ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚಿತ್ತರಂಜನ್ ಪ್ರಾಯ: 31 ವರ್ಷ ತಂದೆ: ನೋಣಯ್ಯ ಪೂಜಾರಿ, ವಾಸ: ಮೊಡಂಕಾಪು ಕಾಮರೆಕೋಡಿ ಮನೆ, ಬಿ ಮೂಡ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ: 10.02.2021 ರಂದು ಬಾಡಿಗೆ ನಿಮಿತ್ತ ಆಟೋ ರಿಕ್ಷಾದಲ್ಲಿ ಬಿ.ಸಿ.ರೋಡಿಗೆ ಹೋಗಿ ವಾಪಾಸು ಮನೆ ಕಡೆಗೆ ಬರುತ್ತಾ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಕೈಕಂಬ ಎಂಬಲ್ಲಿಗೆ ತಲುಪುತ್ತಿದ್ದಂತೆ ತನ್ನ ಮುಂದಿನಿಂದ ಒಂದು  ಲಾರಿಯನ್ನು ಅದರ ಚಾಲಕ ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆ ಬದಿಯಲ್ಲಿದ್ದ ಶೀಟಿನಿಂದ ನಿರ್ಮಿಸಿದ ರಿಕ್ಷಾ ಪಾರ್ಕ್ ಛಾವಣೆಗೆ ಡಿಕ್ಕಿ ಹೊಡೆದು  ಅಪಘಾತಪಡಿಸಿದ್ದು, ಅಪಘಾತದ ಪರಿಣಾಮ ರಿಕ್ಷಾ ಪಾರ್ಕ್ ಛಾವಣೆ ಜಖಂ ಆಗಿರುತ್ತದೆ.  ಅಪಘಾತದ ಬಳಿಕ ಲಾರಿ ಚಾಲಕನು ವಾಹನ ಸಮೇತ ಪೊಳಲಿ ಕಡೆಗೆ ಪರಾರಿಯಾಗಿಯಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 18/2021 ಕಲಂ 279 ಐಪಿಸಿ  ಮತ್ತು ಕಲಂ 134(ಎ)(ಬಿ) ಮೋ.ವಾ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಘುನಾಥ ಬಿ.ಎಸ್‌, ಪ್ರಾಯ 46 ವರ್ಷ, ತಂದೆ: ದಿ. ನಾರಾಯಣ ಶೆಟ್ಟಿ, ವಾಸ: ಶೆಟ್ಟಿಮಜಲು ಮನೆ, ನರಿಮೊಗರು ಗ್ರಾಮ & ಅಂಚೆ, ಪುತ್ತೂರು ತಾಲೂಕು ರವರು ನೀಡಿದ ದೂರೇನೆಂದರೆ ದಿನಾಂಕ 10-02-2021 ರಂದು ಹೆಸರು ತಿಳಿದುಬಾರದ ಆರೋಪಿಯು ನೋಂದಣಿ ನಂಬ್ರ ತಿಳಿದುಬಾರದ ಮೋಟಾರ್‌ ಸೈಕಲನ್ನು ಪುತ್ತೂರು-ಸವನೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುರುಷರಕಟ್ಟೆ ಕಡೆಯಿಂದ ದರ್ಬೆ ಕಡೆಗೆ ಚಲಾಯಿಕೊಂಡು ಹೋಗಿ ಪುತ್ತೂರು ತಾಲೂಕು ನರಿಮೊಗರು ಗ್ರಾಮದ, ಮುಕ್ವೆ ಮಸೀದಿ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ. ಪಿರ್ಯಾದುದಾರರು ಪುತ್ತೂರು ಕಡೆಯಿಂದ ನರಿಮೊಗರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-U-0018ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಡಿಕ್ಕಿ ಹೊಡೆದು, ಪಿರ್ಯಾದುದಾರರು ಮೋಟಾರ್‌ ಸೈಕಲ್‌ ಸಮೇತ್‌ ರಸ್ತೆಗೆ ಬಿದ್ದು, ಬಲಕಾಲಿನ ಪಾದಕ್ಕೆ ಗುದ್ದಿದ ಗಾಯವಾಗಿ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  31/2021 ಕಲಂ: 279, 337 ಐಪಿಸಿ & 134(A&B) IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಾರಾಯಣ ನಾಯ್ಕ್ ಪ್ರಾಯ 42 ವರ್ಷ ತಂದೆ: ಶೇಷಪ್ಪ ನಾಯ್ಕ್ ವಾಸ: ಕೋನಡ್ಕ ಮನೆ ನಿಡ್ಪಳ್ಳಿ ಗ್ರಾಮ ಪುತ್ತೂರು ತಾಲೂಕು ರವರು ದಿನಾಂಕ:- 10.02.2021 ರಂದು ಕೆಲಸಕ್ಕೆ ಹೋಗುವ ವೇಳೆ ತಂದೆಯಾದ ಶೇಷಪ್ಪ ನಾಯ್ಕರು ಮನೆಯಲ್ಲಿ ಇದ್ದು,  ಫಿರ್ಯಾದುದಾರರು ಸಂಜೆ ಕೆಲಸ ಮುಗಿಸಿ ತನ್ನ  ಮನೆಗೆ ಬಂದಾಗ ತಂದೆ ಶೇಷಪ್ಪ ನಾಯ್ಕರು ಮನೆಯಲ್ಲಿ ಇಲ್ಲದೇ ಇದ್ದು, ದಿನಾಂಕ:- 11.02.2021ರಂದು ಬೆಳಿಗ್ಗೆ ಸುಮಾರು 8.00 ಗಂಟೆಯವರೆಗೂ ಮನೆಗೆ ಬಾರದೇ ಇದ್ದುದರಿಂದ ಫಿರ್ಯಾದುದಾರರು ಶೇಷಪ್ಪ ನಾಯ್ಕರನ್ನು ಹುಡುಕಿಕೊಂಡು ಬೆಟ್ಟಂಪಾಡಿ ಗ್ರಾಮದ ರೆಂಜಕ್ಕೆ ಬಂದಾಗ  ಕೋನಡ್ಕದ ದುರ್ಗಾಪ್ರಸಾದ್‌ ಎಂಬವರು ಕಾಣ ಸಿಕ್ಕಿ ಶೇಷಪ್ಪ ನಾಯ್ಕರು ಬೆಟ್ಟಂಪಾಡಿಯ  ಹಾಲಿನ ಡೈರಿಯ ಬಳಿ ಇರುವ ರಾಧಾಕೃಷ್ಣ ರೈಯವರ ಜಾಗಕ್ಕೆ ಹೋಗುವ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿರುವುದಾಗಿ ತಿಳಿಸಿದಂತೆ, ಫಿರ್ಯಾದುದಾರರು  ಬೆಟ್ಟಂಪಾಡಿ ಗ್ರಾಮದ  ಬೆಟ್ಟಂಪಾಡಿ ಹಾಲಿನ ಡೈರಿಯ ಬಳಿ ಇರುವ ರಾಧಾಕೃಷ್ಣ ರೈಯವರ ಬಾಬ್ತು ಸಮತಟ್ಟುಗೊಳಿಸಿದ ಜಾಗಕ್ಕೆ ಹೋಗುವ ಮಣ್ಣು ರಸ್ತೆಯಲ್ಲಿ  ಹೋಗುತ್ತಿರುವಾಗ  ರಾಧಾಕೃಷ್ಣ ರೈಯವರ ಬಾಬ್ತು ಜಾಗದ ಖಾಸಗೀ ಮಣ್ಣು ರಸ್ತೆಯಲ್ಲಿ  ಶೇಷಪ್ಪ ನಾಯ್ಕರು ನೆಲದ ಮೇಲೆ ಬಿದ್ದುಕೊಂಡಿದ್ದು, ಸದ್ರಿಯವರ ದೇಹದಲ್ಲಿ ಯಾವುದೇ ಚಲನವಲನ ಕಂಡು ಬಾರದೇ ಇದ್ದು, ಸದ್ರಿಯವರ ಎಡ ಕೋಲು ಕಾಲು ಮುರಿತಕ್ಕೊಳಗಾಗಿದ್ದು,  ಸೊಂಟದ ಹಿಂಭಾಗದಲ್ಲಿ ಯಾವುದೋ ವಾಹನ ಅಥವಾ ಯಂತ್ರದ ಚಕ್ರವು  ಹಾದು ಹೋಗಿರುವ ರೀತಿಯ ಗುರುತು ಕಂಡು ಬಂದಿದ್ದು, ಸೊಂಟದ ಹಿಂಬದಿಯಲ್ಲಿ  ತರಚಿದ ರೀತಿಯ  ಗಾಯ ಕೂಡಾ ಕಂಡು ಬಂದಿದ್ದರಿಂದ ಕೂಡಲೇ ಫಿರ್ಯಾದುದಾರರು ರಮೇಶ ಎಂಬವರೊಂದಿಗೆ ಶೇಷಪ್ಪ ನಾಯ್ಕರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಶೇಷಪ್ಪ ನಾಯ್ಕರನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಶೇಷಪ್ಪ ನಾಯ್ಕರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಶೇಷಪ್ಪ ನಾಯ್ಕರವರು ದಿನಾಂಕ:- 10.02.2021 ರಂದು ಸಂಜೆ ಸುಮಾರು 5.00 ಗಂಟೆಯಿಂದ ದಿನಾಂಕ:- 11.02.2021ರಂದು ಬೆಳಿಗ್ಗೆ ಸುಮಾರು 9.00 ಗಂಟೆಯ ಮಧ್ಯೆ ಯಾವುದೋ ವಾಹನ ಅಥವಾ ಯಂತ್ರವು ಶೇಷಪ್ಪ ನಾಯ್ಕರ ಮೈಮೇಲೆ ಹಾದು ಹೋಗಿರುವ ಪರಿಣಾಮ ಗಾಯಗೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಆ.ಕ್ರ 10/21 ಕಲಂ: 287, 304(ಎ)  ಐ.ಪಿ.ಸಿ.  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ    ರಮೇಶ್ ಪ್ರಾಯ 30 ವರ್ಷ ತಂದೆ ಅಣ್ಣು ನಾಯ್ಕ್ ಕಳಮೆ ಮನೆ ನಾವೂರು  ರವರ  ಚಿಕ್ಕಪ್ಪ ಮೃತ ಧರ್ಣಪ್ಪ ನಾಯ್ಕ(60)ರವರು  ಮದುವೆಯಾಗದೆ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದು , ಸುಮಾರು 20 ದಿನದ ಹಿಂದೆ ಮನೆಗೆ ಬೀಗ ಹಾಕಿ ಹೋಗಿದ್ದು  ವಾಪಾಸು ಮನೆಗೆ ಬಂದಿರವುದಿಲ್ಲ. ದಿನಾಂಕ 11-02-2021 ರಂದು ಸಾಯಂಕಾಲ  ನೆರೆಯ ಜಯಂತರವರು  ಹಿತ್ತಿಲು ಗುಡ್ಡೆಯಿಂದಾಗಿ ನಡೆದುಕೊಂಡು ಹೋಗುತ್ತಿದ್ದಾಗ ವಾಸನೆ ಬರುತ್ತಿದ್ದನ್ನು ಕಂಡು  ಗುಡ್ಡದಲ್ಲಿ  ಹುಡುಕಾಡಿದಲ್ಲಿ  ಗುಡ್ಡ ಪ್ರದೇಶದಲ್ಲಿ  ಕಾಟು ಮರಕ್ಕೆ  ನೇಣು ಬಿಗಿದುಕೊಂಡು ಆತ್ಮ ಹತ್ಯೆ   ಮಾಡಿಕೊಂಡಿದ್ದನ್ನು ಕಂಡು  ಪಿರ್ಯಾದಿದಾರರಿಗೆ ತಿಳಿಸಿದ್ದು ಪಿರ್ಯಾದಿದಾರರು ಬಂದು ನೋಡಿದಾಗಿ  ಲುಂಗಿಯಿಂದ ಮರಕ್ಕೆ ಆತ್ಮ ಹತ್ಯೆ ಮಾಡಿಕೊಂಡಿದ್ದು ಕಂಡು ಬಂದು ಚಿಕ್ಕಪ್ಪ  ಧರ್ಣಪ್ಪರವರ ಮೃತ ದೇಹವೆಂದು ಗುರುತು ಹಿಡಿದಿರುತ್ತಾರೆ. ಮೃತ ಧರ್ಣಪ್ಪರವರು ಮದುವೆಯಾಗದೆ ಒಬ್ಬಂಟಿಯಾಗಿ ವಾಸಿಸುತ್ತಿದ್ದು ಇದೇ ಬೇಸರದಿಂದ ಜೀವನದಲ್ಲಿ  ಜಿಗುಪ್ಸೆ ಹೊಂದಿ  ಸುಮಾರು 20 ದಿನಗಳ ಹಿಂದೆ ಮನೆ ಬಿಟ್ಟು