ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦3

ಕಡಬ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಅಬ್ದುಲ್‌ ಸತ್ತಾರ್ ಪಿ ಪ್ರಾಯ:50 ವರ್ಷ ತಂದೆ:ದಿಂ|| ಇಬ್ರಾಹಿಂ  ವಾಸ: ಪಿಲಿಕುಡೇಲು ಕೆಸಿ ಫಾರ್ಮ್‌ ಮನೆ,ಕೊಯಿಲಾ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ:10.01.2023 ರಂದು ತನ್ನ ಬಾಬ್ತು KA-21 B-9479 ನೇ ಆಟೋರಿಕ್ಷಾದಲ್ಲಿ ಬಾಡಿಗೆಗಾಗಿ ಆತೂರು ಜಂಕ್ಷನ್‌ ನಿಂದ ರಾಮಕುಂಜ ಗ್ರಾಮದ ಕೂಸಪ್ಪ ಎಂಬವರನ್ನು ಆಟೋರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ರಾಮಕುಂಜ ಗ್ರಾಮದ ಅಂಬೇಡ್ಕರ್‌ ನಗರದ ಕಾಂಕ್ರೀಟ್‌ ರಸ್ತೆಯಲ್ಲಿ ಹೋಗುತ್ತಿರುವಾಗ ಪಿರ್ಯಾದುದಾರರ ಎದುರಿನಿಂದ KA-21-EA-1315 ನೇ ಮೊಟಾರ್ ಸೈಕಲ್‌ ನ್ನು ಆರೋಪಿತನು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ತನದಿಂದ ಮೋಟಾರ್‌ ಸೈಕಲ್‌ ನ್ನು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸಿಕೊಂಡು ಹೋಗುತ್ತಿದ್ದ KA-21 B-9479 ನೇ ಆಟೋರಿಕ್ಷಾಕ್ಕೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಪಿರ್ಯಾದಿದಾರರು ಮತ್ತು ಪ್ರಯಾಣಿಕರಾದ ಕೂಸಪ್ಪ ಎಂಬವರು ಆಟೋರಿಕ್ಷಾ ಸಮೇತ ರಸ್ತೆಯ ಎಡ ಬದಿಯ ಕಣಿಗೆ ಬಿದ್ದವರನ್ನು ಕೂಡಲೇ ಅಪಘಾತವನ್ನುಂಟು ಮಾಡಿದ ಮೋಟಾರ್‌ ಸೈಕಲ್‌ ಸವಾರನಾದ ವಿಜಯ್‌ ಎಂಬವರು ಹಾಗೂ ಸ್ಥಳದಲ್ಲಿದ್ದ ಸಾರ್ವಜನಿಕರು ಉಪಚರಿಸಿ ನೋಡಲಾಗಿ ಪಿರ್ಯಾದುದಾರರಾದ ಅಬ್ದುಲ್ ಸತ್ತಾರ್ ಪಿ ರವರಿಗೆ ಎಡಕಾಲಿಗೆ ರಕ್ತವಾಗಿದ್ದು ಪ್ರಯಾಣಿಕರಾದ ಕೂಸಪ್ಪ ರವರಿಗೆ ತರಚಿದ ಗಾಯಗಳಾಗಿರುತ್ತದೆ  ನಂತರ ಅಪಘಾತವನ್ನುಂಟು ಮಾಡಿದ ಮೋಟಾರ್‌ ಸೈಕಲ್‌ ಚಾಲಕನು ಒಂದು ಖಾಸಗಿ ಕಾರು ವಾಹನದಲ್ಲಿ ಗಾಯಾಳುಗಳನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ನಂತರ ಪಿರ್ಯಾದಿದಾರರ ಸಂಬಂಧಿಯಾದ‌ ಅಜೀಜ್ ಎಂಬವರು ಆಸ್ಪತ್ರೆಗೆ ಬಂದು ಪಿರ್ಯಾದದಾರರನ್ನು ಹಾಗೂ ಕೂಸಪ್ಪ ರವರನ್ನು ಓಳರೋಗಿಯಾಗಿ ದಾಖಲಿಸಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ :02/2023 ಕಲಂ:279,337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ರಾಜೇಶ್ ಗೋರಡ್ಕ ಪ್ರಾಯ 49 ವರ್ಷ ತಂದೆ: ಈತ್ತಪ್ಪ ಪೂಜಾರಿ ವಾಸ: ಗೋರಡ್ಕ ಮನೆ, ಅಜ್ಜಾವರ ಮನೆ ಸುಳ್ಯ ತಾಲೂಕು  ಎಂಬವರ ದೂರಿನಂತೆ ದಿನಾಂಕ 09.01.2023 ರಂದು ತನ್ನ ಬಾಬ್ತು ಅಟೋರಿಕ್ಷಾದಲ್ಲಿ ಮಾವಿನ ಪಲ್ಲ ಎಂಬಲ್ಲಿಗೆ ಬಾಡಿಗೆ ಬಗ್ಗೆ ಹೋಗುತ್ತಿರುವ ಸಮಯ ಸುಮಾರು 20.30 ಗಂಟೆಗೆ ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮಾವಿನಪಲ್ಲ ಎಂಬಲ್ಲಿ ರಾಮಣ್ಣ ನಾಯ್ಕ್ ಎಂಬವರ ಮನೆ ಎದುರು ತಲುಪಿದಾಗ ಒಂದು ಮೋಟಾರ್ ಸೈಕಲನ್ನು ಅದರ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಬದಿಯಲ್ಲಿ  ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಢಿಕ್ಕಿ ಹೊಡೆದು ಮೋಟಾರ್ ಸೈಕಲನ್ನು ನಿಲ್ಲಿಸದೇ ಅಡ್ಕಾರು ಕಡೆಗೆ ಚಲಾಯಿಸಿಕೊಂಡು ಹೋಗಿದ್ದು, ಪಿರ್ಯಾದಿದಾರರು ಕೂಡಲೇ ಅಟೋರಿಕ್ಷಾವನ್ನು ನಿಲ್ಲಿಸಿ ರಸ್ತೆಗೆ ಬಿದ್ದಿದ್ದ ಪಾದಚಾರಿಯನ್ನು ನೋಡಲಾಗಿ ಪಿರ್ಯಾದಿದಾರರ ಪರಿಚಯದ ಪ್ರಭಾಕರರವರು ಎಂಬವರು ಆಗಿದ್ದು, ಉಪಚರಿಸಿ ನೋಡಲಾಗಿ ಅವರ ಬಲ ಕಣ್ಣಿನ ಹುಬ್ಬು, ಬಲಕಾಲಿನ ಮಂಡಿಯ ಬಳಿ ತರಚಿದ ಮತ್ತು ಗುದ್ದಿದ ಗಾಯವಾಗಿದ್ದು, ಕೂಡಲೇ ಪ್ರಭಾಕರರವರ ಮನೆಯವರಿಗೆ ವಿಚಾರ ತಿಳಿಸಿ ಅಲ್ಲಿ ಸೇರಿದ ಇತರರ ಸಹಾಯದಿಂದ ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದು, ದಿನಾಂಕ 10.01.2023 ರಂದು ಪ್ರಭಾಕರ ರವರು ನೋವು ಉಲ್ಬಣಗೊಂಡಿದ್ದರಿಂದ ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಬಂದಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ. ನಂತರ ಪ್ರಭಾಕರರವರ ಮನೆಯವರು ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಯೆನಪೋಯ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಅಪಘಾತ ಪಡಿಸಿದ ಮೋಟಾರ್ ಸೈಕಲಿನ ನಂಬ್ರ ತಿಳಿಯದೇ ಇದ್ದು, ಮೋಟಾರ್ ಸೈಕಲನ್ನು