರದಲ್ಲಿ ಜಕಾರಿಯ ಎಂಬಾತನು ಪಿರ್ಯಾದಿದಾರರಿಗೆ ಅಂಗಡಿ ಸ್ಥಳ ನೀಡಬಾರದು ಎಂದು ತಕರಾರು ತೆಗೆದು ಕಲ್ಲಿನಿಂದ ಹಲ್ಲೆ ನಡೆಸಲು ಬಂದಿದ್ದು ಈ ಸಮಯ ಜಕಾರಿಯನ ಅಣ್ಣ ಪಾರೂಕ್‌ನು ಪಿರ್ಯಾದಿದಾರರನ್ನು ಹಿಡಿದಾಗಿ ಆತನಿಂದ ಬಿಡಿಸಿಕೊಳ್ಳುವಷ್ಟರಲ್ಲಿ ಜಕಾರಿಯನು ಪಿರ್ಯಾದಿದಾರರ ಕೋಲುಕೈಗೆ ಮತ್ತು ತೊಡೆಗೆ ಬಾಯಿಂದ ಕಚ್ಚಿರುವುದಲ್ಲದೆ ಜಕಾರಿಯನ ಜೊತೆ ಇದ್ದ ಸಂಶುದ್ದೀನ್ ಎಂಬಾತನು ಪಿರ್ಯಾದಿದಾರರಿಗೆ ಅವಾಚ್ಯವಾಗಿ ಬೈಯುತ್ತಾ ಕೊಲ್ಲದೆ ಬಿಡುವುದಿಲ್ಲವಾಗಿ ಜೀವ ಬೆದರಿಕೆಯೊಡ್ಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ 13/2021 ಕಲಂ 504 506 324 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ:09.02.2021 ರಂದು 17-00 ಗಂಟೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 12/2021 ಕಲಂ 406 420 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಐತ್ತಪ್ಪ ನಾಯ್ಕ (52) ತಂದೆ ಕುಂಞ್ಞಿ ನಾಯ್ಕ ವಾಸ ಚಾರ್ಮಾತ ಮನೆ ನಡುಗಲ್ಲು ನಾಲ್ಕೂರು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಅಣ್ಣ ರಾಮಣ್ಣ ನಾಯ್ಕರ ಮಗ ಗಣೇಶ ಸಿ(33) ಗಾರೆ ಕೆಲಸ ಮಾಡಿಕೊಂಡು ದೂರದ ಊರುಗಳಿಗೆ ಹೋಗಿ ಕೆಲಸ ಮಾಡುತ್ತಾ 3-4 ದಿನಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದು ಆತನಿಗೆ ಕುಡಿತದ ಚಟವು ಇತ್ತು. ದಿನಾಂಕ 05.02.2021ರಂದು ಮೋಟಾರ್ ಸೈಕಲಿನಲ್ಲಿ ಕೆಲಸಕ್ಕೆ ಹೋಗಿದ್ದು ದಿನಾಂಕ 10.02.2021 ರಂದು ಬೆಳಿಗ್ಗೆ 06.45 ಗಂಟೆಗೆ ಸಂಪಾಜೆ ಗ್ರಾಮದ ಕಲ್ಲುಗುಂಡಿ ಕೆಎಫ್ ಡಿಸಿ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡುವವರು ಕೆಲಸ ಮಾಡುತ್ತಿದ್ದಾಗ ತೋಟದಲ್ಲಿ ಬಿದ್ದುಕೊಂಡಿದ್ದ ಮೃತದೇಹವನ್ನು ನೋಡಿ ಇಲಾಖೆಯ ಗಾರ್ಡ್ ರವರಿಗೆ ತಿಳಿಸಿ ಬಳಿಕ ಊರವರು ಹಾಗೂ ಪೊಲೀಸರು ಹೋಗಿ ಆತನ ಕಿಸೆಯಲ್ಲಿದ್ದ ವಿಳಾಸದ ಬಗ್ಗೆ ಖಚಿತಪಡಿಸಿಕೊಂಡು ಮಾಹಿತಿ ನೀಡಿದಂತೆ ಪಿರ್ಯಾದುದಾರರು ಇತರ ಸಂಬಂದಿಕರೊಂದಿಗೆ ಬಂದು ಗಣೇಶನ ಮೃತದೇಹವವನ್ನು ನೋಡಿ ವಿಚಾರಿಸಿದಾಗ ಬಾಯಿಯಲ್ಲಿ ಮೂಗಲ್ಲಿ ನೊರೆ ಬಂದಿರುವುದು ಮತ್ತು ಮೃತದೇಹದ ಸ್ಥಿತಿಯನ್ನು ಕಂಡಾಗ ಸಂಜೆ 7.00 ಗಂಟೆಯ ಸಮಯಕ್ಕೆ ಕೂಲಿಶೆಡ್ಡು ಬಳಿ ಗಣೇಶನನ್ನು ನೋಡಿದ್ದು ಗಣೇಶನು 09.02.2021 ರಂದು ಸಂಜೆ 7.00 ಗಂಟೆಯಿಂದ ದಿನಾಂಕ 10.02.2021 ರಂದು ಬೆಳಿಗ್ಗೆ 06.45 ರ ಮದ್ಯೆ ಗಣೇಶನು ವಿಪರೀತ ಮದ್ಯ ಸೇವನೆ ಮಾಡಿದ್ದರಿಂದ ಅಥವಾ ಯಾವುದೋ ವಿಷ ಪದಾರ್ಥ ಸೇವಿಸಿ ಅಥವಾ ಯಾವುದೋ ವಿಷ ಜಂತು ಕಡಿತದಿಂದ ಅಥವಾ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿ ದೂರು ನೀಡಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಅರ್ ನಂಬ್ರ 09/2020 ಕಲಂ 174 (3) (iv) )ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಭರತ್‌ಕುಮಾರ್ ಪ್ರಾಯ 28 ವರ್ಷ ತಂದೆ:ನಾರಾಯಣ ನಾಯ್ಕ್ ವಾಸ:ಕೊಜಪ್ಪ ಮನೆ,ಬೆರಿಪದವು ಅಂಚೆ ಬಾಯಾರು ಗ್ರಾಮ ಕಾಸರಗೂಡು ಎಂಬವರ ದೂರಿನಂತೆ ಪಿರ್ಯಾದುದಾರರ ಮಾವ ಮಹಾಲಿಂಗ ನಾಯ್ಕ(63)ರವರು ಕಳೆದ 20 ವರ್ಷಗಳಿಂದ ಅಡಿಕೆ ಕೂಯ್ಯುವ ಕೆಲಸವನ್ನು ಮಾಡಿಕೊಂಡಿದ್ದವರು ದಿನಾಂಕ:08-02-2021 ರಂದು ಮಹಾಲಿಂಗ್ ನಾಯ್ಕ್ ರವರು ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪೊಯ್ಯಮೂಲೆ ಎಂಬಲ್ಲಿನ ತಮ್ಮ ಅಡಿಕೆ ತೋಟದಲ್ಲಿ ಸಮಯ ಸುಮಾರು 2.00 ಗಂಟೆಗೆ ಅಡಿಕೆ ಕೊಯ್ಯೂತ್ತಿರುವ ಸಮಯ ಅಡಿಕೆ ಮರದಿಂದ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ವತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಎ ಜೆ ಆಸ್ವತ್ರೆಗೆ ಕರೆದು ಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ ಗಾಯಾಳು ಚಿಕಿತ್ಸೆ ಪಡೆಯುತ್ತಿರುವ ಸಮಯ ದಿನಾಂಕ:09.02.2021ರಂದು ಮುಂಜಾನೆ 01.09 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 05/2021 ಕಲಂ 174 ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.