ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 05

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಹಮ್ಮದ್ ಸುಹೇಬ್ ಪ್ರಾಯ: 46 ವರ್ಷ ತಂದೆ: ಸಿದ್ದಿಕ್, ವಾಸ: ಸಜಿಪಮೂಡ ಮನೆ, ಸಜೀಪಮೂಡ  ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 10.09.2022 ರಂದು  ಪಿರ್ಯಾದಿದಾರರು ವೈಯಕ್ತಿಕ ಕೆಲಸ ಮುಗಿಸಿ ಮೋಟಾರ್ ಸೈಕಲಿನಲ್ಲಿ ಮನೆ ಕಡೆಗೆ ಹೋಗುತ್ತಾ ಸಮಯ ಸುಮಾರು 11:00 ಗಂಟೆಗೆ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಲಯನ್ಸಕ್ಲಬ್ ಎಂಬಲ್ಲಿಗೆ ತಲುಪುವಾಗ ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ KA-70-2167 ನೇ ಆಟೋರಿಕ್ಷಾವನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೇ ನೀಡದೇ ಏಕಾಏಕಿ ರಸ್ತೆಯ ಬಲಭಾಗಕ್ಕೆ ಚಲಿಸಿದಾಗ  ಎದುರುಗಡೆಯಿಂದ ಬರುತ್ತಿದ್ದ KA-20-ER-1110 ನೇ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು  ಆಟೋರಿಕ್ಷಾವು ಬಲಭಾಗದ ಚರಂಡಿಗೆ ಬಿದ್ದು ವೋಟಾರ್ ಸೈಕಲ್ ಸವಾರ ವೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಅಪಘಾತವಾಗಿರುತ್ತದೆ, ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರನಿಗೆ ಮುಖಕ್ಕೆ ಗುದ್ದಿದ ಹಾಗೂ ರಕ್ತ ಗಾಯವಾಗಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 105/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಎಸ್ ನಾರಾಯಣ ಸಾಲಿಯಾನ್ ಪ್ರಾಯ 70 ತಂದೆ: ದಿ: ಮುತ್ತಪ್ಪಪೂಜಾರಿ ವಾಸ: ಸಮೃದ್ಧಿ ನಿಲಯ ಮಂಜಲ ಹಿತ್ಲು ಅನಂತಾಡಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 10.09.2022  ರಂದು  ಬೆಳಿಗ್ಗೆ 11.30  ಗಂಟೆಗೆ ತನ್ನ ಬಾಬ್ತು ಕಾರು ನಂಬ್ರ ಕೆಎ 19 ಎಮ್ ಸಿ 9214  ಗಾಡಿಯಲ್ಲಿ ಹೊರಟು ನೇರಳಕಟ್ಟೆ ಸೊಸೈಟಿ ಸಭೆ ಮುಗಿಸಿಕೊಂಡು ಮಧ್ಯಾಹ್ನ 1 ಗಂಟೆ ಸಮಯಕ್ಕೆ ಮಾಣಿ ಕಡೆ ಪಿರ್ಯಾದಿದಾರರ  ಸ್ನೇಹಿತ ನಾರಾಯಣ ಕುಲಾಲ್ ಎಂಬವರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೊರಟು ಸಮಯ 1.15 ಗಂಟೆಗೆ ಮಾಣಿ ಮೈಸೂರು ಹೆದ್ದಾರಿಯ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕೊಡಾಜೆ ಎಂಬಲ್ಲಿಗೆ ತಲುಪಿದಾಗ ಮಾಣಿ ಕಡೆಯಿಂದ ಮೋಟಾರು  ಸೈಕಲಿನ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತಪ್ಪು ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಎಡ ಬದಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಬೈಕ್ ಸವಾರನು ಕಣಿವೆಗೆ ಎಸೆಯಲ್ಪಟ್ಟಿದ್ದು. ಕೂಡಲೇ ಪಿರ್ಯಾದಿದಾರರು ಕಾರಿನಿಂದ ಇಳಿದು ಬೈಕ್ ಸವಾರನನ್ನು ಉಪಚರಿಸಿ ನೋಡಿದಾಗ ಸವಾರನ ತಲೆಯ ಬಲ ಭಾಗ, ದೇಹದ ಇತರೆ ಭಾಗಗಳಿಗೆ ರಕ್ತಗಾಯವಾಗಿದ್ದು, ಪಿರ್ಯಾದಿದಾರರು ಕಾರಿನ ಗಾಜು ಮತ್ತು ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದ್ದು ಕೂಡಲೇ ಪಿರ್ಯಾದಿದಾರರು ಬೈಕ್ ಸವಾರನನ್ನು ಮಾಣಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 140/2022  ಕಲಂ: 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು  ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರವೀಂದ್ರ ಪ್ರಾಯ 45 ವರ್ಷ, ತಂದೆ: ಬಾಬು ಪೂಜಾರಿ, ವಾಸ: ಮೇಗಿನ ಪುರಿಯ ಮನೆ, ಪೆರ್ನೆ ಅಂಚೆ & ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 08-09-2022 ರಂದು 13:00 ಗಂಟೆಗೆ ಹೆಸರು ತಿಳಿದು ಬಾರದ ಮಿನಿಗೂಡ್ಸ್ ವಾಹನ ಚಾಲಕ, ನೋಂದಣಿ ನಂಬ್ರ ತಿಳಿದು ಬಾರದ ಮಿನಿಗೂಡ್ಸ್ ವಾಹನವನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಅಮೈ ಸೇತುವೆ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ಬಲಬದಿಗೆ ಚಲಾಯಿಸಿದ ಪರಿಣಾಮ, ಕುಶಾಲಪ್ಪ ಹೆಚ್ ರವರು ಸವಾರರಾಗಿ ಪೆರ್ನೆ ಕಡೆಯಿಂದ ಕಡೇಶಿವಾಲಯ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-U-3343 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಮಿನಿಗೂಡ್ಸ್ ವಾಹನ ಅಪಘಾತವಾಗಿ, ಕುಶಾಲಪ್ಪ ಹೆಚ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಅವರಿಗೆ ತಲೆಗೆ ಗುದ್ದಿದ ರಕ್ತಗಾಯ, ಎಡಕಾಲಿನ ಪಾದಕ್ಕೆ ಗುದ್ದಿದ ರಕ್ತಗಾಯ, ಎಡಭುಜಕ್ಕೆ ಗುದ್ದಿದ ರಕ್ತಗಾಯ ಮತ್ತು ದೇಹಕ್ಕೆ ಗುದ್ದಿದ ನೋವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದವರಿಗೆ ಶಸ್ತ್ರಚಿಕಿತ್ಸೆಯಾಗಿರುತ್ತದೆ.  