ಅಪಘಾತ ಪ್ರಕರಣ: ೦4
ವಿಟ್ಲ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಅಬ್ದುಲ್ ಮಜೀದ್ ಪ್ರಾಯ 56 ವರ್ಷ ತಂದೆ:ಮೊಯಿದ್ ಕುಂಞ ವಾಸ:ಖಂಡಿಗಕೋಡಿ ಮನೆ ಕೊಳ್ನಾಡು ಗ್ರಾಮ , ಬಂಟ್ವಾಳ ತಾಲೂಕು ಎಂಬವರು ದಿನಾಂಕ:09-03-2021 ರಂದು ತನ್ನ ಬಾಬ್ತು ಆಕ್ಟಿವಾ ವಾಹನ ನಂಬ್ರ KA-19-EV-6329ನೇದರಲ್ಲಿ ತನ್ನ ಮನೆಯಿಂದ ನೇರಳಕಟ್ಟೆಯ ಜನಪ್ರೀಯ ಹಾಲ್‌ನಲ್ಲಿ ನಡೆಯುವ ಸಂಬಂದಿಕರ ಕಾರ್ಯಕ್ರಮಕ್ಕೆ ಕಲ್ಲಡ್ಕ ಮಾರ್ಗವಾಗಿ ಹೋಗುತ್ತಿರುವಾಗಿ ಮಂಗಳೂರು-ಬೆಂಗಳೂರು ರಾ ಹೇ ಸಂಚರಿಸುತ್ತಾ ಸಮಯ 19.25 ಗಂಟೆಗೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರು ಎಂಬಲ್ಲಿಗೆ ತಲುಪಿದಾಗ ಮಂಗಳೂರು ಕಡೆಯಿಂದ ಒಂದು ಪಿಕಾಪ್ ವಾಹನವನ್ನು ಅದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಎಸೆಯಲ್ಪಟ್ಟು ತೊಡೆಗೆ ಗುದ್ದಿದ ಗಾಯ, ಹಣೆಗೆ ಮತ್ತು ಎಡಕಣ್ಣಿನ ಬಳಿ ರಕ್ತ ಗಾಯವಾಗಿರುತ್ತದೆ. ಪಿಕಾಫ್ ವಾಹನ ಚಾಲಕನು ತನ್ನ ವಾಹನವನ್ನು ನಿಲ್ಲಿಸದೆ ಪರಾರಿಯಾಗಿರುತ್ತಾನೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 39/2021 ಕಲಂ: 279,337 ಐಪಿಸಿ & 134 (ಎ&ಬಿ) ಐಎಂವಿ ಕಾಯ್ದೆ ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಅವಿನಾಶ್(31), ತಂದೆ: ರಾಮಚಂದ್ರ ಪೂಜಾರಿ, ವಾಸ: ಹೊಸ್ಮಾರ್ ಮನೆ, ಬೈಪಾಸ್ ರೋಡ್, ಬಿ-ಕಸಬಾ ಗ್ರಾಮ, ಬಂಟ್ವಾಳ ತಾಲೂಕು ಹಾಗೂ ವಿನಯರವರು ಮೊಗರ್ನಾಡು ನಲ್ಲಿರುವ ಟ್ರಿಡೆಂಟ್ ರೆಡಿಮಿಕ್ಸ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 10.03.2021 ರಂದು ಕೆಲಸ ಮುಗಿಸಿ ವಾಪಾಸು ಮನೆ ಕಡೆಗೆ ಹೋಗುತ್ತಾ ಸಮಯ ಸುಮಾರು ಸಂಜೆ 7-00 ಗಂಟೆಗೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಅಕ್ಕರಂಗಡಿ ಎಂಬಲ್ಲಿಗೆ ತಲುಪಿದಾಗ ಗೂಡಿನಬಳಿ ಕಡೆಯಿಂದ KA-19D-5761 ನೇ ಪಿಕಪ್ ವಾಹನವನ್ನು ಅದರ ಚಾಲಕ ಚಂದ್ರಶೇಖರ್ ರವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ ವಿನಯ ರವರ ಬಾಬ್ತು KA-70-E-5338 ನೇ ಡಿಯೋ ಸ್ಕೂಟರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ವಿನಯರವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ತಲೆಗೆ, ಬಲ ಕಾಲಿಗೆ, ಬಲ ಕೈಗೆ, ಕುತ್ತಿಗೆಗೆ ಗುದ್ದಿದ ಹಾಗೂ ರಕ್ತ ಗಾಯವಾಗಿದ್ದು, ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 25/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ದಿನಾಂಕ 10-03-2021 ರಂದು ಮಹಮ್ಮದ್ ಫೈರೋಝ್(19), ತಂದೆ: ಎ.