ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦2

ವಿಟ್ಲ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮಹಮ್ಮದ್‌ ಶರೀಫ್‌ (43) ತಂದೆ: ಇಬ್ರಾಹಿಂ ವಾಸ: ವೀರಕಂಭ ಮನೆ ಮತ್ತು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:10.02.2023 ರಂದು ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಎಂಬಲ್ಲಿ ವಿಟ್ಲದಿಂದ ಆಗಮಿಸಿದ ಕೆಎ-19-ಎಡಿ-0222 ನೇ ಖಾಸಗಿ ಬಸ್ಸಿಗೆ ಹತ್ತಿ ಪ್ರಯಾಣಿಸುತ್ತಿದ್ದು ಖಾಸಗಿ ಬಸ್ಸಿನ ಚಾಲಕ ವಿಟ್ಲ-ಬಿ ಸಿ ರೋಡ್ ರಸ್ತೆಯಲ್ಲಿ ಬಿ ಸಿ ರೋಡ್ ಕಡೆಗೆ ಚಲಾಯಿಸಿಕೊಂಡು ಹೋಗುವ ಸಮಯ ಬೆಳಗ್ಗೆ 08.15 ಗಂಟೆಗೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಪೆಲತ್ತಡ್ಕ ಎಂಬಲ್ಲಿಗೆ ತಲುಪಿದಾಗ ಚಾಲಕ ಅಜಾಗರೂಕತೆ ಮತ್ತು ದುಡುಕಿನಿಂದ ಚಲಾಯಿಸಿದ ಪರಿಣಾಮ ಬಸ್ಸು ರಸ್ತೆಯ ಬಲಗಡೆಯ ಕಣಿಯನ್ನು ದಾಟಿ ಗುಡ್ಡ ಪ್ರದೇಶದ ಕಲ್ಲಿನ ಬಂಡೆಯ ಮೇಲೆ ಹೋಗಿ ಗುದ್ದಿದ ಪರಿಣಾಮ ಬಸ್ಸಿನ ಮುಂಭಾಗ ಮತ್ತು ಬಲ ಬದಿ ಸಂಪೂರ್ಣ ಜಖಂ ಗೊಂಡಿದ್ದು ಈ ಅಪಘಾತದಿಂದ ಪಿರ್ಯಾದಿದಾರರ ಮಗ ಮುಹಮ್ಮದ್ ಹಾಶಿಂ ರಿಹಾನ್  ನ ಬಲ ಕೈಗೆ ಗುದ್ದಿದ ಗಾಯ ಹಾಗೂ ಬಸ್ಸಿನಲ್ಲಿದ್ದ ಲಾವಣ್ಯ ಎಂಬ ಹುಡುಗಿಯ ಬಲ ಕಾಲಿನ ಮೊಣಗಂಟು,ಕೋಲು ಕಾಲು  ಮತ್ತು ಪಾದಕ್ಕೆ ರಕ್ತ ಗಾಯವಾದವರನ್ನು ಉಪಚರಿಸಿದ್ದು. ಕೂಡಲೇ ಗಾಯಾಳುಗಳನ್ನು  ಅಂಬ್ಯುಲೇನ್ಸ್ ಒಂದರಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ವಿಟ್ಲ ಸರಕಾರಿ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಗಾಯಾಳು ಹುಡುಗಿ ಲಾವಣ್ಯ ರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಅಕ್ರ  ನಂಬ್ರ 20/2023  ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ನಂದಿನಿ. M ಗಂಡ:ಅರುಣ್‌ ಕುಮಾರ್‌, ವಾಸ:#12,ಅನ್ನಪೂರ್ಣೇಶ್ವರಿ ನಗರ,5TH ಕ್ರಾಸ್‌,ಹೊಸಕೋಟೆ,ಬೆಂಗಳೂರು  ಎಂಬವರ ದೂರಿನಂತೆ ತನ್ನ ಗಂಡ ಅರುಣ್ ಕುಮಾರ್‌ ಹಾಗೂ ತಮ್ಮ ಚಂದ್ರಶೇಖರ್‌ ರವರೊಂದಿಗೆ ದಿನಾಂಕ: 11-02-2023 ರಂದು  ಕೆಎ 01 MY 4657 ನೇ ಥಾರ್‌ ಜೀಪಿನಲ್ಲಿ ಚಂದ್ರಶೇಖರ್‌ ಚಾಲಕನಾಗಿ ಜೀಪನ್ನು