ಅಪಘಾತ ಪ್ರಕರಣ: 03
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಅಬ್ದುಲ್ಲಾ ಪ್ರಾಯ: (47) ತಂದೆ:ದಿ|| ಹಾಜಬ್ಬವಾಸ:ಕೊಳಕೆ ಮನೆಸಜಿಪಮೂಡ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 10-11-2022 ರಂದು ಪಿರ್ಯಾದಿದಾರರು ಅಂಗಡಿಯಲ್ಲಿ ಇದ್ದ ಸಮಯ ಮಧ್ಯಾಹ್ನ 1:55 ಗಂಟೆಗೆ ಬಂಟ್ವಾಳ ತಾಲೂಕು ಕಾಡಬೆಟ್ಟು ಗ್ರಾಮದ ಕೆಳಗಿನವಗ್ಗ ಎಂಬಲ್ಲಿ ಬಂಟ್ವಾಳ – ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ತಂಗಡಿ ಕಡೆಯಿಂದ KA-19-AC-0127 ನೇ ಆಟೋರಿಕ್ಷಾವನ್ನು ಅದರ ಚಾಲಕ ಉಮರಬ್ಬರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆ ನೀಡದೆ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಬಿ ಸಿ ರೋಡು ಕಡೆಯಿಂದ ಬೆಳ್ತಂಗಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-05-LC-1300 ನೇ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದು, ಎಡ ಕೈಗೆ ಗುದ್ದಿದ ಹಾಗೂ ರಕ್ತ ಗಾಯ, ಬಲ ಕೈ ಹೆಬ್ಬೆರಳಿಗೆ ರಕ್ತ ಗಾಯ, ಕಾಲುಗಳಲ್ಲಿ ಸಣ್ಣ ಪುಟ್ಟ ತರಚಿದ ಗಾಯಗಳಾದವರು, ಬಿ ಸಿ ರೋಡು ಪರ್ಲಿಯಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ತೇಜಶ್ವಿನಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 139/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಶ್ರೀಮತಿ ರುಬೀನಾ ಪ್ರಾಯ:24 ವರ್ಷ ಗಂಡ: ಶರೀಫ್ ತಾಳಿಪಡ್ಪು ವಾಸ: ಸಂಪ್ಯ ಮನೆ, ಆರ್ಯಾಪು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ:10-11-2022 ರಂದು ಮಧ್ಯಾಹ್ನ ಸಂಪ್ಯ ಬಸ್ ಸ್ಟಾಂಡ್ ಮುಂಭಾಗದಿಂದ ಮಾಣಿ-ಮೈಸೂರು ಹೆದ್ದಾರಿ ರಸ್ತೆಯನ್ನು ದಾಟಿ ಫಿರ್ಯಾದುದಾರರ ಬಲಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ಸಂಪ್ಯ ಮಸೀದಿಯ ಮುಂಭಾಗ ಮಧ್ಯಾಹ್ನ 2.00 ಗಂಟೆಗೆ ತಲುಪಿದಾಗ ಫಿರ್ಯಾದುದಾರರ ಎದುರಿನಿಂದ ಅಂದರೆ ಪುತ್ತೂರು ಕಡೆಯಿಂದ ಸಂಟ್ಯಾರು ಕಡೆಗೆ ಮಾಣಿ-ಮೈಸೂರು ಹೆದ್ದಾರಿ ರಸ್ತೆಯಲ್ಲಿ ಸ್ಕೂಟರ್ ಒಂದನ್ನು ಅದರ ಸವಾರೆ ಸ್ಕೂಟರ್ ನ ಮುಂಭಾಗದಲ್ಲಿ ಮಗುವೊಂದನ್ನು ನಿಲ್ಲಿಸಿಕೊಂಡು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಯಲ್ಲಿ ಸವಾರಿ ಮಾಡಿಕೊಂಡು ಬಂದು ಮಣ್ಣು ರಸ್ತೆಯಲ್ಲಿ ಸವಾರಿ ಮಾಡಿ ಫಿರ್ಯಾದಿದಾರರಿಗೆ ಢಿಕ್ಕಿ ಪಡಿಸಿದರು. ಫಿರ್ಯಾದುದಾರರು ನೆಲಕ್ಕೆ ಎಸೆಯಲ್ಪಟ್ಟಿದ್ದು, ತಲೆಯ ಹಿಂಭಾಗ ಹಾಗೂ ಎಡಕಾಲಿನ ಮಣಿಗಂಟಿಗೆ ಗುದ್ದಿದ ಗಾಯವಾಗಿರುತ್ತದೆ. ಅಪಘಾತಪಡಿಸಿದ ಸ್ಕೂಟರ್ ನಂಬ್ರ ನೋಡಲಾಗಿ ಕೆಎ-21-ಆರ್-6470 ಆಗಿದ್ದು, ಅದರ ಸವಾರೆಯ ಹೆಸರು ಜಯಶ್ರೀ ರೈ ಎಂಬುದಾಗಿ ತಿಳಿಸಿದರು. ಅಲ್ಲಿ ಸೇರಿದ್ದ ಜನರಲ್ಲಿ ಒಬ್ಬರು ಒಂದು ಕಾರಿನಲ್ಲಿ ಫಿರ್ಯಾದುದಾರರನ್ನು ಕರೆದುಕೊಂಡು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ Cr.No 101/2022 ಕಲಂ: 279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ರವೀಂದ್ರ ಪ್ರಾಯ:44 ತಂದೆ: ಕೃಷ್ಣ ವಾಸ:ಕುಕ್ಕೇರುಬೆಟ್ಟು ಮನೆ ಕೋಡಿಂಬಾಳ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ:10.11.2022 ರಂದು ಬಾಡಿಗೆಗಾಗಿ ಪಂಜ ಕಡೆಗೆ ಕಡಬ-ಪಂಜ ಡಾಮಾರು ರಸ್ತೆಯಲ್ಲಿ ತನ್ನ ಪಿಕಪ್ ವಾಹನದಲ್ಲಿ ಹೋಗುತ್ತಿರುವಾಗ ಸಮಯ ಮದ್ಯಾಹ್ನ 03.30 ಗಂಟೆಗೆ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಮುರಾ ಚಡಾವು ಎಂಬಲ್ಲಿಗೆ ತಲುಪಿದಾಗ ತನ್ನ ಎದುರು ಹೋಗುತಿದ್ದ KA-21 B-9169ನೇ ಆಟೋರಿಕ್ಷಾ ಚಾಲಕನು ಸದ್ರಿ ಡಾಮಾರು ಇಳಿಜಾರು ರಸ್ತೆಯಲ್ಲಿ ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಹೋಗಿ ಎದುರು ಬರುತಿದ್ದ KA-21 A-6059 ನೇ ಪಿಕಪ್ ವಾಹನಕ್ಕೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಆಟೋರಿಕ್ಷಾದಲ್ಲಿ ಹೆಂಗಸು ನಿಶ್ಮಿತ ಮತ್ತು ತನ್ನ ಮಕ್ಕಳಾದ ಹಾರ್ಧಿಕ್‌ಗೌಡ ಮತ್ತು ಆಧೃತಿ ಎಂಬ ಎರಡು ಮಕ್ಕಳಿದ್ದು ಗಂಡು ಮಗು ಹಾರ್ದಿಕ್‌ಗೌಡ (4 ವರ್ಷ) ಮಗುವಿಗೆ ತಲೆಗೆ ಮತ್ತು ಮೂಗಿಗೆ ತೀವ್ರ ರಕ್ತಸ್ರಾವವಾಗಿರುತ್ತದೆ ನಿಶ್ಮಿತರವರಿಗೆ ಮತ್ತು ಆಧೃತಿ ಎಂಬ ಹೆಣ್ಣು ಮಗುವಿಗೆ ಸಣ್ಣಪುಟ್ಟ ಗುದ್ದಿದ ಗಾಯವಾಗಿರುತ್ತದೆ ಹಾಗೂ ಆಟೋರಿಕ್ಷಾ ಚಾಲಕನಾದ ಆರೋಪಿತನಿಗೂ ಮುಖಕ್ಕೆ ಮತ್ತು ಮೂಗಿಗೆ ರಕ್ತಗಾಯವಾಗಿರುತ್ತದೆ ಗಾಯಾಳುಗಳನ್ನು ಪಿರ್ಯಾದುದಾರರು ಮತ್ತು ಇತರರು ಉಪಚರಿಸಿ ಜೀಪು ವಾಹನದಲ್ಲಿ ಕಡಬ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ ನಂತರ ಅಪಘಾತದಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ಹಾರ್ದಿಕ್‌ಗೌಡ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್ ವಾಹನದಲ್ಲಿ ಪುತ್ತೂರು ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಸದ್ರಿ ಅಪಘಾತದಲ್ಲಿ ಗಂಭಿರಗಾಯಗೊಂಡಿದ್ದ ಹಾರ್ಧೀಕ್‌ಗೌಡ ಮಗು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 97/2022 ಕಲಂ: ಕಲಂ:279.337, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ಪ್ರಕರಣ: 01
