ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚಂದ್ರಪ್ಪ ಮಾರುತಿ ವಡ್ಡರ ಪ್ರಾಯ 46 ವರ್ಷ, ತಂದೆ: ಮಾರುತಿ ವಡ್ಡರ, ವಾಸ: ಕರಿಕಟ್ಟಿ ಗ್ರಾಮ, ಭೊರಣಕಿ ಅಂಚೆ, ಖಾನಾಪುರ ತಾಲೂಕು, ಬೆಳಗಾವಿ ಜಿಲ್ಲೆ ಎಂಬವರ ದೂರಿನಂತೆ ದಿನಾಂಕ 11-05-2022 ರಂದು 15-20 ಗಂಟೆಗೆ ಆರೋಪಿ ಟಿಪ್ಪರ್‌ ಲಾರಿ ಚಾಲಕ ನೋಂದಣಿ ನಂಬ್ರ ತಿಳದು ಬಾರದ ಟಿಪ್ಪರ್‌ ಲಾರಿಯನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ಬೇರಿಕೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಬಲ ಬದಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಚಾಲಕರಾಗಿ ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದ KSRTC ಬಸ್‌ ನೋಂದಣಿ KA-19-F-3319 ನೇಯದಕ್ಕೆ ಟಿಪ್ಪರ್‌ ಲಾರಿ ಅಪಘಾತವಾಗಿ, ಆರೋಪಿ ಟಿಪ್ಪರ್‌ ಲಾರಿ ಚಾಲಕ ಅಪಘಾತದ ನಂತರ ಲಾರಿಯನ್ನು ನಿಲ್ಲಿಸದೇ ವಾಹನ ಸಮೇತ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  90/2022  ಕಲಂ: 279, ಐಪಿಸಿ & 134(B) MV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎ. ನವೀನ್‌ ಕುಮಾರ್‌, ಪ್ರಾಯ: 50 ವರ್ಷ, ತಂದೆ: ಕೃಷ್ಣ ನಾಯ್ಕ್‌ ಎ., ವಾಸ: ಆಲೆಟ್ಟಿ ಮನೆ, ಆಲೆಟ್ಟಿ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 11.05.2022 ರಂದು ತನ್ನ ಬಾಬ್ತು ಆಟೋರಿಕ್ಷಾ KA21A3396 ನೇದರಲ್ಲಿ ಶಂಕರಿ, ವಸಂತಿ, ರವಿಪ್ರಸಾದ್‌ ಮತ್ತು ಮಾಹಾಲಿಂಗ ರವರನ್ನು ಕುಳ್ಳಿರಿಸಿಕೊಂಡು ಸುಳ್ಯದಿಂದ ನಾರ್ಕೋಡು ಕಡೆಗೆ ಹೊರಟು ಸುಳ್ಯ ಆಲೆಟ್ಟಿ ಢಾಮಾರು ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು 11:000 ಗಂಟೆಗೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ನಾರ್ಕೋಡು ದ್ವಾರದ ಬಳಿ ತಲುಪಿದಾಗ ಆಲೆಟ್ಟಿ ಕಡೆಯಿಂದ ಸುಳ್ಯ ಕಡೆಗೆ KL13C2424 ನೇ ಜೀಪನ್ನು ಅದರ ಬಾಬ್ತು ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಆತನ ಬಲಬದಿಗೆ  ಚಲಾಯಿಸಿ ಪಿರ್ಯಾದಿದಾರರ ಬಾಬ್ತು ಆಟೋರಿಕ್ಷಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋರಿಕ್ಷಾ ಮಗುಚಿ ಬಿದ್ದಿದ್ದು, ಜೀಪು ಚಾಲಕ ಮತ್ತು ಆಟೋರಿಕ್ಷಾ ಚಾಲಕ ಆಟೋರಿಕ್ಷಾದಲ್ಲಿವರನ್ನು ಉಪಚರಿಸಿ ನೋಡಲಾಗಿ ಶಂಕರಿಯವರ ಎರಡು ಕೋಲು ಕಾಲುಗಳಿಗೆ, ವಸಂತಿರವರ ಎಡಕೋಲು ಕಾಲಿಗೆ ರಕ್ತಗಾಯ, ರವಿಪ್ರಸಾದ್‌ರವರ ಬಲಭುಜಕ್ಕೆ, ಮಹಾಲಿಂಗರವರ ಕೈಗೆ ಗುದ್ದಿದ ಗಾಯ ಹಾಗೂ ಪಿರ್ಯಾದಿದಾರರಿಗೆ ತರಚಿದ ಗಾಯವಾಗಿದ್ದು, ಪಿಯಾದಿದಾರರಿಗೆ ತರಚಿದ ಗಾಯವಾಗಿರುತ್ತದೆ. ಅವರನ್ನು ವಾಹನವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ನೀಡಿ ರವಿಪ್ರಸಾದ್‌, ವಸಂತಿ ಮತ್ತು ಮಹಾಲಿಂಗರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಹಾಗೂ ಶಂಕರಿಯವರನ್ನು ಸುಳ್ಯದ ಜ್ಯೋತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 51/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚಂದ್ರಹಾಸ ಕೆ ಪ್ರಾಯ: 33 ವರ್ಷ, ತಂದೆ: ಕುಂಞಣ್ಣ  ಗೌಡ, ವಾಸ: ಕುಳ್ಳಂಪ್ಪಾಡಿ  ಮನೆ, ಐವರ್ನಾಡು ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ತನ್ನ ಬಾಬ್ತು ಆಟೋ ರಿಕ್ಷಾ  ನಂಬ್ರ  KA 21 B 5142 ನೇದರಲ್ಲಿ  ಬೆಳ್ಳಾರೆ ಪೇಟೆಯಲ್ಲಿ  ಬಾಡಿಗೆ ಮಾಡಿಕೊಂಡಿದ್ದು, ದಿನಾಂಕ 04.05.2022 ರಂದು ಬೆಳಿಗ್ಗೆ ಪರಿಚಯಸ್ಥರ ಬಾಡಿಗೆ ನಿಮಿತ್ತ ತನ್ನ ಬಾಬ್ತು ಆಟೋ ರಿಕ್ಷಾದಲ್ಲಿ ಬೆಳ್ಳಾರೆ-ನಿಂತಿಕಲ್ಲು ಮುಖ್ಯ ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು 8:30 ಗಂಟೆಗೆ ಸುಳ್ಯ ತಾಲೂಕು ಬಾಳಿಲ ಗ್ರಾಮದ ಬಾಳಿಲ ಶಾಲೆಯ ಬಳಿ ತಲುಪಿದಾಗ ಪಿರ್ಯಾದಿದಾರರ ಆಟೋ ರಿಕ್ಷಾದ ಎದುರಿನಿಂದ ಅಂದರೆ ನಿಂತಿಕಲ್ಲು ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂಬ್ರ KA21 A 6379 ನೇಯದನ್ನು ಅದರ ಸವಾರ ಗಣೇಶ ರವರು  ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿದ ಪರಿಣಾಮ ಮೋಟಾರ್ ಸೈಕಲ್ ಸವಾರನ ಹತೋಟಿ ತಪ್ಪಿ ಸ್ಕಿಡ್ ಆಗಿ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಯಲ್ಲಿ ಮಗುಚಿ ಬಿದ್ದಿದ್ದು,  ಪಿರ್ಯಾದಿದಾರರು ಹಾಗೂ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಇತರರು ಮೋಟಾರ್ ಸೈಕಲ್ ಸವಾರನನ್ನು ಉಪಚರಿಸಿ ಆರೈಕೆ ಮಾಡಿ ನೋಡಲಾಗಿ ಅಪಘಾತದಿಂದ ಗಣೇಶನ ತಲೆಗೆ ಗುದ್ದಿದ ನಮೂನೆಯ ಗಾಯಗಳಾಗಿದ್ದು, ಆತನನ್ನು  ಚಿಕಿತ್ಸೆ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆ ಪಡೆದು ಬಳಿಕ  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅಲ್ಲಿಂದ ಮಂಗಳೂರಿನ  ವೆನ್ಲಾಕ್ ಆಸ್ಪತ್ರೆಗೆ  ಹೋಗಿ ಒಳರೋಗಿಯಾಗಿ ದಾಖಲಾಗಿ ಪ್ರಸ್ತುತ  ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅ.