ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 02

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಂಬೋಡಿ (53), ತಂದೆ: ಕೈಮಲ ಮುಗೇರ, ವಾಸ:ಪೆಲತಿಂಜ ಮನೆ, ಕೌಕ್ರಾಡಿ ಗ್ರಾಮ, ಕೊಕ್ಕಡ ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:09-12-2022 ರಂದು ಪಿರ್ಯಾದಿದಾರರು ಬೆಳ್ತಂಗಡಿ ತಾಲೂಕು, ಕೊಕ್ಕಡ ಗ್ರಾಮದ, ಕೊಕ್ಕಡ ವಿಜೇತ್ ಹೋಟೆಲ್ ರಸ್ತೆ ಬದಿಯಲ್ಲಿ  ನಿಂತುಕೊಂಡಿರುವ ಸಮಯ ಸುಮಾರು ಸಂಜೆ18.00 ಗಂಟೆಗೆ ಕೊಕ್ಕಡ ಕಡೆಯಿಂದ ಅರಸಿನಮಕ್ಕಿ ಕಡೆಗೆ ಕೆಎ 21 ಎಕ್ಸ್ 5185 ನೇ ದ್ವಿಚಕ್ರ ವಾಹನವನ್ನು ಅದರ ಸವಾರಳು ಸಹಸವಾರನನ್ನಾಗಿ ಒಂದು ಮಗುವನ್ನು ಕುಳ್ಳಿರಿಸಿಕೊಂಡು ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ದ್ವಿಚಕ್ರ ಸವಾರಳಾದ ಗುಣಶೀಲ ಹಾಗೂ ಅವರ ಮಗ ದುಷ್ಯಂತ್ ರವರು ದ್ವಿಚಕ್ರ ಸಮೇತ ರಸ್ತೆಗೆ ಬಿದ್ದು ಮೂವರಿಗೆ ರಕ್ತ ಗಾಯವಾಗಿದ್ದು, ಪಿರ್ಯಾದಿದಾರರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ  ಹಾಗೂ ಗುಣಶೀಲ ಮತ್ತು ದುಷ್ಯಂತ್ ರವರು ಉಜಿರೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 159/2022 ಕಲಂ; 279 337,  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಕಾಂತ್ ಕೆ ಬಿ ಪ್ರಾಯ  31 ವರ್ಷ,ತಂದೆ: ಕೆ ಬೆಳ್ಯಪ್ಪ ಗೌಡ ವಾಸ: ಕುಜುಂಬಾರು  ಮನೆ, ಐನೆಕಿದು  ಗ್ರಾಮ, ಕಡಬ  ತಾಲೂಕು ಎಂಬವರ ದೂರಿನಂತೆ ದಿನಾಂಕ 09.12.2022 ರಂದು ಬೆಳಿಗ್ಗೆ ಪಿರ್ಯಾದಿದಾರರ ಸ್ನೇಹಿತ ಪುನೀತ್ ಎ  ಎಂಬಾತನ ಬಾಬ್ತು ಪಲ್ಸರ್ ಮೋಟಾರ್ ಸೈಕಲ್ ಕೆಎ 21 ಇಬಿ 1977 ನೇದರಲ್ಲಿ  ಇನ್ನೊಬ್ಬ ಸ್ನೇಹಿತ ಮೋಹನ್ ಎಂಬವರನ್ನು ಸಹಸವರನಾಗಿ ಕುಳ್ಳಿರಿಸಿಕೊಂಡು  ಸಮಯ ಸುಮಾರು 9:30 ಗಂಟೆಗೆ ಕಡಬ ತಾಲೂಕು ಕಾಣಿಯೂರು ಗ್ರಾಮದ ಪುಣ್ಚತ್ತಾರು ಎಂಬಲ್ಲಿಗೆ ತಲುಪಿದಾಗ ರಸ್ತೆಯ ಎಡಭಾಗದಲ್ಲಿ ದೋಳ್ಪಾಡಿ ರಸ್ತೆಯಿಂದ ಸ್ಕೂಟರೊಂದನ್ನು ಅದರ ಸವಾರರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು  ಏಕಾಏಕಿ ಮುಖ್ಯ ರಸ್ತೆಗೆ  ನೇರವಾಗಿ ಸವಾರಿ ಮಾಡಿಕೊಂಡು ಬಂದು  ಮೋಟಾರ್ ಸೈಕಲಿನ ಎದುರು ಭಾಗಕ್ಕೆ ಡಿಕ್ಕಿ ಉಂಟು ಮಾಡಿ ಸ್ಕೂಟರ್ ಸಮೇತ ಮಗುಚಿ ಬಿದ್ದರು. ಪಿರ್ಯಾದಿದಾರರು ಹಾಗೂ ಅಲ್ಲಿ ಸೇರಿದವರು ಬಂದು ಸ್ಕೂಟರ್ ಸವಾರರನ್ನು ಎಬ್ಬಿಸಿ ಉಪಚರಿಸಿ ಅವರನ್ನು ಚಿಕಿತ್ಸೆ ಬಗ್ಗೆ ಪುತ್ತೂರಿಗೆ ಕರೆದುಕೊಂಡು ಹೋಗಿರುತ್ತಾರೆ. ಪಿರ್ಯಾದಿದಾರರಿಗೂ ಸದ್ರಿ ಅಪಘಾತದಿಂದ ಸಣ್ಣ ಪುಟ್ಟ ಗಾಯಗಳಾಗಿದ್ದು, ಸದ್ರಿ ಗಾಯದ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಪಿರ್ಯಾದಿದಾರರು  ಸವಾರಿಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲಿಗೆ ಅಪಘಾತವುಂಟು ಮಾಡಿದ ಹೋಂಡಾ ಆಕ್ಟೀವಾ ಸ್ಕೂಟರ್ ನ ನಂಬ್ರ ನೋಡಲಾಗಿ ಕೆಎ 21 ಇಬಿ 1382 ಆಗಿದ್ದು, ಅದರ ಸವಾರರ ಹೆಸರು ತಿಳಿಯಲಾಗಿ ಕಾಣಿಯೂರಿನ ರವಿ  ಎಂಬುದಾಗಿದ್ದು,  ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅ.ಕ್ರ;  99/2022 ಕಲಂ 279,337 ಐಪಿಸಿ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 02

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗೀತಾ ಬಿ.ಎಸ್. ಮುಂಡೂರು ಗ್ರಾಮ ಪಂಚಾಯತ್ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ರವರ ದೂರಿನಂತೆ ಪುತ್ತೂರು ತಾಲೂಕು ಸರ್ವೆ ಗ್ರಾಮದ ಕಾಡಬಾಗಿಲು- ಬಾವಾ –ಅಲೇಕಿ ಪಂಚಾಯತ್ ರಸ್ತೆ ವಿವಾದವು ಪ್ರಕರಣ ಸಂಖ್ಯೆ LNDCR:530/2019-20ರಂತೆ ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿತ್ತು. ಈ ಬಗ್ಗೆ ಸಹಾಯಕ ಆಯುಕ್ತರು ದಿನಾಂಕ:- 04.11.2022ರಂದು ಅಂತಿಮ ಆದೇಶ ಮಾಡಿದ್ದು, ಅದರಂತೆ ದಿನಾಂಕ:- 09.12.2022ರಂದು ಪೂರ್ವಾಹ್ನ ಗಂಟೆ 10.00ಕ್ಕೆ ಸದ್ರಿ 10 ಅಡಿ ರಸ್ತೆಯನ್ನು ಪಂಚಾಯತ್ ಸ್ವಾಧೀನಕ್ಕೆ ಪಡಕೊಂಡು ಜೆ.ಸಿ.ಬಿ. ಸಹಾಯದಿಂದ ದುರಸ್ತಿಪಡಿಸುವ ಸಂದರ್ಭದಲ್ಲಿ ಆರೋಪಿಗಳಾದ ಬಾಬು, ಗುರುವ, ಗೀತಾ, ಸೀತಾ, ಮೋಹನ, ಯತೀಶ, ಬೇಬಿ, ದೇವಪ್ಪರವರು ಜೆ.ಸಿ.ಬಿ.ಗೆ ಅಡ್ಡ ನಿಂತು ರಸ್ತೆ ದುರಸ್ತಿ ಮಾಡದಂತೆ ತಡೆ ಒಡ್ಡಿದ್ದಲ್ಲದೇ , ಅವರ ಪೈಕಿ ಆರೋಪಿ ಗೀತಾರವರು ಕಲ್ಲಿನಿಂದ ಹಲ್ಲೆ ನಡೆಸಲು ಯತ್ನಿಸಿ ಸರಕಾರಿ ಅಧಿಕಾರಿಯಾದ ಫಿರ್ಯಾದುದಾರರ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ನವೀನ್ ಕುಮಾರ್ ಭಂಡಾರಿಯವರ  ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ  ಅ.