ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಡೆನ್ಜಿಲ್ ಅಂತೋನಿ ಲೋಬೋ (51) ವರ್ಷ ತಂದೆ : ದಿ || ಚಾರ್ಲ್ಸ್ ಲೋಬೋ ವಾಸ : ರಗ್ಗೋಡಿ ಮನೆ, ಬೋಳಂಗಡಿ, ಪಾಣೆಮಂಗಳೂರು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು KA-19-EK-0061 ನೇ ಮೋಟಾರ್ ಸೈಕಲಿನಲ್ಲಿ ಉಮೇಶ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬೋಳಂಗಡಿಯಿಂದ ಹೋಗಿ  ಸಮಯ ಸುಮಾರು ಬೆಳಿಗ್ಗೆ 09:00 ಗಂಟೆಗೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಮೇಲ್ಕಾರ್ ಎಂಬಲ್ಲಿ R.R.ಮಿಲ್ಲಿನ ಎದುರು ಕ್ರಾಸಿಂಗ್ ಜಾಗದಲ್ಲಿ ಮೋಟಾರ್ ಸೈಕಲನ್ನು ಬಲಕ್ಕೆ ತಿರುಗಿಸಲು ನಿಧಾನಿಸಿದಾಗ ಮೇಲ್ಕಾರ್ ಜಂಕ್ಷನ್ ಕಡೆಯಿಂದ KA-70-0181 ನೇ ಆಟೋರಿಕ್ಷಾ ಚಾಲಕ ಮಹಮ್ಮದ್ ಆಲಿ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರ ಉಮೇಶ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎರಡೂ ಕೈಗಳಿಗೆ ತರಚಿದ ಹಾಗೂ ಎಡಕಾಲಿನ ಮೊಣ ಗಂಟಿಗೆ ತರಚಿದ ಗಾಯವಾಗಿದ್ದು ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಸಹ ಸವಾರ ಉಮೇಶ್ ರವರ ಬಲಕಾಲಿಗೆ ಗುದ್ದಿದ ಗಾಯಗೊಂಡವರು ಚಿಕಿತ್ಸೆಗೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 68/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಂತೋಷ್‌ ಪ್ರಾಯ 27 ವರ್ಷ ತಂದೆ: ಕೃಷ್ಣಪ್ಪ ನಾಯ್ಕ್‌ ವಾಸ: ಎತ್ತುಕಲ್ಲು ಮನೆ, ವಿಟ್ಲಪಡ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ಈ ದಿನ  ವಿಟ್ಲ ಕಸಬ ಗ್ರಾಮದ ಸಂತೆಕಟ್ಟೆ ಎಂಬಲ್ಲಿ ಕೆಲಸ ಮಾಡುತ್ತಿದ್ದು ಮಧ್ಯಾಹ್ನ ಸುಮಾರು 11.45 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಅರಮನೆ ರಸ್ತೆಯ ಹೋಟೇಲ್‌ ಗೆ ಚಹಾ ಕುಡಿಯಲು ಹೋದ ಸಮಯ ಕಾಸರಗೋಡು ಕಡೆಯಿಂದ ವಿಟ್ಲ ಕಡೆಗೆ ಕೆಎ-19-ಬಿ-2239ನೇ ಲಾರಿಯನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಪಾದಾಚಾರಿಯೊಬ್ಬರಿಗೆ ಅಪಘಾತಪಡಿಸಿದ್ದು ಕೂಡಲೇ ಪಿರ್ಯಾಧಿದಾರರು ಹತ್ತಿರಕ್ಕೆ ಹೋಗಿ ನೋಡಲಾಗಿ ಪಾದಾಚಾರಿ ಪಿರ್ಯಾಧಿದಾರರ ದೂರದ ಸಂಬಂಧಿ ನಾರಾಯಣ ನಾಯ್ಕ ಪ್ರಾಯ 32 ವರ್ಷ ಎಂಬವರಾಗಿದ್ದು ಅವರ ತಲೆಯ ಹಾಗೂ ಎದೆಯ ಭಾಗಗಳಿಗೆ ಗಂಭಿರ ಗಾಯಗಳಾಗಿತ್ತು. ಕೂಡಲೇ ಪಿರ್ಯಾಧಿ ಹಾಗೂ ಅಲ್ಲಿ ಸೇರಿದವರು ಅವರನ್ನು ಚಿಕಿತ್ಸೆಯ ಬಗ್ಗೆ ಒಂದು ಅಂಬ್ಯಲೆನ್ಸ್‌ ವಾಹನದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈಧ್ಯರು 12.10 ಗಂಟೆ ಸಮಯಕ್ಕೆ ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 91/2022  ಕಲಂ: 279,304ಎ ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿನೀತ್‌, ಪ್ರಾಯ 23 ವರ್ಷ, ತಂದೆ: ದಾಮೋದರ ಮಣಿಯಾಣಿ, ವಾಸ: ಕಲ್ಲರ್ಪೆ ಮನೆ, ಆರ್ಯಾಪು ಅಂಚೆ & ಗ್ರಾಮ, ಪುತ್ತೂರು ತಾಲೂಕು  ಎಂಬವರ ದೂರಿನಂತೆ ದಿನಾಂಕ 09-06-2022 ರಂದು 16-30 ಗಂಟೆಗೆ ಆರೋಪಿ ಅಟೋರಿಕ್ಷಾ ಚಾಲಕ ನಿಶಾಂತ್‌ ಎಂಬವರು KA-21-B-9995ನೇ ನೋಂದಣಿ ನಂಬ್ರದ ಅಟೋರಿಕ್ಷಾವನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ರಲ್ಲಿ ಪುತ್ತೂರು ಕಡೆಯಿಂದ ಸಂಪ್ಯ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ವಿನೀತ್‌ ರವರು ಚಾಲಕರಾಗಿ KA-21-C-0541 ನೋಂದಣಿ ನಂಬ್ರದ ಅಟೋರಿಕ್ಷಾವನ್ನು ಪುತ್ತೂರು ಕಡೆಯಿಂದ ಸಂಪ್ಯ ಕಡೆಗೆ ಚಲಾಯಿಸಿಕೊಂಡು ಹೋಗಿ,  ಮುಂಡೂರು ಒಳ ರಸ್ತೆಯಿಂದ ಸುರೇಶ್‌ ಕಣ್ಣರಾಯ ರವರು KA-21-Z-5578ನೇ ನೋಂದಣಿ ನಂಬ್ರದ ಕಾರನ್ನು ಚಲಾಯಿಸಿಕೊಂಡು ಬರುವುದನ್ನು ನೋಡಿ ಪಿರ್ಯಾದುದಾರರು ಅಟೋರಿಕ್ಷಾವನ್ನು ನಿಲ್ಲಿಸಿದಾಗ, ಆರೋಪಿ ಅಟೋರಿಕ್ಷಾವು ಪಿರ್ಯಾದುದಾರರು ನಿಲ್ಲಿಸಿದ ಅಟೋರಿಕ್ಷಾಕ್ಕೆ ಹಿಂದಿನಿಂದ ಅಪಘಾತವಾದ ಪರಿಣಾಮ, ಪಿರ್ಯಾದುದಾರರ ಅಟೋ ರಿಕ್ಷಾವು ಮುಂದಕ್ಕೆ ಮುಗ್ಗರಿಸಿ ಕಾರಿಗೆ ಅಪಘಾತವಾಗಿರುತ್ತದೆ. ಆರೋಪಿ ಅಟೋರಿಕ್ಷಾವು ಮುಂದಕ್ಕೆ ಹೋಗಿ ಸಂಪ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ KA-21-Q-2026  ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಅಪಘಾತವಾಗಿ,  ಮೋಟಾರ್‌ ಸೈಕಲ್‌ ಸವಾರ ಅಬ್ದುಲ್‌ ಕಬೀರ್‌, ಸಹಸವಾರೆ ಸಾರಮ್ಮ ಹಾಗೂ ಅವರೊಂದಿಗಿದ್ದ ಮಗು ಸಾಹ್‌ಮ (3 ½) ವ) ರವರಿಗೆ ಗಾಯಗಳಾಗಿ ಅವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಯೇನಪೋಯ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಆರೋಪಿ ಚಾಲಕನಿಗೆ ಗಾಯಗಳಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಪಿರ್ಯಾದುದಾರರು ಮತ್ತು ಕಾರು ಚಾಲಕರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  106/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬಾಬು ರಾಜ್ ,ಪ್ರಾಯ 45 ವರ್ಷ ತಂದೆ; ದಿ| ನಾರಾಯಣ ನಾಯರ್ ,ಕೊಟ್ಟೆಮಾಲ್ ಮನೆ ಪೂಂಗೋಡು ಅಂಚೆ ಮತ್ತು ಗ್ರಾಮ ,ಮಲಪ್ಪುರಂ ಜಿಲ್ಲೆ ,ಕೇರಳ ರಾಜ್ಯ ಎಂಬವರ ದೂರಿನಂತೆ ಪಿರ್ಯಾದಿದಾರರ ಜೊತೆ ಕೆಲಸ  ಮಾಡಿಕೊಂಡು ವಾಸ್ತವ್ಯವಿದ್ದ ಸ್ನೇಹಿತ  ಕುರಿಯನ್ ಜೋಸೆಫ್ ಎಂಬವರು ದಿನಾಂಕ 09-06-2022 ರಂದು ಪಿರ್ಯಾದಿದಾರರ ಬಾಬ್ತು ಮೋಟಾರ್ ಸೈಕಲ್ ನಂ ಕೆಎಲ್ 10-ಎ.ಜಿ 9250 ನೇದನ್ನು   ಊರಿನಿಂದ ಬಂದಿದ್ದ ಅವರ ಪತ್ನಿಯನ್ನು ಬಸ್ ನಿಲ್ದಾಣದಿಂದ ಆಲಂಗಾರಿನ  ಬಿಡಾರಕ್ಕೆ  ಬಿಟ್ಟು ಮರಳಿ ರಬ್ಬರ್ ತೋಟಕ್ಕೆ ಬರುವ ಸಲುವಾಗಿ ಕುದ್ಮಾರು ದೈಪಿಲ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವ ವೇಳೆ ಮಧ್ಯಾಹ್ನ ಸಮಯ ಸುಮಾರು 2-30 ಗಂಟೆಗೆ ಕುದ್ಮಾರು ಗ್ರಾಮದ ಕಾಪೆಜಾಲು ಎಂಬಲ್ಲಿಗೆ ತಲುಪಿದಾಗ ವಿರುಧ್ಧ ದಿಕ್ಕಿನಿಂದ ಟಿಪ್ಪರ್ ವಾಹನವೊಂದು ಬರುತ್ತಿರುವದನ್ನು ಕಂಡು ಮೋಟಾರ್ ಸೈಕಲ್ ಅನ್ನು ರಸ್ತೆಯ ತೀರಾ  ಎಡಬದಿಗೆ  ಸವಾರಿ ಮಾಡಿದ ಪರಿಣಾಮ ಮೋಟಾರ್ ಸೈಕಲ್ ಹತೋಟಿ ತಪ್ಪಿ ರಸ್ತೆಯ ಬದಿಯ ತೋಡಿಗೆ ಬಿದ್ದ ಪರಿಣಾಮ ತಲೆಗೆ ರಕ್ತಗಾಯ ಹಾಗೂ ಸೊಂಟಕ್ಕೆ ಗುದ್ದಿದ ಗಂಭೀರ ಗಾಯ ಉಂಟಾಗಿದ್ದು ಪ್ರಥಮ ಚಿಕಿತ್ಸೆಯನ್ನು ಪು್ತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪಡೆದಿದ್ದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು. ಈ ಬಗ್ಗೆ ಬೆಳ್ಳಾರೆ  ಪೊಲೀಸ್ ಠಾಣೆ.C.PÀæ 50/2022 ಕಲಂ  279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 2