ಬೆಂಗಳೂರು ಕಡೆಯಿಂದ ಧರ್ಮಸ್ಥಳ ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಸುಮಾರು ಬೆಳಿಗ್ಗೆ 05:30 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕುದ್ರಾಯ ಎಂಬಲ್ಲಿಗೆ ತಲುಪುತ್ತಿದ್ದಂತೆ ಥಾರ್‌ ಜೀಪು ಕೆಎ 01 MY 4657 ನೇದನ್ನು  ಅದರ ಚಾಲಕ ಚಂದ್ರಶೇಖರ್‌ ರವರು ದುಡಕುತನದಿಂದ ಚಲಾಯಿಸಿದ ಪರಿಣಾಮ ಥಾರ್‌ ಜೀಪು ಚಾಲಕನ ನಿಯಂತ್ರಣ ತಪ್ಪಿ ನದಿಯ ಬದಿಗೆ ಬಿದ್ದಿರುತ್ತದೆ ಪರಿಣಾಮ ಜೀಪಿನಲ್ಲಿದ್ದ ಪಿರ್ಯಾದಿದಾರರಿಗೆ ಬೆನ್ನಿಗೆ ಹಾಗೂ ಕೋಲುಕಾಲಿಗೆ ಗುದ್ದಿದ ಗಾಯವಾಗಿರುತ್ತದೆ ಹಾಗೂ ಅರುಣ್‌ ಕುಮಾರ್‌ ರವರಿಗೆ ಕುತ್ತಿಗೆಗೆ ಗುದ್ದಿದ ನೋವಾಗಿದ್ದು ಗಾಯಾಳುಗಳು ಚಿಕಿತ್ಸೆ ಬಗ್ಗೆ ಉಜಿರೆಯ  SDM ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 12/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: ೦1

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುಭಾಶ್‌ ಪ್ರಾಯ:48 ವರ್ಷ ತಂದೆ: ರಾಮಪ್ಪ  ಲಂಭಾನಿ,ವಾಸ: ಪಿಂಟೋ ನಗರ  ಕಾಶಿಪಟ್ಣ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ತನ್ನ  ಹೆಂಡತಿಯ  ತಮ್ಮ  ಗಣೇಶ್ ಪಮ್ಮಾರ  ಎಂಬಾತನು  ಕಳೆದ  4  ವರ್ಷಗಳಿಂದ ಬೆಳ್ತಂಗಡಿ  ತಾಲೂಕು  ಕಾಶಿಪಟ್ಣ  ಗ್ರಾಮದ  ಪಿಂಟೋ  ನಗರ ಎಂಬಲ್ಲಿ  ಪಿರ್ಯಾದಿದಾರರೊಂದಿಗೆ  ವಾಸ್ತವ್ಯ ಇದ್ದವನು  ಕಂಪ್ರೆಶನ್  ಟ್ರಾಕ್ಟರ್  ವಾಹನ  ಇಟ್ಟುಕೊಂಡು  ಕೆಲಸ ಮಾಡುತ್ತಿದ್ದು,   ದಿನಾಂಕ:  31-01-2023 ರಂದು ಬೆಳಗ್ಗಿನ   ಜಾವ  05:00 ಗಂಟೆಗೆ  ಗಣೇಶ್‌  ಪಮ್ಮಾರನು  ತನ್ನ  ಊರಾದ ಬಾಗಲಕೋಟೆಗೆ  ಹೋಗುವುದಾಗಿ   ಹೇಳಿ  ಆತನ ಬಾಬ್ತು  ಬೈಕ್  ನಂಬ್ರ : KA  19 EX 0554 ನೇ  ದರಲ್ಲಿ  ಹೋದವನು   ಊರಿಗೂ  ಹೋಗದೇ ವಾಪಾಸು  ಮನೆಗೂ  ಬಾರದೇ   ಕಾಣೆಯಾಗಿದ್ದು . ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 06-2023  ಕಲಂ: ಗಂಡಸು  ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: ೦1

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪಿರ್ಯಾದುದಾರರು: ಸಂತೋಷ್ (26) ತಂದೆ: ದಿ|| ಪರಮೇಶ್ವರ ನಾಯ್ಕ ವಾಸ: ಎರುಕೊಟ್ಯ ಮನೆ, ಪಡವನ್ನೂರು ಗ್ರಾಮ, ಈಶ್ವರಮಂಗಲ ಪೋಸ್ಟ್, ಪುತ್ತೂರು ತಾಲೂಕು ಎಂಬವರ ದೂರಿನಂತೆ  ಅವರ ಸ್ನೇಹಿತರಾದ ಸತ್ಯಾನಂದ, ಯುವರಾಜ, ಪ್ರವೀಣ, ಜಿತೇಶ್ ಮತ್ತು ನಿತೇಶ್ ರವರೊಂದಿಗೆ  ಓಮಿನಿ ಕಾರಿನಲ್ಲಿ ದಿನಾಂಕ 11.02.2023 ರಂದು ಕೌಡಿಚಾರಿನಿಂದ ಸುಳ್ಯದ ತೂಗು ಸೇತುವೆ ನೋಡಲು ಬಂದಿದ್ದು, ಸಮಯ ಸುಮಾರು 16:00 ಗಂಟೆಗೆ ಸುಳ್ಯದ ಅಗ್ನಿಶಾಮಕ ದಳದ ಕಛೇರಿಯ ಹಿಂಬದಿಯಲ್ಲಿ ತಮ್ಮ ಕಾರನ್ನು ನಿಲ್ಲಿಸಿ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತ ಇನ್ನೊಂದು ಬದಿಯಾದ ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ದೊಡ್ಡೆರಿ ಕಡೆಗೆ ಹೋಗಿ ಸೇತುವೆಯಿಂದ ಎಲ್ಲರೂ ಒಟ್ಟಿಗೆ ಕೆಳಗೆ ಇಳಿದು ನಂತರ ಹೊಳೆಯ ನೀರನ್ನು ಕಂಡು ಸ್ನಾನ ಮಾಡಲು ತಿರ್ಮಾನಿಸಿ ಮೊದಲು ನಿತೇಶನು ನೀರಿನಲ್ಲಿ ಇಳಿದು ಈಜಲು ಪ್ರಾರಂಭಿಸಿದನು. ಅದೇ ಸಮಯಕ್ಕೆ ಪ್ರವೀಣ ಮತ್ತು ಜಿತೇಶ್ ನು ನೀರಿನಲ್ಲಿ ಇಳಿಯಲು ಪ್ರವೀಣನು ನೀರಿಗೆ ಇಳಿದು ಸ್ವಲ್ಪ ಮುಂದೆ ಹೋದವನು ಹೊಳೆಯ ನೀರಿನಲ್ಲಿ ಮುಳುಗಿ ಮೇಲೇಳುತ್ತಿರುವುದನ್ನು ನೋಡಿ , ನಿಂತಿದ್ದ ಜಿತೇಶ್ ಪ್ರವೀಣನನ್ನು ಕಾಪಾಡಲು ಹೋದಾಗ ಪ್ರವೀಣ ಮತ್ತು ಜಿತೇಶ್ ಪಿರ್ಯಾದುದಾರರು ಮತ್ತು ಅವರ ಜೊತೆಗೆ ಇದ್ದವರು ನೋಡನೋಡುತ್ತಿದ್ದಂತೆ ಇಬ್ಬರು ಹಿಡಿದುಕೊಂಡು ನೀರಿನಲ್ಲಿ ಮುಳುಗಿರುತ್ತಾರೆ. ಪಿರ್ಯಾದುದಾರರು, ಸತ್ಯಾನಂದ ಮತ್ತು ಯುವರಾಜರಿಗೆ ಈಜಲು ಬಾರದೇ ಇದ್ದುದರಿಂದ ನೀರಿಗೆ ಇಳಿಯದೆ ಇದ್ದು ಸದ್ರಿ ಸ್ಥಳಕ್ಕೆ ಊರಿನವರು ಬಂದು ಪಿರ್ಯಾದುದಾರರ ಜೊತೆಗಿದ್ದ ನಿತೇಶ್ ಹಾಗೂ ಊರಿನವರು ಪ್ರವೀಣ ಹಾಗೂ ಜಿತೇಶ್ ನನ್ನು ನೀರಿನಿಂದ ಮೇಲಕ್ಕೆ ಎತ್ತಿ ದಡದ ತಂದು ಮಲಗಿಸಿದಾಗ ಇಬ್ಬರಿಗೂ ಪ್ರಜ್ಷೇ ಇಲ್ಲದ ಸ್ಥಿತಿಯಲ್ಲಿದ್ದು, ನಂತರ ಅಂಬ್ಯುಲೇನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪ್ರವೀಣ ಹಾಗೂ ಜಿತೇಶ್ ನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ    ಯುಡಿಆರ್    ನಂ: 13/2023 ಕಲಂ: 174 ಸಿಆರ್ ಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-02-2023 12:20 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080