ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶೀನಾ ಪೂಜಾರಿ 56 ತಂದೆ: ದಿ| ನೋಣಯ್ಯ ಪೂಜಾರಿ ವಾಸ: ಸೀತಾಳ ಮನೆ, ರಾಯಿ ಗ್ರಾಮ &ಅಂಚೆ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 10-07-2022 ರಂದು KA-70-2364 ನೇ ಆಟೋರಿಕ್ಷಾದಲ್ಲಿ ರಾಯಿಯಿಂದ ಫರಂಗಿಪೇಟೆಗೆ ಹೋಗಿ ಅಲ್ಲಿ ಮೆಡಿಸನ್ ತಗೆದುಕೊಂಡು ವಾಪಾಸು ಮಾವನ ಮನೆ ರೊಟ್ಟಿಗುಡ್ಡೆಗೆ ಬರುತ್ತಾ ಬಂಟ್ವಾಳ ತಾಲೂಕು ಪುದು ಗ್ರಾಮದ ಕಡೆಗೋಳಿ ಎಂಬಲ್ಲಿಗೆ ತಲುಪುತ್ತಿದಂತೆ ಸಮಯ ಸುಮಾರು 17:15  ಗಂಟೆಗೆ ತನ್ನ ಬಾಬ್ತು ಆಟೋರಿಕ್ಷಾವನ್ನು  ಬಲಭಾಗಕ್ಕೆ ತಿರುಗಿಸಲು ಸೂಚನೆ ನೀಡಿ ನಿಧಾನಿಸಿದಾಗ ಹಿಂದಿನಿಂದ ಸ್ಕೂಟರ್ ಸವಾರನೊಬ್ಬ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆಟೋರಿಕ್ಷಾದ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ  ಸ್ಕೂಟರ್ ಸವಾರರು ರಸ್ತೆಗೆ ಎಸೆಯಲ್ಪಟ್ಟು ಸ್ಕೂಟರ್  ಸಮೇತ ರಸ್ತೆಗೆ ಬಿದ್ದವರನ್ನು ಪಿರ್ಯಾದಿದಾರರು ಮತ್ತು ಇತರರು ಎಬ್ಬಿಸಿ ನೋಡಿದ್ದು ಸ್ಕೂಟರ್ನಲ್ಲಿ ಮೂವರು ಸವಾರಿ ಮಾಡಿಕೊಂಡು ಬಂದಿದ್ದು ಸವಾರ ಸೈಫುದ್ದೀನ್ ಸಹ ಸವಾರರಲ್ಲಿ ಒಬ್ಬರು ಹುಸೇನ್  ಮತ್ತು ಇನ್ನೊಬ್ಬರು ಸಾದಿಕ್ ಎಂಬುವವರಾಗಿದ್ದು. ಗಾಯಗೊಂಡವರನ್ನು ಪಿರ್ಯಾದಿದಾರರು ವಾಹನವೊಂದರಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 77/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶೋಭಾವತಿ 56 ವರ್ಷ ಗಂಡ: ದಿ|| ತಿಮ್ಮಪ್ಪ ಪೇರಾಲು ಕುಕ್ಕೇಟಿ ಮನೆ, ಮಂಡೆಕೋಲು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಶೋಭಾವತಿ ರವರ ಮಗ ಶರತ್ ಕುಮಾರ್ ವೃತ್ತಿಯಲ್ಲಿ ಅಟೋ ಚಾಲಕನಾಗಿದ್ದು, ದಿನಾಂಕ 07.07.2022 ರಂಣದು ಸಾಯಂಕಾಲ ತನ್ನ ಅಟೋರಿಕ್ಷಾ ನಂಬ್ರ ಕೆಎ-21-ಬಿ-3057 ನೇದನ್ನು ಸುಳ್ಯ ಕಡೆಯಿಂದ ಜಾಲ್ಸೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕಾರು ಗೇರು ಬೀಜ ಕಾರ್ಖಾನೆಯ ಎದುರು ಸಂಜೆ 5.15 ಗಂಟೆಗೆ ತಲುಪಿದಾಗ ರಸ್ತೆಯ ಎಡಬದಿಯ ಹಿಂದಿನಿಂದ ಇನ್ನೋವಾ ಕಾರು ನಂಬ್ರ ಕೆಎಲ್-59-ಎಲ್-205 ನೇದನ್ನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಮಗನ ಭುಜ, ಬಲಕಾಲಿಗೆ ಗಾಯವಾಗಿದ್ದು,  ಅಲ್ಲಿ ಸೇರಿದ ಸಾರ್ವಜನಿಕರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು,  ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ.ಕ್ರ 82/22 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 2

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುರೇಂದ್ರ ಎಸ್ (63) ತಂದೆ; ಪೂವಪ್ಪ ಪೂಜಾರಿ ವಾಸ; ಬಾಲಕರ ವಿದ್ಯಾರ್ಥಿನಿಲಯ  ಉಜಿರೆ ಎಂಬವರ ದೂರಿನಂತೆ ಪಿರ್ಯಾದುದಾರರು ಉಜಿರೆ ಹಾಸ್ಟೆಲ್ ನಲ್ಲಿ  ಸುಮಾರು 3 ವರ್ಷಗಳಿಂದ  ವಾರ್ಡನ್ ಆಗಿ ಕೆಲಸ ಮಾಡಿಕೊಂಡಿದ್ದು, ಬಿ ಎ ವ್ಯಾಸಂಗ ಮಾಡುತ್ತಿರುವ ಅಕ್ಷಯ ಕೆ ವಿ (21) ಎಂಬವರು ದಿನಾಂಕ:10-07-2022 ರಂದು ಮದ್ಯಾಹ್ನ ಸುಮಾರು 1.30 ಗಂಟೆಗೆ ವಿದ್ಯಾರ್ಥಿನಿಲಯದಿಂದ  ಆತನ ಕಾಲೇಜ್ ಬ್ಯಾಗ್ ನೊಂದಿಗೆ  ಹೋಗಿದ್ದು  ತಡರಾತ್ರಿವರೆಗೂ ವಿದ್ಯಾರ್ಥಿನಿಲಯಕ್ಕೆ ವಾಪಾಸು ಬಾರದೇ ಇದ್ದು ಈ ಬಗ್ಗೆ ಆತನ ರೂಮಿನಲ್ಲಿರುವ ಇತರ ವಿದ್ಯಾರ್ಥಿಗಳಲ್ಲಿ ಹಾಗೂ  ಆತನ ಮನೆಯವರಲ್ಲಿ ವಿಚಾರಿಸಿದಲ್ಲಿ ಮನೆಗೂ ಹೋಗದೇ ವಾಪಸು ಕಾಲೇಜ್ ಬಾರದೇ ಕಾಣೆಯಾಗಿರುತ್ತಾನೆ.ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ : 46/2022 ಕಲಂ:ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ತಂಶಿಯಾ, ಪ್ರಾಯ: 28 ವರ್ಷ, ಗಂಡ: ಮಹಮ್ಮದ್ ಶರೀಫ್, ವಾಸ: ಬೋಳಮೆ ಮನೆ, ಹಿರೆಬಂಡಾಡಿ ಗ್ರಾಮ ಮತ್ತು ಅಂಚೆ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಶ್ರೀಮತಿ ತಂಶಿಯಾ, ಪ್ರಾಯ: 28 ವರ್ಷ, ಗಂಡ: ಮಹಮ್ಮದ್ ಶರೀಫ್, ವಾಸ: ಬೋಳಮೆ ಮನೆ, ಹಿರೆಬಂಡಾಡಿ ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕುರವರ ಗಂಡ ಸುಮಾರು 40 ವರ್ಷ ಪ್ರಾಯದ ಮಹಮ್ಮದ್ ಶರೀಫ್ ರವರು ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಕುಂಬ್ರ ಎಂಬಲ್ಲಿ ಕೊಡಿಪ್ಪಾಡಿಯ ಅಬ್ದುಲ್ ರಹಿಮಾನ್ ಎಂಬವರ ಮಾಲಕತ್ವದ ಮಟನ್ ಸ್ಟಾಲ್ ನ್ನು ನಡೆಸಿಕೊಂಡು ಬರುತ್ತಿದ್ದು, ದಿನಾಂಕ 03.07.2022 ರಂದು ರಾತ್ರಿ ಫಿರ್ಯಾದಿದಾರರನ್ನು ಮೊಬೈಲ್ ಮುಖೇನ ಸಂಪರ್ಕಿಸಿದವರು ಆ ಬಳಿಕ ಫಿರ್ಯಾದಿದಾರರ ಸಂಪರ್ಕಕ್ಕೆ ದೊರಕದೇ ಇದ್ದು ಮಟನ್ ಸ್ಟಾಲ್ ಅಂಗಡಿಯ ಮಾಲಕರಾದ ಅಬ್ದುಲ್ ರಹಿಮಾನ್ ರವರನ್ನು ಮೊಬೈಲ್ ಮೂಲಕ ವಿಚಾರಿಸಿದಾಗ ಸದ್ರಿಯವರು ಕೂಡ ಮಹಮ್ಮದ್ ಶರೀಫ್ ರವರನ್ನು ಹುಡುಕಾಡುತ್ತಿರುವುದಾಗಿ ತಿಳಿಸಿದ್ದು ಅಲ್ಲದೇ ಪುತ್ತೂರಿನ ಕೊಡಿಪ್ಪಾಡಿಯಲ್ಲಿರುವ ಮಹಮ್ಮದ್ ಶರೀಫ್ ರವರ ಸಂಬಂಧಿಕರಲ್ಲಿ ವಿಚಾರಿಸಿದಾಗಲೂ ಮಹಮ್ಮದ್ ಶರೀಫ್ ರವರ ಬಗ್ಗೆ ಯಾವುದೇ ಮಾಹಿತಿ ದೊರಕದೇ ಇದ್ದು, ನಿನ್ನೆ ದಿನ ದಿನಾಂಕ 10.07.2022 ರಂದು ಬಕ್ರೀದ್ ಹಬ್ಬವಾಗಿದ್ದರಿಂದ ಮಹಮ್ಮದ್ ಶರೀಫ್ ರವರು ಫಿರ್ಯಾದಿದಾರರನ್ನು ಮೊಬೈಲ್ ಮುಖೇನವಾದರೂ ಸಂಪರ್ಕಿಸಬಹುದೆಂಬ ನಿರೀಕ್ಷೆಯಲ್ಲಿದ್ದು ಆದರೆ ಈ ದಿನದವರೆಗೂ ಮಹಮ್ಮದ್ ಶರೀಫ್ ರವರ ಬಗ್ಗೆ ಯಾವುದೇ ಮಾಹಿತಿ ದೊರೆಯದೇ ಇದ್ದು ಅಲ್ಲದೇ ಮಹಮ್ಮದ್ ಶರೀಫ್ ರವರು ಉಪಯೋಗಿಸುತ್ತಿದ್ದ ಮೊಬೈಲ್ ನಂಬರ್ ಕೂಡಾ ಇಲ್ಲಿಯವರೆಗೆ ಸ್ವಿಚ್ ಆಫ್ ಆಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ : 78/2022  ಕಲo: 00MP ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಜೀವ ಬೆದರಿಕೆ ಪ್ರಕರಣ: 1

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂಜೀವ, ಪ್ರಾಯ:48 ವರ್ಷ,  ತಂದೆ:ದಿ/ ಐತ್ತಪ್ಪ ವಾಸ:ಗಾಳಿ ತೋಟ  ಮನೆ, ಕಳೆಂಜ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:09-07-2022 ರಂದು ಕೂಲಿ ಕೆಲಸ ಮುಗಿಸಿಕೊಂಡು ಕಾಯರ್ತ್ತಡ್ಕ- ನೆರಿಯಾ ರಸ್ತೆಯ ಮದ್ಯದಲ್ಲಿ ಇರುವ ವಿಜು ಎಂಬುವವರ ಬಾಬ್ತು ಎ ಬಿ ಚಿಕನ್ ಸೆಂಟರ್‌ ನಲ್ಲಿ ಪದಾರ್ಥಕ್ಕೆಂದು ಕೋಳಿ ಮಾಂಸವನ್ನು ಖರೀದಿಸಿ ಮನೆ ಕಡೆಗೆ ಹೊರಟ ಸಮಯ  ಸುಮಾರು ಸಂಜೆ  06-00 ಗಂಟೆ ಸಮಯಕ್ಕೆ ಪಿರ್ಯಾದಿದಾರರನ್ನು ಬೆಳ್ತಂಗಡಿ ತಾಲೂಕು ಕಳಂಜ ಗ್ರಾಮದ ಸಣ್ಣಪಳ್ಕೆ  ಎಂಬಲ್ಲಿ ತಲುಪಿದಾಗ ಪಿರ್ಯಾದಿದಾರರನ್ನು   ತಡೆದು ನಿಲ್ಲಿಸಿ ನೀನು ಕೋಳಿ ಅಂಗಡಿಯಲ್ಲಿ ವ್ಯಾಪಾರದಿಂದ ಬಂದ ಹಣವನ್ನು ತೆಗೆದುಕೊಂಡಿರುತ್ತೀಯಾ ಎಂದು ಹೇಳಿ ಅಷ್ಟರಲ್ಲಿ ಅಲ್ಲಿಗೆ ಬಂದ ಭಾಸ್ಕರ , ಪ್ರೇಮನಾಥ ಮತ್ತು ಮಂಜು ಎಂಬವರು ಸೇರಿಕೊಂಡು ಅವಾಚ್ಯ ಶಬ್ಧಗಳಿಂದ ಬೈದು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿ ಅವರೆಲ್ಲರೂ ಸೇರಿ  ಪಿರ್ಯಾದಿದಾರರನ್ನು ಹಿಡಿದುಕೊಂಡು ಪಿರ್ಯಾದಿದಾರರು ಧರಿಸಿದ ಲುಂಗಿಯಿಂದ ಮರವೊಂದಕ್ಕೆ ಕಟ್ಟಿಹಾಕಿ ಕಾಟು ಮರದ ದೊಣ್ಣೆಯಿಂದ ಪಿರ್ಯಾದಿದಾರರ ಎಡಕೈಯ ರಟ್ಟೆಗೆ , ಮತ್ತು ಬಲಕಾಲಿನ ಕೋಲು ಕಾಲಿಗೆ, ಬೆನ್ನಿಗೆ ಹಾಗೂ ಭಾಸ್ಕರ ಎಂಬಾತನು ಪಿರ್ಯಾದಿಧಾರರ ಕಣ್ಣಿನ ಕೆಳಗೆ ಕೈಯಿಂದ ಹಲ್ಲೆ ಮಾಡಿ ಮಂಜು ಮತ್ತು ಪ್ರೇಮನಾಥ ಎಂಬವರು ಕೂಡಾ ಕೈಯಿಂದ ಹಲ್ಲೆ ಮಾಡಿದ್ದು ಅಷ್ಟರಲ್ಲಿ ಪಿರ್ಯಾದಿದಾರರ ಅಣ್ಣನ ಮಗನಾಧ ಮೇದಪ್ಪ ಮತ್ತು ವಿಜಯ ಎಂಬವರು ಬರುತ್ತಿರುವುದನ್ನು ನೋಡಿ ಆರೋಪಿಗಳು ಹಲ್ಲೆಗೆ ಉಪಯೋಗಿಸಿದ ಕಾಟುಮರದ ದೊಣ್ಣೆಯನ್ನು ಅಲ್ಲೆ ಬಿಸಾಕಿ ಓಡಿ ಹೋಗಿದ್ದು ನಂತರ ಮೇದಪ್ಪ ಮತ್ತು ವಿಜಯ ರವರು ಪಿರ್ಯಾದಿದಾರರನ್ನು   ಮರದಿಂದ ಬಿಚ್ಚಿ ಆರೈಕೆ ಮಾಡಿ ಮನೆಗೆ ಕರೆದುಕೊಂಡು ಹೋಗಿರುತ್ತಾರೆ.  ನಂತರ ಫಿರ್ಯಾದುದಾರರು ಮನೆಗೆ ತೆರಳಿದ್ದು, ಈ ದಿನ 10-07-2022  ರಂದು ನೋವು ಜಾಸ್ತಿ ಆಗಿದ್ದರಿಂದ ನೋವು ತಡೆಯಲಾರದೇ ಬೆಳ್ತಂಗಡಿ ಸರಕಾರಿ ಆಸ್ಬತ್ರೆಗೆ ಬಂದಾಗ ಅಲ್ಲಿನ ವೈಧ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಅಕ್ರ 51/2022 ಕಲಂ: 342,504,506,323,324,ಜೊತೆಗೆ ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶೇಖರ್ ಯು ಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ‌ ಗ್ರಾಮ ಪಂಚಾಯತ್ ಕಡಬ ತಾಲೂಕು.ಎಂಬವರ ದೂರಿನಂತೆ ದಿನಾಂಕ: 11.07.2022 ರಂದು ದಿನಾಂಕ: 11.07.2022 ರಂದು ಸೋಮವಾರದಂದು ಮದ್ಯಾಹ್ನ ಸಮಯ ಸುಮಾರು 12.30 ಗಂಟೆಗೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ಸವಾರಿ ಮಂಟಪ ಬಳಿಯಲ್ಲಿನ ಮಹಿಳಾ ಸಾರ್ವಜನಿಕ ಶೌಚಾಲಯದ ಬಳಿ ಸುಮಾರು 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಇರುವುದಾಗಿದೆ.ಈ ಬಗ್ಗೆ ಸುಬ್ರಮಣ್ಯ ಪೊಲೀಸ್‌ ಠಾಣೆಯಲ್ಲಿ UDR NO : 11/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-07-2022 11:04 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080