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನಾಗೇಶ ಶೆಟ್ಟಿ(42) ತಂದೆ:ದಾಮೋದರ ಶೆಟ್ಟಿ. ವಾಸ:ಕೊಡಂಗಾಯಿ ಮನೆ.ವಿಟ್ಲ ಪಡ್ನೂರು ಗ್ರಾಮ. ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ:08.06.2022 ರಂದು ಬಂಟ್ವಾಳದ ಭಂಟರ ಭವನದಲ್ಲಿ ಪಿರ್ಯಾಧಿ ಸಂಭಂದಿಕರ ಮದುವೆ ಇದ್ದುದರಿಂದ ಪಿರ್ಯಾಧಿಯ ಪತ್ನಿ ಪ್ರೀತಿ ಶೆಟ್ಟಿಯು ಬಂಟ್ವಾಳ ತಾಲೂಕು ವಿಟ್ಲಪಡ್ನೂರು ಗ್ರಾಮ ಕೊಡಂಗಾಯಿಯಲ್ಲಿರುವ ಮನೆಯ ಗೋಡ್ರೇಜ್‌ ನಲ್ಲಿ ಇರಿಸಿದ್ದ ಚಿನ್ನಾಭರಣಗಳನ್ನು ಧರಿಸಿಕೊಂಡು ಪಿರ್ಯಾಧಿ ಹಾಗೂ ಅವರ ಪತ್ನಿ ಮದುವೆಗೆ ಹೋಗಿ, ವಾಪಾಸು ಮಧ್ಯಾಹ್ನ 3.00 ಗಂಟೆ ವೇಳೆಗೆ ಮನೆಗೆ ಬಂದು ಧರಿಸಿಕೊಂಡಿದ್ದ ಚಿನ್ನಾಭರಣಗಳನ್ನು ಮಲಗುವ ಕೋಣೆಯ ಗೋಡೆಯಲ್ಲಿ ರಚಿಸಲಾದ ಶೊಕೇಸ್‌ ನಲ್ಲಿ ಇಟ್ಟಿರುತ್ತಾಳೆ. ನಂತರ ಮರುದಿನ ದಿನಾಂಕ:09.06.2022 ರಂದು ಭಂಟರ ಭವನದಲ್ಲಿ ಸಂಬಂದಿಕರ ಮತ್ತೊಂದು ಮದುವೆ ಇದ್ದ ಕಾರಣ ಮದುವೆಗೆ ಹೊರಡುವರೇ ಬೆಳಿಗ್ಗೆ 10.00 ಗಂಟೆಯ ವೇಳೆಗೆ ಪಿರ್ಯಾಧಿಯ ಪತ್ನಿಯು ಶೊಕೇಸ್‌ ನಲ್ಲಿ ಇರಿಸಿದ್ದ ಚಿನ್ನಾಭರಣಗಳನ್ನು ಧರಿಸುವ ಸಮಯ ಶೊಕೇಸನ್ನು ನೋಡಿದಾಗ ಶೊಕೇಸ್‌ ನ ಒಳಗಡೆ ಇಟ್ಟಿದ್ದ 1) ಸುಮಾರು 32 ಗ್ರಾಂ ತೂಕದ ಚಿನ್ನದ ಸರ-01 ಅಂದಾಜು ಮೌಲ್ಯ-64000/-  2) ಸುಮಾರು 20 ಗ್ರಾಂತೂಕದ  ಚಿನ್ನದ ಬ್ರಾಸ್‌ ಲೈಟ್-01‌ ಅಂದಾಜು ಮೌಲ್ಯ-40,000/- 3) ಒಟ್ಟು 12 ಗ್ರಾಂ ತೂಕದ ಚಿನ್ನದ ಉಂಗುರ-03 ಅಂದಾಜು  24,000/- ಸದ್ರಿ ಚಿನ್ನಾಭರಣಗಳ ಒಟ್ಟು ಮೌಲ್ಯ 1,28,000/- ಆಗಬಹುದು 4) ಗೊಲ್ಡ್‌ ಬಣ್ಣದ ಲೇಡಿಸ್‌ ರಿಸ್ಟ್‌ ವಾಚ್-01‌ ಅಂದಾಜು 500/- ರೂ, 5) ಅರ್ಟಿಫಿಶಲ್‌ ಕೈ ಬಳೆ-01 ಅಂದಾಜು 100/- ರೂ. ಸದ್ರಿ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಕಳವಾಗಿರುವ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 1,28,600/- ರೂಪಾಯಿ ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 92/2022  ಕಲಂ: 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಗದೀಶ ಅಮೀನ್‌ , ಪ್ರಾಯ: 43 ವರ್ಷ, ತಂದೆ: ಬಾಲಕೃಷ್ಣ ಸಾಲಿಯಾನ್‌, ವಾಸ: H.No 1-3 ನಡುಬೈಲು ಮನೆ ಮುಂಡೂರು ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿರವರು ದಿನಾಂಕ 10.06.2022 ರಂದು ಅವರ ಮನೆಯಿಂದ ಅವರ ಬಾಬ್ತು ಮೋಟಾರು ಸೈಕಲ್‌  KA 21 Y 5453 ನೇದರಲ್ಲಿ ಪುತ್ತೂರಿಗೆ ಬಂದು ಕಲ್ಲಾರೆ ಎಂಬಲ್ಲಿರುವ   ಡೇನಿಯಲ್‌ ಫರ್ನಿಚರ್‌ ಅಂಗಡಿಯ ಎದುರು  ಮೋಟಾರು ಸೈಕಲ್‌ನ್ನು  ನಿಲ್ಲಿಸಿ ಸುಮಾರು 12.45 ಗಂಟೆಗೆ ಫರ್ನಿಚರ್‌ ಅಂಗಡಿಗೆ ಹೋಗಿ ಸಾಮಾಗ್ರಿಗಳನ್ನು ಖರೀದಿಸಿ ವಾಪಸು ಸುಮಾರು 13.00 ಗಂಟೆಗೆ ಬಂದಾಗ ಪಿರ್ಯಾದಿದಾರರು ನಿಲ್ಲಿಸಿದ್ದ ಮೋಟಾರು ಸೈಕಲ್‌ ಕಾಣಿಸದೇ ಇದ್ದು , ಸುತ್ತಮುತ್ತ ಹುಡುಕಾಡಿದರೂ  ಪತ್ತೆಯಾಗದೇ ಇದ್ದು, ಪಿರ್ಯಾದಿದಾರರ ಮೋಟಾರು ಸೈಕಲ್‌ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಮೋಟಾರು ಸೈಕಲ್‌ನ ಅಂದಾಜು ಮೌಲ್ಯ ರೂ 20,000/- ಆಗಬಹುದು.ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 45/2022 ಕಲಂ:  379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೆ.ಎಸ್ ಗೋಪಾಲಕೃಷ್ಣ ಪ್ರಾಯ 56 ವರ್ಷ ತಂದೆ: ದಿ|| ಕೆ ಶಂಕರ ನಾರಾಯಣ ಭಟ್ ಕೀಲಾರ್ಕಜೆ ಅಂಚೆ ದೊಡ್ಡ ತೋಟ ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರಾದ ಗೋಪಾಲಕೃಷ್ಣರವರ ತಾಯಿ 72 ವರ್ಷದ ಹೇಮಾವತಿರವರು ಬಿ.ಪಿ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಅಲ್ಲದೇ ಮಣಿಗಂಟು ನೋವಿನಿಂದಲೂ ಬಳಲುತ್ತಿದ್ದು ದಿನಾಂಕ 10.06.2022 ರಂದು 12.00 ಗಂಟೆಗೆ ಪಿರ್ಯಾದಿದಾರರ ತೋಟದಲ್ಲಿ ಕೆಲಸ ಮಾಡಿ ಮನೆಗೆ ಬಂದು ತಾಯಿಯನ್ನು ಹುಡುಕಿದಾಗ ಕಾಣಸದೇ ಇದ್ದು ನಂತರ ಅವರು ಮಲಗುವ ಕೋಣೆಯಲ್ಲಿ ಮರದ ಅಡ್ಡಕ್ಕೆ ಹಾಗೂ ಕುತ್ತಿಗೆಗೆ ವಿದ್ಯುತ್ ವಯರನ್ನು ಕಟ್ಟಿ ಮೃತಪಟ್ಟಿದ್ದು, ಅವರ ಮೃತದೇಹದ ಪಕ್ಕದಲ್ಲಿ ತೋಟದ ಬೆಳೆಗೆ ಬಳಸುವ ಕ್ರಿಮಿ ನಾಶಕವನ್ನು ಸೇವಿಸಿ ಬಳಿಕ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಸುಳ್ಯ ಯುಡಿಅರ್ ನಂಬ್ರ 24/22 ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 11-06-2022 11:15 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080