ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕೆ. ಸಿ. ಸೂರ್ಯನಂದ (66), ತಂದೆ: ದಿ| ಕೆ. ಚಿನ್ನಪ್ಪ ಗೌಡ, ವಾಸ: ಕುರುಂಜಿ ಮನೆ, ಕುರುಂಜಿಬಾಗ್‌, ಸುಳ್ಯ ಕಸಬಾ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 08-10-2022 ರಂದು  KA21R2985 ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಸುಳ್ಯ ಪೇಟೆಗೆ ಬಂದು ಸುಳ್ಯ ಪೇಟೆಯಲ್ಲಿರುವ ಶ್ರೀರಾಮ ಪೇಟೆ ಎಂಬಲ್ಲಿನ ಶ್ರೀಹರಿ ಕಾಂಪ್ಲೆಕ್ಸ್‌ ನಲ್ಲಿನ ಪೊಪ್ಯುಲರ್‌ ಬೇಕರಿಯಿಂದ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಶ್ರೀರಾಮ ಪೇಟೆಯಲ್ಲಿರುವ ಧ್ವಾರಕ ಹೋಟೆಲ್‌ ಕಡೆಗೆ ಹೋಗುವಾ ಸಲುವಾಗಿ ತನ್ನ ಸ್ಕೂಟರ್‌ ನ್ನು ಸ್ಟಾರ್ಟ್‌ ಮಾಡಿ ಸಿಗ್ನಲ್‌ ನೀಡಿ ರಸ್ತೆಯ ಎಡಬದಿಗೆ ಹೋಗುತ್ತಿರುವ ಸಮಯ ಸುಮಾರು 16:30 ಗಂಟೆಗೆ ಭಾರತ್‌ ಸ್ಟೀಲ್‌ ಅಂಗಡಿ ಬಳಿ ತಲುಪುತ್ತಿದ್ದಂತೆ ಮೋಟಾರ್‌ ಸೈಕಲ್‌ ನಂಬ್ರ KA12V5512 ನೇದನ್ನು ಅದರ ಸವಾರ ಸುಳ್ಯ KSRTC ಬಸ್‌ ಸ್ಟಾಂಡ್‌  ಕಡೆಯಿಂದ ಶ್ರೀರಾಮಪೇಟೆ ಕಡೆಗೆ ಸವಾರಿ ಮಾಡಿಕೊಂಡು ಬಂದು ರಸ್ತೆಯಲ್ಲಿ ಹೋಗುತ್ತಿದ್ದ ಇತರ ವಾಹನಗಳನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಓವರ್‌ಟೇಕ್‌ ಮಾಡಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್‌ ನ ಎದುರಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾದಿದಾರರ ಬಲಕಾಲಿನ ಮೊಣಕಾಲು, ಬಲ ಸೊಂಟದ ಬಳಿ ನೋವು ಹಾಗೂ ರಕ್ತಗಾಯ ಉಂಟಾಗಿದ್ದು, ಪಿರ್ಯಾದಿದಾರರ ಸ್ಕೂಟರ್‌ ಕೂಡಾ ಜಖಂಗೊಂಡಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ119/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮನೋಜ್ ಎಸ್ (23) ತಂದೆ:ಚಂದ್ರಹಾಸ ಪೂಜಾರಿ ವಾಸ:ಸಬಳೂರು ಮನೆ ಕ್ಯೊಲ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಮನೋಜ್ ಎಸ್ ರವರು ದಿನಾಂಕ 09.10.2022 ರಂದು ಅವರ ಚಿಕ್ಕಪ್ಪನ ಮೋಟಾರ್ ಸೈಕಲ್ ನಂಬ್ರ KA 21 Q 2446 ನೇದರಲ್ಲಿ ಪಿರ್ಯಾದಿದಾರರ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಪ್ರಜ್ಞಾ ಎಂಬಾಕೆಯನ್ನು ಕುಳ್ಳಿರಿಸಿಕೊಂಡು ಹೊಸಮಜಲು ಕಡೆಯಿಂದ ಬಲ್ಯಾ ಕಡೆಗೆ ಬರುತ್ತಾ 12.45 ಗಂಟೆಯ ವೇಳೆಗೆ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿಗೆ ತಲುಪಿದಾಗ ರಾ.ಹೆದ್ದಾರಿ 75ರಲ್ಲಿ ಕ್ರಾಸ್ ಆಗುತ್ತಿದ್ದಾಗ ಉಪ್ಪಿನಂಗಡಿ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಾರು ನಂಬ್ರ KA 51 N 0568 ನೇದನ್ನು ಅದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಾಂಗ್ ಸೈಡಿಗೆ ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಯಾದ ಪರಿಣಾಮ ಪಿರ್ಯಾದಿದಾರರ ಎಡ ಕೈಗೆ ತರಚಿದ ಗಾಯವಾಗಿ ಹಿಂಬದಿ ಸವಾರೆ ಪ್ರಜ್ಞಾರವರಿಗೆ ಬೆನ್ನಿಗೆ ಗುದ್ದಿದ ಗಾಯ ಹಾಗೂ ರಕ್ತಗಾಯ ಹಾಗೂ ತುಟಿಗೆ, ಬಾಯಿಗೆ ಹಾಗೂ ಎರಡು ಕಾಲುಗಳು ಹಾಗೂ ಎರಡು ಕೈಗಳಿಗೂ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರು ಹಾಗೂ ಪ್ರಜ್ಞಾ ರವರು ಮಂಗಳೂರು ಯೆನೋಪೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಹೇಳಿದಾಗ  ಅಲ್ಲಿಯ ವೈದ್ಯರು ಪ್ರಜ್ಞಾರವರನ್ನು ಒಳರೋಗಿಯಾಗಿ ಹಾಗೂ ಪಿರ್ಯಾದಿದಾರರನ್ನು ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ CR NO 108/2022 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ  ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಂತೋಷ್ ನಲ್ಕೆ (43)ತಂದೆ:ಕೃಷ್ಣ  ನಲ್ಕೆ,ವಾಸ:ಮೈ0ದುಕಲ್ಲು ಮನೆ, ಬೋಳ ಗ್ರಾಮ ಮತ್ತು ಅಂಚೆ,ಕಾರ್ಕಳ ತಾಲ್ಲೂಕು.ಎಂಬವರ ದೂರಿನಂತೆ ದಿನಾಂಕ: 01-10-2022 ರಂದು ಪಿರ್ಯಾಧಿದಾರರು ಸದಾನಂದ, ಅಜಿತ್‌, ರಿತೇಶ ರವರೊಂದಿಗೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಕ ಬಸ್‌ ಸ್ಟಾಂಡ್‌ ಬಳಿ ನಿಂತುಕೊಂಡಿರುವಾಗ ಸಮಯ ಸುಮಾರು ಮಧ್ಯಾಹ್ನ 1.30 ಗಂಟೆಗೆ ಬೆಳ್ತಂಗಡಿ ಕಡೆಯಿಂದ ಮಡಂತ್ಯಾರು ಕಡೆಗೆ ಕೆಎ 70 H 2414 ನೇ ಮೋಟಾರು ಸೈಕಲ್‌ ನಲ್ಲಿ ಸವಾರ ಅಜ್ಮಲ್‌ ರವರು ಸಹ ಸವಾರನ್ನಾಗಿ ಸನ್ನಿ ಕುಮಾರ್‌ ರವರನ್ನು ಕುಳ್ಳಿರಿಸಿಕೊಂಡು ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಸದಾನಂದ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಸದಾನಂದ ರವರು ಅಲ್ಲಿ ಬಿದ್ದು ಮೋಟಾರು ಸೈಕಲ್‌ ಸವಾರ ಮತ್ತು ಸಹ ಸವಾರ ಮೋಟಾರು ಸೈಕಲ್‌ ನೊಂದಿಗೆ ರಸ್ತೆಗೆ ಬಿದ್ದು ಸದಾನಂದ ರವರು ತಲೆಯ ಬಲ ಭಾಗಕ್ಕೆ ಗುದ್ದಿದ ರಕ್ತಗಾಯ, ಮೋಟಾರು ಸೈಕಲ್‌ ಸಹ ಸವಾರ ಸನ್ನಿ ಕುಮಾರ್‌ ರವರು ಬಲ ಕಾಲಿಗೆ ಗುದ್ದಿದ ಗಾಯಗೊಂಡು ಗಾಯಾಳುಗಳು ಗುರುವಾಯನಕೆರೆ ಆಭಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದಾನಂದ ರವರು ದಿನಾಂಕ: 01-10-2022 ರಂದು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ..ಈ ಬಗ್ಗೆ ಬೆಳ್ತಂಗಡಿ  ಸಂಚಾರ  ಪೊಲೀಸ್ ಠಾಣೆ ಅ.