ಉಮ್ಮರ್ ವಾಸ: ಅಮ್ಮೆಮಾರ್ ಮನೆ, ಪುದು ಗ್ರಾಮ, ಬಂಟ್ವಾಳ ತಾಲೂಕು ಎಂಬವರು ತನ್ನ ಅಣ್ಣ ಮೊಹಮ್ಮದ್ ಪವಾಝ್ ರವರ ಬಾಬ್ತು KA-19-EV-7934 ನೇ ಮೋಟಾರ್ ಸೈಕಲಿನಲ್ಲಿ ಸಹ ಸವಾರನಾಗಿ ಕುಳಿತುಕೊಂಡು ವಳವೂರು ಕಡೆಯಿಂದ ಫರಂಗೀಪೇಟೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು 15-45 ಗಂಟೆಗೆ ಬಂಟ್ವಾಳ ತಾಲೂಕು ತುಂಬೆ ಗ್ರಾಮದ ರಾಮಲ್ ಕಟ್ಟೆ ಎಂಬಲ್ಲಿಗೆ ತಲುಪಿದಾಗ ಮೋಟಾರ್ ಸೈಕಲನ್ನು ಅದರ ಸವಾರ ಮೊಹಮ್ಮದ್ ಪವಾಝ್ ರವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಸ್ಕಿಡ್ ಆಗಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಸವಾರ ಮೊಹಮ್ಮದ್ ಪವಾಝ್ ರವರ ಎಡ ಕಾಲಿಗೆ ಗುದ್ದಿದ ಗಾಯ, ಸಹ ಸವಾರರಾದ ಪಿರ್ಯಾದಿಯ ಎಡ ಕಾಲಿನ ಮೊಣಗಂಟಿಗೆ ಜಜ್ಜಿದ ಗಾಯ, ಎಡ ಕೋಲು ಕಾಲಿಗೆ ಮತ್ತು ಬಲಕೈಗೆ ತರಚಿದ ಗಾಯವಾಗಿದ್ದು, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಪಿರ್ಯಾದಿದಾರರು ಒಳರೋಗಿಯಾಗಿಯೂ ಸವಾರ ಮೊಹಮ್ಮದ್ ಪವಾಝ್ ರವರು ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 26/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ : ದಿನಾಂಕ 11-03-2021 ರಂದು 12.00 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ಸುಮಂತ ಎಂಬವರು KA-19-EV-4073 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್‌ನಲ್ಲಿ ಸುಶ್ರುತ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು –ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪಡೀಲ್ ಎಂಬಲ್ಲಿ ಆಶ್ವಿನಿ ಕ್ಲಿನಿಕ್ ಎದುರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ತೀರಾ ಬಲಬದಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದಿದಾರರಾದ ಯಶವಂತಿ, ಪ್ರಾಯ 35 ವರ್ಷ, ಗಂಡ: ಚಂದ್ರಹಾಸ, ವಾಸ: ದಾರಂದಕುಕ್ಕು ಮನೆ, ಸೇಡಿಯಾಪು, ಕೋಡಿಂಬಾಡಿ ಅಂಚೆ & ಗ್ರಾಮ, ಪುತ್ತೂರು ತಾಲೂಕು ಎಂಬವರು ಸವಾರರಾಗಿ, ಸೇಡಿಯಾಪು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-L-0313 ನೇ ನೋಂದಣಿ ನಂಬ್ರದ ಸ್ಕೂಟರ್‌ಗೆ ಅಪಘಾತವಾಗಿ, ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಹಣೆಗೆ ತರುಚಿದ ಗಾಯ, ಬಲ ಪಾದಕ್ಕೆ ರಕ್ತಗಾಯ, ಬಲ ಕೋಲು ಕಾಲಿಗೆ ಗುದ್ದಿದ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಸಹಸವಾರ ಸುಶ್ರುತ ರವರಿಗೂ ಸಣ್ಣ ಪುಟ್ಟ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 45/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ :ಫಿರ್ಯಾದಿದಾರರಾದ ಶ್ರೀಮತಿ ತುಳಸಿ, ಪ್ರಾಯ: 27 ವರ್ಷ, ಗಂಡ: ಲಕ್ಷ್ಮಣ, ವಾಸ: ಬೇರಿಕೆ ಮನೆ, ಪಾಣಾಜೆ ಗ್ರಾಮ, ಪುತ್ತೂರು ತಾಲೂಕುರವರ ಗಂಡ ಲಕ್ಷ್ಮಣರವರು ಅವರ ಮನೆಯ ರಿಪೇರಿಗಾಗಿ ಅಡಿಕೆ ಮರದ ಸಲಾಕೆಯ ಅಗತ್ಯವಿದ್ದು, ಕೆಲವು ದಿನಗಳ ಹಿಂದೆ ಪಾಣಾಜೆ ಗ್ರಾಮದ ಕಡಂದೇಲು ಗೋಪಾಲಕೃಷ್ಣ ಭಟ್‌ರವರ ಅಡಿಕೆ ತೋಟದಲ್ಲಿ ಒಣಗಿರುವ ಅಡಿಕೆ ಮರವನ್ನು ಉಚಿತವಾಗಿ ತೆಗೆದುಕೊಂಡು ಹೋಗುವಂತೆ ತಿಳಿಸಿದಂತೆ, ದಿನಾಂಕ:-07.03.2021ರಂದು ಬೆಳಿಗ್ಗೆ ಸುಮಾರು 11.00 ಗಂಟೆಗೆ ಕಡಂದೇಲು ಗೊಪಾಲಕೃಷ್ಣ ಭಟ್‌ರವರ ಅಡಿಕೆ ತೋಟದಲ್ಲಿ ಒಣಗಿರುವ ಅಡಿಕೆ ಮರವನ್ನು ಕಡಿಯುತ್ತಿದ್ದ ಸಮಯ ಅಡಿಕೆ ಮರವು ಆಕಸ್ಮಿಕವಾಗಿ ಫಿರ್ಯಾದಿದಾರರ ಗಂಡ ಲಕ್ಷ್ಮಣರವರ ಮೇಲೆ ಬಿದ್ದುದರಿಂದ ಕುತ್ತಿಗೆಯ ಬಳಿ ಗಾಯವಾಗಿ ಕುಸಿದು ಬಿದ್ದಿದ್ದವರನ್ನು ಜೊತೆಯಲ್ಲಿದ್ದ ರವಿ ಎಂಬವರು ಚಿಕಿತ್ಸೆಯ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆ ತಂದು ಬಳಿಕ ವೈದ್ಯರ ಸಲಹೆಯಂತೆ ಮಂಗಳೂರಿನ ಸರಕಾರಿ ವೆನ್‌ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಲಕ್ಷ್ಮಣರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದು. ದಿನಾಂಕ:-11.03.2021ರಂದು ಮಧ್ಯಾಹ್ನ ಸುಮಾರು 2.35 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಸದ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಯು ಡಿ ಆರ್ ಸಂಖ್ಯೆ : 11/21 ಕಲo: 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆ : ದಿನಾಂಕ 11-03-2021 ರಂದು ಪಿರ್ಯಾದಿದಾರರಾದ ಶ್ರೀಮತಿ ಶಶಿಕಲ ಪ್ರಾಯ 40 ವರ್ಷ ಗಂಡ ಕುಶಾಲಪ್ಪ ಪೂಜಾರಿ ಕಲ್ಕುದಿ ಮನೆ ಯೇನೆಕಲ್ಲು ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಗಂಡ ಕುಶಾಲಪ್ಪ ಪೂಜಾರಿ ಪ್ರಾಯ 45 ವರ್ಷ ತಂದೆ: ದಿ|| ಬಾಬು ಪೂಜಾರಿ ಕಲ್ಕುದಿ ಮನೆ ಯೇನೆಕಲ್ಲು ಗ್ರಾಮ ಕಡಬ ತಾಲೂಕು ಎಂಬವರು ಕೂಲಿ ಕೆಲಸಕ್ಕೆಂದು ತಮ್ಮ ಮನೆಯಿಂದ ಹೋಗಿದ್ದು ಪಿರ್ಯಾದಿದಾರಿಗೆ ಸುಮಾರು 10:00 ಗಂಟೆಯ ವೇಳೆಗೆ ಪಿರ್ಯಾದಿದಾರರ ಮನೆಯಿಂದ ಸುಮಾರು 200 ಮೀ ದೂರದಲ್ಲಿರುವ ಕಲ್ಲಾಜೆ ಹೊಳೆಯಲ್ಲಿ ಒಬ್ಬ ಗಂಡಸು ಅಂಗಾತನಾಗಿ ಬಿದ್ದಿರುವ ಮಾಹಿತಿ ಬಂದ ಮೆರೆಗೆ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ಸದ್ರಿ ವ್ಯಕ್ತಿಯೂ ಪಿರ್ಯಾದಿದಾರರ ಗಂಡ ಕುಶಾಲಪ್ಪ ಪೂಜಾರಿಯವರಾಗಿದ್ದು ಕಡಬ ತಾಲೂಕು ಯೇನೆಕಲ್ಲು ಗ್ರಾಮದ ಕಲ್ಕುದಿ ಎಂಬಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯು ಡಿ ಆರ್ :5/2021 ಕಲಂ:174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.