ಕ್ರ: 41/2022 ಕಲಂ 279,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಶಾಹಿದ್ ಪ್ರಾಯ:28 ವರ್ಷ ತಂದೆ: ಇಬ್ರಾಹಿಂ, ವಾಸ; ಅರೆಕಲ್ ಮನೆ, ಕಕ್ಕಿಂಜೆ ಚಾರ್ಮಾಡಿ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರಾದ ಮಹಮ್ಮದ್ ಶಾಹಿದ್‌ ರವರು ದಿನಾಂಕ:11-05-2022 ರಂದು ಸಂಜೆ ಸಮಯ ಸುಮಾರು 5.30 ಗಂಟೆಗೆ ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಅರೆಕಲ್ ಎಂಬಲ್ಲಿ ತಮ್ಮ ಮನೆಯ ದನಗಳಿಗೆ ಹುಲ್ಲು ತರಲು ತಮ್ಮ ತೋಟಕ್ಕೆ ಹೋದಾಗ ನೆರೆಮನೆಯ ನಿಸಾರ್‌ ಎಂಬವರ ಆಡುಗಳು ತಮ್ಮ ತೋಟದಲ್ಲಿದ್ದುದ್ದನ್ನು ಕಂಡು ಪಿರ್ಯಾದುದಾರರು ನಿಸಾರ್‌ ರವರ ಆಡುಗಳನ್ನು ತಮ್ಮ ತೋಟದಿಂದ ಓಡಿಸುತ್ತಿರುವುದನ್ನು ನಿಸಾರ್‌ ಹಾಗೂ ಆತನ ಅಣ್ಣ ಬಶೀರ್‌ ಎಂಬವರುಗಳು ನೋಡಿ ಪಿರ್ಯಾದುದಾರರಿಗೆ ಸಂಬಂದಿಸಿದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವರುಗಳ ಪೈಕಿ ನಿಸಾರ್‌ ನು ಬ್ಯಾರಿ ಭಾಷೆಯಲ್ಲಿ ಬೈಯುತ್ತಾ ನಿಸಾರ್ ನು ಆತನ ಕೈಯಲ್ಲಿದ್ದ ಕಬ್ಬಿಣದ ರಾಡ್‌ ನಿಂದ ಪಿರ್ಯಾದುದಾರರಿಗೆ ಹೊಡೆದಿದ್ದು, ಫಿರ್ಯಾದುದಾರರ ಬಲ ಕೋಲು ಕೈಗೆ ತಾಗಿ ರಕ್ತಗಾಯವಾಗಿರುತ್ತದೆ. ಬಶೀರ್‌ ನು ಕಲ್ಲಿನಿಂದ ಪಿರ್ಯಾದುದಾರರಿಗೆ ಬಿಸಾಡಿದ್ದು, ಕಲ್ಲು ಬಲ ಕಾಲಿನ ಮೊಣಗಂಟಿಗೆ ತಾಗಿ ರಕ್ತ ಗಾಯವಾಗಿರುತ್ತದೆ. ನಂತರ ನಿಸಾರ್‌ ನು ಕೈಯಿಂದ ಮುಖಕ್ಕೆ ಹೊಡೆದಿದ್ದು, ತುಟಿಗೆ ರಕ್ತಗಾಯವಾಗಿರುತ್ತದೆ. ನಂತರ ನಿಸಾರ್ ಹಾಗೂ ಆತನ ಅಣ್ಣ ಬಶೀರ್‌ ರವರುಗಳು ಪಿರ್ಯಾದುದಾರರನ್ನು ದೂಡಿ ಹಾಕಿ  ಕಾಲಿನಿಂದ ಒದೆಯುತ್ತಿದ್ದಾಗ ಫಿರ್ಯಾದುದಾರರ ತಾಯಿ ಹಾಗೂ ತಮ್ಮ ಸಿರಾಜ್‌ ರವರುಗಳು ಬರುವುದನ್ನು ನೋಡಿ ಕೊಲೆ ಬೆದರಿಕೆ ಹಾಕಿ ಹೋಗಿದ್ದು, ಹಲ್ಲೆಯಿಂದ ಗಾಯಗೊಂಡ ಪಿರ್ಯಾದುದಾರರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಖಾಸಗಿ ವಾಹನದಲ್ಲಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಬತ್ರೆಗೆ ಕರೆದುಕೊಂಡು ಬಂದಲ್ಲಿ ವೈಧ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಅ .ಕ್ರ 35-2022  ಕಲಂ : 447,506,323,324 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ : ದಿನಾಂಕ: 11-05-2022 ರಂದು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಅವಹೇಳನ ಮಾಡಿದ ಬಗ್ಗೆ ಅ.ಕ್ರ 74/2022 ಕಲಂ: 505(2)  ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಸಂದರ್ಶಿನಿ ಬಿ ಕೆ  ಪ್ರಾಯ:44 ವರ್ಷ  ಗಂಡ: ನರೇಂದ್ರ ಕುಮಾರ್ ಕೆ ಆರ್  ವಾಸ:ಬಂಡೆ ಕೊಡೀಗೆನಹಳ್ಳಿ ಬೆಂಗಳೂರು ಉತ್ತರ ಎಂಬವರ ದೂರಿನಂತೆ ಪಿರ್ಯಾದುದಾರರು ಗಂಡ ನರೇಂದ್ರ ಕುಮಾರ್ ಕೆ ಆರ್ ಎಂಬರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇವರ ದರ್ಶನ ಮಾಡುವರೇ ಮಕ್ಕಳೊಂದಿಗೆ ಬಂದಿದ್ದು ಸನ್ನಿದಿ ವಸತಿ ಗೃಹದಲ್ಲಿ ತಂಗಿದ್ದು ದಿನಾಂಕ: 11/05/2022 ರಂದು ಬೆಳಗ್ಗೆ 6.30 ಗಂಟೆಗೆ ದೇವರ ದರ್ಶನ ಪಡೆಯುವರೇ ಪಿರ್ಯಾದಿದಾರರು ತಯಾರಾಗುತ್ತಿದ್ದು ಪಿರ್ಯಾದಿದಾರರ ಗಂಡ ಬಾತು ರೂಮಿಗೆ ಹೋದವರು ಕುಸಿದು ಬಿದ್ದವರನ್ನು ಚಿಕಿತ್ಸೆ ಬಗ್ಗೆ  ಪಿರ್ಯಾದಿದಾರರು ಬಂದ ವಾಹನದಲ್ಲಿ ಉಜಿರೆ ಎಸ್ ಡಿ ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈಧ್ಯರು ಪರಿಕ್ಷೀಸಿ ಪಿರ್ಯಾದಿದಾರರ ಗಂಡ ಮೃತ ಪಟ್ಟಿರುವುದಾಗಿ ತಿಳಿಸಿದ್ದು,  ನಂತರ ಖಚಿತಪಡಿಸಿಕೊಳ್ಳುವರೇ ಪಿರ್ಯಾದಿದಾರರು ಬಂದಿದ್ದ ವಾಹನದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಬೆಳಿಗ್ಗೆ 08.20 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯು ಡಿ ಆರ್‌ 28/2022 ಕಲಂ: 174 ಸಿಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕಾಂತಪ್ಪ ಪೂಜಾರಿ ( 53 ವರ್ಷ) ತಂದೆ: ದಿ. ಶಿವಪ್ಪ ಪೂಜಾರಿ , ವಾಸ ಕೋಡಿ ಮನೆ ಬೆಳ್ಳಪ್ಪಾಡಿ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿರವರ ತಮ್ಮ ಮುಂಡಪ್ಪ ಪೂಜಾರಿ ( 44 ವರ್ಷ) ಎಂಬವರು ಅವರ ಹೆಂಡತಿಯ ಮನೆಯ ಬಳಿ ಪ್ರತ್ಯೇಕವಾಗಿ ವಾಸ ಮಾಡಿಕೊಂಡಿದ್ದು, ಸುಮಾರು 8 ತಿಂಗಳ ಹಿಂದೆ ಪಿರ್ಯಾದಿದಾರರ ತಮ್ಮನೊಂದಿಗೆ ಅವರ ಹೆಂಡತಿ  ಜಗಳ ಮಾಡಿಕೊಂಡು ಪ್ರತ್ಯೇಕವಾಗಿದ್ದು, ಆ ಬಳಿಕ ಪಿರ್ಯಾದಿದಾರರ ತಮ್ಮನು ತಾನು ಕೆಲಸ ಮಾಡುತ್ತಿದ್ದ ಹೊಟೇಲ್‌ನಲ್ಲಿಯೇ ಇರುತ್ತಿದ್ದು, ಕೆಲವೊಮ್ಮೆ ಕಾರ್ಯಕ್ರಮ ಇದ್ದಲ್ಲಿ ಮಾತ್ರ ಪಿರ್ಯಾದಿದಾರರ ಮನೆಗೆ ಬಂದು ಹೋಗುತ್ತಿದ್ದರು. ದಿನಾಂಕ 11.05.2022 ರಂದು ಬೆಳಿಗ್ಗೆ 10.00 ಗಂಟೆಗೆ ಹೊಟೇಲ್‌ನ ಮಾಲಿಕರಾದ ಹರೀಶ್ ಆಳ್ವ ರವರು ಪಿರ್ಯಾದಿದಾರರಿಗೆ ಫೋನ್‌ ಮಾಡಿ ಮುಂಡಪ್ಪರವರು ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿರುವ ಸಮಯ ಈದಿನ ಬೆಳಿಗ್ಗೆ 09.30 ಗಂಟೆಗೆ ಒಮ್ಮೆಲೇ ಅಸೌಖ್ಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂದು ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಬಂದು ಮೃತದೇಹವನ್ನು ನೋಡಿದ್ದು, ಪಿರ್ಯಾದಿದಾರರ ತಮ್ಮನು ಈ ದಿನ ದಿನಾಂಕ 11.05.2022 ರಂದು ಬೆಳಿಗ್ಗೆ ಸುಮಾರು 9.30 ಗಂಟೆಗೆ ಪುತ್ತೂರಿನ ಬೊಳುವಾರಿನಲ್ಲಿ ತಾನು ಕೆಲಸ ಮಾಡುತ್ತಿರುವ ಹೊಟೇಲ್‌ನಲ್ಲಿ ಒಮ್ಮೆಲೇ ಅಸೌಖ್ಯಗೊಂಡು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿರುವಾಗ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ  ಯುಡಿಆರ್‌:      11/2022 ಕಲಂ: 174 ಸಿ.ಆರ್.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-05-2022 12:10 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080