ಹೋದವರು  ಮನೆಯ ಪಕ್ಕದಲ್ಲಿದ್ದ ಅವರದ್ದೇ ಆದ ಗುಡ್ಡ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿವುದಾಗಿ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 05/2021 ಕಲಂ 174   ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸುಬ್ರಮಣ್ಯ  ಪ್ರಾಯ:21 ವರ್ಷ ತಂದೆ; ಜಗದೀಶ  ವಾಸ: ಕಲ್ಲೇರಿ ಮನೆ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ರವರು ಮತ್ತು ಶ್ರೇಣಿಕ್ ಧರ್ಮಸ್ಥಳ ದೇವಾಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದು ದೇವಾಸ್ಥಾನಕ್ಕೆ ಸಂಬಂಧಪಟ್ಟ ಹಂಟೆಮಜಲು ವಸತಿ ಗೃಹದಲ್ಲಿ ವಾಸ್ತವ್ಯ ಇದ್ದು ಪಿರ್ಯಾದಿದಾರರು ವಾಸಿಸುವ ಕೊಠಡಿಯ ಪಕ್ಕದ ಕೊಠಡಿಯಲ್ಲಿ ಮೃತ ಮೋಹನ ರವರು ವಾಸ್ತವ್ಯ ಇದ್ದು ದಿನಾಂಕ: 11-02-2021 ರಂದು ಪಿರ್ಯಾದಿದಾರರು ಕೆಲಸಕ್ಕೆ ಹೋಗಿದ್ದು ಮೋಹನ ರವರು ಕೆಲಸಕ್ಕೆ ಬಾರದೆ ಇದ್ದುದನ್ನು ಕಂಡು ಪಿರ್ಯಾದಿದಾರರು ಸಂಜೆ 4.30 ಗಂಟೆಗೆ ಮೋಹನರ ಕೊಠಡಿಗೆ ಹೋಗಿ ಬಾಗಿಲು ತಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದುದರಿಂದ ಸಂಶಯಗೊಂಡು ಕೋಲಿನಿಂದ ಕೊಠಡಿಯ ಕಿಟಕಿಯ ಬಟ್ಟೆಯನ್ನು ಸರಿಸಿ ನೋಡಿದಾಗ ಮನೆಯ ಫ್ಯಾನ್ ಗೆ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ನೇತಾಡುವ ಸ್ಥಿತಿಯಲ್ಲಿ ಕಂಡು ಬಂದಿರುತ್ತದೆ ಸುಮಾರು 1 ತಿಂಗಳ ಹಿಂದೆ ಮೃತನ ಪತ್ನಿ ಮುಕ್ತಾ ರವರು ರಸ್ತೆ ಅಪಘಾತಕ್ಕೆ ಒಳಗಾಗಿ ಆರೈಕೆಯಲ್ಲಿ ತಾಯಿಯ ಮನೆಯಲಿದ್ದು ದಿನಾಂಕ: 11-02-2021 ರಂದು ಬೆಳಗ್ಗೆ 08.00 ಗಂಟೆಯಿಂದ 16.30 ಗಂಟೆಯ ಮಧ್ಯದ ಅವಧಿಯಲ್ಲಿ ಯಾವುದೋ ಕಾರಣಕ್ಕೆ ಅಥವಾ ಪತ್ನಿಯವರಿಗೆ ಅಪಘಾತಗೊಂಡು ಮಲಗಿರುವ ಸ್ಥಿತಿಯಲ್ಲಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯುಡಿಆರ್ ನಂ: 07/2021  ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-02-2021 10:10 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080