ಕ್ರ; 109-2022 ಕಲಂ: 143,147, 353,149  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಬ್ದುಲ್ ನೂರನ್ (30) ತಂದದೆ: ಪಿ ಮಹಮ್ಮದ್ ಕುಂಞ ವಾಸ: ಕಾಮಜಾಲು ಮನೆ ಮಾಣಿಲ ಗ್ರಾಮ ಬಂಟ್ವಾಲ ತಾಲೂಕು  ಎಂಬವರ ದೂರಿನಂತೆ ದಿನಾಂಕ 05-12-2022 ರಂದು ಬೆಳಿಗ್ಗೆ ವಿಟ್ಲದ ರಿಜಿಸ್ಟ್ರಾರ್‌ ಆಫಿಗೆ ಹೋಗಿದ್ದು ಸಮಯ ಸುಮಾರು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರ ಚಿಕ್ಕಪ್ಪ ಅಬ್ದುಲ್‌ ರಹ್ಮಾನ್‌ ಮತ್ತು ಅವರ ಮಗ ಮನ್ಸೂರ್‌ರವರು ಕತ್ತಿ, ಕೋಲು ಮುಂತಾದ ಮಾರಕಾಯುಧಗಳೊಂದಿಗೆ ಫಿರ್ಯಾದಿದಾರರ ತಂದೆಯವರ ಜಮೀನಿಗೆ ಅಕ್ರಮವಾಗಿ ನುಗ್ಗಿ ಅಡಿಕೆ ಮತ್ತು ಕರಿ ಮೆಣಸು ಕದ್ದಿದ್ದು, ಇದನ್ನು ಫಿರ್ಯಾದಿದಾರರು ವಿರೋಧಿಸಿದಾಗ ಅಬ್ದುಲ್‌ ರಹ್ಮಾನ್‌ ಮತ್ತು ಅವರ ಮಗ ಮನ್ಸೂರ್‌ರವರು ಕೊಲ್ಲುತ್ತೇನೆಂದು ಫಿರ್ಯಾದಿದಾರರಿಗೆ ಜೀವ ಬೆದರಿಕೆ ಒಡ್ಡಿ ಅವಾಚ್ಯವಾಗಿ ಬೈದು ಹಲ್ಲೆಗೆ ಪ್ರಯತ್ನಿಸಿದಲ್ಲದೇ, ಒಂದು ಗೋಣಿ ಚೀಲದಷ್ಟು ಅಡಿಕೆ ಮತ್ತು ಕಾಳುಮೆಣಸನ್ನು ಹೊತ್ತುಕೊಂಡು ಕೆಎ-21-ಪಿ-8783ನೇ ಕಾರಿನಲ್ಲಿ ಹೋಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆ ಅ.ಕ್ರ : 194/2022 ಕಲಂ: 447,504,506,379 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 01

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಧನ್ಯ ಶ್ರೀ (20) ತಂದೆ: ನಾರಾಯಣ ನಾಯ್ಕ ವಾಸ: ಮಂಡ್ಯೂರು ಮನೆ ಕನ್ಯಾನ ಗ್ರಾಮ ಬಂಟ್ವಾಳ ತಾಲುಕು ಎಂಬವರ ದೂರಿನಂತೆ ಪಿರ್ಯಾಧಿದಾರರ ತಾಯಿ ನಳಿನಿ ಪ್ರಾಯ (52) ಎಂಬವರು ದಿನಾಂಕ: 09.11.2022 ರಂದು ರಾತ್ರಿ 09.00 ಗಂಟೆಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಮಯ ಒಮ್ಮಲೇ ಕುಸಿದು ಬಿದ್ದಾಗ ಪಿರ್ಯಾದಿದಾರು ಮತ್ತು ಪಿರ್ಯಾದಿದಾರ ತಂದೆ ಉಪಚರಿಸಿದಾಗ ಅವರು ಉಸಿರಾಡುತ್ತಿದ್ದು ಬಾಯಿಯಲ್ಲಿ ಜೊಲ್ಲುರಸ ಬರುತ್ತಿದ್ದು ಬಳಿಕ ಸ್ವಲ್ಪ ಹೊತ್ತಿನವರೆಗೆ ಉಪಚರಿಸಿ ನಂತರ ಚಿಕಿತ್ಸೆ ಬಗ್ಗೆ ಕಾರೊಂದರಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದ ಸಮಯ ರಾತ್ರಿ ಸುಮಾರು 12.00 ಗಂಟೆಗೆ ವೈಧ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 49/2022  ಕಲಂ 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-12-2022 12:20 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080