ಕ್ರ: 122/2022 ಕಲಂ 279,337 ಐ.ಪಿ.ಸಿ.  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ  ಸಂಚಾರ  ಪೊಲೀಸ್ ಠಾಣೆ: ದಿನಾಂಕ: 09-10-2022 ರಂದು ಸಮಯ ಸುಮಾರು ರಾತ್ರಿ  9.45 ರಿಂದ 10.15 ಗಂಟೆಯ ಮಧ್ಯೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಶಾಂತಿವನದ ಸಮೀಪ ಸುಮಾರು 50 ರಿಂದ 60 ವರ್ಷದ ಅಪರಿಚಿತ ಗಂಡಸಿಗೆ ಯಾವುದೋ ಅಪರಿಚಿತ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ ಅಪರಿಚಿತ ಗಂಡಸಿಗೆ ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ಗಂಡಸು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ತಲೆಗೆ , ಬಲಕಾಲಿನ ಮೊಣಗಂಟಿನ ಕೆಳಗಡೆ ಪಾದದವರೆಗೆ, ಎಡ ಕೈಯ ಮೊಣಗಂಟಿನಿಂದ ಹಸ್ತದವರೆಗೆಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಅಪಘಾತ ನಡೆಸಿದ ವಾಹನವನ್ನು ಅದರ ಚಾಲಕ ನಿಲ್ಲಿಸದೇ ಸಂಬಂಧಪಟ್ಟವರಿಗೆ ಮಾಹಿತಿ ನೀಡದೇ ವಾಹನ ಸಮೇತ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ  ಸಂಚಾರ  ಪೊಲೀಸ್ ಠಾಣೆ ಅ.ಕ್ರ: 121/2022 ಕಲಂ 279,338 ಐ.ಪಿ.ಸಿ. ಮತ್ತು ಕಲಂ 134 A& B ಜೊತೆಗೆ 187 IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವ ಬೆದರಿಕೆ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂದೀಫ್ ಪ್ರಾಯ 25 ವರ್ಷ ತಂದೆ: ದಿ|| ಆನಂದ, ಲ್ಲೂಕುಸುಳ್ಯ ಕಸಬಾ ಗ್ರಾಮ ಸುಳ್ಯ ತಾ ಶಾಂತಿನಗರ ಮನೆ ಎಂಬವರ ದೂರಿನಂತೆ ಸಂದೀಫ್‌ರವರು ತಾಯಿ ಜಯಂತಿ, ತಮ್ಮಂದಿರಾದ ಪ್ರದೀಫ್ ಮತ್ತು ಸಂದೀಫ್‌ರವರೊಂದಿಗೆ ವಾಸವಾಗಿದ್ದು, ಅವರ ಮನೆಯ ಪಕ್ಕದಲ್ಲಿ ತನ್ನ ಚಿಕ್ಕಮ್ಮ ಚಂದ್ರಾವತಿರವರ ಜೊತೆ ವಾಸವಾಗಿರುವ ಸೋದರ ಮಾವ ಕೃಷ್ಣರವರು ಪಿರ್ಯಾದಿದಾರರ ಮನೆಯ ಮುಂದೆ ನಡೆದುಕೊಂಡು ಹೋಗುವಾಗಲೆಲ್ಲ ವಿನಾಕಾರಣ ಪಿರ್ಯಾದಿದಾರರನ್ನು ಹಾಗೂ ಮನೆಯವರನ್ನು ಉದ್ದೇಶಿಸಿ ಬೈಯುವುದು ಮಾಡುತ್ತಿದ್ದು, ದಿನಾಂಕ 09.10.2022 ರಂದು ಮಧ್ಯಾಹ್ನ ಸುಮಾರು 12.00 ಗಂಟೆಗೆ ಪಿರ್ಯಾದಿದಾರರು ಮತ್ತು ಅವರ ತಮ್ಮ ಪ್ರದೀಪ ಚಿಕ್ಕಮ್ಮನ ಮನೆಗೆ ಹೋಗಿದ್ದ ಸಮಯ ಮಾವ ಕೃಷ್ಣರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಅವರ ಕೈಯಲ್ಲಿದ್ದ ಕತ್ತಿಯನ್ನು ಪಿರ್ಯಾದಿದಾರರ ಮತ್ತು ತಮ್ಮ ಪ್ರದೀಫನ ಬೆನ್ನಿಗೆ ಬೀಸಿ ನಿಮ್ಮನ್ನು ಇಲ್ಲ ಮತ್ತೆ ಕಂಡರೇ ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಕತ್ತಿ ಸಮೇತ ಅಲ್ಲಿಂದ ಹೊರಟು ಹೋಗಿದ್ದು, ಮಾವ ಕೃಷ್ಣ ಕತ್ತಿಯನ್ನು ಬೀಸಿದ್ದರಿಂದ ಪಿರ್ಯಾದಿದಾರರಿಗೆ ಮತ್ತು ಪ್ರದೀಪನಿಗೆ ಬೆನ್ನಿಗೆ ರಕ್ತಗಾಯವಾಗಿದ್ದು, ಕೂಡಲೇ ತಾಯಿ ಮತ್ತು ಚಿಕ್ಕಮ್ಮ ಅವರನ್ನು ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಕಳುಹಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ.ಕ್ರ 118/22 ಕಲಂ 504,ಮ 324, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪರಮೇಶ್ವರಿ ಪ್ರಾಯ: 47 ವರ್ಷ, ಗಂಡ: ಮುತ್ತು ಕುಮಾರ್ ಎಸ್ ಎಂ, ರೋಲಿಂಗ್ ಶೆಡ್, ಕೆ ಎಫ್ ಡಿ ಸಿ ಕ್ವಾಟ್ರಸ್  ಐವರ್ನಾಡು, ಐವರ್ನಾಡು ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ಮುತ್ತು ಕುಮಾರ್ ಎಸ್ ಎಂ (55) ಎಂಬವರು ಕೆಎಫ್ ಡಿ ಸಿ ಯಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಮಾಡಿಕೊಂಡಿದ್ದವರು, ಬಾಲ್ಯದಿಂದಲೇ ಅಸ್ತಮಾ ಖಾಯಿಲೆ ಪೀಡಿತರಾಗಿದ್ದು, ಇತ್ತೀಚೆಗೆ ಖಾಯಿಲೆ ಉಲ್ಬಣಗೊಂಡು ಕರ್ತವ್ಯ ನಿರ್ವಹಿಸಲಾಗದೇ ಸ್ವಯಂ ನಿವೃತ್ತಿ ಹೊಂದಿ ಮನೆಯಲ್ಲಿಯೇ ಇದ್ದು, ಚಿಕಿತ್ಸೆ ಪಡೆಯುತ್ತಿದ್ದರು, ದಿನಾಂಕ 08.10.2022 ರಂದು ಪಿರ್ಯಾದಿದಾರರು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದು, ಗಂಡನು ಮನೆಯಲ್ಲಿ ಒಬ್ಬರೇ  ಇದ್ದವರು ಪಿರ್ಯಾದಿದಾರರು  ಕೆಲಸ ಮುಗಿಸಿ ಮದ್ಯಾಹ್ನ 2:00 ಗಂಟೆಗೆ ವಾಪಾಸು ಮನೆಗೆ ಬಂದಾಗ  ಗಂಡ  ತೀರಾ ಬಳಲಿಕೊಂಡಿದ್ದು, ವಿಚಾರಿಸಿದಾಗ ತಾನು ಅನಾರೋಗ್ಯದ ನಿಮಿತ್ತ ಸೇವಿಸುತ್ತಿದ್ದ ಎಲ್ಲಾ ಮಾತ್ರೆಗಳನ್ನು ಸೇವಿಸಿದ್ದು, ಉಸಿರಾಡಲು ಕಷ್ಟವಾಗುತ್ತದೆ ಎಂದು ತಿಳಿಸಿದಾಗ ಪಿರ್ಯಾದಿದಾರರು ಕೂಡಲೇ ಅಳಿಯ ಪುರುಷೋತ್ತಮನಿಗೆ ತಿಳಿಸಿ ಚಿಕಿತ್ಸೆ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ  ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆಯಲ್ಲಿದ್ದರು. ಮುತ್ತು ಕುಮಾರ್ ರವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಾರದೇ ಇದ್ದುದರಿಂದ ಅಲ್ಲಿನ ವೈದ್ಯರ ಸಲಹೆಯಂತೆ  ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಪುನಃ ಸುಳ್ಯ ಕೆವಿಜಿ ಆಸ್ಪತ್ರೆಗೆ ರಾತ್ರಿ 10:00 ಗಂಟೆಗೆ ಕರೆ ತಂದಾಗ   ವೈದ್ಯರು ಪರೀಕ್ಷಿಸಿ  ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್  29/2022   ಕಲಂ 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-10-2022 11:22 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080