ಅದರ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಡಿಕ್ಕಿ ಉಂಟು ಮಾಡಿ ಮೋಟಾರ್ ಸೈಕಲನ್ನು ನಿಲ್ಲಿಸದೇ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 05/2023 279, 337 ಐಪಿಸಿ ಮತ್ತು ಕಲಂ 134(ಎ) &(ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಡಾ| ರಮೇಶ್‌ ಕುಮಾರ್‌ ಬೆಳಿರಾಯ(62) ತಂದೆ: ಕೆ.ವಿ ಬೆಳಿರಾಯ.. ವಾಸ: ನೀಲತೇಜ       ಮನೆ, ಪಾತೂರು ಗ್ರಾಮ ,ಮಂಜೇಶ್ವರ ತಾಲೂಕು,ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ  ಎಂಬವರ ದೂರಿನಂತೆ ದಿನಾಂಕ:10-01-2023 ರಂದು ಕುದ್ದುಪದವಿನಲ್ಲಿರುವ ತಮ್ಮ  ಕ್ಲೀನಿಕನ್ನು ಬಂದು ಮಾಡಿ ಮನೆಗೆ ಹೋಗುವರೇ ತನ್ನ ಬಾಬ್ತು ಮೋಟಾರು ಸೈಕಲ್‌ ಕೆಎ-19-ಹೆಚ್.ಬಿ-3597 ನೇದನ್ನು ಸವಾರಿ ಮಾಡುತ್ತಾ ಕುದ್ದುಪದವಿನಿಂದ ವಿಟ್ಲ ಕಡೆಗೆ ರಸ್ತೆಯ ತೀರಾ ಎಡ ಬದಿಯಲ್ಲಿ ನಿಧಾನವಾಗಿ ಸವಾರಿ ಮಾಡಿಕೊಂಡು ಬರುತ್ತಾ, ರಾತ್ರಿ ಸುಮಾರು 8:00 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಉಕ್ಕುಡ ಎಂಬಲ್ಲಿಗೆ ತಲುಪಿದಾಗ ಪಿರ್ಯಾಧಿ ಎದುರಿನಿಂದ ಅಂದರೆ ವಿಟ್ಲ ಕಡೆಯಿಂದ ಕೆಎಲ್-14ಎ.ಬಿ-7931ನೇ ನಂಬ್ರದ ಮೋಟಾರು ಸೈಕಲ್ ನ್ನು ಅದರ ಸವಾರನು ಹಿಂಬದಿಯಲ್ಲಿ ಸಹ ಸವಾರನನ್ನು ಕುಳ್ಳಿರಿಸಿಕೊಂಡು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ತಪ್ಪು ಬದಿಗೆ ಸವಾರಿ ಮಾಡಿಕೊಂಡು ಬಂದು ಪಿರ್ಯಾಧಿದಾರರ ಮೋಟಾರು ಸೈಕಲ್‌ಗೆ ಅಪಘಾತಪಡಿಸಿದ ಪರಿಣಾಮ ಪಿರ್ಯಾಧಿಯ ಮೋಟಾರ್‌ ಸೈಕಲ್‌ ಹಾಗೂ ಅಪಘಾತಪಡಿಸಿದ ಮೋಟಾರು ಸೈಕಲು ರಸ್ತೆಗೆ ಬಿದ್ದು ಅಪಾಘಾತವಾಗಿರುವುದಾಗಿದೆ.  ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 007/2023  ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: ೦1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸದಾನಂದ ಬಿರಾದಾರ ಪ್ರಾಯ 44 ವರ್ಷ ತಂದೆ:ದಿ|| ಸಂಗಪ್ಪ ವಾಸ:ಕೊರವಾರ  ಗ್ರಾಮ ಮತ್ತು ಅಂಚೆ ಸಿಂದಗಿ ತಾಲೂಕು ವಿಜಯಪುರ ಜಿಲ್ಲೆ ಎಂಬವರ ದೂರಿನಂತೆ ಸದಾನಂದ ಬಿರಾದಾರ ರವರು ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿರುವ ಸರಕಾರಿ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದ್ರಿ ಶಾಲೆಯ ಗಣಕ ಯಂತ್ರ ಕೊಠಡಿಯು ಶಾಲಾ ಕಟ್ಟಡದ ಕೊನೆಯ ಭಾಗದಲ್ಲಿದ್ದು, ಕೊಠಡಿಯ ಬಾಗಿಲನ್ನು   ವಿದ್ಯಾಥಿಗಳ ಗಣಕ ಯಂತ್ರ ತರಗತಿಯ ಸಮಯದಲ್ಲಿ ಮಾತ್ರ ತೆರೆಯುತ್ತಿರುವುದಾಗಿದೆ. ಅದರಂತೆ ದಿನಾಂಕ:19.12.2022 ರಂದು ಕೊನೆಯ ತರಗತಿ ಇದ್ದು, ಸಂಜೆ 4.00 ಗಂಟೆಯ ವೇಳೆಗೆ ತರಗತಿ ಮುಗಿಸಿ ಕೊಠಡಿಗೆ ಬೀಗ ಹಾಕಿ ಭದ್ರಪಡಿಸಿ ಹೋಗಿದ್ದು, ಬಳಿಕ ದಿನಾಂಕ:11.01.2023ರಂದು ಮದ್ಯಾಹ್ನ 12.00 ಗಂಟೆಗೆ ವಿದ್ಯಾರ್ಥಿಗಳಿಗೆ ಗಣಕಯಂತ್ರ ತರಗತಿ ನಡೆಸಲೆಂದು ಸದ್ರಿ ಕೊಠಡಿಯ ಬಳಿ ಹೋಗಿ ನೋಡಲಾಗಿ ಕೊಠಡಿಯ ಶಟರ್‌ ಬಾಗಿಲಿಗೆ ಹಾಕಿದ್ದ ಬೀಗದ ಕೊಂಡಿಯನ್ನು ತುಂಡರಿಸಿ ಬಾಗಿಲಿಗೆ ಸಿಕ್ಕಿಸಿರುವುದು ಕಂಡು ಬೆಳ್ತಂಗಡಿಗೆ ಕರ್ತವ್ಯದ ನಿಮಿತ್ತ ಹೋಗಿದ್ದ ಶಾಲಾ ಮುಖ್ಯೋಪಾಧ್ಯಯರಿಗೆ ದೂರವಾಣಿ ಮುಖೇನ ಮಾಹಿತಿ ತಿಳಿಸಿ. ಉಳಿದ ಶಿಕ್ಷಕರೊಂದಿಗೆ ಕೊಠಡಿಯ ಬಾಗಿಲು ತೆರೆದು ಒಳಗೆ ಪ್ರವೇಶಿಸಿ ನೋಡಿದಾಗ ಗಣಕಯಂತ್ರಗಳಿಂದ ಕಳಚಿ ಪ್ರತ್ಯೇಕವಾಗಿ ತೆಗೆದಿರಿಸಿದ್ದ 16 ಬ್ಯಾಟರಿಗಳು ಕಳವಾಗಿರುವುದು ಕಂಡು ಬಂದಿದ್ದು,  ಸದರಿ ಕೊಠಡಿಯಲ್ಲಿರುವ ಉಳಿದ ಎಲ್ಲಾ ಸೊತ್ತುಗಳು ಯಥಾಸ್ಥಿತಿಯಲ್ಲಿರುವುದಾಗಿದೆ.  ಕಳವಾದ 16 ಬ್ಯಾಟರಿಗಳ ಅಂದಾಜು ಮೌಲ್ಯ 20,000/- ರೂ ಆಗಬಹುದು. ಸದ್ರಿ ಬ್ಯಾಟರಿಗಳನ್ನು ದಿನಾಂಕ:19.12.2022 ರಂದು ಸಂಜೆ 4.00 ಗಂಟೆಯಿಂದ ದಿನಾಂಕ: 11.01.2023 ರಂದು ಮದ್ಯಾಹ್ನ 12.00 ಗಂಟೆಯ ಮದ್ಯೆದ ಅವಧಿಯಲ್ಲಿ ಯಾರೋ ಕಳ್ಳರು ಗಣಕಯಂತ್ರ ಕೊಠಡಿಯ ಬಾಗಿಲಿನ ಬೀಗದ ಕೊಂಡಿಯನ್ನು ತುಂಡರಿಸಿ ಬಾಗಿಲು ತೆರೆದು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ    ಅ.ಕ್ರ 03/2023 ಕಲಂ: 454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-01-2023 12:39 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080