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುರೇಶ ಕೆ, ಪ್ರಾಯ: 33 ವರ್ಷ, ತಂದೆ: ಮಂಚ ಮುಗೇರ, ವಾಸ: ಕರೆಂಕಿ ಮನೆ , ಹಿರೆಬಂಡಾಡಿ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಕೋಡಿಂಬಾಡಿ ಗ್ರಾಮ ಪಂಚಾಯತ್ ಕಛೇರಿಯ ಬಳಿ ನಿವಾಸಿ, ಮೋಹನ ಎಂಬವರ ಮನೆಯಲ್ಲಿ ಸುಮಾರು ಎರಡು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ರಾತ್ರಿ ಸಮಯ ಕೂಡಾ ಮೋಹನರವರ ಮನೆಯಲ್ಲಿಯೇ ಉಳಿದುಕೊಂಡು ವಾರಕ್ಕೊಮ್ಮೆ ತನ್ನ ಮನೆಗೆ ಹೋಗುತ್ತಿದ್ದು, ದಿನಾಂಕ 09.11.2022 ರಂದು ಪಿರ್ಯಾದಿದಾರರು ಹಳೆಯ ಮನೆ ಕಡೆಗೆ ಬಟ್ಟೆಗಳನ್ನು ತರಲು ಹೋದಾಗ ಹಳೆ ಮನೆಗೆ ಬೀಗ ಹಾಕಿದ್ದು, ನಂತರ ಪಿರ್ಯಾದಿದಾರರು ರಾತ್ರಿ ಸುಮಾರು 8.30 ಗಂಟೆಗೆ ಮೋಹನರವರ ಮನೆಯಿಂದ ತನ್ನ ಮನೆಗೆ ಹೊರಟಾಗ ಮನೆಯ ಅಂಗಳಕ್ಕೆ ಆರೋಪಿಗಳಾದ ಶೇಖರ ಪೂಜಾರಿ, ಮನೋಜ್ , ಉಮೇಶ ,ಪ್ರಮೋದ್ , ಅಶೋಕ, ಸುರೇಶ, ಉಮೇಶ ,ರತ್ನಾಕರ ,ಕೃಷ್ಣಪ್ಪ , ಪ್ರದೀಪರವರು ಬಂದು ಪಿರ್ಯಾದಿದಾರರನ್ನು ಹಿಡಿದು ಅವಾಚ್ಯ ಶಬ್ಧಗಳಿಂದ ಬೈದು ಇಲ್ಲಿ ಏನು ನಿನಗೆ ಕೆಲಸ ಎಂದು ಮೋಹನರವರ ಹಳೆಯ ಮನೆಗೆ ಕರೆದುಕೊಂಡು ಹೋಗಿ ಶೇಖರ ಪೂಜಾರಿಯು ಮರದ ದೊಣ್ಣೆಯಿಂದ ಹೊಡೆದಾಗ ಇತರರು ಕೈಗಳಿಂದ ಬೆನ್ನಿಗೆ ಕೆನ್ನೆಗೆ, ಎದೆಗೆ ಕಾಲಿನಿಂದ ಸೊಂಟಕ್ಕೆ ತುಳಿದು ದೂಡಿ ಹಾಕಿರುತ್ತಾರೆ. ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದಾಗ ಮೋಹನರವರ ತಂದೆ ಹಾಗೂ ಅವರ ಮಗ ಬರುವುದನ್ನು ನೋಡಿ ,ಆರೋಪಿಗಳು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ಧಗಳಿಂದ ಬೈದು ಕೇಸು ಕೊಡಲು ಹೋದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಅಲ್ಲಿಂದ ಹೊರಟು ಹೋಗಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 94/2022 ಕಲಂ: 143,147,148,341,504,324,323,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: 01