ಅಪಘಾತದ ಬಳಿಕ ಆರೋಪಿ ವಾಹನ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸದೇ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಪರಾರಿಯಾಗಿರುವುದಾಗಿದೆ. ಈ ಬಗ್ಗೆ  ಪುತ್ತೂರು ಸಂಚಾರ ಠಾಣೆ 145/2022 ಕಲಂ: 279, 338 ಐಪಿಸಿ & 134(A)&(B) IMV Act  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಬ್ದುಲ್ ಸಲೀಮ್ ,ಎ (42) ತಂದೆ: ದಿ| ಅಬ್ದುಲ್ ರಹಿಮಾನ್ ವಾಸ: ಪಾಲಡ್ಕ ಮನೆ, ಅರಂಬೂರು ಅಂಚೆ, ಆಲೆಟ್ಟಿ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಆಟೋ ರಿಕ್ಷಾ ಚಾಲಕರಾಗಿದ್ದು, ತಮ್ಮ ಬಾಬ್ತು ಆಟೋರಿಕ್ಷಾದಲ್ಲಿ ಪ್ರತಿ ದಿನ ಬೆಳಿಗ್ಗೆ ತಮ್ಮ ಮಕ್ಕಳನ್ನು ಹಾಗೂ ನೆರೆಕೆರೆಯ ಮಕ್ಕಳನ್ನು ಅರಂಬೂರಿನಲ್ಲಿರುವ ಮದರಸಕ್ಕೆ ಕರೆದುಕೊಂಡು ಹೋಗಿ  ತರಗತಿ ಮುಗಿದ ಬಳಿಕ ಪುನಃ ಅವರುಗಳ ಮನೆಗೆ ಬಿಡುತ್ತಿದ್ದು, ಅದರಂತೆ ದಿನಾಂಕ 10.09.2022 ರಂದು ಮಕ್ಕಳನ್ನು ಮದರಸಕ್ಕೆ ಕರೆದುಕೊಂಡು ಹೋಗಿ ಸಮಯ ಸುಮಾರು 08:45 ಗಂಟೆಗೆ ಪುನಃ ಮಕ್ಕಳನ್ನು ಅವರುಗಳ ಮನೆಗೆ ಬಿಡುತ್ತಿರುವರೇ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಅರಂಬೂರು, ಪಾಲಡ್ಕ ಎಂಬಲ್ಲಿ ತಮ್ಮ ಬಾಬ್ತು ಆಟೋ ರಿಕ್ಷಾವನ್ನು ಸಂಪಾಜೆ ಮಾರ್ಗದ ಕಡೆಗೆ ಎಡಬದಿಯಲ್ಲಿ ನಿಲ್ಲಿಸಿ, ಆಟೋರಿಕ್ಷಾದಲ್ಲಿ  ರಶೀದ್ ರವರ ಎರಡು ಮಕ್ಕಳಿದ್ದು, ಅದರಲ್ಲಿ ಆಯೀಷಾ ಲಿಫಾ (6) ಎಂಬವಳು ತಮ್ಮ ಮನೆಯ ಕಡೆಗೆ ರಸ್ತೆ ದಾಟುತ್ತಿರುವ ಸಮಯ  (ಮಾಣಿ- ಮೈಸೂರು ಹೆದ್ದಾರಿ) ಸಂಪಾಜೆ ಕಡೆಯಿಂದ ಸುಳ್ಯ ಕಡೆಗೆ ಒಂದು ಮೋಟಾರ್ ಸೈಕಲ್ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಬಂದು ಆಯೀಷಾ ಲಿಫಾಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್  ಸಮೇತ ರಸ್ತೆಗೆ ಎಸೆಯಲ್ಪಟ್ಟು, ಆಯೀಷಾ ಲಿಫಾಳಿಗೆ  ತಲೆಯ ಹಿಂಬದಿಗೆ ರಕ್ತಗಾಯವಾಗಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿದ್ದವಳನ್ನು ಪಿರ್ಯಾದುದಾರರು ಮತ್ತು ರಶೀದ್ ರವರರು ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಪರಿಕ್ಷೀಸಿ ಆಯೀಷಾ ಲಿಫಾ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅಪಘಾತ ಪಡಿಸಿದ ಮೋಟಾರ್ ಸೈಕಲ್ ನಂಬ್ರ ಕೆಎ 21 ಇಎ 0768 ಆಗಿದ್ದು, ಅದರ ಸವಾರನ ಹೆಸರು ಅಜೀತ್ ಎಂಬುದಾಗಿ ಆತನು ಸಹ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 100/2022  ಕಲಂ 279.337.304(ಎ)  ಐಪಿಸಿ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಬ್ದುಲ್ ಖಾದರ್ (42) ತಂದೆ: ಬಾಪ ಕುಂಞ ವಾಸ: ಕೆದುವಾಡಿ ಮನೆ ಪಿ ಎ ಪಾವೂರು ಮಂಜೇಶ್ವರ ತಾಲೂಕು ಕಸರಗೋಡು ಜಿಲ್ಲೆ  ಎಂಬವರ ದೂರಿನಂತೆ ದಿನಾಂಕ 09.09.2022 ರಂದು ಬೆಳಗಿನ ಜಾವ ಪಿರ್ಯಾದಿದಾರರ ಮನೆಯಿಂದ ಸಂಬಂಧಿ ಅಬ್ಬಾಸ್ ರವರ ಬಾಬ್ತು ಕೆಎ 70 ಎಂ 2243 ನಂಬ್ರ ಆಟೋ ರೀಕ್ಷಾದಲ್ಲಿ ಪಿರ್ಯಾದಿದಾರರು ಹಾಗೂ ಹನೀಫ್ ಮತ್ತು ಬಾವುಚ್ಚ ರವರನ್ನು ಹಿಂಬಂದಿ ಕುಳ್ಳಿರಿಸಿಕೊಂಡು ಅಬ್ಬಾಸ್ ರವರು ಚಾಲನೆ ಮಾಡಿಕೊಂಡು ಪಿರ್ಯಾದಿದಾರರ ರಕ್ತ ಸಂಬಂಧಿಕರ ಮನೆಯಾದ ಹಾಸನಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿ ಬಳಿಕ ವಾಪಸ್ಸು ಮನೆಯ ಕಡೆಗೆ ಅಂದರೆ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಬೆಂಗಳೂರು-ಮಂಗಳೂರು ರಾಷ್ಟೀಯ ಹೆದ್ದಾರಿಯಲ್ಲಿ ಬರುವಾಗ ದಿನಾಂಕ 10.09.2022 ರಂದು ಬೆಳಗಿನ ಜಾವ 02.00 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಬುಡೋಳಿ ಎಂಬಲ್ಲಿಗೆ ತಲುಪಿದಾಗ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಟಿ ಟಿ ವಾಹನೊಂದು ಬರುವುದನ್ನು ಕಂಡು ಆಟೋ ಚಾಲಕ ಆಟೋ ರೀಕ್ಷಾವನ್ನು ಅಜಾಗರುಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಆಟೋ ರೀಕ್ಷಾ ಚಾಲಕನ ನಿಯಂತ್ರ ತಪ್ಪಿ ಆಟೋ ರೀಕ್ಷಾ ಉರುಳಿಕೊಂಡು ಹೋಗಿ ಮಗುಚಿ ಎದುರು ನಿಂತಿದ್ದ ಟಿ ಟಿ ವಾಹನದ ಎದುರು ಭಾಗಕ್ಕೆ ತಾಗಿದ್ದು ಇದರ ಪರಿಣಾಮ ಆಟೋ ರೀಕ್ಷಾದಲ್ಲಿದ್ದವರು ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲ ಕೈ ಮತ್ತು ತಲೆ ರಕ್ತಗಾಯ, ಪಿರ್ಯಾದಿದಾರ ಜೊತೆಯಲ್ಲಿ ಹಿಂಬಂದಿ ಕುಳ್ಳಿತ್ತಿದ್ದ ಹನೀಫ್ ಹಾಗೂ ಬಾವುಚ್ಚ ರವರಿಗೆ ತರಚಿದ ನೋವು ಉಂಟಾಗಿದ್ದು, ಆಟೋ ರೀಕ್ಷಾ ಚಾಲಕ ಅಬ್ಬಾಸ್ ರವರಿಗೆ ಬಲ ಭುಜ ಬಲ ಕೋಲು ಕೈಗೆ ರಕ್ತ ಗಾಯ ವಾಗಿರುತ್ತದೆ, ಬಳಿಕ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 141/2022  ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 02

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ದುರ್ಗೇಶ್ (41) ತಂದೆ; ರಾಮಚಂದ್ರ ಪೂಜಾರಿ ವಾಸ:   ವಿಕಾಸ್ ನಗರ ಮನೆ  ಬಡಗಉಳಿಪ್ಪಾಡಿ ಗ್ರಾಮ,  ಮಂಗಳೂರು ತಾಲೂಕು ಎಂಬವರ ದೂರಿನಂತೆ ತಂದೆ ತಾಯಿಗೆ ಪಿರ್ಯಾದುದಾರರು ಮತ್ತು ಅವರ ಅಣ್ಣ ಬಾಲಕೃಷ್ಣ  ಇಬ್ಬರು ಮಕ್ಕಳು , ಪಿರ್ಯಾದಿದಾರರ ಅಣ್ಣ ಬಾಲಕೃಷ್ಣ ನು ಪಿರ್ಯಾದಿದಾರರ ಚಿಕ್ಕಮ್ಮನ ಮನೆಯಾದ ಕರಿಯಂಗಳ ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿ ಒಬ್ಬಂಟಿಯಾಗಿ  ವಾಸವಾಗಿದ್ದು  ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ, ಆತನಿಗೆ ಮದುವೆಯಾಗಿರುವುದಿಲ್ಲ. ಅಣ್ಣ  ಬಾಲಕೃಷ್ಣ ನಿಗೆ  ವಿಪರೀತ ಮದ್ಯ ಸೇವನೆ ಮಾಡುವ ಅಭ್ಯಾಸವಿದ್ದು, ಅಲ್ಲದೆ ಆತನು ಮಾನಸಿಕ ನಂತೆ ವರ್ತಿಸುತ್ತಿದ್ದು ಸುಮಾರು 8 ವರ್ಷದ ಹಿಂದೆ ಸುರತ್ಕಲ್ ನಲ್ಲಿ ಆತ್ಮ ಹತ್ಯೆಗೆ ಪ್ರಯತ್ನಿಸಿದವನನ್ನು ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಗುನಮುಖನಾಗಿದ್ದು  ಮನೆಯಲ್ಲಿ ಒಬ್ಬರೇ ಇದ್ದು,  ಬಳಿಕ ವಿಪರೀತ ಮದ್ಯೆ ಸೇವನೆ ಮಾಡುತ್ತಿದ್ದು.  ದಿನಾಂಕ 10-09-2022 ರಂದು ಬೆಳಿಗ್ಗೆ  6.00 ಗಂಟೆಯ  ಸಮಯಕ್ಕೆ   ಪಿರ್ಯಾದಿದಾರರ ಅಣ್ಣ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 46-2022  ಕಲಂ 174  ಸಿ ಆರ್ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ  ಶ್ರೀಮತಿ ತುಳಸಿದೇವಿ ಪ್ರಾಯ: 30 ವರ್ಷ,   ಗಂಡ: ರಾಜೇಶ್‌ ಉರಾನ್  ವಾಸ: ತಿರಾ ಗ್ರಾಮ ಪಾರುಂಡಿ ಅಂಚೆ,  ಗುಮ್ಲಾ ಜಿಲ್ಲೆ ಜಾರ್ಖಾಂಡ್‌ ರಾಜ್ಯ ಎಂಬವರ ದೂರಿನಂತೆ  ಶ್ರೀಮತಿ ತುಳಸಿದೇವಿ ಎಂಬವರು ತನ್ನ ಗಂಡ ಮೃತ ರಾಜೇಶ್‌ ಉರಾನ್‌ ಎಂಬವರ ಜೊತೆ ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಹೆಬ್ಬಾರ್ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಪಿರ್ಯಾದಿದಾರರ ಗಂಡ ರಾಜೇಶ್ನಿಗೆ ದಿನಾಂಕ:07-09-2022 ರಂದು ವಿಪರೀತ ಜ್ವರ ಬಂದಿದ್ದರಿಂದ ಕಕ್ಕಿಂಜೆಯ ಕೃಷ್ಣಾ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈಧ್ಯರು ಪರೀಕ್ಷಿಸಿ  ಔಷಧಿಯನ್ನು ನೀಡಿದ್ದು ಪಡೆದುಕೊಂಡು ಮನೆಗೆ ಬಂದಿದ್ದು ದಿನಾಂಕ:08-09-2022 ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದು ದಿನಾಂಕ:09-09-2022 ರಂದು ಪಿರ್ಯಾದಿದಾರರ ಗಂಡನ ಆರೋಗ್ಯದಲ್ಲಿ ಏರುಪೇರಾಗಿದ್ದು ಚಿಕಿತ್ಸೆಯ ಬಗ್ಗೆ ಕೃಷ್ಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈಧ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈಧ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದು ದಿನಾಂಕ:09-09-2022 ರಂದು ಸಂಜೆ 7:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ ಯುಡಿಆರ್ ನಂ. 53/2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-09-2022 12:16 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080