ಪುತ್ತೂರು ನಗರ ಪೊಲೀಸ್ ಠಾಣೆ :ದಿನಾಂಕ: 09-11-2022 ರಂದು ಶ್ರೀಕಾಂತ್ ರಾಥೋಡ್ ಪೊಲೀಸ್ ಉಪನಿರೀಕ್ಷಕರು ಪುತ್ತೂರು ನಗರ ಪೊಲೀಸ್ ಠಾಣೆ ರವರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ 23:45 ಗಂಟೆಗೆ ಬನ್ನೂರು ಗ್ರಾಮದ ವಿಜಯನಗರ ಬಡಾವಣೆಯ ಶಿವು ಪಡೀಲ್ ರವರ ಮನೆಯ ಮುಂಭಾಗ ಸಾರ್ವಜನಿಕ ಕಚ್ಚಾ ಮಣ್ಣು ರಸ್ತೆಯ ಬದಿಯಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳನ್ನು ಉಪಯೋಗಿ ಜೂಜಾಟ ಆಟವಾಡುತ್ತಿದ್ದಾರೆ ಎಂಬ ಬಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಸಮಯ 23:45 ಗಂಟೆಗೆ ಸದರಿ ಸ್ಥಳಕ್ಕೆ ತಲುಪಿ ನೋಡಿದಾಗ ಏಳು ಜನ ವ್ಯಕ್ತಿಗಳು ಸಾರ್ವಜನಿಕ ದಾರಿದೀಪದ ಬೆಳಕು ಮತ್ತು ಟಾರ್ಚ್ ನ ಬೆಳಕಿನಲ್ಲಿ ನೆಲಕ್ಕೆ ಕವರ್ ಹಾಕಿ ವೃತ್ತಾಕಾರದಲ್ಲಿ ಸುತ್ತುವರಿದು ಕುಳಿತುಕೊಂಡು ಇಸ್ಪೀಟು ಎಲೆಯನ್ನು ಬಳಸುತ್ತಾ ಹಣವನ್ನು ಪಣವಾಗಿಟ್ಟು ಕೊಂಡು ಜುಗಾರಿ ಆಟವನ್ನು ಆಡುತ್ತಿದ್ದ 7 ಮಂದಿ ಆರೋಪಿತರುಗಳನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 93/2022 ಕಲಂ: 87 ಕೆ.ಪಿ ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: 01
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಾಗೇಶ, ಪ್ರಾಯ: 35 ವರ್ಷ,ತಂದೆ: ದಿ/ ಕರಿಯ, ವಾಸ: 1-39 A ,ಕೆರೆಮಜಲು ಮನೆ ಅಜ್ಜಿಬೆಟ್ಟುಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ ತಮ್ಮ ಲೋಕೇಶ್ ಎಂಬವರು ಅವಿವಾಹಿತರಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಪಿರ್ಯಾದಿದಾರರ ತಮ್ಮ ಲೋಕೇಶ್ ರವರು ಇತ್ತೀಚೆಗೆ ಸರಿಯಾಗಿ ಕೆಲಸಕ್ಕೂ ಹೋಗದೇ ವಿಪರೀತ ಮದ್ಯ ಸೇವನೆಯನ್ನು ಮಾಡುವ ಚಟವನ್ನು ಬೆಳೆಸಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದವರು ದಿನಾಂಕ: 09.11.2022 ರಂದು ಪರಿಚಯದ ರಾಜು ಎಂಬವರೊಂದಿಗೆ ಮಾತನಾಡುತ್ತಿರುವ ಸಮಯ ಪಿರ್ಯಾದಿದಾರರ ತಮ್ಮ ಲೊಕೇಶ್ ರವರು ಏಕಾಏಕಿ ಮನೆಯೊಳಗಿನಿಂದ ಓಡಿಕೊಂಡು ಹೋಗಿ ಮನೆಯ ಅಂಗಳದಲ್ಲಿ ಇರುವ ಬಾವಿಯ ನೀರಿನೊಳಗೆ ಹಾರಿದ್ದು ಕೂಡಲೇ ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯವರನ್ನು ಸ್ಥಳಕ್ಕೆ ಬರಮಾಡಿಕೊಂಡು ಬಾವಿಯಿಂದ ಮೇಲಕ್ಕೆ ಎತ್ತಿ ನೋಡಿದಾಗ ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 22/2022 ಕಲಂ: 174 ಸಿಆರ್‌ಪಿಸಿ ಪ್ರಕರಣ ದಾಖಲಾಗಿರುತ್ತದೆ.